ವಾಟ್ಸಾಪ್‌ನ ಈ ಮಹತ್ವದ ಆಯ್ಕೆ ಬಗ್ಗೆ ನಿಮಗೆ ಗೊತ್ತೆ?..ಇದು ಎಷ್ಟು ಸುರಕ್ಷಿತ?

|

ಮೆಟಾ ಮಾಲೀಕತ್ವದ ವಾಟ್ಸಾಪ್‌ ಈಗಾಗಲೇ ತನ್ನ ಅನುಕೂಲಕರ ಆಯ್ಕೆಗಳಿಂದ ಬಳಕೆದಾರರನ್ನು ಆಕರ್ಷಿಸಿದೆ. ಈ ಇನ್‌ಸ್ಟಂಟ್‌ ಮೆಸೆಜ್‌ ಅಪ್ಲಿಕೇಶನಿನ ಕೆಲವೊಂದು ಫೀಚರ್ಸ್‌ಗಳು, ಇತರೆ ಮೆಸೆಜಿಂಗ್‌ ಆಪ್‌ಗಳಿಗಿಂತ ಅತ್ಯುತ್ತಮ ಎನ್ನವಂತಿವೆ. ಅದರಲ್ಲಿಯೂ ಮುಖ್ಯವಾಗಿ ಬಳಕೆದಾರರ ಮಾಹಿತಿ ಸುರಕ್ಷತೆಯ ದೃಷ್ಠಿಯಿಂದ ವಾಟ್ಸಾಪ್‌ ಹೆಚ್ಚಿನ ಗಮನ ನೀಡಿದ್ದು, ಕೆಲವು ಆಕರ್ಷಕ ಸೆಕ್ಯುರಿಟಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಆ ಪೈಕಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ (end-to-end encrypted) ಆಯ್ಕೆ ಗಮನ ಸೆಳೆದಿದೆ.

ಪರಿಚಯಿಸಿದೆ

ಹೌದು, ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಫೀಚರ್‌ ಪರಿಚಯಿಸಿದೆ. ಇದು ಬಳಕೆದಾರರು ಚಾಟ್ ಮಾಡುವಾಗ ಹೆಚ್ಚಿನ ಭದ್ರತೆ ನೀಡುತ್ತದೆ. ಇನ್ನು ವಾಟ್ಸಾಪ್‌ ಸಂಸ್ಥೆಯು ಬಳಕೆದಾರರು ಚಾಟ್‌ ಮಾಡುವಾಗ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಬಗ್ಗೆ ಹೈಲೈಟ್‌ ಮಾಡುತ್ತಲೇ ಸಾಗಿದೆ. ವಾಟ್ಸಾಪ್‌ನಲ್ಲಿ ಬಳಕೆದಾರರು ಕಳುಹಿಸುವ ಎಲ್ಲ ಮೆಸೆಜ್‌ಗಳು ಎನ್‌ಕ್ರಿಪ್ಟ್ (encrypted) ಆಗಿರುತ್ತವೆ. ಹಾಗಾದರೆ ಏನಿದು ವಾಟ್ಸಾಪ್‌ ನ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಫೀಚರ್‌? ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಅಸಲಿಗೆ

ಸಾಮಾನ್ಯವಾಗಿ ನಿಯಮಿತವಾಗಿ ವಾಟ್ಸಾಪ್‌ ಅಪ್ಲಿಕೇಶನ್ ಬಳಕೆಮಾಡುವ ಬಳಕೆದಾರರು ಖಂಡಿತವಾಗಿಯೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಪದವನ್ನು ವಾಟ್ಸಾಪ್‌ನಲ್ಲಿ ನೋಡಿರುತ್ತಾರೆ. ಆದ್ರೆ, ಅಸಲಿಗೆ ವಾಟ್ಸಾಪ್‌ ಚಾಟ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ ಎಂದರೆ ಏನು? ಇದ್ರಿಂದ ಬಳಕೆದಾರರ ಮಾಹಿತಿಗೆ ಸುರಕ್ಷತೆ ಹೇಗೆ ಎನ್ನುವ ಬಗ್ಗೆ ನಿಮ್ಮಲ್ಲೂ ಕೆಲವು ಗೊಂದಲಗಳು ಬಂದಿರಬಹುದು.

ಸರಳವಾಗಿ

ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ನಲ್ಲಿ ಕಳುಹಿಸುವ ಹಾಗೂ ಪಡೆಯುವ ಎಲ್ಲಾ ಮೆಸೆಜ್‌ಗಳು/ ಚಾಟ್‌ಗಳನ್ನು ಎನ್‌ಕ್ರಿಪ್ಟ್ (ಸುರಕ್ಷಿತವಾಗಿವೆ) ಆಗಿರುತ್ತವೆ. ಇನ್ನು ಸರಳವಾಗಿ ಹೇಳುವುದಾದರೆ, ವಾಟ್ಸಾಪ್‌ ಆಪ್‌ನಲ್ಲಿ ಕಳುಹಿಸಲಾದ ಅಥವಾ ಸ್ವೀಕರಿಸಿದ ಚಾಟ್‌ಗಳು ಕಳುಹಿಸುವವರಿಗೆ ಅಥವಾ ಸ್ವೀಕರಿಸುವವರಿಗೆ ಮಾತ್ರ ಕಾಣಿಸುತ್ತವೆ. ಚಾಟ್‌ಗಳು ಇತರೆ ಯಾರಿಗೂ ಕಾಣಿಸುವುದಿಲ್ಲ. ಅಷ್ಟೇ ಯಾಕೆ ವಾಟ್ಸಾಪ್‌ಗೂ ಗೋಚರಿಸುವುದಿಲ್ಲ ಅಷ್ಟರ ಮಟ್ಟಿಗೆ ಸುರಕ್ಷಿತ ಎನ್ನಲಾಗಿದೆ.

ವಾಯಿಸ್‌

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಯಲ್ಲಿ ವಾಟ್ಸಾಪ್‌ನ ಎಲ್ಲಾ ಮೆಸೆಜ್‌ಗಳು, ಫೋಟೋಗಳು, ವಿಡಿಯೋಗಳು, ವಾಯಿಸ್‌ ನೋಟ್‌ಗಳು, ಡಾಕ್ಯುಮೆಂಟ್‌ಗಳು ಜೊತೆಗೆ ಸ್ಟೇಟಸ್ ಅಪ್‌ಡೇಟ್‌ಗಳು ಅಲ್ಲದೇ ವಾಯಿಸ್‌ ಮತ್ತು ವಿಡಿಯೋ ಕರೆಗಳು ಸುರಕ್ಷಿತವಾಗಿರುತ್ತವೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಲ್ಲಿ ಮೆಸೆಜ್‌ ಕಳುಹಿಸುವವರು ಮತ್ತು ಸ್ವೀಕರಿಸುವವರ ನಡುವೆ ಒಂದು ಚೈನ್‌ ವ್ಯವಸ್ಥೆ ನಿರ್ಮಾಣವಾಗಿರುತ್ತದೆ. ಇದ್ರಲ್ಲಿ ಇತರರು ಯಾವುದೇ ನಿರ್ದಿಷ್ಟ ಹಂತದಲ್ಲಿ ಎಂಟ್ರಿ ಕೊಡಲು ಸಾಧ್ಯವೇ ಇಲ್ಲ.

ಹೀಗಾಗಿ

ಅಂದಹಾಗೇ ಈ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಯನ್ನು ಬಳಕೆದಾರರು ಆಕ್ಟಿವ್/ ಸಕ್ರಿಯ ಮಾಡುವ ಅಗತ್ಯ ಇರುವುದಿಲ್ಲ. ಬದಲಿಗೆ ವಾಟ್ಸಾಪ್‌ ಎಲ್ಲಾ ಖಾತೆಗಳಿಗೆ ಸ್ವಯಂ-ಸಕ್ರಿಯಗೊಳಿಸಿರುತ್ತದೆ. ಹೀಗಾಗಿ ಬಳಕೆದಾರರು ಮೆಸೆಜ್‌ ಸುರಕ್ಷತೆಗಾಗಿ ಯಾವುದೇ ಸೆಟ್ಟಿಂಗ್‌ ಮಾಡುವ ಅಗತ್ಯ ಇರುವುದಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ, ಈ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲು ಯಾವುದೇ ಮಾರ್ಗವಿಲ್ಲ.

ವಾಟ್ಸಾಪ್‌ ನಲ್ಲಿ ಮತ್ತೆ ಹೊಸ ಫೀಚರ್

ವಾಟ್ಸಾಪ್‌ ನಲ್ಲಿ ಮತ್ತೆ ಹೊಸ ಫೀಚರ್

ವಾಟ್ಸಾಪ್‌ ನೂತನ ಅಪ್‌ಡೇಟ್‌ನಲ್ಲಿ ನೂತನವಾಗಿ ಲಾಸ್ಟ್‌ ಸೀನ್‌ ಆಂಡ್‌ ಆನ್‌ಲೈನ್‌ ಫೀಚರ್‌ನಲ್ಲಿ ಬಳಕೆದಾರರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇವುಗಳನ್ನು ಎವೆರಿವನ್‌ ಮತ್ತು ಸೇಮ್ ಅಸ ಲಾಸ್ಟ್ ಸೀನ್ ಎಂದು ಹೆಸರಿಸಲಾಗಿದೆ. ಎವೆರಿವನ್‌ ಆಯ್ಕೆಯ ಮೂಲಕ ನೀವು ಆನ್‌ಲೈನ್‌ನಲ್ಲಿ ಇದ್ದೀರಾ ಇಲ್ಲವೆ ಅನ್ನೊದನ್ನ ಎಲ್ಲರೂ ಕೂಡ ನೋಡಬಹುದು. ಆದರೆ ಎರಡನೆಯ ಆಯ್ಕೆಯಲ್ಲಿ ನೀವು ಆನ್‌ಲೈನ್‌ನಲ್ಲಿದ್ದೀರಾ ಎಂದು ಕೊನೆಯದಾಗಿ ನೋಡಿರುವವರನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ.

ಫೀಚರ್‌

ವಾಟ್ಸಾಪ್ ಪ್ರಸ್ತುತ ಈ ಫೀಚರ್‌ ಅನ್ನು ಬೀಟಾ ವರ್ಷನ್‌ನಲ್ಲಿ ಮಾತ್ರ ಪರೀಕ್ಷಿಸುತ್ತಿದೆ. ಇದು ಬಳಕೆದಾರರಿಗೆ ಉಪಯೋಗಿಸುವುದಕ್ಕೆ ಸೂಕ್ತವಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಸದ್ಯ ಇತರ ಬೀಟಾ ಪರೀಕ್ಷಕರಿಗೆ ಈ ಅಪ್ಡೇಟ್‌ ಅನ್ನು ಯಾವಾಗ ಪರಿಚಯಿಸಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ ಹಲವು ಪ್ರಮುಖ ಫೀಚರ್ಸ್‌ಗಳನ್ನು ಪರಿಚಯಿಸಲು ಕಾರ್ಯ ನಿರ್ವಹಿಸುತ್ತಿದೆ.

Best Mobiles in India

English summary
Is Your WhatsApp Chat Safe? You Need To Know These Things.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X