ಇನ್ಮುಂದೆ ಕೋಡ್‌ ಎಂಟ್ರಿ ಮಾಡದೆ ವಾಟ್ಸಾಪ್‌ ಓಪನ್‌ ಮಾಡಲು ಸಾಧ್ಯವಿಲ್ಲ!

|

ಪ್ರಮುಖ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸಾಪ್‌ ನಿರಂತರವಾಗಿ ಹೊಸ ಫೀಚರ್ಸ್‌ಗಳನ್ನು ಬಳಕೆದಾರರಿಗೆ ನೀಡುತ್ತಲೇ ಬರುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಅವತಾರ್‌ ಫೀಚರ್ಸ್‌, ಒಂದೇ ಖಾತೆಯನ್ನು ಎರಡು ಡಿವೈಸ್‌ನಲ್ಲಿ ಬಳಕೆ ಮಾಡುವ ಸೌಲಭ್ಯ, ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ಸೇರಿದಂತೆ ಇನ್ನೂ ಹತ್ತು ಹಲವು ಹೊಸ ಸೌಲಭ್ಯಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿವೆ. ಇದರ ಭಾಗವಾಗಿಯೇ ಈಗ ಭದ್ರತಾ ವಿಚಾರದಲ್ಲಿ ಬಳಕೆದಾರರಿಗೆ ವಾಟ್ಸಾಪ್ ಇನ್ನಷ್ಟು ಹೆಚ್ಚಿನ ಭದ್ರತೆ ನೀಡಲು ಮುಂದಾಗಿದೆ.

ಡಿವೈಸ್‌

ಹೌದು, ಹೊಸ ಡಿವೈಸ್‌ಗಳಿಗೆ ಲಾಗಿನ್‌ ಮಾಡುವಾಗ ಉತ್ತಮ ಭದ್ರತೆಯನ್ನು ನೀಡಲು ವಾಟ್ಸಾಪ್‌ ಮುಂದಾಗಿದ್ದು, ಹೊಸ ಪರಿಶೀಲನಾ ಕೋಡ್ ಅನ್ನು ನಮೂದಿಸುವ ಮೂಲಕವೇ ಹೊಸ ಡಿವೈಸ್‌ನಲ್ಲಿ ಲಾಗ್‌ ಇನ್ ಪ್ರಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ. ಬಹು ಡಿವೈಸ್‌ಗಳಲ್ಲಿ ಒಂದೇ ಖಾತೆಯನ್ನು ಬಳಕೆ ಮಾಡುವ ಫೀಚರ್ಸ್‌ ಅನ್ನು ಅನಾವರಣ ಮಾಡಿದ ನಂತರ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ಸೌಲಭ್ಯ ನೀಡಲಾಗುತ್ತಿದೆ. ಹಾಗಿದ್ರೆ ಈ ಫೀಚರ್ಸ್‌ ಯಾವಾಗ ಲಭ್ಯ?, ಇದರಿಂದ ಪ್ರಯೋಜನ ಏನು?, ಸದ್ಯಕ್ಕೆ ಯಾರ್ಯಾರಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಎಂಬಿತ್ಯಾದಿ ವಿವರವನ್ನು ಈ ಲೇಖನದ ಮೂಲಕ ತಿಳಿಸಿದ್ದೇವೆ ಓದಿರಿ.

ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿರುವ ವಾಟ್ಸಾಪ್‌

ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿರುವ ವಾಟ್ಸಾಪ್‌

ಈಗಾಗಲೇ ವಾಟ್ಸಾಪ್‌ನಲ್ಲಿ ಎರಡು ಹಂತದ ಭದ್ರತಾ ವ್ಯವಸ್ಥೆ ನೀಡಲಾಗಿದೆ. ಇದಕ್ಕೂ ಮಿಗಿಲಾಗಿ ಇನ್ನೂ ಹೆಚ್ಚಿನ ಭದ್ರತೆ ನೀಡುವ ಉದ್ದೇಶದಿಂದ ಹೊಸ ಸೌಲಭ್ಯ ನೀಡಲು ಮುಂದಾಗಿದ್ದು, ಇದು ಹೊಸ ಡಿವೈಸ್‌ಗಳಿಗೆ ಲಾಗ್‌ ಇನ್‌ ಆಗುವಾಗ ಎಚ್ಚರಿಕೆ ವಹಿಸಿಕೊಳ್ಳಲು ಸಹಾಯ ಮಾಡಲಿದೆ. ಹಾಗೆಯೇ ಈ ಫೀಚರ್ಸ್‌ ಹೇಗೆಲ್ಲಾ ಕೆಲಸ ಮಾಡಲಿದೆ ಎಂಬುದನ್ನು ವಾಟ್ಸಾಪ್‌ ಸಂಸ್ಥೆಯು ಸ್ಕ್ರೀನ್‌ ಶಾಟ್‌ಗಳನ್ನು ಶೇರ್‌ ಮಾಡುವ ಮೂಲಕ ಮಾಹಿತಿ ನೀಡಿದೆ.

ಕೋಡ್‌ ನಮೂದಿಸಲೇ ಬೇಕು

ಕೋಡ್‌ ನಮೂದಿಸಲೇ ಬೇಕು

ಈ ಹೊಸ ಫೀಚರ್ಸ್‌ ಮೂಲಕ ನೀವು ಹೊಸ ಡಿವೈಸ್‌ನಲ್ಲಿ ಲಾಗಿನ್‌ ಮಾಡುವಾಗ 6 ಅಂಕಿಯ ಕೋಡ್ ಅನ್ನು ಆಪ್‌ ನಲ್ಲಿ ನೋಡಬಹುದಾಗಿದೆ. ಹಾಗೆಯೇ ಈ ಕೋಡ್‌ ಪ್ರಾರ್ಥಮಿಕ ಡಿವೈಸ್‌ ಅಥವಾ ಮೊಬೈಲ್‌ಗೆ ಮಾತ್ರ ರವಾನೆಯಾಗುತ್ತದೆ. ನೀವು ಇತರೆ ಡಿವೈಸ್‌ನಲ್ಲಿ ಲಾಗಿನ್‌ ಆಗುತ್ತಿದ್ದರೆ ಆ ಕೋಡ್‌ ನಮೂದು ಮಾಡಬಹುದು ಅಥವಾ ಬೇರೆ ಯಾರೋ ಪ್ರಯತ್ನ ಪಡುತ್ತಿದ್ದಾರೆ ಎಂದರೆ ನಿರ್ಲಕ್ಷಿಸುವ ಮೂಲಕ ಎಚ್ಚರಿಕೆ ವಹಿಸಬಹುದಾಗಿದೆ.

ಸಾಮಾನ್ಯ

ಸಾಮಾನ್ಯವಾಗಿ ಈ ನಿಮ್ಮ ನಂಬರ್ ಮೂಲಕ ಬೇರೆ ಜನರು ಲಾಗಿನ್‌ ಆಗಲು ಹಾಗೂ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಕೆಲವರು ಮುಂದಾಗುತ್ತಾರೆ. ಅಷ್ಟೇ ಏಕೆ ಸೈಬರ್‌ ಕಳ್ಳರು ಸಹ ಈ ಪ್ರಕ್ರಿಯೆಗೆ ಮುಂದಾಗುವುದು ಸಹಜ. ಆದರೆ, ಈ ಕೋಡ್‌ ಫೀಚರ್ಸ್‌ ಮೂಲಕ ಇದು ಸಾಧ್ಯವಿಲ್ಲ. ಯಾರಾದರೂ ನಿಮ್ಮ ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರೆ, ಆಪ್‌ ನಿಮ್ಮ ಡಿಸ್‌ಪ್ಲೇನಲ್ಲಿ ಕೋಡ್ ಅನ್ನು ಪ್ರದರ್ಶಿಸುತ್ತದೆ. ಇದರಿಂದ ನೀವು ತಕ್ಷಣವೇ ಎಚ್ಚೆತ್ತುಕೊಳ್ಳಬಹುದು. ಅದರಲ್ಲೂ ಈ ಪರಿಶೀಲನಾ ಕೋಡ್ ಆಪ್‌ನ ಮೇನ್‌ ಪೇಜ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಇನ್ನಷ್ಟು ಉಪಕಾರಿಯಾಗಲಿದೆ.

ಯಾರಿಗೆ ಈ ಫೀಚರ್ಸ್‌ ಲಭ್ಯ?

ಯಾರಿಗೆ ಈ ಫೀಚರ್ಸ್‌ ಲಭ್ಯ?

ಸದ್ಯಕ್ಕೆ ಇತ್ತೀಚಿನ ಆಂಡ್ರಾಯ್ಡ್‌ 2.23.1.11 ಬೀಟಾ ಆವೃತ್ತಿಯಲ್ಲಿ ಈ ಫೀಚರ್ಸ್‌ ಕಂಡು ಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಆದರೆ, ಈ ಫೀಚರ್ಸ್‌ ಅನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಜೊತೆಗೆ ಐಓಎಸ್‌ ಬಳಕೆದಾರರಿಗೂ ಈ ಸೌಲಭ್ಯ ಇರುತ್ತದೆಯೇ ಎಂಬುದರ ಬಗ್ಗೆಯೂ ಮಾಹಿತಿ ಅಸ್ಪಷ್ಟವಾಗಿದೆ.

ಆಕ್ಸಿಡೆಂಟಲ್‌ ಫೀಚರ್ಸ್‌

ಆಕ್ಸಿಡೆಂಟಲ್‌ ಫೀಚರ್ಸ್‌

ವಾಟ್ಸಾಪ್‌ನಲ್ಲಿ ಮೊನ್ನೆಯಷ್ಟೇ ಬಳಕೆದಾರರಿಗೆ ಅಗತ್ಯವಾದ ಫೀಚರ್ಸ್‌ ಪರಿಚಯಿಸಿದ್ದು, ತಪ್ಪಾಗಿ ಯಾರಿಗಾದರೂ ಸಂದೇಶ ಕಳುಹಿಸಿದ್ದರೆ ಅಥವಾ ತಪ್ಪು ಸಂದೇಶವನ್ನು ಕಳುಹಿಸಿದ್ದರೆ ಅದನ್ನು ಸುಲಭವಾಗಿ ಡಿಲೀಟ್‌ ಮಾಡಬಹುದು. ಈ ಹಿಂದೆ ಡಿಲೀಟ್‌ ಫಾರ್‌ ಮಿ ಹಾಗೂ ಡಿಲೀಟ್‌ ಎವೆರಿಒನ್‌ ಎಂಬ ಆಯ್ಕೆ ನೀಡಲಾಗಿದ್ದು, ತಕ್ಷಣಕ್ಕೆ ನೀವೇನಾದರೂ ಡಿಲೀಟ್‌ ಫಾರ್‌ ಮಿ ಆಯ್ಕೆಯ ಮೂಲಕ ಡಿಲೀಟ್‌ ಮಾಡಿದರೆ ಆ ತಪ್ಪನ್ನು ತಿದ್ದಿಕೊಳ್ಳಲು ವಾಟ್ಸಾಪ್‌ ಅವಕಾಶ ನೀಡಿದೆ. ಅದರಂತೆ ಐದು ಸೆಕೆಂಡ್‌ನಲ್ಲಿ ಮತ್ತೆ ಡಿಲೀಟ್‌ ಫಾರ್‌ ಎವರಿಒನ್‌ ಆಯ್ಕೆ ಮೂಲಕ ಆ ಸಂದೇಶ ಡಿಲೀಟ್‌ ಮಾಡಬಹುದಾಗಿದೆ. ಇದರಿಂದ ಮುಜುಗರದಿಂದ ಪಾರಾಗಬಹುದು ಎಂಬುದು ವಾಟ್ಸಾಪ್‌ ನಿಲುವು.

Best Mobiles in India

English summary
WhatsApp could soon launch a new verification feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X