ವಾಟ್ಸಾಪ್‌ನ ವಾಯ್ಸ್‌ ಮೆಸೇಜ್‌ ಫೀಚರ್ಸ್‌ನಲ್ಲಿ ಬರಲಿದೆ ಹೊಸ ಬದಲಾವಣೆ!

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ವಾಯ್ಸ್‌ ಮೆಸೇಜ್‌ ಎಕೋ ಸಿಸ್ಟಂನಲ್ಲಿ ಅನೇಕ ಫೀಚರ್ಸ್‌ಗಳನ್ನು ಘೋಷಣೆ ಮಾಡಿದೆ. 2013ರಲ್ಲಿ ಮೊದಲ ಭಾರಿಗೆ ಪರಿಚಯಿಸಲಾಗಿದ್ದ ಫೀಚರ್ಸ್‌ ಅನ್ನು ಇದೀಗ ಅಪ್ಡೇಟ್‌ ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರ ಅನುಭವವನ್ನು ಸುಧಾರಿಸುವುದಕ್ಕಾಗಿ ಹೊಸ ಫೀಚರ್ಸ್‌ ಪರಿಚಯಿಸಿದೆ. ವಾಯ್ಸ್‌ಮೆಸೇಜ್‌ ಎಕೋಸಿಸ್ಟಂನಲ್ಲಿ ಒಟ್ಟಾರೆ ಅನುಭವವನ್ನು ಸುಧಾರಿಸುತ್ತಿದೆ. ವಾಯ್ಸ್‌ ಮೆಸೇಜ್‌ಗಳನ್ನು ಹೆಚ್ಚು ಉಪಯುಕ್ತವಾಗಿಸುವ ಸಲುವಾಗಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಈ ಹೊಸ ಫೀಚರ್ಸ್‌ಗಳನ್ನು ಎಲ್ಲಾ ಆಂಡ್ರಾಯ್ಡ್, ಐಒಎಸ್ ಬಳಕೆದಾರರಿಗೆ ಪರಿಚಯಿಸಲಾಗುವುದು ಎಂದು ವಾಟ್ಸಾಪ್‌ ದೃಢಪಡಿಸಿದೆ. ಹಾಗಾದ್ರೆ ವಾಟ್ಸಾಪ್‌ ಹೊಸದಾಗಿ ಪರಿಚಯಿಸಿರುವ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಔಟ್‌ ಆಫ್‌ ಚಾಟ್ ಪ್ಲೇಬ್ಯಾಕ್‌

ಔಟ್‌ ಆಫ್‌ ಚಾಟ್ ಪ್ಲೇಬ್ಯಾಕ್‌

ವಾಟ್ಸಾಪ್‌ ಹೊಸದಾಗಿ ವಾಯ್ಸ್‌ ಮೆಸೇಜ್‌ನಲ್ಲಿ ಪರಿಚಯಿಸಿರುವ ಹೊಸ ಫಿಚರ್ಸ್‌ಗಳಲ್ಲಿ ಔಟ್‌ ಆಪ್‌ ಚಾಟ್‌ ಪ್ಲೇ ಬ್ಯಾಕ್‌ ಕೂಡ ಒಂದು. ವಾಯ್ಸ್‌ ಮೆಸೇಜ್‌ ಅನ್ನು ಚಾಟ್‌ ಹೊಗಡೆ ಆಲಿಸುವುದಕ್ಕೆ ಇದು ಅವಕಾಶ ನೀಡಲಿದೆ. ಇದರಿಂದ ನೀವು ಮಲ್ಟಿ ಟಾಸ್ಕ್‌ ಮಾಡಬಹುದು. ಅಂದರೆ ನೀವು ಔಟ್‌ ಮೆಸೇಜ್‌ ವಾಯ್ಸ್‌ ಪ್ಲೇ ಮಾಡುವುದರಿಂದ ಇತರ ಸಂದೇಶಗಳನ್ನು ಓದಬಹುದು ಮತ್ತು ರಿಪ್ಲೇ ಮಾಡಬಹುದು.

ವಿರಾಮ/ರೆಕಾರ್ಡಿಂಗ್ ಪುನರಾರಂಭ

ವಿರಾಮ/ರೆಕಾರ್ಡಿಂಗ್ ಪುನರಾರಂಭ

ವಾಯ್ಸ್‌ ಮೆಸೇಜ್‌ ಅನ್ನು ರೆಕಾರ್ಡ್ ಮಾಡುವಾಗ, ನೀವು ರೆಕಾರ್ಡಿಂಗ್ ಅನ್ನು ವಿರಾಮಗೊಳಿಸಬಹುದು. ಮತ್ತೇ ಬೇಕು ಎನಿಸಿದಾಗ ಪುನರಾರಂಭಿಸಬಹುದು.

ವೇವ್‌ಫಾರ್ಮ್ ವಿಶ್ಯುವಲೈಜೇಶನ್‌

ವೇವ್‌ಫಾರ್ಮ್ ವಿಶ್ಯುವಲೈಜೇಶನ್‌

ಈ ಫೀಚರ್ಸ್‌ ರೆಕಾರ್ಡಿಂಗ್ ಅನ್ನು ಅನುಸರಿಸಲು ಸಹಾಯ ಮಾಡಲು ವಾಯ್ಸ್‌ ಮೆಸೇಜ್‌ನಲ್ಲಿ ವಾಯ್ಸ್‌ ವಿಶ್ಯುಯಲ್‌ ತನ್ನ ಪ್ರಾತಿನಿಧ್ಯವನ್ನು ತೋರಿಸುತ್ತದೆ.

ಡ್ರಾಫ್ಟ್ ಪ್ರಿವ್ಯೂ

ಡ್ರಾಫ್ಟ್ ಪ್ರಿವ್ಯೂ

ನಿಮ್ಮ ವಾಯ್ಸ್‌ ಮೆಸೇಜ್‌ಗಳನ್ನು ಸೆಂಡ್‌ ಮಾಡುವುದಕ್ಕು ಮೊದಲೇ ನೀವೊಮ್ಮೆ ಕೇಳುವುದಕ್ಕೆ ಅವಕಾಶ ಸಿಗಲಿದೆ.

ರಿಮೆಂಬರ್‌ ಪ್ಲೇಬ್ಯಾಕ್

ರಿಮೆಂಬರ್‌ ಪ್ಲೇಬ್ಯಾಕ್

ವಾಯ್ಸ್‌ ಮೆಸೇಜ್‌ ಅನ್ನು ಕೇಳುವಾಗ ನೀವು ವಿರಾಮಗೊಳಿಸಿದರೆ, ನೀವು ಚಾಟ್‌ಗೆ ಹಿಂತಿರುಗಿದಾಗ ನೀವು ಎಲ್ಲಿಗೆ ಸ್ಟಾಪ್‌ ಮಾಡಿದ್ದಿರೋ ಅಲ್ಲಿಂದಲೇ ಮುಂದುವರೆಸುವುದಕ್ಕೆ ಅವಕಾಶ ನೀಡಲಿದೆ.

ಫಾಸ್ಟ್‌ ಪ್ಲೇಬ್ಯಾಕ್‌ ಆನ್‌ ಫಾರ್ವರ್ಡ್ ಮೆಸೇಜಸ್‌

ಫಾಸ್ಟ್‌ ಪ್ಲೇಬ್ಯಾಕ್‌ ಆನ್‌ ಫಾರ್ವರ್ಡ್ ಮೆಸೇಜಸ್‌

ಸಾಮಾನ್ಯ ಮತ್ತು ಫಾರ್ವರ್ಡ್ ಮಾಡಿದ ಸಂದೇಶಗಳಲ್ಲಿ ಸಂದೇಶಗಳನ್ನು ವೇಗವಾಗಿ ಕೇಳುವುದಕ್ಕಾಗಿ 1.5x ಅಥವಾ 2x ವೇಗದಲ್ಲಿ ವಾಯ್ಸ್‌ ಮೆಸೇಜ್‌ಗಳನ್ನು ಪ್ಲೇ ಮಾಡಬಹುದು.

ವಾಟ್ಸಾಪ್‌

ವಾಟ್ಸಾಪ್‌ ಪ್ರಕಟಿಸಿರುವ ಈ ಫೀಚರ್ಸ್‌ಗಳಲ್ಲಿ ಕೆಲವು ಫೀಚರ್ಸ್‌ಗಳು ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಇವುಗಳಲ್ಲಿ ವಾಟ್ಸಾಪ್‌ ಅಂತಿಮ ಬದಲಾವಣೆಗಳನ್ನು ಮಾಡಿದೆ. ಈ ಫೀಚರ್ಸ್‌ಗಳ ಓವರ್‌ ದಿ ಏರ್‌ (OTA) ಅಪ್‌ಡೇಟ್ ಮೂಲಕ ಹೊರತರಲಾಗುವುದು ಎನ್ನಲಾಗಿದೆ. ಇದಲ್ಲದೆ ವಾಟ್ಸಾಪ್‌ ಫೇಸ್‌ಬುಕ್‌ ಮಾದರಿಯ ಹಲವು ಫೀಚರ್ಸ್‌ಗಳನ್ನು ಪರೀಕ್ಷಿಸುತ್ತಿದೆ. ಅದರಂರೆ ವಾಟ್ಸಾಪ್‌ ತನ್ನ ಬ್ಯುಸಿನೆಸ್‌ ಆವೃತ್ತಿಯಲ್ಲಿ ಹೊಸ ಕಂಟ್ಯಾಕ್ಟ್‌ ಪೇಜ್‌ ಅನ್ನು ಪರೀಕ್ಷಿಸುತ್ತಿದೆ. ಈ ಫೀಚರ್ಸ್‌ ಫೇಸ್‌ಬುಕ್‌ನಲ್ಲಿನ ಕವರ್ ಫೋಟೋಗಳಂತೆ ಕಾಣುತ್ತದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಗ್ರೂಪ್‌ ಪೋಲ್‌ ಫೀಚರ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್‌ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ ಎಂದು ಹೇಳಲಾಗ್ತಿದೆ. ವಾಟ್ಸಾಪ್‌ನ ಹೊಸ ಅಪ್‌ಡೇಟ್ 22.6.0.70 ನಲ್ಲಿ ಈ ಫೀಚರ್ಸ್‌ ಬರಲಿದೆ ಎಂದು ವರದಿಯಾಗಿದೆ. ಇದು ವಾಟ್ಸಾಪ್‌ ಗ್ರೂಪ್‌ನಲ್ಲಿ ಸಮೀಕ್ಷೆಗಳನ್ನು ಕ್ರಿಯೆಟ್‌ ಮಾಡಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
WhatsApp Adds New Voice Messaging Features For Android, iOS Users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X