ಕೊನೆಗೂ ವಾಟ್ಸಾಪ್‌ಗೆ ಸೇರಲಿದೆ ಹೊಸ ಫೀಚರ್ಸ್‌; ಇದು ನಿಮಗೆ ಅತ್ಯಾನುಕೂಲ!

|

ಹೆಚ್ಚು ಜನಪ್ರಿಯತೆ ಪಡೆದ ಮೆಸೇಜಿಂಗ್‌ ಆಪ್‌ಗಳಲ್ಲಿ ವಾಟ್ಸಾಪ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ, ಕಾಲಕಾಲಕ್ಕೆ ತಕ್ಕಂತೆ ವಿವಿಧ ಫೀಚರ್ಸ್‌ ಹಾಗೂ ಹೆಚ್ಚಿನ ಭದ್ರತೆ ಸೌಲಭ್ಯಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬರುತ್ತಿರುವುದರಿಂದ ಬಳಕೆದಾರರು ಹೆಚ್ಚಾಗಿಯೇ ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಈ ಪ್ಲಾಟ್‌ಫಾರ್ಮ್‌ನಲ್ಲಿ ಇದರ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧವೂ ವಾಟ್ಸಾಪ್‌ ಕ್ರಮ ತೆಗೆದುಕೊಳ್ಳುತ್ತಿದೆ.

ಬಳಕೆದಾರ

ಹೌದು, ಬಳಕೆದಾರರಿಗೆ ಹೆಚ್ಚಿನ ಭದ್ರತೆ ನೀಡುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈಗಾಗಲೇ ವಾಟ್ಸಾಪ್‌ನ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡವರ ಮೇಲೆ ಕ್ರಮ ಜರುಗಿಸಿದೆ. ಅದರಂತೆ ಅವರ ಖಾತೆಯನ್ನು ನಿರ್ಬಂಧಿಸಿ ವಾಟ್ಸಾಪ್ ಬಳಕೆ ಮಾಡಬಾರದ ಹಾಗೆ ಮಾಡುತ್ತಿದೆ. ಇದರ ಭಾಗವಾಗಿಯೇ ಈಗ ಇನ್ನಷ್ಟು ಹೆಚ್ಚಿನ ಭದ್ರತೆ ಹಿನ್ನೆಲೆ ಸ್ಟೇಟಸ್‌ ವಿಭಾಗಕ್ಕೂ ಗಮನಹರಿಸಿದ್ದು, ಇನ್ಮುಂದೆ ಬೇಕಾಬಿಟ್ಟಿ ಸ್ಟೇಟಸ್‌ ಹಾಕುವವರ ವಿರುದ್ಧ ಕ್ರಮ ಜರುಗಿಸಲಿದೆ. ಹಾಗಿದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಏನು?, ಇದರಿಂದ ಯಾರ್ಯಾರಿಗೆ ಲಾಭ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸ್ಟೇಟಸ್‌ ವರದಿ ಮಾಡಬಹುದು

ಸ್ಟೇಟಸ್‌ ವರದಿ ಮಾಡಬಹುದು

ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ಗಳಲ್ಲಿ ಈಗಾಗಲೇ ಈ ಸೌಲಭ್ಯವನ್ನು ಬಳಕೆದಾರರು ಪಡೆಯುತ್ತಿದ್ದಾರೆ. ಅಂದರೆ ಆಯಾ ದೇಶ ಹಾಗೂ ರಾಜ್ಯಕ್ಕೆ ಸಂಬಂಧಿಸಿದಂತೆ ಮತ್ತು ಪ್ಲಾಟ್‌ಫಾರ್ಮ್‌ಗಳ ನೀತಿ ನಿಯಮಗಳಿಗೆ ವಿರುದ್ಧವಾಗಿ ಇರುವ ಯಾವುದೇ ಪೋಸ್ಟ್‌ ಅನ್ನು ಯಾರು ಬೇಕಾದರೂ ವರದಿ ಮಾಡಬಹುದು. ಇದನ್ನು ಪರಿಶೀಲನೆ ನಡೆಸುವ ಕಂಪೆನಿಗಳು ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತವೆ. ಅದೇ ರೀತಿ ಈಗ ವಾಟ್ಸಾಪ್‌ ಸ್ಟೇಟಸ್‌ಗೂ ಹದ್ದಿನ ಕಣ್ಣಿಟ್ಟಿದ್ದು, ಇನ್ಮುಂದೆ ಬಳಕೆದಾರರು ಎಚ್ಚರಿಕೆ ವಹಿಸಬೇಕಾಗಿದೆ.

ಸ್ಟೇಟಸ್‌ ಹಾಕುವಾಗ ಎಚ್ಚರಿಕೆ ಇರಲಿ

ಸ್ಟೇಟಸ್‌ ಹಾಕುವಾಗ ಎಚ್ಚರಿಕೆ ಇರಲಿ

ಸದ್ಯಕ್ಕೆ ವಾಟ್ಸಾಪ್‌ ಮೆಸೆಜ್‌ಗಿಂತ ವಾಟ್ಸಾಪ್‌ನ ಸ್ಟೇಟಸ್‌ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಯಾರೇ ಆದರೂ ಅವರ ನೋವು-ನಲಿವು ಸೇರಿದಂತೆ ತಮಗನಿಸಿದ ಎಲ್ಲವನ್ನೂ ಸ್ಟೇಟಸ್‌ನಲ್ಲಿ ಹಾಕುವ ಮೂಲಕ ಸಮಾದಾನ ಪಟ್ಟುಕೊಳ್ಳುತ್ತಾರೆ. ಇದರೊಂದಿಗೆ ಕೆಲವೊಂದಿಷ್ಟು ಮಂದಿ ಕೆಟ್ಟ ಸಂದೇಶ, ದ್ವೇಷಪೂರಿತ ಮಾಹಿತಿಯನ್ನೂ ಸಹ ಸ್ಟೇಟಸ್‌ಗೆ ಹಾಕಿ ಸಮಾಜದಲ್ಲಿ ಕೋಲಾಹಲ ಉಂಟು ಮಾಡಿರುವ ಘಟನೆಗಳು ನಮ್ಮ ಕಣ್ಣ ಮುಂದೆ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಾಟ್ಸಾಪ್‌, ಸ್ಟೇಟಸ್‌ ವಿಭಾಗದಲ್ಲೂ ಭದ್ರತೆ ಹೆಚ್ಚಿಸಲು ಮುಂದಾಗಿದೆ.

WABetaInfo

ಈ ಸಂಬಂಧ WABetaInfo ನಲ್ಲಿ ಮಾಹಿತಿ ನೀಡಿದ್ದು, ಸದ್ಯಕ್ಕೆ ಈ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ವಾಟ್ಸಾಪ್‌ ಡೆಸ್ಕ್‌ಟಾಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದೆ. ಹಾಗೆಯೇ ಈ ಫೀಚರ್ಸ್‌ ಸ್ಟೇಟಸ್‌ ಸಂಬಂಧ ಯಾರು ಯಾರ ವಿರುದ್ಧ ಬೇಕಾದರೂ ವರದಿ ಮಾಡುವ ಅವಕಾಶ ನೀಡಲಿದೆ. ಇದರಲ್ಲಿ ಯಾವುದೇ ಬಳಕೆದಾರರು ಸೇವಾ ನಿಯಮಗಳನ್ನು ಉಲ್ಲಂಘಿಸುವ ಅನುಮಾನಾಸ್ಪದ ಸ್ಟೇಟಸ್‌ಗಳನ್ನು ನೋಡಿದರೆ ತಕ್ಷಣವೇ ವರದಿ ಮಾಡಬಹುದು ಎಂದು ಉಲ್ಲೇಖಿಸಿದೆ.

DND ಫೀಚರ್ಸ್‌

DND ಫೀಚರ್ಸ್‌

ವಾಟ್ಸಾಪ್‌ ನಲ್ಲಿ DND ಫೀಚರ್ಸ್‌ ಅನ್ನು ಸಹ ಬಳಕೆದಾರರಿಗೆ ನೀಡಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಈ ಮೂಲಕ ವಾಟ್ಸಾಪ್‌ ಕರೆ ಸಂಬಂಧ ನೋಟಿಫಿಕೇಶನ್‌ಗಳನ್ನು ಆಫ್‌ ಮಾಡಬಹುದಾಗಿದೆ. ಈಗಾಗಲೇ ಈ ಫೀಚರ್ಸ್‌ ಅನ್ನು ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಾಗಿಸಿದ್ದು, ಇದೂ ಸಹ ಪರೀಕ್ಷಾ ಹಂತದಲ್ಲಿದೆ. ವಿಂಡೋಸ್‌ಗಾಗಿ ತಮ್ಮ ವಾಟ್ಸಾಪ್‌ ಆಪ್‌ ಅನ್ನು ನವೀಕರಿಸಿದ ಬಳಕೆದಾರರು ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ ನೋಟಿಫಿಕೇಶನ್‌ ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ವಾಟ್ಸಾಪ್ ಮಾಹಿತಿ ನೀಡಿದೆ.

ಎವೆರಿಒನ್‌

ಡಿಎನ್‌ಡಿ ಫೀಚರ್ಸ್‌ಗೂ ಮುನ್ನ ವಾಟ್ಸಾಪ್ ಬಳಕೆದಾರರಿಗೆ 'ಡಿಲೀಟ್ ಫಾರ್ ಮಿ' ಫೀಚರ್ಸ್ ನಲ್ಲಿ ಹೊಸ ಸೌಲಭ್ಯವನ್ನೂ ಸಹ ನೀಡಲಾಗಿದೆ. ಈ ಮೂಲಕ ಯಾರಿಗಾದರೂ ತಪ್ಪಾದ ಸಂದೇಶ ರವಾನೆ ಮಾಡಿ ಡಿಲೀಟ್‌ ಫಾರ್‌ ಎವೆರಿಒನ್‌ ಬದಲಿಗೆ ಡಿಲೀಟ್ ಫಾರ್ ಮಿ ನಲ್ಲಿ ಆ ಸಂದೇಶವನ್ನು ಡಿಲೀಟ್‌ ಮಾಡಿದ್ದರೆ, ಡಿಲೀಟ್‌ ಫಾರ್‌ ಎವೆರಿಒನ್‌ಗೆ ಬದಲಾಗಲು ಐದು ಸೆಕೆಂಡುಗಳ ಕಾಲಾವಕಾಶ ನೀಡಲಾಗುತ್ತದೆ, ಈ ಮೂಲಕ ನೀವು ಕಳುಹಿಸಿದ ಮೆಸೆಜ್‌ ಅನ್ನು ಸ್ವೀಕರಿಸುವವರು ನೋಡುವ ಮುನ್ನವೇ ಡಿಲೀಟ್‌ ಮಾಡಬಹುದಾಗಿದೆ.

Best Mobiles in India

Read more about:
English summary
WhatsApp could allow to report status updates.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X