ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಅಳವಡಿಕೆ

Written By:

ಆಂಡ್ರಾಯ್ಡ್‌ಗಾಗಿ ವಾಟ್ಸಾಪ್ ತನ್ನ ಬೀಟಾ ಅಪ್ಲಿಕೇಶನ್‌ನ ನವೀಕರಣವನ್ನು ಬಿಡುಗಡೆ ಮಾಡಿದೆ. ಅಪ್ಲಿಕೇಶನ್ ಆವೃತ್ತಿ 2.16.230 ಆಗಿದ್ದು, ಇದರಲ್ಲಿರುವ ವಿಶೇಷತೆಯು ಇನ್ನು ಮುಂದೆ ಬಹು ಸ್ವೀಕೃತದಾರರಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಫಾರ್ವರ್ಡ್ ಮಾಡಲು ಅನುಮತಿಯನ್ನು ನೀಡಲಿದೆ.

ಓದಿರಿ: ಅತ್ಯುಪಯುಕ್ತ ಟಾಪ್ ಆಂಡ್ರಾಯ್ಡ್ ಟಿಪ್ಸ್

ಈ ಮೊದಲು ಬಳಕೆದಾರರು ಒಂದೇ ಬಳಕೆದಾರ ಅಥವಾ ಸಮೂಹಕ್ಕೆ ವಿಷಯವನ್ನು ಹಂಚಿಕೊಳ್ಳಬಹುದಾಗಿತ್ತು. ಬಳಕೆದಾರ ಆಗಾಗ್ಗೆ ಚಾಟ್ ಮಾಡುವ 3 ವಾಟ್ಸಾಪ್ ಸಂಪರ್ಕಗಳಿಗೆ ವಿಷಯವನ್ನು ಹಂಚಿಕೊಳ್ಳುವ ಅಥವಾ ಶೇರ್ ಮಾಡುವ ಆಯ್ಕೆಯನ್ನು ನವೀಕರಣವು ಬಳಕೆದಾರರಿಗೆ ಒದಗಿಸಲಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಅಳವಡಿಕೆ

ಕಳೆದ ತಿಂಗಳು ವಾಟ್ಸಾಪ್ ವಾಯ್ಸ್ ಮೇಲ್ ಮತ್ತು ಕಾಲ್ ಬ್ಯಾಕ್ ವಿಶೇಷತೆಯನ್ನು ಆಂಡ್ರಾಯ್ಡ್ ಅಪ್ಲಿಕೇಶನ್‌ಗೆ ಬಿಡುಗಡೆ ಮಾಡಿದೆ. ಈ ಎರಡೂ ಫೀಚರ್‌ಗಳನ್ನು ನವೀಕರಣವು ಕಾಲ್ ಲಾಗ್ ಸೆಕ್ಶನ್ ಅಡಿಯಲ್ಲಿ ಸೇರಿಸಿದೆ. ವಾಯ್ಸ್ ಮೇಲ್ ಮತ್ತು ಕಾಲ್ ಬ್ಯಾಕ್ ಆಯ್ಕೆಗಳನ್ನು ಬಳಕೆದಾರರು ವಾಟ್ಸಾಪ್ ಕರೆಯನ್ನು ಸ್ವೀಕರಿಸಲು ವಿಫಲರಾದಾಗ ನೋಡಬಹುದಾಗಿದೆ. ಇನ್ನೊಂದು ಬದಿಯಲ್ಲಿರುವ ಬಳಕೆದಾರರು ಇದಕ್ಕಾಗಿ ಅಪ್ಲಿಕೇಶನ್‌ನ ನಿರ್ದಿಷ್ಟ ಆವೃತ್ತಿಯನ್ನು ಹೊಂದಿಲ್ಲ.

ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಅಳವಡಿಕೆ

ಕಾಲ್ ಬ್ಯಾಕ್ ಆಪ್ಶನ್ ಬಳಕೆದಾರರಿಗೆ ಇನ್ನೊಂದು ವ್ಯಕ್ತಿಯನ್ನು ಕರೆಮಾಡಲು ಅನುಮತಿಸುತ್ತದೆ, ಬಳಕೆದಾರರಿಗೆ ನಿಯಮಿತ ವಾಯ್ಸ್ ಮೇಲ್ ಫೀಚರ್‌ನಂತೆ ಇದು ತೋರಿಸುತ್ತದೆ. ವಾಯ್ಸ್ ಮೇಲ್ ಅನ್ನು ರೆಕಾರ್ಡ್ ಮಾಡಲು, ಐಕಾನ್ ಅನ್ನು ಒತ್ತಿಹಿಡಿದುಕೊಳ್ಳಬೇಕು. ಒಂದೇ ಪರದೆಯಲ್ಲಿ ತೋರಿಸಿದ ಸಂದರ್ಭದಲ್ಲಿ ಎರಡೂ ಫೀಚರ್‌ಗಳನ್ನು ಪ್ರವೇಶಿಸಲು ಸುಲಭವಾಗಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಅಳವಡಿಕೆ

ವಾಟ್ಸಾಪ್ ಇತ್ತೀಚೆಗೆ ತಾನೇ ಹೊಸ ಫಾಂಟ್ ಅನ್ನು ಬಳಸಿಕೊಂಡು ಟೈಪ್ ಮಾಡಲು ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸಿದೆ. ಇದುವರೆಗೆ ವಿಂಡೋಸ್‌ನಲ್ಲಿದ್ದ ಫಾಂಟ್‌ಗೆ ಸಮಾನವಾಗಿದೆ.

English summary
WhatsApp has rolled out an update for its beta app for Android.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot