ಗೂಗಲ್‌ ಪದದ ಸೃಷ್ಟಿಕರ್ತ ಯಾರು? ಗೂಗಲ್ ಪದದ ನಿಜವಾದ ಅರ್ಥವೇನು?

ಯಾವುದೋ ಲೋಕದವರ ಹೆಸರಿನಂತೆ ಕಾಣುವ ಈ ಗೂಗಲ್ ಕಂಪೆನಿ ಇಂದು ವಿಶ್ವದ ಇಂಟರ್‌ನೆಟ್ ಪ್ರಪಂಚವನ್ನು ಆಳುತ್ತಿದೆ ಹಾಗಾದರೆ, ಗೂಗಲ್' ಎಂದರೇನು? ಗೂಗಲ್ ಎಂಬ ಹೆಸರು ಕಂಪೆನಿ ಗೆ ಹೇಗೆ ಸಿಕ್ಕಿತು? ಗೂಗಲ್ ಪದಕ್ಕೆ ನಿಜವಾದ ಅರ್ಥವೇನು?

|

ಬೇಕಾದ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಹುಡುಕಿಕೊಡುವ ವ್ಯವಸ್ಥೆಯಾಗಿ, ಇಂಟರ್ನೆಟ್ ಬಳಸುವವರಿಗೆಲ್ಲ ತುಂಬ ಪರಿಚಿತವಾದ ಹೆಸರೆಂದರೆ ಅದು 'ಗೂಗಲ್''ಮಾತ್ರ.! ವಿಶ್ವದಲ್ಲಿ ಇಂಟರ್‌ನೆಟ್ ಬಳಸುವ ಪ್ರತಿಯೋರ್ವನು ಗೂಗಲ್ ಎಂಬ ಪದವನ್ನು ಟೈಪಿಸಿರುತ್ತಾನೆ ಎಂದರೆ ಗೂಗಲ್ ಎಂಬ ಪದ ಎಷ್ಟು ಬೃಹದಾಕಾರವಾಗಿ ಬೆಳೆದಿದೆ ಎಂಬುದನ್ನು ನಾವು ನೋಡಬಹುದು.

ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್ ಇಂದು ಇಂಟರ್‌ನೆಟ್ ಎಂಬ ಅಪಾರವಾದ ಮಾಹಿತಿ ರಾಶಿಕಣಜವನ್ನು ಹೊಂದಿದೆ. ಸಾಮಾನ್ಯರಿಗೆ ಭವಿಷ್ಯವನ್ನು ತೋರಿಸುವ ಈ ಬೃಹತ್ ಕಂಪೆನಿ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ವಿಶ್ವದ ಅಸಮಾನ್ಯ ಸಾಮ್ರಾಟ ಕಂಪೆನಿ ಆಗಲಿದೆ. ಅಂತಹ ಕಂಪೆನಿ ಪ್ರಪಂಚದಲ್ಲಿ ಮತ್ತೊಂದಿರುವುದಿಲ್ಲ ಎಂದು ವಿಶ್ವದ ತಜ್ಞರೆಲ್ಲರೂ ಲೆಕ್ಕಾಚಾರ ಹಾಕಿದ್ದಾರೆ.

ಗೂಗಲ್‌ ಪದದ ಸೃಷ್ಟಿಕರ್ತ ಯಾರು? ಗೂಗಲ್ ಪದದ ನಿಜವಾದ ಅರ್ಥವೇನು?

ಯಾವುದೋ ಲೋಕದವರ ಹೆಸರಿನಂತೆ ಕಾಣುವ ಈ ಗೂಗಲ್ ಕಂಪೆನಿ ಇಂದು ವಿಶ್ವದ ಇಂಟರ್‌ನೆಟ್ ಪ್ರಪಂಚವನ್ನು ಆಳುತ್ತಿದೆ.ಹಾಗಾದರೆ, ಗೂಗಲ್' ಎಂದರೇನು? ಗೂಗಲ್ ಎಂಬ ಹೆಸರು ಕಂಪೆನಿ ಗೆ ಹೇಗೆ ಸಿಕ್ಕಿತು? ಗೂಗಲ್‌ ಪದದ ಸೃಷ್ಟಿಕರ್ತ ಯಾರು? ಗೂಗಲ್ ಪದಕ್ಕೆ ನಿಜವಾದ ಅರ್ಥವೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸಿಂಪಲ್ ಪ್ರಶ್ನೆ ಗೂಗಲ್ ಎಂದರೆನು?

ಸಿಂಪಲ್ ಪ್ರಶ್ನೆ ಗೂಗಲ್ ಎಂದರೆನು?

ನಿಮಗೆ ಅಕ್ಷಯಪಾತ್ರಯಲ್ಲಿ ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ.

ಸಿಂಪಲ್ ಆಗಿ ಗೂಗಲ್ ಎಂದರೆನು?

ಸಿಂಪಲ್ ಆಗಿ ಗೂಗಲ್ ಎಂದರೆನು?

ಮೇಲಿನದು ನಿಮಗೆ ಅರ್ಥವಾಗದಿದ್ದರೆ ಈಗ ನೇರ ವಿಷಯಕ್ಕೆ ಬರೋಣ. `1' ರ ನಂತರ `00' ಬರೆದರೆ ನೂರು ಅಲ್ಲವೇ? ಅದೇ ಒಂದರ ಮುಂದೆ `000' ಬರೆದರೆ ಸಾವಿರ ಇನ್ನು ಮುಂದೆ ಹೋಗಿ `0000000' ಬರೆದರೆ ಅದು ಒಂದು ಕೋಟಿ. ಹೀಗೆ `1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'.

How to find out where you can get your Aadhaar card done (KANNADA)
ಗೂಗಲ್ ಎಂಬ ಪದ ಹುಟ್ಟಿದ್ದು ಹೇಗೆ?

ಗೂಗಲ್ ಎಂಬ ಪದ ಹುಟ್ಟಿದ್ದು ಹೇಗೆ?

1920ರಲ್ಲಿ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ ಎಂಬ ಅದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಸೋದರ ಸಂಬಂಧಿಯ ಮಗ ಮಿಲ್ಟನ್ ಸಿರೋಟಾಗೆ ಕೇಳಿದನಂತೆ. ಆ ಹುಡುಗ ಚೇಷ್ಟೆ ಮಾಡುತ್ತ ತನ್ನ ಬಾಯಿಗೆ ತೋಚಿದನ್ನು ಹೇಳಿದ ಹೆಸರು `ಗೂಗಲ್'

ಬಾಲಕನ ತೊದಲು ನುಡಿ!!

ಬಾಲಕನ ತೊದಲು ನುಡಿ!!

ಮಿಲ್ಟನ್ ಸಿರೋಟಾ ಹೇಳಿದ ತೊದಲು ನುಡಿಯನ್ನು ಎಡ್ವರ್ಡ್ ಕಸ್ನರ್ ದೊಡ್ಡ ಸಂಖ್ಯೆಗೆ ಹೆಸರಾಗಿ ಇಟ್ಟ. ತಾನು ಬರೆದ ಪುಸ್ತಕ ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' ಮೂಲಕ ಈ ಹೆಸರಿಗೆ ಬಹಳ ಪ್ರಚಾರ ಕೊಟ್ಟ. ನಂತ ಗೂಗಲ್ ಸಂಸ್ಥೆ ಹುಟ್ಟಿ ಅದರ ಕೀರ್ತಿ ಬೆಳೆದಂತೆಲ್ಲಾ `ಗೂಗಲ್' ಎಂಬ ಹೆಸರು ವಿಶ್ವದಲ್ಲಿ ಮನೆಮಾತಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಇಡೀ ಜಗತ್ತು 9 ವರ್ಷದ ಬಾಲಕನ ತೊದಲು ನುಡಿಯನ್ನು ಈಗ ಒಪ್ಪಿಕೊಂಡುಬಿಟ್ಟಿದೆ.!

ಗೂಗಲ್ ಕಂಪೆನಿಗೆ ಈ ಹೆಸರು ಬರಲು ಕಾರಣ?

ಗೂಗಲ್ ಕಂಪೆನಿಗೆ ಈ ಹೆಸರು ಬರಲು ಕಾರಣ?

`1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಸಿಗುವ ಪದಗಳಿಗೆ `ಗೂಗಲ್' ಎನ್ನುತ್ತಾರೆ. ಹಾಗಾಗಿ, ' ಬಹಳ ಬಹಳ ಸಂಖ್ಯೆಯಷ್ಟು ವೆಬ್‌ಸೈಟುಗಳನ್ನು ನಮ್ಮ ಸರ್ಚ್ ಎಂಜಿನ್ ಹುಡುಕಿ ದಾಖಲಿಸಿ ಇಟ್ಟುಕೊಂಡಿದೆ' ಎಂದು ಹೇಳಿಕೊಳ್ಳುವ ಸಲುವಾಗಿ ಗೂಗಲ್ ಸಂಸ್ಥೆಯು `ಗೂಗಲ್' ಎಂಬ ದೊಡ್ಡ ಸಂಖ್ಯೆಯ ಹೆಸರನ್ನು ತನಗೆ ಇಟ್ಟುಕೊಂಡಿದೆ ಅಷ್ಟೆ.

ಗೂಗಲ್ ಪ್ಲಸ್ ಎಂದರೆ?

ಗೂಗಲ್ ಪ್ಲಸ್ ಎಂದರೆ?

ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ.ಅಂದರೆ ಗೂಗಲ್‌ಗಿಂತಲೂ ಹೆಚ್ಚು ಗೂಗಲ್‌ ಪ್ಲಸ್ ಹೆಸರಿನ ಮೌಲ್ಯ.

ಇದು ನಿಮಗೆ ಗೊತ್ತಿರಲಿ.!!

ಇದು ನಿಮಗೆ ಗೊತ್ತಿರಲಿ.!!

ಭಾರತೀಯರು ಗಣಿತದ ಜನಕರು. ಶೂನ್ಯ ಪರಿಕಲ್ಪನೆಯನ್ನು ಸೃಷ್ಟಿಸಿದವರೂ ಭಾರತೀಯರೇ. ಜಗತ್ತಿಗೆ ಬೃಹತ್ ಸಂಖ್ಯೆಗಳನ್ನು ಪರಿಚಯಿಸಿದರು ಸಹ ಭಾರತೀಯರೇ. ಏಕ, ದಶ, ಶತ, ಸಹಸ್ರ, ಲಕ್ಷ, ಕೋಟಿ, ನೀಲ, ಪದ್ಮಾ, ಶಂಖ, ಮಹಾಶಂಖ ಹೀಗೆ ಭಾರಿ ಹೆಸರನ್ನು ನೀಡಿದವರು ಭಾರತೀಯರು. ಸೊನ್ನೆಯನ್ನು ನೀಡಿ ಗೂಗಲ್ ಅನ್ನು ಮೀರಿಸಿದವರು ನಮ್ಮ ಪೂರ್ವಜರು

ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ಹೆಚ್ಚು ವಿಷಯಗಳನ್ನು ತಿಳಿಯಲು ನಮ್ಮ ಫೇಸ್‌ಬುಕ್ ಪೇಜ್ ಲೈಕ್ ಮತ್ತು ಶೇರ್ ಮಾಡಿ.!!

ಗೂಗಲ್ ಮ್ಯಾಪ್‌ನಲ್ಲಿ ಗೂಗಲ್ ಮುಚ್ಚಿಟ್ಟಿರುವ ರಹಸ್ಯ ಸ್ಥಳಗಳಿವು!!..ಎಲ್ಲರೂ ನೋಡಲು ಸಾಧ್ಯವಿಲ್ಲ.!!ಗೂಗಲ್ ಮ್ಯಾಪ್‌ನಲ್ಲಿ ಗೂಗಲ್ ಮುಚ್ಚಿಟ್ಟಿರುವ ರಹಸ್ಯ ಸ್ಥಳಗಳಿವು!!..ಎಲ್ಲರೂ ನೋಡಲು ಸಾಧ್ಯವಿಲ್ಲ.!!

Best Mobiles in India

English summary
Google was founded in 1998 by Larry Page and Sergey Brin while they were Ph.D. students at Stanford University, California. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X