ಫೆಬ್ರವರಿ ತಿಂಗಳಿನಲ್ಲಿ 10 ಲಕ್ಷಕ್ಕೂ ಹೆಚ್ಚು ಖಾತೆ ಬ್ಯಾನ್‌ ಮಾಡಿದ ವಾಟ್ಸಾಪ್‌!

|

ಭಾರತದ ಸರ್ಕಾರ ಹೊಸ ಐಟಿ ನಿಯಮ 2021 ಜಾರಿಗೊಳಿಸಿದ ನಂತರ ಸೊಶೀಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೊಸ ಐಟಿ ನಿಯಮದ ಪ್ರಕಾರ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ಮಧ್ಯವರ್ತಿ ಮಾರ್ಗಸೂಚಿಗಳ ವರದಿಯನ್ನು ನೀಡಬೇಕಿದೆ. ಅದರಂತೆ ಮೆಟಾ ಒಡೆತನದ ವಾಟ್ಸಾಪ್‌ ಪ್ರತಿ ತಿಂಗಳು ಮಧ್ಯವರ್ತಿ ಮಾರ್ಗಸೂಚಿ ವರದಿಯನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಫೆಬ್ರವರಿ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಫೆಬ್ರವರಿ 1 ಮತ್ತು 28 ರ ನಡುವೆ 10 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಖಾತೆ ಬ್ಯಾನ್‌ ಮಾಡಿರುವುದಾಗಿ ಹೇಳಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಫೆಬ್ರವರಿ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ವರದಿ ಪ್ರಕಾರ ಭಾರತದಲ್ಲಿ ಫೆಬ್ರವರಿ ತಿಂಗಳಿನಲ್ಲಿ 1.4 ಮಿಲಿಯನ್ ವಾಟ್ಸಾಪ್‌ ಖಾತೆಗಳನ್ನು ಬ್ಯಾನ್‌ ಮಾಡಿದೆ. ಇದರಲ್ಲಿ ಇತರ ಬಳಕೆದಾರರಿಗೆ ಕಿರುಕುಳ ನೀಡುವುದು, ನಕಲಿ ಸುದ್ದಿಗಳನ್ನು ಫಾರ್ವರ್ಡ್ ಮಾಡುವುದು ಹಾಗೂ ವಾಟ್ಸಾಪ್‌ನಲ್ಲಿ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ಹೇಳಿದೆ. ಹಾಗಾದ್ರೆ ವಾಟ್ಸಾಪ್‌ ನೀಡಿರುವ ಫೆಬ್ರವರಿ ತಿಂಗಳ ಮಾಸಿಕ ವರದಿಯಲ್ಲಿ ಏನೆಲ್ಲಾ ಇದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಐಟಿ ನಿಯಮಗಳು

ವಾಟ್ಸಾಪ್‌ ಐಟಿ ನಿಯಮಗಳು 2021 ರ ಅನುಸಾರವಾಗಿ ಫೆಬ್ರವರಿ 1 ಮತ್ತು 28 ರ ನಡುವೆ 10 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಖಾತೆ ಬ್ಯಾನ್‌ ಮಾಡಿರುವುದಾಗಿ ಹೇಳಿದೆ. ಇನ್ನು ಈ ಅವಧಿಯಲ್ಲಿ ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್‌ ತೆಗೆದುಕೊಂಡ ಅನುಗುಣವಾದ ಕ್ರಮಗಳನ್ನು ವಿವರಿಸಿದೆ. ಹಾಗೆಯೇ ವಾಟ್ಸಾಪ್‌ನಲ್ಲಿ ನಿಂದನೆಯನ್ನು ಎದುರಿಸಲು ಸ್ವಂತ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ. ಅಲ್ಲದೆ ವಾಟ್ಸಾಪ್‌ನ ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ ಎಂದು ವಾಟ್ಸಾಪ್‌ ಮಾಸಿಕ ವರದಿಯಲ್ಲಿ ಮತ್ತೊಮ್ಮೆ ಹೇಳಿದೆ.

ಪ್ಲಾಟ್‌ಫಾರ್ಮ್‌ನಲ್ಲಿ

ಇನ್ನು ಈ ಮಾಸಿಕ ವರದಿಯಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಹಾನಿಕಾರಕ ನಡವಳಿಕೆಯನ್ನು ತಡೆಯಲು ಮೆಸೇಜಿಂಗ್ ಅಪ್ಲಿಕೇಶನ್ ತೆಗೆದುಕೊಳ್ಳುವ ಕ್ರಮಗಳನ್ನು ವಿವರಿಸಿದೆ. ಇದಕ್ಕಾಗಿ "ನಾವು ನಿರ್ದಿಷ್ಟವಾಗಿ ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸಿದ್ದೇವೆ. ಏಕೆಂದರೆ ಹಾನಿ ಸಂಭವಿಸಿದ ನಂತರ ಅದನ್ನು ಪತ್ತೆಹಚ್ಚುವುದಕ್ಕಿಂತ ಮೊದಲೇ ಹಾನಿಯಾಗದಂತೆ ತಡೆಯುವುದು ಉತ್ತಮ ಎಂದು ವಾಟ್ಸಾಪ್‌ ಹೇಳಿದೆ. ಸದ್ಯ ವಾಟ್ಸಾಪ್‌ ತನ್ನ ಖಾತೆಯ ಜೀವನಶೈಲಿಯ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುವ ದುರ್ಬಳಕೆ ಪತ್ತೆ ತಂತ್ರಜ್ಞಾನವನ್ನು ಸಹ ನಿರ್ಮಿಸಿದೆ. ಅಂದರೆ ನೋಂದಣಿ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಬಳಕೆದಾರರು ಮಾಡುವ ರಿಪೋರ್ಟ್‌ ಮತ್ತು ಬ್ಲಾಕ್‌ಗಳ ರೂಪದಲ್ಲಿ ಕ್ರಮ ತೆಗೆದುಕೊಳ್ಳಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ವಾಟ್ಸಾಪ್‌ ಬಳಕೆದಾರರ ಅನುಭವವನ್ನು ಸುಧಾರಿಸುವುದಕ್ಕಾಗಿ ಹೊಸ ಫೀಚರ್ಸ್‌ ಪರಿಚಯಿಸಿದೆ. ವಾಯ್ಸ್‌ಮೆಸೇಜ್‌ ಎಕೋಸಿಸ್ಟಂನಲ್ಲಿ ಒಟ್ಟಾರೆ ಅನುಭವವನ್ನು ಸುಧಾರಿಸುತ್ತಿದೆ. ವಾಯ್ಸ್‌ ಮೆಸೇಜ್‌ಗಳನ್ನು ಹೆಚ್ಚು ಉಪಯುಕ್ತವಾಗಿಸುವ ಸಲುವಾಗಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಈ ಹೊಸ ಫೀಚರ್ಸ್‌ಗಳನ್ನು ಎಲ್ಲಾ ಆಂಡ್ರಾಯ್ಡ್, ಐಒಎಸ್ ಬಳಕೆದಾರರಿಗೆ ಪರಿಚಯಿಸಲಾಗುವುದು ಎಂದು ವಾಟ್ಸಾಪ್‌ ದೃಢಪಡಿಸಿದೆ.

ವಾಟ್ಸಾಪ್‌

ವಾಟ್ಸಾಪ್‌ ಹೊಸದಾಗಿ ವಾಯ್ಸ್‌ ಮೆಸೇಜ್‌ನಲ್ಲಿ ಪರಿಚಯಿಸಿರುವ ಹೊಸ ಫಿಚರ್ಸ್‌ಗಳಲ್ಲಿ ಔಟ್‌ ಆಪ್‌ ಚಾಟ್‌ ಪ್ಲೇ ಬ್ಯಾಕ್‌ ಕೂಡ ಒಂದು. ವಾಯ್ಸ್‌ ಮೆಸೇಜ್‌ ಅನ್ನು ಚಾಟ್‌ ಹೊಗಡೆ ಆಲಿಸುವುದಕ್ಕೆ ಇದು ಅವಕಾಶ ನೀಡಲಿದೆ. ಇದರಿಂದ ನೀವು ಮಲ್ಟಿ ಟಾಸ್ಕ್‌ ಮಾಡಬಹುದು. ಅಂದರೆ ನೀವು ಔಟ್‌ ಮೆಸೇಜ್‌ ವಾಯ್ಸ್‌ ಪ್ಲೇ ಮಾಡುವುದರಿಂದ ಇತರ ಸಂದೇಶಗಳನ್ನು ಓದಬಹುದು ಮತ್ತು ರಿಪ್ಲೇ ಮಾಡಬಹುದು.

Most Read Articles
Best Mobiles in India

English summary
WhatsApp bans more than 10lakhs of accounts in India in February.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X