ಆಂಡ್ರಾಯ್ಡ್‌ನಲ್ಲಿ 1 ಬಿಲಿಯನ್ ಡೌನ್‌ಲೋಡ್ ದಾಟಿದ ವಾಟ್ಸಾಪ್

Written By:

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಾಗಿ ಮೊಬೈಲ್ ಮೆಸೇಜಿಂಗ್ ಸೇವೆ ವಾಟ್ಸಾಪ್ ಬಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದೆ. ವಾಟ್ಸಾಪ್ ಸಿಇಒ ಜಾನ್ ಕೋಮ್ ಈ ವಿಷಯವನ್ನು ಘೋಷಿಸಿದ್ದು, ತಮ್ಮ ಕಂಪೆನಿಯಲ್ಲೇ ಆಂಡ್ರಾಯ್ಡ್‌ಗಾಗಿ ಕಾರ್ಯನಿರ್ವಹಿಸುವ ತಂಡವೊಂದಿದೆ ಎಂಬುದನ್ನು ಇವರು ಒತ್ತಿ ಸಾರಿದ್ದಾರೆ. ಫೇಸ್‌ಬುಕ್ ವಾಟ್ಸಾಪ್ ಅನ್ನು ಖರೀದಿಸಿದ್ದರೂ ತನ್ನ ಹಿಂದಿನ ಮೌಲ್ಯವನ್ನು ಸಂಸ್ಥೆ ಹಾಗೆಯೇ ಉಳಿಸಿಕೊಂಡಿದೆ ಎಂಬುದನ್ನು ದೃಢಪಡಿಸಿದೆ.

ಆಂಡ್ರಾಯ್ಡ್‌ನಲ್ಲಿ 1 ಬಿಲಿಯನ್ ಡೌನ್‌ಲೋಡ್ ದಾಟಿದ ವಾಟ್ಸಾಪ್

ಬಳಕೆದಾರರು ಹೊಸ ಫೋನ್‌ಗೆ ವರ್ಗಾವಣೆಗೊಂಡಿದ್ದರೂ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡುವುದು ಅಂತೆಯೇ ಅದನ್ನು ಬಳಸುವುದನ್ನು ನಿಲ್ಲಿಸಿಲ್ಲ. ಈ ಸೇವೆಯನ್ನು ಇನ್ನೂ ಹೆಚ್ಚಾಗಿ ಬಳಸುತ್ತಿದ್ದಾರೆ. ವಾಟ್ಸಾಪ್ ಕಳೆದ ತಿಂಗಳು ತನ್ನ ತಿಂಗಳ ಬಳಕೆದಾರರನ್ನು ಘೋಷಿಸಿದ್ದು ಇದು 700 ಮಿಲಿಯನ್ ಅಧಿಕವಾಗಿದೆ. ಅದೂ ಅಲ್ಲದೆ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಇದು ಬಿಡುಗಡೆ ಮಾಡುತ್ತಿದ್ದು, ಇದು ಅಪ್ಲಿಕೇಶನ್‌ಗೆ ಇನ್ನಷ್ಟು ಗರಿಮೆಯನ್ನು ತಂದುಕೊಡಲಿದೆ ಎಂಬುದು ಸಂಸ್ಥೆಯ ಅಭಿಪ್ರಾಯವಾಗಿದೆ.

ಆಂಡ್ರಾಯ್ಡ್‌ನಲ್ಲಿ 1 ಬಿಲಿಯನ್ ಡೌನ್‌ಲೋಡ್ ದಾಟಿದ ವಾಟ್ಸಾಪ್

ವಾಟ್ಸಾಪ್ ಅತಿ ಕಡಿಮೆ ಅಪ್ಲಿಕೇಶನ್‌ಗಳ ಸಮೂಹವನ್ನು ಸೇರಿಕೊಂಡಿದ್ದು ಈ ಅಪ್ಲಿಕೇಶನ್‌ಗಳಲ್ಲಿ ಸೇವೆಯನ್ನು ಬಿಲಿಯನ್‌ಗಿಂತಲೂ ಹೆಚ್ಚು ಸಮಯ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಜಿಮೇಲ್, ಗೂಗಲ್ ಮ್ಯಾಪ್ಸ್, ಗೂಗಲ್ ಸರ್ಚ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಆಂಗ್ರಿ ಬರ್ಡ್ಸ್ ಈ ಪಟ್ಟಿಯಲ್ಲಿ ಸೇರಿಕೊಂಡಿವೆ.

English summary
WhatsApp crosses 1 billion downloads on Android.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot