QR ಕೋಡ್ ಸ್ಕ್ಯಾಮ್‌ನಿಂದ ರಕ್ಷಣೆ ಪಡೆಯುವುದು ಹೇಗೆ?

|

ಇಂದಿನ ಡಿಜಿಟಲ್‌ ಯುಗದಲ್ಲಿ ಆನ್‌ಲೈನ್‌ ಶಾಪಿಂಗ್‌, ಆನ್ಲೈನ್ ಮನಿ ಟ್ರಾನ್ಸಫರ್ ಹೆಚ್ಚಾದಂತೆ ಆನ್‌ಲೈನ್‌ ವಂಚನೆಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಟೆಕ್ನಾಲಜಿ ಅಪ್ಡೇಟ್‌ ಆದಂತೆ ವಂಚಕರು ಕೂಡ ಅಪ್ಡೇಟ್‌ ಆಗುತ್ತಿದ್ದು ಗ್ರಾಹಕರಿಗೆ ನಾನಾ ರೀತಿಯಲ್ಲಿ ಮೋಸವನ್ನು ಮಾಡತ್ತಲೇ ಬಂದಿದ್ದಾರೆ. ಸದ್ಯ ಇದೀಗ ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ QR ಕೋಡ್‌ ಮೂಲಕ ವಂಚಿಸುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. QR ಕೋಡ್ ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಗ್ರಾಹಕರ ಹಣಕಾಸು ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡುವ ಜಾಲ ದೊಡ್ಡದಾಗಿ ಬೆಳೆದಿದೆ.

QR ಕೋಡ್

ಹೌದು, QR ಕೋಡ್ ಮೂಲಕ ವಂಚನೆ ಮಾಡುವ ವಂಚಕರ ಜಾಲ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ OLX ನಂತಹ ಪ್ಲಾಟ್‌ಫಾರ್ಮ್‌ನಲ್ಲಿ QR ಕೋಡ್ ಮೂಲಕ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. OLX ಮಾತ್ರವಲ್ಲದೆ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಕೂಡ ಕ್ಯೂಆರ್‌ ಕೋಡ್‌ ವಂಚಿಸುವ ಕೇಸ್‌ಗಳು ದಾಖಲಾಗಿವೆ. ಆದರೆ OLXನಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾದ್ರೆ OLX ನಲ್ಲಿ ಕ್ಯೂಆರ್‌ ಕೋಡ್‌ ವಂಚನೆ ಹೇಗೆ ನಡೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

OLX QR ಕೋಡ್ ಹಗರಣ

OLX QR ಕೋಡ್ ಹಗರಣ

ಸೆಕೆಂಡ್‌ ಹ್ಯಾಂಡ್‌ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವ ಒಎಲ್‌ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯೂಆರ್‌ ಕೋಡ್‌ ವಂಚನೆ ಪ್ರಕರಣಗಳು ಜಾಸ್ತಿಯಾಗಿವೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವುದಾಗಿ ವಂಚಿಸುವ ವಂಚಕರು ಗ್ರಾಹಕರ ಕ್ಯೂರ್‌ಕೋಡ್‌ ಪಡೆದು ಮೋಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಎಲ್‌ಎಕ್ಸ್‌ನಲ್ಲಿ ಕಡಿಮೆ ಬೆಲೆಗೆ ಪೀಠೋಪಕರಣಗಳನ್ನು ಖರೀದಿಸಲು ಬಯಸುವ ಗ್ರಾಃಕರು ಬೆಲೆ ಕಡಿಮೆ ಮಾಡುವಂತೆ ಮಾರಾಟಗಾರರ ಬಳಿ ಚೌಕಾಶೀ ಮಾಡುತ್ತಾರೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ವಂಚಕರು ನಿಮ್ಮ ಬೆಲೆಗೆ ನೀವು ಖರೀದಿಸಬೇಕಾದರೆ ನಿಮ್ಮ ಫೋನ್‌ ನಂಬರ್‌ ಕ್ಯೂಆರ್‌ಕೋಡ್‌ ನೀಡುವಂತೆ ಕೇಳುತ್ತಾರೆ. ಒದು ಕ್ಷಣ ಮೋಸಹೋಗುವ ಗ್ರಾಃಹಕರು ಕ್ಯೂಆರ್‌ ನೀಡುವ ಮೂಲಕ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ.

ಕ್ಯೂರ್‌ಕೋಡ್‌

ಇದಲ್ಲದೆ ಒಎಲ್‌ಎಕ್ಸ್‌ನಲ್ಲಿ ಪ್ರಾಡಕ್ಟ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕ್ಯೂರ್‌ಕೋಡ್‌ ಕಳುಹಿಸುವ ವಂಚಕರು ಗ್ರಾಹಕರನ್ನು QR ಅನ್ನು ಸ್ಕ್ಯಾನ್ ಮಾಡಲು ಹೇಳುತ್ತಾರೆ. ಒಂದು ವೇಳೆ ನೀವು ನಿಮ್ಮ ಫೋನ್‌ಪೇ ಅಥವಾ ಗೂಗಲ್‌ ಪೇ ಅಕೌಂಟ್‌ನಿಂದ ಆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ನಿಮ್ಮ ಬ್ಯಾಂಕ್‌ ಖಾತೆಯ ವಿವರ ಸ್ಕ್ಯಾಮರ್‌ಗಳ ಪಾಲಾಗಲಿದೆ. QR ಕೋಡ್‌ಗಳ ಮೂಲಕ ಆನ್‌ಲೈನ್ ವಂಚನೆ ಮಾಡುವುದು ಸುಲಭ ವಿಧಾನವಾಗಿದೆ. ಆದ್ದರಿಂದ, ಯಾರಾದರೂ ನಿಮಗೆ ವಾಟ್ಸಾಪ್ ಅಥವಾ ಇನ್ನಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಕಳುಹಿಸಿದಾಗ ನೀವು ಅದನ್ನು ಸ್ಕ್ಯಾನ್ ಮಾಡಲು ಮುಂದಾಗಬೇಡಿ.

QR ಕೋಡ್

ಒಮ್ಮೆ ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಏನಾಗಲಿದೆ?
ಸ್ಕ್ಯಾಮರ್‌ಗಳು ಕಳುಹಿಸುವ QR ಕೋಡ್ ಅನ್ನು ನೀವು ಸ್ಕ್ಯಾನ್ ಮಾಡಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಲಿದೆ. ವಂಚನೆ ಮಾಡುವ ವ್ಯಕ್ತಿಯು ನಿಮ್ಮ ಬ್ಯಾಂಕ್‌ ಖಾತೆಗೆ ಅನಧಿಕೃತವಾಗಿ ಪ್ರವೇಶಿಸಲು ಸಾದ್ಯವಾಗಲಿದೆ. ಅಲ್ಲದೆ ಮಲ್ಟಿ ಟ್ರಾನ್ಸಕ್ಷನ್‌ ಮೂಲಕ ಹಿಂದಿನ ಖಾತೆಯಲ್ಲಿರುವ ಎಲ್ಲಾ ಹಣವನ್ನು ಲಪಾಟಯಿಸುವ ಸಾಧ್ಯತೆಯಿದೆ.

ಕ್ಯೂಆರ್‌ಕೋಡ್‌ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?

ಕ್ಯೂಆರ್‌ಕೋಡ್‌ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?

* ಮೊದಲನೆಯದಾಗಿ ನಿಮ್ಮ UPI ಐಡಿ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಅಪರಿಚಿತರ ಜೊತೆಗೆ ಶೇರ್‌ ಮಾಡಬೇಡಿ.
* ಸಾಧ್ಯವಾದಷ್ಟು ನಗದು ವ್ಯವಹಾರ ಮಾಡಿ.
* ಯಾರಾದರೂ ನಿಮಗೆ QR ಕೋಡ್ ಸ್ಕ್ಯಾನರ್ ಅನ್ನು ಕಳುಹಿಸಿದರೆ, ಅದನ್ನು ಸ್ಕ್ಯಾನ್ ಮಾಡಬೇಡಿ.
* ನಿಮ್ಮ OTP ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

Best Mobiles in India

Read more about:
English summary
What is it OLX QR code scam? What happens once you scan the QR code?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X