ವಾಟ್ಸಾಪ್‌ ಕಂಪ್ಯಾನಿಯನ್ ಮೋಡ್ ಎಂದರೇನು? ಇದರಿಂದಾಗುವ ಲಾಭ ಏನು?

|

ಮೆಟಾ ಒಡೆತನದ ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ವಾಟ್ಸಾಪ್‌ ಅನ್ನು ತಮ್ಮ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಕಾಲಕಾಲಕ್ಕೆ ಅನುಗುಣವಾಗಿ ತನ್ನ ಫೀಚರ್ಸ್‌ಗಳಲ್ಲಿ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಇದಲ್ಲದೆ ಹಲವು ಗೌಪ್ಯ ಫೀಚರ್ಸ್‌ಗಳನ್ನು ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಂದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಇದರಿಂದ ಬಳಕೆದಾರರ ಅನುಭವವನ್ನು ಇನ್ನಷ್ಟು ಸುಧಾರಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಇನ್ನು ವಾಟ್ಸಾಪ್‌ ಸದ್ಯದಲ್ಲೇ ಪರಿಚಯಿಸಲಿರುವ ಆಕರ್ಷಕ ಫೀಚರ್ಸ್‌ಗಳಲ್ಲಿ ಕಂಪ್ಯಾನಿಯಾನ್‌ ಮೋಡ್‌ ಕೂಡ ಒಂದಾಗಿದೆ. ಇದರಿಂದ ಬಳಕೆದಾರರು ಒಂದೇ ಸಮಯದಲ್ಲಿ ಎರಡು ಡಿವೈಸ್‌ಗಳಲ್ಲಿ ಒಂದೇ ವಾಟ್ಸಾಪ್‌ ಖಾತೆಯನ್ನು ಬಳಸುವುದಕ್ಕೆ ಸಾದ್ಯವಾಗಲಿದೆ. ಸದ್ಯ ಫೋನ್‌ ಮಾತ್ರವಲ್ಲದೆ ಬೇರೆ ಡಿವೈಸ್‌ನಲ್ಲಿಯೂ ಕೂಡ ಏಕಕಾಲದಲ್ಲಿ ವಾಟ್ಸಾಪ್‌ ಬಳಸಬಹುದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಕಂಪ್ಯಾನಿಯನ್‌ ಮೋಡ್‌ ಮೂಲಕ ಒಂದಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಖಾತೆ ಬಳಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಪ್ರಸ್ತುತ ಈ ಕಾರ್ಯವನ್ನು ಫೋನ್ ಅಲ್ಲದ ಡಿವೈಸ್‌ಗಳಿಗೆ ಸೀಮಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಪ್ಲಿಕೇಶನ್ ಮೂಲಕ ನಿಮ್ಮ ಖಾತೆಯನ್ನು ಎರಡು ಫೋನ್‌ಗಳಲ್ಲಿ ಬಳಸಲು ಅನುಮತಿಸುವ ಸಾಧ್ಯತೆಯಿದೆ. ಹಾಗಾದ್ರೆ ವಾಟ್ಸಾಪ್‌ ಕಂಪ್ಯಾನಿಯನ್‌ ಮೋಡ್‌ ವಿಶೇಷತೆ ಏನು? ಇದರಿಂದ ನಿಮಗಾಗುವ ಲಾಭ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಕಂಪ್ಯಾನಿಯನ್ ಮೋಡ್ ವಿಶೇಷತೆ ಏನು?

ವಾಟ್ಸಾಪ್‌ ಕಂಪ್ಯಾನಿಯನ್ ಮೋಡ್ ವಿಶೇಷತೆ ಏನು?

ಪ್ರಸ್ತುತ ನೀವು ವಾಟ್ಸಾಪ್‌ ಖಾತೆಯನ್ನು ಲಿಂಕ್‌ ಮಾಡುವ ಮೂಲಕ ವಾಟ್ಸಾಪ್‌ ವೆಬ್‌ನಲ್ಲಿ ನಿಮ್ಮ ಅಕೌಂಟ್‌ ಅನ್ನು ತೆರೆಯಬಹುದು. ಆದರೆ ವಾಟ್ಸಾಪ್‌ ಕಂಪ್ಯಾನಿಯನ್‌ ಮೋಡ್‌ ಲಭ್ಯವಾದ ನಂತರ ನಿಮ್ಮ ಫೋನ್‌ನಿಂದ ಮತ್ತೊಂದು ಫೋನ್‌ನಲ್ಲಿಯೂ ಕೂಡ ಒಂದೇ ವಾಟ್ಸಾಪ್‌ ಖಾತೆ ಬಳಸಲು ಸಾಧ್ಯವಾಗಲಿದೆ. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ವಾಟ್ಸಾಪ್‌ ಖಾತೆಯನ್ನು ತೆರೆದು, ಇನ್ನೊಂದು ಫೋನ್​ಗೆ ಲಿಂಕ್ ಮಾಡಬಹುದು. ಆದ್ದರಿಂದ ಈ ಮೋಡ್​ನೊಂದಿಗೆ ಬಳಕೆದಾರರು ಬೇರೆ ಫೋನ್​ಗಳಲ್ಲಿ ವಾಟ್ಸಾಪ್‌ ಖಾತೆಯನ್ನು ಬಳಸಲು ಸಾಧ್ಯವಾಗಲಿದೆ.

ಕಂಪ್ಯಾನಿಯನ್‌ ಮೋಡ್‌ ಉಪಯೋಗ ಏನು?

ಕಂಪ್ಯಾನಿಯನ್‌ ಮೋಡ್‌ ಉಪಯೋಗ ಏನು?

ವಾಟ್ಸಾಪ್‌ ಬಳಕೆ ಇಂದು ದೈನಂದಿನ ಅಗತ್ಯಗಳಲ್ಲಿ ಒಂದಾಗಿ ಹೋಗಿದೆ. ನೀವು ದಿನವಿಡೀ ವಿವಿಧ ಸಾಧನಗಳೊಂದಿಗೆ ಸಂವಹನ ನಡೆಸುವುದರಿಂದ, ಪ್ರತಿಯೊಂದು ರೀತಿಯ ಸಾಧನವನ್ನು ಬೆಂಬಲಿಸಲು ವಾಟ್ಸಾಪ್‌ಗೆ ಕಂಪ್ಯಾನಿಯನ್‌ ಮೋಡ್‌ ಅಗತ್ಯವಾಗಿದೆ. ಪ್ರಸ್ತುತ ವಾಟ್ಸಾಪ್‌ ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ಗಳು, ಪಿಸಿ, ಮ್ಯಾಕ್ ಮತ್ತು ವೆಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ನಿಮ್ಮ ಫೋನ್ ಹೊರತುಪಡಿಸಿ ಬೇರೆ ಡಿವೈಸ್‌ನಲ್ಲಿ ಒಂದೇ ಖಾತೆಯನ್ನು ಬಳಸಲು ಬಯಸಿದರೆ ಅದು ಇನ್ನೊಂದು ಫೋನ್‌ನಲ್ಲಿ ಸಾಧ್ಯವಿಲ್ಲ. ಇದೇ ಕಾರಣಕ್ಕೆ ನೀವು ಯಾವುದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಫೋನ್‌ನಲ್ಲಿ ನಿಮ್ಮ ವಾಟ್ಸಾಪ್‌ ಖಾತೆಯನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ಎರಡು ಡಿವೈಸ್‌ಗಳಲ್ಲಿ ಏಕಕಾಲದಲ್ಲಿ ಒಂದೇ ವಾಟ್ಸಾಪ್‌ ಖಾತೆಯಿಂದ ಚಾಟ್‌ ಮಾಡಲು ಸಾಧ್ಯವಾಗಲಿದೆ.

ಕಂಪ್ಯಾನಿಯನ್

ಕಂಪ್ಯಾನಿಯನ್ ಮೋಡ್‌ ಮೂಲಕ ನಿಮ್ಮ ಖಾತೆಯನ್ನು ಏಕಕಾಲದಲ್ಲಿ ಎರಡು ಫೋನ್‌ಗಳಲ್ಲಿ ಬಳಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಚಾಟ್ ಹಿಸ್ಟರಿಯನ್ನು ಡಿವೈಸ್‌ಗಳಲ್ಲಿ ಸಿಂಕ್‌ ಮಾಡಬಹುದಾಗಿದೆ. ಇದರಿಂದ ನಿಮ್ಮ ಫೋನ್‌ನಲ್ಲಿರುವ ಡೇಟಾವನ್ನು ಬೇರೆ ಫೋನ್‌ಗೆ ಸುಲಭವಾಗಿ ಸ್ಟಳಾಂತರಿಸುವುದಕ್ಕೆ ಅವಕಾಶ ಸಿಗಲಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಿಗೆ ವಾಟ್ಸಾಪ್‌ ಚಾಟ್ ಟ್ರಾನ್ಸಫರ್‌ ಮಾಡುವ ಕಾರ್ಯನಿರ್ವಹಣೆಗಿಂತ ಇದು ಖಂಡಿತವಾಗಿಯೂ ಅನುಕೂಲವಾಗಲಿದೆ. ಇದರಿಂದ ಡೇಟಾ ವರ್ಗಾವಣೆಗೆ ನೀವು ಕೇಬಲ್ ಬಳಸಬೇಕಾದ ಅಗತ್ಯವಿರುವುದಿಲ್ಲ ಎನ್ನಲಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚಿಗೆ ತನ್ನ ಪ್ಲಾರ್ಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದರಲ್ಲಿ ನಿರ್ದಿಷ್ಟ ಜನರನ್ನು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಹೈಡ್‌ ಮಾಡುವ ಆಯ್ಕೆ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ನೀವು ಆನ್‌ಲೈನ್‌ನಲ್ಲಿದ್ದರೆ ತಿಳಿಯಲಿದೆ. ಆದರೆ ಹೊಸ ಆಯ್ಕೆಯು ಸೇರ್ಪಡೆಯಾದ ನಂತರ ನೀವು ಬಯಸದ ವ್ಯಕ್ತಿಗಳು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಮಾಡುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ವಾಟ್ಸಾಪ್‌ನ ಹೊಸ ಆಯ್ಕೆಯ ಮೂಲಕ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಸಧ್ಯವಾಗಲಿದೆ. ಪ್ರಸ್ತುತ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಕರೆಗಳಲ್ಲಿ ವರ್ಚುವಲ್‌ ಅವತಾರ್‌ಗಳನ್ನು ಸೇರ್ಪಡೆ ಮಾಡುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಅಂದರೆ ಬಳಕೆದಾರರು ತಮ್ಮ ವರ್ಚುವಲ್ ಅವತಾರಗಳನ್ನು ವೀಡಿಯೊ ಕರೆಗಳಲ್ಲಿ ಸೇರಿಸುವುದಕ್ಕೆ ಅನುಮತಿಸುವ ಸಾಮರ್ಥ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ವೀಡಿಯೊ ಕರೆ ಬಂದಾಗ ನಿಮ್ಮ ಬದಲಿಗೆ ನಿಮ್ಮ ವರ್ಚುವಲ್‌ ಅವತಾರ್‌ ಮೂಲಕ ವೀಡಿಯೊ ಕರೆಯಲ್ಲಿ ಮಾತನಾಡಬಹುದಾಗಿದೆ.

ಇದೊರಂದಿಗೆ

ಇದೊರಂದಿಗೆ ಬಳಕೆದಾರರು ತಮ್ಮ ಚಾಟ್‌ಗಳು ಮತ್ತು ಗ್ರೂಪ್‌ಗಳಲ್ಲಿ ತಮ್ಮ ಅವತಾರಗಳನ್ನು ಸ್ಟಿಕ್ಕರ್‌ಗಳಾಗಿ ಕಳುಹಿಸುವುದಕ್ಕೆ ಅನುಮತಿಸುವ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ತಯಾರಿ ನಡೆಸಿದೆ. ಇದಕ್ಕಾಗಿ "ಅವತಾರ್ ಎಡಿಟರ್" ಅನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಇದರ ಮೂಲಕ ಬಳಕೆದಾರರು ತಮ್ಮ ಸ್ವಂತ ಅವತಾರ್‌ ಅನ್ನು ಸೆಟ್‌ ಮಾಡುವುದಕ್ಕೆ ಸಾದ್ಯವಾಗಲಿದೆ. ಜೊತೆಗೆ ನಿಮ್ಮ ಅವತಾರ್‌ ಅನ್ನು ಕಸ್ಟಮೈಸ್ ಕೂಡ ಮಾಡಬಹುದಾಗಿದೆ. ಸದ್ಯ ಈ ಅವತಾರ್‌ ಎಡಿಟರ್‌ ಆಯ್ಕೆಯು ಇನ್ನು ಕೂಡ ಅಭಿವೃದ್ದಿಯ ಹಂತದಲ್ಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ಮೀಡಿಯಾ ಎಡಿಟರ್‌ ಆಯ್ಕೆಯಲ್ಲಿ ಬ್ಲರ್ ಟೂಲ್ ಅನ್ನು ಸೇರಿಸುವ ನಿರೀಕ್ಷೆ ಕೂಡ ಇದೆ. ಈ ಫೀಚರ್ಸ್‌ ಮೂಲಕ ನೀವು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಟೂಲ್‌ ಬಳಸದೆ ಯಾವುದೇ ಚಿತ್ರದ ಭಾಗವನ್ನು ಬ್ಲರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಡ್ರಾಯಿಂಗ್ ಟೂಲ್ ಅನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ ಎನ್ನಲಾಗಿದೆ. ಇದರಿಂದ ನೀವು ಇಮೇಜ್‌ ಅನ್ನು ಶೇರ್‌ ಮಾಡುವ ಮುನ್ನ ಬ್ಲರ್‌ ಮಾಡುವ ಜಾಗವನ್ನು ವಾಟ್ಸಾಪ್‌ನಲ್ಲಿ ಬ್ಲರ್‌ ಮಾಡಬಹುದಾಗಿದೆ.

Best Mobiles in India

Read more about:
English summary
Whatsapp companion mode will let you use one account on two smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X