37 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ಬ್ಯಾನ್‌ ಮಾಡಿದ ವಾಟ್ಸಾಪ್; ಕಾರಣ ಏನು?

|

ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಟ್ಸಾಪ್‌ ಮೊದಲ ಸ್ಥಾನದಲ್ಲಿದ್ದು, ಮಿಲಿಯನ್‌ ಗಟ್ಟಲೆ ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ. ಹಾಗೆಯೇ ಹಲವಾರು ಫೀಚರ್ಸ್‌ ಬಳಕೆದಾರರನ್ನು ಇನ್ನೂ ಹೆಚ್ಚಾಗಿ ಆಕರ್ಷಿಸುತ್ತಿರುವುದು ಅತಿಶಯೋಕ್ತಿಯಲ್ಲ. ಇದರೊಂದಿಗೆ ಬೇಕಾಬಿಟ್ಟಿ ಬಳಕೆ ಮಾಡಲು ಸಹ ವಾಟ್ಸಾಪ್‌ ಅನುಮತಿ ನೀಡುವುದಿಲ್ಲ, ಬದಲಾಗಿ ವಾಟ್ಸಾಪ್‌ನ ನೀತಿ ನಿಯಮಗಳಿಗೆ ಹಾಗೂ ಸರ್ಕಾರದ ಕ್ರಮಗಳಿಗೆ ಅನುಗುಣವಾಗಿ ನಡೆದುಕೊಂಡರಷ್ಟೇ ವಾಟ್ಸಾಪ್‌ ತನ್ನ ಸೇವೆ ನೀಡುವುದನ್ನು ಮುಂದುವರೆಸುತ್ತದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳು ಭಾರತೀಯರ ಸೂಕ್ಷ್ಮ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ. ಅದರಂತೆ ವಾಟ್ಸಾಪ್‌ ಸಹ ಇದೇ ಕೆಲಸ ಮಾಡುತ್ತಿದ್ದು, ನಕಲಿ ಖಾತೆಗಳು ಹಾಗೂ ಸುಳ್ಳು ಸಂದೇಶ ರವಾನೆ, ಪ್ರಚೋದನೆ ಸೇರಿದಂತೆ ಇನ್ನಿತರೆ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ಕಾರಣಕ್ಕೆ ನವೆಂಬರ್‌ನಲ್ಲಿ 37 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದೆ.

ಭಾರತೀಯ

ಈ ತಿಂಗಳಲ್ಲಿ 37 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ವಾಟ್ಸಾಟ್‌ ಬ್ಯಾನ್‌ ಮಾಡಿರುವುದರ ಜೊತೆಗೆ ಕಳೆದ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿಯೂ ಕಂಪೆನಿಯು 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿತ್ತು. ಕಳೆದ ವರ್ಷ ಸರ್ಕಾರ ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದ ಪರಿಣಾಮ ವಾಟ್ಸಾಪ್‌ ಪ್ರತಿ ತಿಂಗಳು ಈ ರೀತಿಯ ಕ್ರಮ ಜರುಗಿಸುತ್ತಾ ಬರುತ್ತಿದೆ. ಹಾಗಿದ್ರೆ, ಯಾವ ಕಾರಣಕ್ಕೆ ಈ ನಿಯಮ ಪಾಲಿಸಲಾಗಿದೆ? ಎಷ್ಟು ದೂರು ಸಲ್ಲಿಕೆಯಾಗಿದ್ದವು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

10 ಲಕ್ಷ ಖಾತೆಗಳನ್ನು ಫ್ಲ್ಯಾಗ್ ಮಾಡಲಾಗಿತ್ತು..

10 ಲಕ್ಷ ಖಾತೆಗಳನ್ನು ಫ್ಲ್ಯಾಗ್ ಮಾಡಲಾಗಿತ್ತು..

ವಾಟ್ಸಾಪ್‌ ತನ್ನನ್ನು ತಾನು ಸುರಕ್ಷಿತವಾಗಿಡಲು ಈ ರೀತಿಯ ಕ್ರಮ ಕೈಗೊಂಡಿದೆ. ಈ ಕಾರಣಕ್ಕೆ ಒಟ್ಟಾರೆ 37 ಲಕ್ಷಕ್ಕೂ ಅಧಿಕ ವಾಟ್ಸಾಪ್‌ ಖಾತೆಗಳನ್ನು ನಿರ್ಬಂಧಿಸಲಾಗಿದ್ದು, ಈ ಸಂಬಂಧ ವಾಟ್ಸಾಪ್‌ ಮಾಹಿತಿ ನೀಡಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಇವುಗಳಲ್ಲಿ ಸುಮಾರು 10 ಲಕ್ಷ ಖಾತೆಗಳನ್ನು ಭಾರತೀಯ ಬಳಕೆದಾರರು ಫ್ಲ್ಯಾಗ್ ಮಾಡಿದ್ದಾರೆ. ಇನ್ನು ಈ ನಿರ್ಬಂಧದ ಕ್ರಮದ ಮೂಲಕ ಸ್ಪ್ಯಾಮ್, ಫಿಶಿಂಗ್ ಇತ್ಯಾದಿ ದಾಳಿಗಳಿಂದ ಬಳಕೆದಾರರನ್ನು ರಕ್ಷಿಸಲು ವಾಟ್ಸಾಪ್‌ ಮುಂದಾಗಿದೆ.

ವಾಟ್ಸಾಪ್‌

ಈ ವಾಟ್ಸಾಪ್‌ ಖಾತೆಗಳ ವಿರುದ್ಧ ನವೆಂಬರ್‌ನಲ್ಲಿ 946 ದೂರುಗಳನ್ನು ಸ್ವೀಕರಿಸಲಾಗಿದ್ದು, ಹಾಗೆಯೇ 830 ಖಾತೆಗಳನ್ನು ನಿಷೇಧಿಸಲು ಮನವಿ ಬಂದಿವೆ. ಹಾಗೆಯೇ ನವೆಂಬರ್ ತಿಂಗಳ ಹಿಂದಿನ ತಿಂಗಳು ಅಕ್ಟೋಬರ್‌ನಲ್ಲಿ ಕಂಪೆನಿಯು 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

 ಫ್ಲ್ಯಾಗ್ ಮಾಡುವ ಮುನ್ನವೇ ಎಚ್ಚುತ್ತುಕೊಂಡಿದ್ದ ವಾಟ್ಸಾಪ್‌

ಫ್ಲ್ಯಾಗ್ ಮಾಡುವ ಮುನ್ನವೇ ಎಚ್ಚುತ್ತುಕೊಂಡಿದ್ದ ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರು ಯಾವ ವಾಟ್ಸಾಪ್‌ ಖಾತೆಗಳು ನಕಲಿ ಹಾಗೂ ಸುಳ್ಳು ವಿಷಯ ಹರಡುತ್ತಿವೆ ಎಂಬುದನ್ನು ಫ್ಲ್ಯಾಗ್ ಮಾಡುವ ಮುನ್ನವೇ ಬರೋಬ್ಬರಿ 9.9 ಲಕ್ಷ ಖಾತೆಗಳನ್ನು ನಿಷೇಧ ಮಾಡಿತ್ತು. ಹಾಗೆಯೇ ಅಕ್ಟೋಬರ್‌ನಲ್ಲಿಯೂ ಫ್ಲ್ಯಾಗ್ ಮಾಡುವ ಮುನ್ನ 8.11 ಲಕ್ಷ ಖಾತೆಗಳನ್ನು ನಿರ್ಬಂಧಿಸಿತ್ತು.

ವಾಟ್ಸಾಪ್‌ ಹೇಳಿದ್ದೇನು?

ವಾಟ್ಸಾಪ್‌ ಹೇಳಿದ್ದೇನು?

ಐಟಿ ನಿಯಮಗಳು 2021 ರ ಪ್ರಕಾರ, 1 ನವೆಂಬರ್ 2022 ಮತ್ತು 30 ನವೆಂಬರ್ 2022 ರ ನಡುವೆ 37 ಲಕ್ಷ 16 ಸಾವಿರ ಖಾತೆಗಳನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ 9.9 ಲಕ್ಷ ಖಾತೆಗಳನ್ನು ಬಳಕೆದಾರರು ವರದಿ ಮಾಡುವ ಮೊದಲೇ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.

ಐಟಿ ನಿಯಮದಲ್ಲಿ ಏನಿದೆ?

ಐಟಿ ನಿಯಮದಲ್ಲಿ ಏನಿದೆ?

ಕಳೆದ ವರ್ಷ ಸರ್ಕಾರವು ಹೊಸ ಐಟಿ ನಿಯಮಗಳನ್ನು ಜಾರಿ ಮಾಡಿದ್ದು, ಇದರ ಅನ್ವಯ 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ತಮ್ಮ ಸಾರ್ವಜನಿಕ ಅನುಸರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಅದರಲ್ಲಿ ಒಂದು ತಿಂಗಳಲ್ಲಿ ಎಷ್ಟು ದೂರುಗಳು ಬಂದಿವೆ ಮತ್ತು ಅದಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕಿದೆ.

ಹೆಚ್ಚಾಗಿದೆಯಾ ನಕಲಿ ಮಾಹಿತಿ..?

ಹೆಚ್ಚಾಗಿದೆಯಾ ನಕಲಿ ಮಾಹಿತಿ..?

ಈ ಪ್ಲಾಟ್‌ಫಾರ್ಮ್‌ಗಳಲ್ಲಿ ದ್ವೇಷ ವಿಷಯ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಣಕ್ಕೆ ತರಲು ಈ ನಿಯಮ ಕೈಗೊಳ್ಳಲಾಗುತ್ತಿದ್ದು, ಈ ತಿಂಗಳು ಬ್ಯಾನ್‌ ಆಗಿರುವ ಅಂಕಿ ಅಂಶ ಗಮನಿಸಿದರೆ ಈ ಬಾರಿ ಹೆಚ್ಚಿನ ನಕಲಿ ಹಾಗು ದ್ವೇಷ ಸಂಬಂಧದ ಮಾಹಿತಿಯನ್ನು ಹೆಚ್ಚಾಗಿ ಹರಡಲಾಗಿದೆ. ಅದರಲ್ಲೂ ಈ ತಿಂಗಳಲ್ಲಿ ಕಳೆದ ತಿಂಗಳಿಗಿಂತ ಹೆಚ್ಚಿನ ದೂರು ದಾಖಲಾಗಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.

Best Mobiles in India

English summary
WhatsApp bans over 37 lakh Indian accounts; reason?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X