ಭಾರತದಲ್ಲಿ ಐಕ್ಲೌಡ್+ ಚಂದಾದಾರಿಕೆ ಎಷ್ಟು?... ಇಲ್ಲಿದೆ ವಿವರ

|

ಐಕ್ಲೌಡ್(iCloud) ನಿಮ್ಮ ಫೋಟೋಗಳು, ಫೈಲ್‌ಗಳು, ಪಾಸ್‌ವರ್ಡ್‌ಗಳು ಮತ್ತು ಇತರ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸುವ ಆಪಲ್‌ನ ಒಂದು ಸೇವೆಯಾಗಿದ್ದು, ಇದೀಗ ಈ ಪ್ರೀಮಿಯಂ ಆಯ್ಕೆ ಆಗಿರುವ ಐಕ್ಲೌಡ್+ ನಲ್ಲಿ ಹಲವು ಆಕರ್ಷಕ ಫೀಚರ್ಸ್‌ ನೀಡಲಾಗಿದೆ. ಇದರಲ್ಲಿ ಹೆಚ್ಚುವರಿ ಬ್ಯಾಕಪ್‌ಗಳು ಮತ್ತು ಚಿತ್ರಗಳನ್ನು ಸ್ಟೋರೇಜ್‌ ಮಾಡಲು ಅನುವು ಮಾಡಿಕೊಟ್ಟಿದೆ.

ಐಫೋನ್

ಹೌದು, ಈ ಸೇವೆ ಪಡೆದುಕೊಳ್ಳಲು ನೀವು ನಿಮ್ಮ ಐಫೋನ್, ಐಪ್ಯಾಡ್, ಐಪ್ಯಾಡ್‌ ಟಚ್‌, ಮ್ಯಾಕ್‌, ಅಥವಾ ಪಿಸಿಯಿಂದ ಸುಲಭವಾಗಿ ಐಕ್ಲೌಡ್+ ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ. ಐಕ್ಲೌಡ್+ ಗೆ ಅಪ್‌ಗ್ರೇಡ್ ಆದ ನಂತರ ನೀವು ಮಾಸಿಕ ಶುಲ್ಕ ಪಾವತಿ ಮಾಡುತ್ತಿರಬೇಕು. ಇದರ ಜೊತೆಗೆ ಫ್ಯಾಮಿಲಿ ಶೇರ್‌ ಆಯ್ಕೆಯನ್ನೂ ಸಹ ನೀಡಲಾಗುತ್ತಿದ್ದು, ಈ ಮೂಲಕ ನಿಮ್ಮ ಕುಟುಂಬದ ಐವರು ಸದಸ್ಯರು ಈ ಫೀಚರ್ಸ್‌ನಿಂದ ಸದುಪಯೋಗ ಪಡೆದುಕೊಳ್ಳಬಹುದು.

ಐಕ್ಲೌಡ್+ ಪ್ರೀಮಿಯಂ ಫೀಚರ್ಸ್‌

ಐಕ್ಲೌಡ್+ ಪ್ರೀಮಿಯಂ ಫೀಚರ್ಸ್‌

ನೀವು ಐಕ್ಲೌಡ್‌ನಿಂದ ಐಕ್ಲೌಡ್+ ಗೆ ಅಪ್‌ಗ್ರೇಡ್‌ ಆದ ನಂತರ ಐಕ್ಲೌಡ್ ಪ್ರೈವೇಟ್‌ ರಿಲೇ ಫೀಚರ್ಸ್‌ ಲಭ್ಯವಾಗಲಿದೆ ಈ ಮೂಲಕ ನೀವು ಸಫಾರಿಯಲ್ಲಿ ನಿಮ್ಮ ಐಪಿ ವಿಳಾಸ ಮತ್ತು ಬ್ರೌಸಿಂಗ್ ಚಟುವಟಿಕೆಯನ್ನು ಮರೆಮಾಡಬಹುದು. ಇದರ ಜೊತೆಗೆ ಹೈಡ್ ಮೈ ಇಮೇಲ್‌ ಆಯ್ಕೆ ಸಹ ಲಭ್ಯವಾಗಲಿದೆ.

ಹೋಮ್‌ಕಿಟ್

ಇದರೊಂದಿಗೆ ಹೋಮ್‌ಕಿಟ್ ಸೆಕ್ಯೂರ್‌ ವಿಡಿಯೋ ಫೀಚರ್ಸ್‌ ಲಭ್ಯವಾಗಲಿದ್ದು, ಇದರಿಂದ ನಿಮ್ಮ ಮನೆಯ ಸಿಸಿಟಿವಿ ಸಂಪರ್ಕಿಸಲು ನಿಮಗೆ ಅನುಮತಿಸುತ್ತದೆ. ಹಾಗೆಯೇ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಳ್ಳಬಹುದು, ಇದೆಲ್ಲಕ್ಕೂ ಮಿಗಿಲಾಗಿ ಎಲ್ಲಿಂದಲಾದರೂ ವೀಕ್ಷಿಸಬಹುದು. ಹಾಗೆಯೇ ಕಸ್ಟಮ್ ಇಮೇಲ್ ಡೊಮೈನ್ ಆಯ್ಕೆಯನ್ನು ಈ ಪ್ರೀಮಿಯಂನಲ್ಲಿ ನೀಡಲಾಗುತ್ತಿದ್ದು, ಐಕ್ಲೌಡ್ ಇಮೇಲ್ ವಿಳಾಸವನ್ನು ಅನನ್ಯ ಡೊಮೈನ್ ಹೆಸರಿನೊಂದಿಗೆ ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.

ನೀವು ಐಕ್ಲೌಡ್+ ಗೆ ಅಪ್‌ಗ್ರೇಡ್ ಮಾಡಬಹುದೇ?

ನೀವು ಐಕ್ಲೌಡ್+ ಗೆ ಅಪ್‌ಗ್ರೇಡ್ ಮಾಡಬಹುದೇ?

ಆಪಲ್‌ ಡಿವೈಸ್‌ ಇರುವವರಿಗೆ ಖಂಡಿತಾ ಸಾಧ್ಯವಿದೆ, ಐಕ್ಲೌಡ್+ ಗೆ ಅಪ್‌ಗ್ರೇಡ್ ಮಾಡಿದ ನಂತರ ನೀವು ಹೆಚ್ಚುವರಿಯಾಗಿ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು. ಇದರಲ್ಲಿ 50GB, 200GB ಹಾಗೂ 2TB ಸ್ಟೋರೇಜ್‌ನ ಆಯ್ಕೆ ಇರುತ್ತದೆ. ನಿಮಗೆ ಯಾವುದು ಅನುಕೂಲಕರವೋ ಆ ಪ್ಯಾಕೇಜ್‌ ಅನ್ನು ಸೆಲೆಕ್ಟ್‌ ಮಾಡಿಕೊಳ್ಳಿ.

ಐಕ್ಲೌಡ್ ಖಾತೆಗೆ ಪ್ರವೇಶ ಹೇಗೆ?

ಐಕ್ಲೌಡ್ ಖಾತೆಗೆ ಪ್ರವೇಶ ಹೇಗೆ?

ನೀವು ಮೊದಲು iCloud.com ಗೆ ಭೇಟಿ ನೀಡಿ, ನಂತರ ಲಾಗ್ ಇನ್ ಮಾಡಲು ನಿಮ್ಮ ಆಪಲ್‌ ID ಅನ್ನು ರಚಿಸಬೇಕಾಗುತ್ತದೆ. ಅಥವಾ ನಿಮ್ಮ ಸಾಧನಕ್ಕೆ ಸೈನ್ ಇನ್ ಮಾಡಲು ನೀವು ಈಗಾಗಲೇ ಬಳಕೆ ಮಾಡಿರುವ ನಿಮ್ಮ ಆಪಲ್‌ ID ಅನ್ನು ಅಥವಾ ಟಚ್ ID ಹಾಗೂ ಫೇಸ್ ಐಡಿಯನ್ನು ಬಳಕೆ ಮಾಡಿಕೊಂಡು iCloud.com ಗೆ ಲಾಗ್ ಇನ್ ಆಗಬಹುದು.

ಐಕ್ಲೌಡ್+  ಉಚಿತವೇ?

ಐಕ್ಲೌಡ್+ ಉಚಿತವೇ?

ನೀವು ಆರಂಭಿಕವಾಗಿ ಐಕ್ಲೌಡ್ ಗೆ ಸೈನ್ ಅಪ್ ಮಾಡಿದಾಗ 5 GB ಉಚಿತ ಸ್ಟೋರೇಜ್‌ ಅನ್ನು ಪಡೆಯಬಹುದು. ಆದರೆ, ಹೆಚ್ಚಿನ ಫೀಚರ್ಸ್‌ ಜೊತೆಗೆ ಹೆಚ್ಚಿನ ಸ್ಟೋರೇಜ್‌ ಅವಶ್ಯಕತೆ ಎನಿಸಿದರೆ ನೀವು ಐಕ್ಲೌಡ್+ ಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಆಗ ತಿಂಗಳಿಗೆ ಇಂತಿಷ್ಟು ಎಂದು ಪಾವತಿ ಮಾಡಬೇಕಿರುತ್ತದೆ.

ಬೆಲೆ

ಭಾರತದಲ್ಲಿ ಐಕ್ಲೌಡ್‌+ ಯೋಜನೆಗಳು ಮತ್ತು ಅವುಗಳ ಬೆಲೆಗಳ ವಿವರಗಳು ಎಷ್ಟಿರಲಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

50GB ಸ್ಟೋರೇಜ್‌
ಐಕ್ಲೌಡ್+ ನಲ್ಲಿ ನೀವು 50GB ಸ್ಟೋರೇಜ್‌ ಪ್ಯಾಕ್‌ ಆಯ್ಕೆ ಮಾಡಿಕೊಂಡರೆ ಇದಕ್ಕೆ ತಿಂಗಳಿಗೆ 75 ರೂ. ಗಳನ್ನು ಪಾವತಿ ಮಾಡಬೇಕಿರುತ್ತದೆ. ಹಾಗೆಯೇ ಇದರಲ್ಲಿ
ಕಸ್ಟಮ್ ಇಮೇಲ್ ಡೊಮೈನ್, ಕ್ಯಾಮೆರಾಕ್ಕಾಗಿ ಹೋಮ್‌ಕಿಟ್ ಸುರಕ್ಷಿತ ವಿಡಿಯೋ ಬೆಂಬಲ, ಕುಟುಂಬದ ಐದು ಸದಸ್ಯರೊಂದಿಗೆ ಶೇರ್‌ ಮಾಡಿಕೊಳ್ಳುವ ಅವಕಾಶವನ್ನು ಈ ಪ್ಲ್ಯಾನ್‌ನಿಂದ ಪಡೆಯಬಹುದಾಗಿದೆ.

200 GB ಸ್ಟೋರೇಜ್‌
ಈ ಪ್ಲ್ಯಾನ್‌ನಲ್ಲಿ ನೀವು ತಿಂಗಳಿಗೆ 219ರೂ. ಗಳ ಶುಲ್ಕವನ್ನು ಬರಿಸಬೇಕಾಗುತ್ತದೆ. ಇದರಲ್ಲೂ ಸಹ ಐಕ್ಲೌಡ್ ಪ್ರೈವೇಟ್ ರಿಲೇ, ಹೈಡ್‌ ಮೈ ಇಮೇಲ್, ಕಸ್ಟಮ್ ಇಮೇಲ್ ಡೊಮೈನ್, ಐದು ಕ್ಯಾಮೆರಾಗಳಿಗೆ ಹೋಮ್‌ಕಿಟ್ ಸುರಕ್ಷಿತ ವಿಡಿಯೋ ಬೆಂಬಲ ದ ಜೊತೆಗೆ ಐದು ಕುಟುಂಬದ ಸದಸ್ಯರೊಂದಿಗೆ ಶೇರ್‌ ಮಾಡಿಕೊಳ್ಳುವ ಆಯ್ಕೆ ಪಡೆಯಬಹುದು.

2 TB ಸ್ಟೋರೇಜ್
2 TB ಸ್ಟೋರೇಜ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಂಡರೆ ನೀವು ತಿಂಗಳಿಗೆ 749ರೂ. ಗಳನ್ನು ಪಾವತಿ ಮಾಡಬೇಕಿದೆ. ಈ ಪ್ಲ್ಯಾನ್ ಜೊತೆಗೆ ಐಕ್ಲೌಡ್ ಪ್ರೈವೇಟ್ ರಿಲೇ, ಹೈಡ್‌ ಮೈ ಇಮೇಲ್, ಕಸ್ಟಮ್ ಇಮೇಲ್ ಡೊಮೈನ್, ಅನಿಯಮಿತ ಸಂಖ್ಯೆಯ ಕ್ಯಾಮೆರಾಗಳಿಗೆ ಹೋಮ್‌ಕಿಟ್ ಸುರಕ್ಷಿತ ವಿಡಿಯೋ ಬೆಂಬಲ ಹಾಗೂ
ಕುಟುಂಬದ ಐದು ಸದಸ್ಯರೊಂದಿಗೆ ಶೇರ್‌ ಮಾಡಿಕೊಳ್ಳುವ ಅವಕಾಶ ಪಡೆಯಬಹುದಾಗಿದೆ.

Best Mobiles in India

English summary
iCloud is Apple's service for storage photos, files, passwords and other data securely, now with more features in iCloud+.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X