ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌; ಈ ಶಾರ್ಟ್‌ಕಟ್ ನಿಂದ ಇನ್ನಷ್ಟು ಅನುಕೂಲ!

|

ಮೆಟಾ ಮಾಲೀಕತ್ವದ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸಾಪ್‌ನಲ್ಲಿ ಈಗಾಗಲೇ ಬಳಕೆದಾರರಿಗೆ ಹಲವಾರು ರೀತಿಯ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಕೆಲವು ದಿನಗಳ ಹಿಂದಷ್ಟೇ ಮೆಸೆಜ್‌ ಯುವರ್‌ಸೆಲ್ಪ್‌ ಹಾಗೂ ಆಂಡ್ರಾಯ್ಡ್‌ ಹಾಗೂ ಟ್ಯಾಬ್‌ನಲ್ಲಿ ಒಂದೇ ಅಕೌಂಟ್‌ ಅನ್ನು ಬಳಕೆ ಮಾಡುವ ಫೀಚರ್ಸ್‌ ಪರಿಚಯಿಸಿತ್ತು. ಇದೀಗ ವಾಟ್ಸಾಪ್‌ನ ಕಣ್ಮರೆಯಾಗುವ (Disappearing) ವಿಭಾಗಕ್ಕೆ ಹೊಸ ಫೀಚರ್ಸ್‌ ನೀಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ಕಣ್ಮರೆಯಾಗುವ (Disappearing) ಮೆಸೆಜ್‌ ವಿಭಾಗಕ್ಕೆ ಶಾರ್ಟ್‌ಕಟ್ ಫೀಚರ್ಸ್‌ ಪರಿಚಯಿಸಲಾಗಿದ್ದು, ಇದಕ್ಕೆ 'ಸ್ಪೇಸ್‌ ಸೇವಿಂಗ್‌ ಟೂಲ್' ಎಂದು ಹೆಸರಿಡಲಾಗಿದೆ. ಇದನ್ನು ಆಂಡ್ರಾಯ್ಡ್‌ ಬೀಟಾ 2.22.25.11 ಬಳಕೆದಾರರಿಗೆ ಪರೀಕ್ಷಾರ್ಥವಾಗಿ ನೀಡಲಾಗಿದೆ. ಅಂತೆಯೇ ಈ ಫೀಚರ್ಸ್‌ ಅನ್ನು ಬೀಟಾ ಬಳಕೆದಾರರು ಈಗಾಗಲೇ ಕಂಡುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಣ್ಮರೆಯಾಗುವ ಫೀಚರ್ಸ್‌ಗೆ ಶಾರ್ಟ್‌ಕಟ್

ಕಣ್ಮರೆಯಾಗುವ ಫೀಚರ್ಸ್‌ಗೆ ಶಾರ್ಟ್‌ಕಟ್

ಹೊಸ ಕಣ್ಮರೆಯಾಗುವ (Disappearing) ಶಾರ್ಟ್‌ಕಟ್ ಅನ್ನು "ಮ್ಯಾನೇಜ್‌ ಸ್ಟೋರೇಜ್‌' ವಿಭಾಗದಲ್ಲಿ ಇರಿಸಲಾಗಿದೆ. ಈ ಈ ಶಾರ್ಟ್‌ಕಟ್ ಮುಂಬರುವ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಲಬ್ಯವಾಗಲಿದೆ ಎನ್ನಲಾಗಿದೆ. ಹಾಗೆಯೇ ಈ ಹೊಸ ವಿಭಾಗವು ಹಳೆಯ ಮತ್ತು ಹೊಸ ಚಾಟ್‌ಗಳನ್ನು Disappearing ಥ್ರೆಡ್‌ಗಳಾಗಿ ಗುರುತಿಸಲು ಸುಲಭಗೊಳಿಸುವ ಕಾರ್ಯ ಮಾಡುತ್ತದೆ ಎನ್ನಲಾಗಿದೆ.

ಏನಿದು ಕಣ್ಮರೆಯಾಗುವ (Disappearing) ಫೀಚರ್ಸ್‌

ಏನಿದು ಕಣ್ಮರೆಯಾಗುವ (Disappearing) ಫೀಚರ್ಸ್‌

ಕಣ್ಮರೆಯಾಗುವ ಸಂದೇಶ ಎಂದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ನಲ್‌ ಸ್ಟೋರೇಜ್ ಅನ್ನು ಉಳಿಸಲು ಸಹಾಯ ಮಾಡುವ ಫೀಚರ್ಸ್‌ ಆಗಿದೆ. ಇದನ್ನು ವಾಟ್ಸಾಪ್‌ ಸೆಟ್ಟಿಂಗ್‌ ವಿಭಾಗಕ್ಕೆ ಹೋಗುವ ಮೂಲಕ ಆನ್‌ ಮಾಡಿಕೊಳ್ಳಬಹುದು ಅಥವಾ ಬೇಡವಾದರೆ ಆಫ್‌ ಮಾಡಿಕೊಳ್ಳಬಹುದು. ಈ ಫೀಚರ್ಸ್‌ ಅನ್ನು ಆನ್‌ ಮಾಡಿದ ಬಳಿಕ ಸಂದೇಶಗಳು ಅಥವಾ ಫೋಟೋಗಳು, ವಿಡಿಯೋಗಳು, ಫೈಲ್‌ಗಳು ನೀವು ನೀಡಿದ ಸಮಯದ ನಂತರ ಸ್ವಯಂಚಾಲಿತವಾಗಿ ಡಿಲೀಟ್‌ ಆಗುತ್ತವೆ. ಈ ಮೂಲಕ ನಿಮ್ಮ ಫೋನ್‌ನ ಮೆಮೊರಿಯನ್ನು ಉಳಿಸಬಹುದು ಹಾಗೂ ಫೋನ್ ಕಾರ್ಯಕ್ಷಮತೆಗೆ ತೊಂದರೆಯಾಗಬಾರದ ಹಾಗೆ ನೋಡಿಕೊಳ್ಳಬಹುದು.

ಮೂರು ರೀತಿಯ ಸಮಯ

ಮೂರು ರೀತಿಯ ಸಮಯ

ಇನ್ನು ಈ ಫೀಚರ್ಸ್‌ ವಿಭಾಗದಲ್ಲಿ 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳನ್ನು ಆಯ್ಕೆ ಇದೆ. ಎಷ್ಟು ದಿನಗಳಲ್ಲಿ ಮಸೆಜ್‌ ಡಿಲೀಟ್‌ ಆಗಬೇಕು ಎಂಬುದನ್ನು ನೀವು ಆರಿಸಿಕೊಳ್ಳಬೇಕು. ಅಂತೆಯೇ ಸೆಟ್ಟಿಂಗ್‌ ವಿಭಾಗದಲ್ಲಿ ಇದನ್ನು ಆನ್‌ ಮಾಡಿದ ನಂತರ ಕಳುಹಿಸಿದ ಅಥವಾ ಸ್ವೀಕರಿಸಿದ ಸಂದೇಶಗಳಿಗೆ ಇದು ಅನ್ವಯಿಸುತ್ತದೆ. ಈ ಫೀಚರ್ಸ್‌ ಅನ್ನು ಗ್ರೂಪ್‌ ಚಾಟ್‌ನಲ್ಲೂ ಬಳಕೆ ಮಾಡಬಹುದಾಗಿದೆ.

ಈ  ಫೀಚರ್ಸ್‌ ಆನ್‌ ಮಾಡುವುದು ಹೇಗೆ?

ಈ ಫೀಚರ್ಸ್‌ ಆನ್‌ ಮಾಡುವುದು ಹೇಗೆ?

ಮೊದಲು ವಾಟ್ಸಾಪ್‌ ಓಪನ್‌ ಮಾಡಿ ನಂತರ ಚಾಟ್ ತೆರೆಯಿರಿ. ಇದಾದ ಬಳಿಕ ಚಾಟ್‌ ವಿಭಾಗದಲ್ಲಿ ಹೆಸರಿನ ಮೇಲೆ ಟ್ಯಾಪ್ ಮಾಡಿ. ಅಲ್ಲಿ ಕಣ್ಮರೆಯಾಗುವ ಮೆಸೆಜ್‌ಗಳ ಮೇಲೆ ಟ್ಯಾಪ್ ಮಾಡಿ. ಇದರ ನಂತರ 24 ಗಂಟೆಗಳು, 7 ದಿನಗಳು ಮತ್ತು 90 ದಿನಗಳ ಸಮಯವನ್ನು ಆಯ್ಕೆ ಮಾಡಬಹುದು. ಈ ರೀತಿ ಮಾಡಿದರೆ ನಿಗದಿ ಪಡಿಸಿದ ಸಮಯದ ನಂತರ ವಾಟ್ಸಾಪ್‌ ಗೆ ಬಂದ ಹಾಗೂ ಕಳುಹಿಸಲಾದ ಮೆಸೆಜ್‌ಗಳು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗುತ್ತವೆ.

ಆರ್ಕೈವ್ ಚಾಟ್‌ಗಾಗಿ ಶಾರ್ಟ್‌ಕಟ್‌

ಆರ್ಕೈವ್ ಚಾಟ್‌ಗಾಗಿ ಶಾರ್ಟ್‌ಕಟ್‌

ವಾಟ್ಸಾಪ್‌ನಲ್ಲಿ ಆರ್ಕೈವ್ ಫೀಚರ್ಸ್‌ ಸಹ ಇದ್ದು, ಈ ಫೀಚರ್ಸ್‌ ಮೂಲಕ ನಿಮಗೆ ಅಗತ್ಯವಿಲ್ಲದ ಗ್ರೂಫ್‌ ಅಥವಾ ನಂಬರ್‌ಗಳನ್ನು ಈ ವಿಭಾಗದಲ್ಲಿ ಇರಿಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಸಾಮಾನ್ಯ ವಾಟ್ಸಾಪ್‌ ನಲ್ಲಿ ಆರ್ಕೈವ್ ಚಾಟ್‌ಗಳು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ನೀವೇ ಆರ್ಕೈವ್ ವಿಭಾಗಕ್ಕೆ ತೆರಳಿ ಸಂದೇಶ ಓದಬಹುದು. ಅದರಂತೆ ಈ ಆರ್ಕೈವ್ ವಿಭಾಗಕ್ಕೂ ಕೂಡ ಈಗಾಗಲೇ ವಾಟ್ಸಾಪ್‌ ಶಾರ್ಟ್‌ಕಟ್‌ ಪರಿಚಯಿಸಿದೆ. ಈ ಸೌಲಭ್ಯದ ಮೂಲಕ ಬಳಕೆದಾರರು ಒಂದೇ ಕ್ಲಿಕ್‌ನಲ್ಲಿ ಯಾವುದೇ ಗ್ರೂಪ್‌ ಅಥವಾ ನಂಬರ್‌ ಅನ್ನು ಆರ್ಕೈವ್ ಮಾಡಬಹುದು.

ಹಳದಿ ಪೇಜ್

ಹಳದಿ ಪೇಜ್

ವಾಟ್ಸಾಪ್‌ ಕಳೆದ ತಿಂಗಳು ಐದು ದೇಶಗಳಲ್ಲಿ ಹಳದಿ ಪೇಜ್‌ ಶೈಲಿಯ ವ್ಯಾಪಾರ ಡೈರೆಕ್ಟರಿಯನ್ನು ಪರಿಚಯಿಸಿದೆ. ಈ ಫೀಚರ್ಸ್‌ ಬ್ರೆಜಿಲ್, ಯುಕೆ, ಇಂಡೋನೇಷ್ಯಾ, ಮೆಕ್ಸಿಕೋ ಮತ್ತು ಕೊಲಂಬಿಯಾದ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದನ್ನು ಬ್ಯುಸಿನೆಸ್‌ ಸಂಬಂಧಿತ ವಿಷಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

Best Mobiles in India

English summary
WhatsApp disappearing messages shortcut launched for Android beta.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X