ಸ್ಯಾಟಲೈಟ್ ಇಂಟರ್‌ನೆಟ್ ಎಂದರೇನು? ಅದರ ವೇಗ ಎಷ್ಟಿರಲಿದೆ ಗೊತ್ತಾ?

|

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಜಿಯೋ ಸೇರಿದಂತೆ ಹಲವು ಟೆಲಿಕಾಂ ದೈತ್ಯರು ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುಖೇಶ್‌ ಅಂಬಾನಿ ಒಡೆತನದ ಜಿಯೋ ಪ್ಲಾಟ್‌ಫಾರ್ಮ್‌ ಯುರೋಪಿಯನ್ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವಾ ಕಂಪನಿ(SES)ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಜಿಯೋ ಅಲ್ಲದೆ, ಭಾರ್ತಿ ಏರ್‌ಟೆಲ್‌ನ ಒನ್‌ವೆಬ್ ಮತ್ತು ಎಲೋನ್ ಮಸ್ಕ್‌ ಅವರ ಸ್ಟಾರ್‌ಲಿಂಕ್‌ ಕೂಡ ಭಾರತದಲ್ಲಿ ಉಪಗ್ರಹ ಇಂಟರ್‌ನೆಟ್‌ ಸೇವೆ ಪ್ರಾರಂಭಿಸಲು ಪ್ಲಾನ್‌ ನಡೆಸುತ್ತಿವೆ.

ಸ್ಯಾಟಲೈಟ್‌

ಹೌದು, ಭಾರತದಲ್ಲಿ ಸ್ಯಾಟಲೈಟ್‌ ಇಂಟರ್‌ನೆಟ್‌ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಭವಿಷ್ಯದಲ್ಲಿ ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಭಾರತದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದೇ ಹೇಳಲಾಗ್ತಿದೆ. ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಎಂದರೆ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ನಿಮಗೆ ಇಂಟರ್ನೆಟ್ ಸಿಗ್ನಲ್ ಅನ್ನು ಒದಗಿಸಲು ಉಪಗ್ರಹವನ್ನು ಬಳಸುವುದಾಗಿದೆ. ಇದಕ್ಕಾಗಿ ಉಪಗ್ರಹ ಇಂಟರ್ನೆಟ್ ಸ್ಪೇಸ್‌ ಅನ್ವೇಷಿಸಲು ಜಿಯೋ SES ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಹಾಗಾದ್ರೆ ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಎಂದರೆ ಏನು? ಅದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಹೇಗೆ ಕಾರ್ಯನಿರ್ವಹಿಸಲಿದೆ?

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಹೇಗೆ ಕಾರ್ಯನಿರ್ವಹಿಸಲಿದೆ?

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಎಂದರೆ ಇಂಟರ್‌ನೆಟ್‌ ಸಿಗ್ನಲ್‌ಗಾಗಿ ಸ್ಯಾಟ್‌ಲೈಟ್‌ ಅನ್ನು ಬಳಸುವುದಾಗಿದೆ. ಇದಕ್ಕಾಗಿ ನಿಮ್ಮ ಇಂಟರ್‌ನೆಟ್ ಸೇವಾ ಪೂರೈಕೆದಾರರು ಫೈಬರ್ ಇಂಟರ್‌ನೆಟ್ ಸಿಗ್ನಲ್ ಅನ್ನು ಬಾಹ್ಯಾಕಾಶದಿಂದ ಸ್ಯಾಟ್‌ಲೈಟ್‌ಗೆ ಕಳುಹಿಸುತ್ತಾರೆ. ಈ ಸ್ಯಾಟ್‌ಲೈಟ್‌ ನಿಂದ ಇಂಟರ್‌ನೆಟ್ ಸಿಗ್ನಲ್ ನಿಮ್ಮ ಕಡೆಗೆ ಬರಲಿದೆ. ನಿಮ್ಮ ಸ್ಯಾಟ್‌ಲೈಟ್‌ ಡಿಶ್‌ ಈ ಸಿಗ್ನಲ್‌ ಅನ್ನು ಕ್ಯಾಚ್‌ ಮಾಡಲಿದೆ. ಇದು ನಿಮ್ಮ ಕಂಪ್ಯೂಟರ್ ಅನ್ನು ಇಂಟರ್‌ನೆಟ್‌ ಸಿಗ್ನಲ್‌ಗೆ ಸಂಪರ್ಕಿಸುವ ಮೋಡೆಮ್‌ಗೆ ಕನೆಕ್ಟ್‌ ಮಾಡಲಿದೆ. ಅದೇ ಸಂಕೇತಗಳು ನಿಮ್ಮ ಸೇವಾ ಪೂರೈಕೆದಾರರಿಗೆ ಹಿಂತಿರುಗುತ್ತವೆ.

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ನೊಂದಿಗೆ ಬರುವ ಉಪಕರಣಗಳು

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ನೊಂದಿಗೆ ಬರುವ ಉಪಕರಣಗಳು

ಬಳಕೆದಾರರು ಸ್ಯಾಟ್‌ಲೈಟ್‌ ಇಂಟರ್‌ನೆಟ್‌ಗೆ ಬದಲಾಯಿಸುವುದನ್ನು ಪರಿಗಣಿಸುತ್ತಿದ್ದರೆ ಇಂಟರ್ನೆಟ್ ಸೇವಾ ಪೂರೈಕೆದಾರರು ವಿಶೇಷ ಸಾಧನಗಳನ್ನು ಬಳಸಬಹುದು. ಮೊದಲು, ಹೆಚ್ಚಿನ ಸ್ಯಾಟ್‌ಲೈಟ್‌ ಇಂಟರ್‌ನೆಟ್ ದೊಡ್ಡ ಡಿವೈಸ್‌ಗಳೊಂದಿಗೆ ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಂಟರ್ನೆಟ್ ಪೂರೈಕೆದಾರರು ಚಿಕ್ಕದಾದ, ಹೆಚ್ಚು ಸಾಂದ್ರವಾದ ಉಪಕರಣಗಳನ್ನು ಹೊಂದಿದ್ದಾರೆ. ಹೆಚ್ಚಿನ ಸ್ಯಾಟ್‌ಲೈಟ್‌ ಇಂಟರ್ನೆಟ್ ಈಗ ಮೋಡೆಮ್, ವೈರ್‌ಲೆಸ್ ರೂಟರ್ ಮತ್ತು ನೆಟ್‌ವರ್ಕ್ ಕೇಬಲ್‌ನೊಂದಿಗೆ ಮಾತ್ರ ಬರುತ್ತದೆ.

ಸ್ಯಾಟ್‌ಲೈಟ್‌

ಇನ್ನು ಸ್ಯಾಟ್‌ಲೈಟ್‌ ಇಂಟರ್‌ನೆಟ್‌ಗಾಗಿ ಬಳಸಲಾಗುವ ಮೋಡೆಮ್ ಸಾಕಷ್ಟು ಸಮರ್ಥವಾಗಿರಲಿದೆ. ಇದು ಸ್ಯಾಟ್‌ಲೈಟ್‌ ಸಿಗ್ನಲ್‌ ಸೆರೆಹಿಡಿಯಲು ಎಷ್ಟು ಸಮರ್ಥವಾಗಿದೆ ಎಂದರೆ? ನೀವು ಡಿಶ್‌ ಅನ್ನು ಬಳಸಬೇಕಾದ ಅನಿವಾರ್ಯತೆ ಇಲ್ಲ. ಅಲ್ಲದೆ ನಿಮ್ಮ ಸಿಸ್ಟಮ್‌ನ ನೆಟ್‌ವರ್ಕ್ ಅಡಾಪ್ಟರ್‌ನಿಂದ ಓದಬಹುದಾದಂತೆ ಪರಿವರ್ತಿಸುತ್ತದೆ. ಇದು ನಿಮ್ಮ ಕಂಪ್ಯೂಟರ್‌ಗೆ ಇಂಟರ್ನೆಟ್ ಅನ್ನು ತರುತ್ತದೆ. ಸ್ಯಾಟ್‌ಲೈಟ್‌ ಇಂಟರ್‌ನೆಟ್‌ಗಾಗಿ ಬಳಸುವ ರೂಟರ್ ಸಹ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕಗಳಲ್ಲಿ ಬಳಸುವಂತೆ ಕಾರ್ಯನಿರ್ವಹಿಸುತ್ತದೆ. ಈ ರೂಟರ್ ನಿಮ್ಮ ಮನೆಯಾದ್ಯಂತ ಮೋಡೆಮ್‌ನ ಇಂಟರ್‌ನೆಟ್ ಸಿಗ್ನಲ್ ಅನ್ನು ವೈ-ಫೈ ಅಥವಾ ಎತರ್ನೆಟ್ ಕೇಬಲ್ ಮೂಲಕ ವಿತರಿಸುತ್ತದೆ.

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಸ್ಪೀಡ್

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಸ್ಪೀಡ್

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಈ ಹಿಂದೆ ಅತ್ಯಂತ ನಿಧಾನವಾಗಿತ್ತು. ಹಿಂದೆ ಸುಮಾರು ಉಪಗ್ರಹ ಆಧಾರಿತ ಇಂಟರ್‌ನೆಟ್‌ 750 Kbps ಡೌನ್‌ಲೋಡ್ ವೇಗವನ್ನು ನೀಡುತ್ತಿತ್ತು. ಆದರೆ ಟೆಕ್ನಾಲಜಿಯಲ್ಲಿನ ಪ್ರಗತಿಗಳು ಮತ್ತು ಹೊಸ ಉಪಗ್ರಹಗಳು ತನ್ನ ಬಳಕೆದಾರರಿಗೆ ಹೆಚ್ಚಿನ ವೇಗವನ್ನು ನೀಡಲು ಸ್ಯಾಟ್‌ಲೈಟ್‌ ಇಂಟರ್‌ನೆಟ್‌ಗೆ ಸಹಾಯ ಮಾಡಲಿದೆ. ಇದರಿಂದ 100 Mbps ವರೆಗೆ ವೇಗವನ್ನು ನೀಡುವ ಸ್ಯಾಟ್‌ಲೈಟ್‌ ಇಂಟರ್‌ನೆಟ್ ಸೇವಾ ಪೂರೈಕೆದಾರರು ಇದ್ದಾರೆ. ಇದು ಹೆಚ್ಚಿನ ಕೇಬಲ್ ಮತ್ತು DSL ಇಂಟರ್‌ನೆಟ್ ಯೋಜನೆಗಳನ್ನು ನೀಡುತ್ತದೆ.

ಹೆಚ್ಚಿನ ಲೇಟೆನ್ಸಿ ನೀಡುತ್ತದೆ

ಹೆಚ್ಚಿನ ಲೇಟೆನ್ಸಿ ನೀಡುತ್ತದೆ

ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ಹೆಚ್ಚಿನ ಲೇಟೆನ್ಸಿಯನ್ನು ನೀಡಲಿದೆ. ಅಂದರೆ ಡೇಟಾವನ್ನು ಕಳುಹಿಸಲು ಮತ್ತು ಸ್ವೀಕರಿಸಲು ತೆಗೆದುಕೊಳ್ಳುವ ಸಮಯವನ್ನು ಲೇಟೆನ್ಸಿ ಎಂದು ಕರೆಯಲಾಗುತ್ತದೆ. ನಿಮ್ಮ ISP ನಲ್ಲಿ ಬೇರೆ ಸ್ಯಾಟಲೈಟ್ ಡಿಶ್‌ಗೆ ಹೋಗಲು ಮತ್ತು ಮತ್ತೆ ಹಿಂತಿರುಗಲು ತೆಗೆದುಕೊಳ್ಳುವ ಸಮಯ ತುಂಬಾ ಕಡಿಮೆಯಾಗಲಿದೆ. ಕೇಬಲ್ ಮತ್ತು ಫೈಬರ್ ಇಂಟರ್‌ನೆಟ್ 20 ರಿಂದ 50 ಮಿಲಿಸೆಕೆಂಡ್‌ಗಳ ವ್ಯಾಪ್ತಿಯಲ್ಲಿ ಲೇಟೆನ್ಸಿಯನ್ನು ನೀಡುತ್ತದೆ. ಆದರೆ ಸ್ಯಾಟ್‌ಲೈಟ್‌ ಇಂಟರ್‌ನೆಟ್‌ ರೇಂಜ್‌ 600 ಎಂಎಸ್‌ಗಳಷ್ಟು ಹೆಚ್ಚಿರಬಹುದು ಎನ್ನಲಾಗಿದೆ.

Best Mobiles in India

English summary
A satellite internet connection uses a satellite to provide an internet signal that reaches from your internet service provider (ISP) to your device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X