ಬಲ್ಕ್ ಮೆಸೆಜ್ ಕಳುಹಿಸುವವರ ವಿರುದ್ಧ 'ವಾಟ್ಸಪ್' ಕಠಿಣ ಕ್ರಮ!
ವಿಶ್ವದ ಜನಪ್ರಿಯ ಮೆಸೆಜಿಂಗ್ ಆಪ್ 'ವಾಟ್ಸಪ್' ತನ್ನ ಬಲ್ಕ್ ಮೆಸೆಜ್ ಕಳುಹಿಸುವ ಸೇವೆಯಲ್ಲಿ ಲಿಮಿಟ್ ಮಾಡಿದ್ದು, ಆದರೆ ಹಲವು ಥರ್ಡ್‌ಪಾರ್ಟಿ ಆಪ್‌ಗಳು ವಾಟ್ಸಪ್‌ನಲ್ಲಿ ಬಲ್ಕ್ ಮೆಸೆಜ್ ಕಳುಹಿಸಲು ಅನುಕೂಲ ಮಾಡಿಕೊಟ್ಟಿವೆ. ಈ ನಿಟ್ಟಿನಲ್ಲಿ ಬಲ್ಕ್ ಮೆಸೆಜ್ ಕಳುಹಿಸಲು ಕಂಪನಿಯ ಫ್ಲಾಟ್‌ಫಾರ್ಮ್ ಬಳಸಿಕೊಳ್ಳುವ ಥರ್ಡ್‌ಪಾರ್ಟಿ ಆಪ್‌ಗಳ ವಿರುದ್ಧ ವಾಟ್ಸಪ್ ಕಠಿಣ ಕ್ರಮಕ್ಕೆ ಮುಂದಾಗಲು ನಿರ್ಧರಿಸಿದೆ.

ಹೌದು, ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಪ್ ಬಲ್ಕ್ ಮೆಸೆಜ್ ಸೇವೆಯನ್ನು ನಿಯಂತ್ರಿಸಿದ್ದು, ಆದರೆ ಥರ್ಡ್‌ಪಾರ್ಟಿ ಮತ್ತು ಆಟೊಮ್ಯಾಟೆಡ್ ಡೆಲಿವರಿ ಸಾಫ್ಟ್‌ವೇರ್‌ಗಳು ವಾಟ್ಸಪ್‌ನಲ್ಲಿ ಬಲ್ಕ್ ಮೆಸೆಜ್ ಕಳುಹಿಸುತ್ತಿವೆ. ಅದಕ್ಕಾಗಿ ಈ ಥರ್ಡ್‌ಪಾರ್ಟಿ ಆಪ್‌ಗಳು ಸುಮಾರು 1000ರೂ.ಗಳನ್ನು ಶುಲ್ಕವನ್ನು ಪಡೆಯುತ್ತಿವೆ. ಕಂಪನಿಯ ತನ್ನ ಪ್ಲಾಟ್‌ಫಾರ್ಮ್ ಬಳಸಿಕೊಳ್ಳುವ ಥರ್ಡ್‌ಪಾರ್ಟಿ ಆಪ್‌ಗಳ ವಿರುದ್ಧ ಕ್ರಮಕ್ಕೆ ಸಜ್ಜಾಗಿದೆ.

ಫೇಸ್‌ಬುಕ್ ಒಡೆತನದ ವಾಟ್ಸಪ್ ಜನಪ್ರಿಯ ಮೆಸೆಜ್ ಆಪ್ ಆಗಿದ್ದು, ಕಂಪನಿಯ ಫ್ಲಾಟ್‌ಫಾರ್ಮ್ ಬಳಸಿ ಬಲ್ಕ್ ಮೆಸೆಜ್ ಕಳುಹಿಸಲು ಕೆಲವು ಅನಧಿಕೃತ ಥರ್ಡ್‌ಪಾರ್ಟಿ ಆಪ್‌ಗಳು ಅನುಕೂಲ ಮಾಡಿಕೊಟ್ಟಿವೆ. ಇದು ಈಗ ವಾಟ್ಸಪ್ ಕೆಂಗಣ್ಣಿಗೆ ಗುರಿಯಾಗಿದ್ದು, ಥರ್ಡ್‌ಪಾರ್ಟಿ ಆಪ್‌ಗಳು ಬಲ್ಕ್ ಮೆಸೆಜ್ ಕಳುಹಿಸುವ ಸೇವೆಯನ್ನು ನೀಡಲು ತನ್ನ ಫ್ಲಾಟ್‌ಫಾರ್ಮ್ ಬಳಸಿಕೊಳ್ಳದಿರಲು ಎಚ್ಚರಿಕೆ ನೀಡಿದೆ.

ವಾಟ್ಸಪ್ ಖಾಸಗಿ ಮೆಸೆಜ್‌ಗೆ ಹೆಚ್ಚು ಒತ್ತು ನೀಡುತ್ತಿದ್ದು, ಬಲ್ಕ್ ಮೆಸೆಜ್ ಕಳುಹಿಸುವ ಸೇವೆಯಲ್ಲಿ ಇತ್ತೀಚಿಗೆ ಲಿಮಿಟ್ ಮಾಡಿದೆ ಹಾಗೂ ಈಗಾಗಲೇ ಕಂಪನಿಯು ಅನಧಿಕೃತ ಥರ್ಡ್‌ಪಾರ್ಟಿ ಆಪ್‌ಗಳನ್ನು ಮತ್ತು ಕಂಪನಿಯ ನೀತಿ, ನಿಯಮಗಳನ್ನು ಉಲ್ಲಂಘಿಸುವ ಖಾತೆಗಳನ್ನು ಗುರುತಿಸಿತ್ತಿದೆ. ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 2 ಮಿಲಿಯನ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಅಧಿಕೃತವಲ್ಲದ ಥರ್ಡ್‌ಪಾರ್ಟಿ ಆಪ್‌ಗಳನ್ನು (clones apps and automated delivery software) ಅನ್‌ಆಫೀಶಿಯಲ್ ಎಂದು ಗುರುತಿಸಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯು ಮೆಸೆಜ್ ಸೇವೆಯಲ್ಲಿ ಮಷಿನ್ ಲರ್ನಿಂಗ್ ಸಿಸ್ಟಮ್ ಅಳವಡಿಸಿಕೊಂಡಿದ್ದು, ಇದು ವಾಟ್ಸಪ್‌ನಲ್ಲಿ ಅನುಚಿತವಾಗಿ ವರ್ತಿಸುವ ಖಾತೆಗಳನ್ನು ಗುರುತಿಸುವುದು ಮತ್ತು ಅಂತಹ ವರ್ತನೆ ಕಂಡುಬರುವ ಖಾತೆಗಳನ್ನು ತೆಗೆದು ಹಾಕಲು ಅನುಕೂಲಕರವಾಗಿದೆ.


Click it and Unblock the Notifications








