ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಖಂಡಿತಾ ನಿಮಗೆ ಉಪಯುಕ್ತ!

|

ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಫೇಸ್‌ಬುಕ್‌ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್‌ 'ವಾಟ್ಸಪ್'‌ ಈಗ ಬ್ಯುಸಿ ಆಗಿದೆ. ಹೌದು, ತನ್ನಬಳಕೆದಾರರಿಗೆ ಅತ್ಯುತ್ತಮ ಸೇವೆಯನ್ನು ನೀಡಲು ಈಗಾಗಲೇ ಹಲವಾರು ಫೀಚರ್ಸ್‌ಗಳನ್ನು ಬಿಡುಗಡೆ ಮಾಡಿರುವ ಸಂಸ್ಥೆಯು ಈಗ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ಅಳವಡಿಸುವ ಕಾರ್ಯದಲ್ಲಿ ನಿರತವಾಗಿದೆ.

ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಖಂಡಿತಾ ನಿಮಗೆ ಉಪಯುಕ್ತ!

ಇತ್ತೀಚಿಗೆ ವಾಟ್ಸಪ್‌ ಸಂಸ್ಥೆಯು ಫ್ರಿಕ್ವೇಟ್ಲಿ ಫಾರ್ವರ್ಡ್ ಆಗಿರುವ ಮೆಸೆಜ್ ಗುರುತಿಸುವ ಆಯ್ಕೆ, ಫಾರ್ವರ್ಡ್‌ ಮೆಸೆಜ್ ಮಾಹಿತಿ ಆಯ್ಕೆ, ಗ್ರೂಪ್‌ ಕಾಲಿಂಗ್ ಆಯ್ಕೆಗಳನ್ನು ಪರಿಚಯಿಸಿದ್ದು, ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಮತ್ತೆ ನೂತನ ಫೀಚರ್ಸ್‌ಗಳನ್ನು ಆಪ್‌ಗೆ ಸೇರಿಸುವ ತಯಾರಿಯಲ್ಲಿದೆ. ಮುಂಬರಲಿರುವ ಆಪ್‌ನ ನೂತನ ಫೀಚರ್ಸ್‌ಗಳು ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿರಲಿವೆ.

ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಖಂಡಿತಾ ನಿಮಗೆ ಉಪಯುಕ್ತ!

ಇನ್‌ಸ್ಟಂಟ್‌ ಮೆಸ್ಸೆಜಿಂಗ್ ಆಪ್‌ ವಾಟ್ಸಪ್‌ ಡಾರ್ಕ್‌ಮೋಡ್‌, ಹೈಡ್‌ ಮ್ಯೂಟೆಡ್‌ ಸ್ಟೇಟಸ್‌, ಫಿಂಗರ್‌ಪ್ರಿಂಟ್ ಲಾಕ್, ಶೇರ್‌ ವಾಟ್ಸಪ್‌ ಫೀಚರ್‌ ಮತ್ತು ಕಂಟ್ಯಾಕ್ಟ್‌ ರಾಂಕಿಂಗ್‌ (Ranking) ಫೀಚರ್‌ಗಳನ್ನು ಅಪ್‌ಡೇಟ್‌ ವರ್ಷನ್‌ಗೆ ಸೇರಿಸಲಿದೆ. ಹಾಗಾದರೇ ಶೀಘ್ರದಲ್ಲೇ ವಾಟ್ಸಪ್‌ನ ಸೇರಿಕೊಳ್ಳಲಿರುವ ಈ ನೂತನ ಫೀಚರ್ಸ್‌ಗಳ ವಿಶೇಷತೆಯೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!ಓದಿರಿ : ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!

ಫಿಂಗರ್‌ಪ್ರಿಂಟ್ ಲಾಕ್‌

ಫಿಂಗರ್‌ಪ್ರಿಂಟ್ ಲಾಕ್‌

ಬಳಕೆದಾರರ ಖಾಸಗಿತನಕ್ಕೆ ಹೆಚ್ಚು ಭದ್ರತೆ ನೀಡುವ ಉದ್ದೇಶದಿಂದ ಈ ಫೀಚರ್‌ ಹೆಚ್ಚು ಉಪಯುಕ್ತ ಎನಿಸಲಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್‌ ಆಪ್‌ ಅನ್ನು ಬೆರಳ ಗುರುತಿನ ಮೂಲಕ (Fingerprint) ಲಾಕ್‌ ಮಾಡಬಹುದಾದ ಆಯ್ಕೆ ಇದಾಗಿರಲಿದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಂಡರೇ ಪ್ರತಿ ಬಾರಿ ವಾಟ್ಸಪ್ ತೆರೆಯಬೇಕಿದ್ದರೂ ಬಳಕೆದಾರರು ಫಿಂಗರ್‌ಪ್ರಿಂಟ್ ಅಗತ್ಯವಿರುತ್ತದೆ.

ವಾಟ್ಸಪ್ ಕಾಂಟ್ಯಾಕ್ಟ್‌ ರಾಂಕ್‌(Ranking)

ವಾಟ್ಸಪ್ ಕಾಂಟ್ಯಾಕ್ಟ್‌ ರಾಂಕ್‌(Ranking)

ವಾಟ್ಸಪ್ ಮೆಸೆಜಿಂಗ್ ಆಪ್‌ನಲ್ಲಿ ಬಳಕೆದಾರರು ಪ್ರತಿನಿತ್ಯ ಅನೇಕರೊಂದಿಗೆ ಚಾಟ್‌ ಮಾಡುತ್ತಿರುತ್ತಾರೆ, ಆದರೆ ಇನ್ಮುಂದೆ ಹೆಚ್ಚಾಗಿ ಚಾಟ್‌ ಮಾಡುವ ಕಾಂಟ್ಯಾಕ್ಟ್‌ಗಳಿಗೆ ವಾಟ್ಸಪ್‌ ಆಟೋಮ್ಯಾಟಿಕ್ ಆಗಿ ರಾಂಕಿಂಗ್ ಮಾಡುತ್ತದೆ. ರಾಂಕಿಂಗ್ ಆಗುವ ವಾಟ್ಸಪ್‌ ಕಾಂಟ್ಯಾಕ್ಟ್‌ಗಳು ಯಾವಾಗಲೂ ಚಾಟ್‌ ಲಿಸ್ಟ್‌ನಲ್ಲಿ ಮೊದಲಿನಲ್ಲೇ ಕಾಣಿಸಿಕೊಳ್ಳುತ್ತವೆ. ಈ ಫೀಚರ್‌ ಹೆಚ್ಚು ಉಪಯುಕ್ತ ಎನಿಸುವುದಂತು ಸುಳ್ಳಲ್ಲ ಬಿಡಿ.

ಓದಿರಿ : ಸೆಲ್ಫಿ ಫೋಟೊ ಚೆನ್ನಾಗಿ ಬರಬೇಕೆ?..ಹಾಗಿದ್ರೆ ಈ ಟಿಪ್ಸ್‌ಗಳನ್ನು ಗಮನಿಸಿ!ಓದಿರಿ : ಸೆಲ್ಫಿ ಫೋಟೊ ಚೆನ್ನಾಗಿ ಬರಬೇಕೆ?..ಹಾಗಿದ್ರೆ ಈ ಟಿಪ್ಸ್‌ಗಳನ್ನು ಗಮನಿಸಿ!

ಶೇರ್‌ ವಾಟ್ಸಪ್‌ ಸ್ಟೇಟಸ್‌

ಶೇರ್‌ ವಾಟ್ಸಪ್‌ ಸ್ಟೇಟಸ್‌

ವಾಟ್ಸಪ್‌ ಪರಿಚಯಿಸಿದ್ದ 24 ಗಂಟೆಯ ಅವಧಿಯ ಸ್ಟೇಟಸ್‌ ಇಡುವ ಆಯ್ಕೆಯು ಸಖತ ಜನಪ್ರಿಯವಾಗಿದ್ದು, ಈಗ ಸ್ಟೇಟಸ್‌ ಅನ್ನು ಶೇರ್‌ ಮಾಡುವ ಹೊಸ ಆಯ್ಕೆಯನ್ನು ಸೇರಿಸಲು ಕಂಪನಿಯು ಸಿದ್ಧವಾಗಿದೆ. ಬಳಕೆದಾರರು ವಾಟ್ಸಪ್‌ಗೆ ಇಡುವ ಸ್ಟೇಟಸ್‌ ಅನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಫೇಸ್‌ಬುಕ್‌ ಸಂಸ್ಥೆಯ ಇತರೆ ಯಾವುದೇ ಆಪ್ಸ್‌ಗಳಿಗೆ ನೇರವಾಗಿ ಶೇರ್‌ ಮಾಡುವ ಅವಕಾಶವನ್ನು ಈ ಫೀಚರ್‌ ಮಾಡಿಕೊಡಲಿದೆ.

ಹೈಡ್‌ ಮ್ಯೂಟೆಡ್‌ ಸ್ಟೇಟಸ್‌

ಹೈಡ್‌ ಮ್ಯೂಟೆಡ್‌ ಸ್ಟೇಟಸ್‌

ವಾಟ್ಸಪ್‌ನಲ್ಲಿ ಹೊಸ 'ಹೈಡ್‌ ಮ್ಯೂಟೆಡ್‌ ಸ್ಟೇಟಸ್‌' ಆಯ್ಕೆಯು ಆಂಡ್ರಾಯ್ಡ್‌ ಬೇಟಾ 2.19.183 ವರ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಫೀಚರ್ ಆಯ್ದ ಕಾಂಟ್ಯಾಕ್ಟ್ ನಂಬರ್‌ಗೆ ವಾಟ್ಸಪ್‌ ಸ್ಟೇಟಸ್‌ ಕಾಣದಂತೆ ಮಾಡಲು ನೆರವಾಗಲಿದೆ. ಹೊಸದಾಗಿ ಹೈಡ್‌ ಬಟನ ಸೇರಲಿದ್ದು, ಅದನ್ನು ಒತ್ತಿದಾಗ ಮ್ಯೂಟ್‌ ಮಾಡಿದ ಸ್ಟೇಟಸ್‌ಗಳೆಲ್ಲವು ಅಳಸಿ ಹೋಗುತ್ತವೆ. ಹಾಗೆಯೇ ಶೋ ಬಟನ್ ನೀಡಲಿದ್ದು, ಮತ್ತೆ ಎಲ್ಲವು ಕಾಣಿಸಿಕೊಳ್ಳಲಿವೆ.

ಓದಿರಿ : ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!ಓದಿರಿ : ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!

ಡಾರ್ಕ್‌ ಮೋಡ್‌

ಡಾರ್ಕ್‌ ಮೋಡ್‌

ಈಗಾಗಲೇ ವಾಟ್ಸಪ್‌ ಬಳಕೆದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 'ಡಾರ್ಕ್‌ ಮೋಡ್‌' ಫೀಚರ್ ಆಯ್ಕೆ ಸದ್ಯದಲ್ಲೇ ಆಪ್‌ ಸೇರಿಕೊಳ್ಳಲಿದೆ. ರಾತ್ರಿ ಸಮಯದಲ್ಲಿ ಫೋನ್‌ ಡಿಸ್‌ಪ್ಲೇಯ ಬೆಳಕಿನ ಪ್ರಖರತೆಯನ್ನು ತಗ್ಗಿಸಲು ಈ ಫೀಚರ್ ಹೆಚ್ಚು ಪರಿಣಾಮಕಾರಿ ಎನ್ನುವುದು ನಿಮಗೆಲ್ಲಾ ತಿಳಿದೆ ಇದೆ. ಬಹುತೇಕ ಆಪ್‌ಗಳಲ್ಲಿ ಈಗಾಗಲೇ ಈ ಫೀಚರ್‌ ಚಾಲ್ತಿಯಲ್ಲಿದ್ದು, ವಾಟ್ಸಪ್‌ ಸಹ ಸ್ವಲ್ಪ ಬದಲಾವಣೆಗಳೊಂದಿಗೆ ಡಾರ್ಕ್‌ ಮೋಡ್‌ ಆಯ್ಕೆ ಪರಿಚಯಿಸಲಿದೆ.

ಓದಿರಿ : ಏರ್‌ಟೆಲ್‌ನ ಹೊಸ 148ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ 3GB ಡೇಟಾ ಉಚಿತ! ಓದಿರಿ : ಏರ್‌ಟೆಲ್‌ನ ಹೊಸ 148ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ 3GB ಡೇಟಾ ಉಚಿತ!

Best Mobiles in India

English summary
Lets take a look at some of the features that WhatsApp might introduce in the coming months. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X