ಏನಿದು ಚಿನ್ನದ ಎಟಿಎಮ್‌?, ಹೇಗೆಲ್ಲಾ ಕೆಲಸ ಮಾಡಲಿದೆ ಗೊತ್ತಾ; ಇಲ್ಲಿದೆ ವಿವರ

|

ಎಟಿಎಮ್‌ ಎಂದಾಕ್ಷಣ ನಿಮಗೆ ಥಟ್ಟನೆ ನೆನಪಾಗುವುದು ಅದರಲ್ಲಿ ಡೆಬಿಟ್‌ ಕಾರ್ಡ್‌ ಮೂಲಕ ಹಣ ಪಡೆಯಬಹುದು ಎಂದು. ಅಂತೆಯೇ ದೇಶಾದ್ಯಂತ ಎಟಿಎಮ್‌ ಸೇವೆಗಳ ಬಳಕೆ ಇಂದು ಹೆಚ್ಚಾಗಿಯೇ ಇದೆ. ಇದರ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಸ್ಟಾರ್ಟ್‌ಅಪ್‌ ಸಂಸ್ಥೆಯೊಂದು "ಚಿನ್ನದ ಎಟಿಎಮ್‌' ಅನ್ನು ತಯಾರು ಮಾಡಿದೆ. ಈ ಎಟಿಎಮ್‌ ಇಂದು ಬಳಕೆದಾರರಿಗೆ ಲಭ್ಯವಾಗಿರುವುದು ಬಹುಪಾಲು ಜನರಿಗೆ ತಿಳಿಸಿರುವ ಸಂಗತಿ.

ಹೈದರಾಬಾದ್‌

ಹೌದು, ಹೈದರಾಬಾದ್‌ನ ಸ್ಟಾರ್ಟ್‌ಆಪ್‌ ಆಗಿರುವ ಓಪನ್‌ಕ್ಯೂಬ್ ಟೆಕ್ನಾಲಜೀಸ್ ಅವರು ಈ ಚಿನ್ನದ ಎಟಿಎಮ್‌ ಅನ್ನು ಪರಿಚಯಿಸಿದ್ದು, ಅದರಂತೆ ಮೊದಲ ಚಿನ್ನದ ಎಟಿಎಮ್‌ ಅನ್ನು ಪೇಕಾಂಬೆಟ್‌ನಲ್ಲಿ ಆರಂಭಿಸಲಾಗಿದೆ. ಈ ಎಟಿಎಮ್‌ ಹಣದ ಬದಲಾಗಿ ಚಿನ್ನ ನೀಡಲಿದೆ. ಇದೂ ನಿಮಗೆ ಅಚ್ಚರಿ ಎನಿಸಬಹುದು. ಹಾಗಿದ್ರೆ, ಏನಿದು ಗೋಲ್ಡ್‌ ಎಟಿಎಮ್‌?, ಹೇಗೆಲ್ಲಾ ಕಾರ್ಯನಿರ್ವಹಿಸುತ್ತದೆ?, ಯಾವ ರೀತಿಯ ಚಿನ್ನವನ್ನು ನೀಡುತ್ತದೆ? ಎಂಬ ನಿಮ್ಮ ಕುತೂಹಲ ತಣಿಸುವ ಮಾಹಿತಿ ಈ ಲೇಖನದಲ್ಲಿ ಇದೆ ಓದಿರಿ.

ಏನಿದು ಗೋಲ್ಡ್‌ ಎಟಿಎಮ್‌ ?

ಏನಿದು ಗೋಲ್ಡ್‌ ಎಟಿಎಮ್‌ ?

ಗೋಲ್ಡ್‌ ಎಟಿಎಮ್‌ ಎನ್ನುವುದು ನಿಮಗೆ ಚಿನ್ನದ ನಾಣ್ಯಗಳನ್ನು ನೀಡುವ ಮೆಷಿನ್‌ ಆಗಿದೆ. ಜನರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಚಿನ್ನದ ನಾಣ್ಯಗಳನ್ನು ಖರೀದಿ ಮಾಡಬಹುದು. ಇದು ಹಣವನ್ನು ವಿತರಿಸುವ ಸಾಮಾನ್ಯ ಎಟಿಎಂಗಳಿಗಿಂತ ಭಿನ್ನವಾಗಿ ಕೆಲಸ ಮಾಡಲಿದ್ದು, ಭಾರತದ ಮೊದಲ ಚಿನ್ನದ ಎಟಿಎಮ್‌ ಎನಿಸಿಕೊಂಡಿದೆ.

ಇದರಿಂದ ಎಷ್ಟು ಗೋಲ್ಡ್‌ ಖರೀದಿಸಬಹುದು?

ಇದರಿಂದ ಎಷ್ಟು ಗೋಲ್ಡ್‌ ಖರೀದಿಸಬಹುದು?

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು 0.5 ಗ್ರಾಂನಿಂದ 100 ಗ್ರಾಂ ವರೆಗಿನ ಚಿನ್ನದ ನಾಣ್ಯವನ್ನು ಪಡೆಯಬಹುದಾಗಿದೆ. ಹಾಗೆಯೇ ಈ ಎಟಿಎಮ್‌ ಬರೋಬ್ಬರಿ 5 ಕೆಜಿ ಚಿನ್ನವನ್ನು ಸಂಗ್ರಹ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಎಲ್ಲಿ ಸ್ಥಾಪನೆಯಾಗಿದೆ?

ಭಾರತದಲ್ಲಿ ಎಲ್ಲಿ ಸ್ಥಾಪನೆಯಾಗಿದೆ?

ಈ ಹೊಸ ರೀತಿಯ ಎಟಿಎಮ್‌ ಅನ್ನು ಹೈದರಾಬಾದ್ ಮೂಲದ ಸ್ಟಾರ್ಟ್‌ಅಪ್ ಓಪನ್‌ಕ್ಯೂಬ್ ಟೆಕ್ನಾಲಜೀಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಇದರ ಈ ಎಟಿಎಮ್‌ ಅನ್ನು ಗೋಲ್ಡ್ಸಿಕ್ಕಾ ಕಂಪೆನಿ ಮೊದಲ ಬಾರಿಗೆ ಪೇಕಾಂಬೆಟ್‌ನಲ್ಲಿ ಸ್ಥಾಪಿಸಿದೆ.

ಚಿನ್ನದ ಎಟಿಎಮ್ ಯಂತ್ರ ಹೇಗೆ ಕೆಲಸ ಮಾಡುತ್ತದೆ?

ಚಿನ್ನದ ಎಟಿಎಮ್ ಯಂತ್ರ ಹೇಗೆ ಕೆಲಸ ಮಾಡುತ್ತದೆ?

ಗ್ರಾಹಕರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ವಿವಿಧ ಮುಖಬೆಲೆಯ ಚಿನ್ನದ ನಾಣ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಸಾಮಾನ್ಯ ಎಟಿಎಮ್‌ಗಳಲ್ಲಿ ನಿಮ್ಮ ಡೆಬಿಟ್‌ ಕಾರ್ಡ್‌ ಹಾಕಿದರೆ ಹೇಗೆ ಹಣ ಲಭ್ಯವಾಗುತ್ತದೆಯೋ ಅದೇ ರೀತಿ ಡೆಬಿಟ್ ಕಾರ್ಡ್‌ ಹಾಕಿದರೆ ಚಿನ್ನದ ನಾಣ್ಯಗಳು ಎಟಿಎಮ್‌ನಿಂದ ಹೊರಬರುತ್ತವೆ. ಜೊತೆಗೆ ದೈನಂದಿನ ಚಿನ್ನದ ಬೆಲೆಯನ್ನು ಡಿಸ್‌ಪ್ಲೇನಲ್ಲಿ ತೋರಿಸಲಾಗುತ್ತದೆ.

999 ಶುದ್ಧತೆ

999 ಶುದ್ಧತೆ

ಯಾರೇ ಆದರೂ ಚಿನ್ನವನ್ನು ಖರೀದಿ ಮಾಡಬೇಕಾದರೆ ನೂರಾರು ಬಾರಿ ಯೋಚನೆ ಮಾಡುತ್ತಾರೆ. ಹಾಗೆಯೇ ಪರೀಕ್ಷೆಗೆ ಒಳಪಡಿಸುತ್ತಾರೆ. ಆದರೆ, ಈ ಎಟಿಎಮ್‌ನಲ್ಲಿ ಬರುವುದು ಶುದ್ಧ ಚಿನ್ನ ಎಂದು ಹೇಗೆ ಪತ್ತೆ ಮಾಡುವುದು ಎಂಬ ಪ್ರಶ್ನೆ ಖಂಡಿತಾ ಕಾಡಿರುತ್ತದೆ. ಇದಕ್ಕೆಂದೇ ನಾಣ್ಯಗಳ ಬೆಲೆಯನ್ನು ಡಿಸ್‌ಪ್ಲೇ ನಲ್ಲಿ ತೋರಿಸಲಾಗುತ್ತದೆ ಹಾಗೆಯೇ ನಾಣ್ಯಗಳ ಪ್ಯೂರಿಟಿ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತದೆ. ಇದರೊಂದಿಗೆ ಪ್ರಮಾಣೀಕರಿಸಿದ ಟ್ಯಾಂಪರ್ ಪ್ರೂಫ್ ಬ್ಯಾಗ್‌ಗಳಲ್ಲಿ ಈ ನಾಣ್ಯಗಳನ್ನು ವಿತರಿಸಲಾಗುತ್ತದೆ.

ಭಾರತದಾದ್ಯಂತ 3,000 ಎಟಿಎಮ್‌ ಸ್ಥಾಪಿಸಲು ಚಿಂತನೆ

ಭಾರತದಾದ್ಯಂತ 3,000 ಎಟಿಎಮ್‌ ಸ್ಥಾಪಿಸಲು ಚಿಂತನೆ

ಈ ಎಟಿಎಮ್‌ ಎಲ್ಲಾ ಕಡೆ ಸದ್ದು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಾದ್ಯಂತ ಬರೋಬ್ಬರಿ 3,000 ಎಟಿಎಮ್‌ ಗಳನ್ನು ಸ್ಥಾಪಿಸಲು ಗೋಲ್ಡ್ಸಿಕ್ಕಾ ಮುಂದಾಗಿದೆ. ಈಗಾಗಲೇ ಕಂಪೆನಿಯು ಹೈದರಾಬಾದ್ ವಿಮಾನ ನಿಲ್ದಾಣ, ಹೈದರಾಬಾದ್ ಓಲ್ಡ್ ಸಿಟಿ ಮತ್ತು ಕರೀಂನಗರ ಮತ್ತು ವಾರಂಗಲ್‌ನಲ್ಲಿ ಮೂರು ಯಂತ್ರಗಳನ್ನು ಪರಿಚಯಿಸಲು ಯೋಜಿಸುತ್ತಿದೆ.

Best Mobiles in India

Read more about:
English summary
What is Gold ATM?, Do you know how it will work?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X