VPN ಎಂದರೇನು? ಭಾರತದಲ್ಲಿ VPN ಸೇವೆ ಬ್ಯಾನ್‌ ಆಗುತ್ತಾ?

|

ಭಾರತ ಸರ್ಕಾರ ಮತ್ತು VPN (ವರ್ಚುವಲ್ ಪ್ರಾಕ್ಸಿ ನೆಟ್‌ವರ್ಕ್‌) ಕಂಪೆನಿಗಳ ನಡುವೆ ಸಾಕಷ್ಟು ದಿನಗಳಿಂದ ತಿಕ್ಕಾಟ ನಡೆಯುತ್ತಿದೆ. ಭಾರತ ಸರ್ಕಾರದ ಹೊಸ ನಿಯಮ ವಿಪಿಎನ್‌ ಕಂಪೆನಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿರೋದು ಈ ತಿಕ್ಕಾಟಕ್ಕೆ ಕಾರಣವಾಗಿದೆ. ಸದ್ಯ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ VPNಗಳ ಮೇಲೆ ಭಾರತ ಸರ್ಕಾರ ನಿಯಂತ್ರಣ ಹೇರುವುದಕ್ಕೆ ಮುಂದಾಗಿದೆ, ಇದಕ್ಕಾಗಿ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಇದರಲ್ಲಿ ಬಳಕೆದಾರರ ಐದು ವರ್ಷದ ಡೇಟಾವನ್ನು ಸಂಗ್ರಹಿಸಬೇಕು ಎನ್ನುವ ನಿಯಮ ಕೂಡ ಸೇರಿದೆ.

ವಿಪಿಎನ್‌

ಭಾರತ ಸರ್ಕಾರದ ಈ ಹೊಸ ನಿಯಮ ವಿಪಿಎನ್‌ ಸೇವೆ ನೀಡುವ ಕಂಪೆನಿಗಳಿಗೆ ನುಂಗಲಾರದ ತುತ್ತಾಗಿದೆ. ಏಕೆಂದರೆ VPN ಸೇವೆ ಪ್ರಸಿದ್ಧಿ ಪಡೆದಿರುವುದೇ ಬಳಕೆದಾರರ ಗೌಪ್ಯತೆ ವಿಚಾರಕ್ಕೆ. ಇದೀಗ ಬಳಕೆದಾರರ ಮುಂದಿನ ಐದು ವರ್ಷದ ಡೇಟಾ ಸಂಗ್ರಹಣೆ ಹಾಗೂ ಸ್ಟೋರೇಜ್‌ ಮಾಡಬೇಕೆಂಬ ಸರ್ಕಾರದ ನಿಯಮ ವಿಪಿಎನ್‌ ಸಂಸ್ಥೆಗಳನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಅದರಲ್ಲೂ ನಾರ್ಡ್ VPN ಸಂಸ್ಥೆ ಭಾರತದಿಂದ ಹೊರಹೋಗುವುದಾಗಿ ಕೂಡ ಹೇಳಿಕೊಂಡಿದೆ. ಹಾಗಾದ್ರೆ ಭಾರತ ಸರ್ಕಾರ ಮತ್ತು ವಿಪಿಎನ್‌ ನಡುವಿನ ತಿಕ್ಕಾಟ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವರ್ಚುವಲ್ ಪ್ರೈವೇಟ್‌ ನೆಟ್‌ವರ್ಕ್

ವರ್ಚುವಲ್ ಪ್ರೈವೇಟ್‌ ನೆಟ್‌ವರ್ಕ್ (VPN) ಸಾಮಾನ್ಯ ನೆಟ್‌ವರ್ಕ್‌ಗೆ ಹೋಲಿಕೆ ಮಾಡಿದರೆ ಇದು ಹೆಚ್ಚು ಸುರಕ್ಷಿತ ಮತ್ತು ಬಳಕೆದಾರರು ಯಾವುದೇ ಬ್ರೌಸರ್‌ ಅನ್ನು ಕೂಡ ಖಾಸಗಿಯಾಗಿ ಪ್ರವೇಶಿಸುವುದಕ್ಕೆ ಅವಕಾಶವಿದೆ. ಅಲ್ಲದೆ ಭಾರತದಲ್ಲಿ ಬ್ಯಾನ್‌ ಆಗಿರುವ ವೆಬ್‌ಸೈಟ್‌ಗಳಿಗೂ ಕೂಡ ಪ್ರವೇಶಿಸುವುದಕ್ಕೆ ಅವಕಾಶ ನೀಡಿದೆ. ಇದೇ ಕಾರಣಕ್ಕೆ VPN ಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಅದರಲ್ಲೂ ಹೆಚ್ಚಿನ ಜನರು ಪೋರ್ನ್ ವೆಬ್‌ಸೈಟ್‌ಗಳನ್ನು ವೀಕ್ಷಿಸುವುದಕ್ಕೆ ವಿಪಿಎನ್‌ ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ.

CERT-IN

ಇದೇ ಕಾರಣಕ್ಕೆ ಭಾರತದಲ್ಲಿ CERT-IN ಈಗ ಕೆಲವು ಹೊಸ ನಿಯಮಗಳನ್ನು ಹೊರತಂದಿದೆ. ಈ ನಿಯಮಗಳ ಅನ್ವಯ ಭಾರತದಲ್ಲಿ VPN ಅನ್ನು ಬಳಸಿಕೊಂಡು ಇಂಟರ್ನೆಟ್‌ಗೆ ಸಂಪರ್ಕಿಸುತ್ತಿರುವ ಬಳಕೆದಾರರ ವಿವರಗಳನ್ನು ನೀಡಬೇಕಾಗುತ್ತದೆ. ಅಲ್ಲದೆ ವಿಪಿಎನ್‌ ಸೇವೆ ನೀಡುವ ಸಂಸ್ಥೆಗಳು ಸರ್ಕಾರಕ್ಕೆ ಈ ಕೆಳಕಂಡ ಅಂಶಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

* ವಿಪಿಎನ್‌ ಸೇವೆ ಬಳಸುವ ಚಂದಾದಾರರ ಹೆಸರು
* ವಿಪಿಎನ್‌ ಸೇವೆ ಬಳಸಿದ ಅವಧಿ
* ಬಳಸುತ್ತಿರುವ ಐಪಿಗಳು
* ಇಮೇಲ್ ವಿಳಾಸ ಮತ್ತು IP ವಿಳಾಸ
* VPN ಸೇವೆಗಳನ್ನು ಬಳಸುವ ಉದ್ದೇಶ
* ವಿಪಿಎನ್‌ ಬಳಸಿದವರ ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳು
* VPN ಚಂದಾದಾರರ ಮಾಲೀಕತ್ವದ ಮಾದರಿ

ಈ ಎಲ್ಲಾ ಅಂಶಗಳನ್ನು ವಿಪಿಎನ್‌ ಸಂಸ್ಥೆಗಳು ಸಂಗ್ರಹಿಸಬೇಕು ಅನ್ನೊದು ಸರ್ಕಾರದ ನಿಯಮವಾಗಿದೆ. ಆದರೆ ಈ ನಿಯಮವನ್ನು ಪಾಲಿಸಿದರೆ ವಿಪಿಎನ್‌ ಸೇವೆಗಳ ಮೂಲ ಉದ್ದೇಶವೇ ಬದಲಾಗಲಿದೆ ಅನ್ನೊದು ವಿಪಿಎನ್‌ ಸಂಸ್ಥೆಗಳ ವಾದವಾಗಿದೆ.

ಹೊಸ ನಿಯಮಗಳು ಬಳಕೆದಾರರ ಮೇಲೆ ಬೀರುವ ಪರಿಣಾಮ ಏನು?

ಹೊಸ ನಿಯಮಗಳು ಬಳಕೆದಾರರ ಮೇಲೆ ಬೀರುವ ಪರಿಣಾಮ ಏನು?

ವಿಪಿಎನ್‌ ಸೇವೆ ಬಳಸುವವರು ಹಲವು ಕಾರಣಗಳಿಗಾಗಿ ವಿಪಿಎನ್‌ ಬಳಸಬಹುದು. ಅಂದರೆ ಭಾರತದಲ್ಲಿ ಪೋರ್ನ್‌ವೆಬ್‌ಸೈಟ್‌ಗಳನ್ನು ನಿಷೇದಿಸಲಾಗಿದೆ. ಇಂತಹ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ವಿಪಿಎನ್‌ ಬಳಸಬಹುದು. ಇನ್ನು ಕೆಲವರು ತಮ್ಮ ಗೌಪ್ಯತೆಯನ್ನು ಕಾಪಾಡುವುದಕ್ಕಾಗಿ ವಿಪಿಎನ್‌ ಬಳಸಬಹುದು. ಕೆಲವು ಕಂಪೆನಿಗಳು ತಮ್ಮ ಸಂಸ್ಥೆಯ ಖಾಸಗಿತನವನ್ನು ಕಾಪಾಡುವುದಕ್ಕಾಗಿ ವಿಪಿಎನ್‌ ಸೇವೆಗಳನ್ನು ಬಳಸುತ್ತಿವೆ. ಆದರೆ ಸರ್ಕಾರದ ಹೊಸ ನಿಯಮದ ಅನ್ವಯ ತಮ್ಮ ಬಳಕೆದಾರರ ವಿವರಗಳನ್ನು ಲಾಗ್ ಇನ್ ಮಾಡಿ ಮತ್ತು ನಿರ್ವಹಿಸಬೇಕಾಗುತ್ತದೆ. ಅದರಲ್ಲೂ ಕೆಲವು VPN ಕಂಪನಿಗಳು ತಮ್ಮ ಸರ್ವರ್‌ಗಳಲ್ಲಿ ಯಾವುದೇ ಬಳಕೆಯ ಲಾಗ್‌ಗಳನ್ನು ಸಹ ಉಳಿಸುವುದಿಲ್ಲ. ಆದರೆ ಇದೀಗ ಸರ್ಕಾರದ ನಿಯಮ ಈ ಕಂಪೆನಿಗಳ ಮೂಲ ಉದ್ದೇಶಕ್ಕೆ ವಿರುದ್ದವಾಗಿವೆ. ಆದರಿಂದ ಮುಂದಿನ ದಿನಗಳಲ್ಲಿ ವಿಪಿಎನ್‌ ಸಂಸ್ಥೆಗಳ ನಡೆ ಏನು ಅನ್ನೊದು ಗೊತ್ತಾಗಲಿದೆ.

Best Mobiles in India

Read more about:
English summary
Has the Indian government banned VPNs? There is such a buzz about this place or that, but it is not correct.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X