ಗೂಗಲ್ ಫ್ಯುಷನ್ ಟೇಬಲ್ ಉಪಯೋಗವೇನು..? ಬಳಸುವುದು ಹೇಗೆ..?
ಎಲ್ಲಾ ಮೂಲಗಳ ಡೇಟಾವನ್ನು ಇದರಲ್ಲಿ ಸ್ಟೋರ್ ಮಾಡಿಕೊಳ್ಳಬಹುದಾಗಿದ್ದು, ಅಪ್ ಲೋಡ್ ಮತ್ತು ಶೇರ್ ಸಹ ಮಾಡಬಹುದಾಗಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಗೂಗಲ್ ಈಗಾಗಲೇ ಹಲವು ವೆಬ್ ಆಧಾರಿತ ಸೇವೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇದರಲ್ಲಿ ಒಂದು ಡೇಟಾ ಮ್ಯಾನೆಜ್ ಮೆಂಟ್ ಗಾಗಿ ಫ್ಯುಷನ್ ಟೇಬಲ್ . ಈ ಟೂಲ್ ದೊಡ್ಡ ಪ್ರಮಾಣದ ಡೇಟಾವನ್ನು ಸ್ಟೋರ್ ಮಾಡಿಕೊಳ್ಳುವುದಲ್ಲದೇ ಅದನ್ನು ವಿಶ್ಯೂಲೈಜ್ ಸಹ ಮಾಡಲಿದೆ.

ಎಲ್ಲಾ ಮೂಲಗಳ ಡೇಟಾವನ್ನು ಇದರಲ್ಲಿ ಸ್ಟೋರ್ ಮಾಡಿಕೊಳ್ಳಬಹುದಾಗಿದ್ದು, ಅಪ್ ಲೋಡ್ ಮತ್ತು ಶೇರ್ ಸಹ ಮಾಡಬಹುದಾಗಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಏಕ್ಸಲ್ ಮಾದರಿಯಲ್ಲಿ ಸ್ಟೋರ್ ಮಾಡಿಕೊಳ್ಳಿ:
ನಿಮ್ಮಲ್ಲಿರುವ ಕಂಪ್ಯೂಟರ್ ನ ಏಕ್ಸಲ್ ನಲ್ಲಿ ಡೇಟಾವನ್ನು ಸ್ಟೋರ್ ಮಾಡಿಕೊಳ್ಳುವ ರೀತಿಯಲ್ಲಿಯೇ ಇಲ್ಲಿಯೂ ಡೇಟಾವನ್ನು ಸ್ಟೋರ್ ಮಾಡಿಕೊಳ್ಳಬಹುದು. ನಿಮ್ಮ ಕಂಪ್ಯೂಟರ್ ನಲ್ಲಿರುವ ಡೇಟಾವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದಾಗಲಿ, ಅವರು ಅದನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಆದರೆ ಇಲ್ಲಿ ಅದನ್ನು ಮಾಡಬಹುದು. ಗೂಗಲ್ ಡ್ರೈವ್ ಗೇ ಈ ಟೇಬಲ್ ಆಪ್ ಲೋಡ್ ಮಾಡಿದರೆ ಸಾಕು.

ವಿಶ್ಯೂಲೈಜ್ ಡೇಟಾ:
ಇದಲ್ಲದೇ ನಿಮ್ಮ ಡೇಟಾವನ್ನು ಕೇವಲ ಕಾಲಮ್ ಮತ್ತು ರೋ ನಲ್ಲಿ ತುಂಬುವ ಬದಲು ಅದನ್ನು ಶೇಕಡಾವಾರು ಲೆಕ್ಕದಲ್ಲಿ ವಿಶ್ಯೂಲ್ ಆಗಿ ಬದಲಾವಣೆ ಮಾಡಬಹುದಾಗಿದೆ. ಇಲ್ಲಿ ಬಾರ್, ಪೈ, ಮುಂತಾದ ಮಾದರಿಯ ವಿಶ್ಯೂಲೆಜ್ ಮಾಡುವ ಅವಕಾಶವಿದೆ.

ಜಿಯೋಗ್ರಾಫಿಕ್ ಡೇಟಾ:
ಇಲ್ಲಿ ಲೋಕೇಷನ್ ಆಧಾರಿತ ಡೇಟಾವನ್ನು ಸಂಗ್ರಹಿಸಲು ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಇದನ್ನ ಮ್ಯಾಪ್ ಸಹಾಯದಿಂದ ವಿಶ್ಲೇಷಿಸಬಹುದಾಗಿದೆ. ಅದುವೇ ಗೂಗಲ್ ಆರ್ಥ್ ಸಹಾಯದಿಂದ

ಗೂಗಲ್ ಡ್ರೈವ್ ನೊಂದಿಗೆ ಸಂಪರ್ಕಿಸುವುದು ಹೇಗೆ?
ಹಂತ 1: ವೆಬ್ ಪೇಜ್ ನ ಎಡಭಾಗದ ತುದಿಯಲ್ಲಿ ಕ್ರಿಯೇಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು
ಹಂತ 2: ನಂತರ ಕನೆಕ್ಟ್ ಮೋರ್ ಆಪ್ಸ್ ಬಟನ್ ಕ್ಲಿಕ್ ಮಾಡಬೇಕು.
ಹಂತ 3: ಸರ್ಜ್ ಬಾಕ್ಸ್ ನಲ್ಲಿ ಫುಶನ್ ಟೇಬಲ್ಸ್ ನನ್ನು ಹುಡುಕಿರಿ
ಹಂತ 4: ಅಲ್ಲಿ ಕನೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಿರಿ.


Click it and Unblock the Notifications








