ಗ್ರೂಪ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 512ಕ್ಕೆ ಏರಿಕೆ ಮಾಡಿದ ವಾಟ್ಸಾಪ್‌!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ವಾಟ್ಸಾಪ್‌ ಗ್ರೂಪ್‌ ಕ್ರಿಯೆಟ್‌ ಮಾಡುವ ಮಂದಿಗೆ ಇದು ಖಂಡಿತ ಖುಷಿ ನೀಡಲಿದೆ. ಏಕೆಂದರೆ ಇಷ್ಟು ದಿನ ಗ್ರೂಪ್‌ನಲ್ಲಿ ಭಾಗವಹಿಸವವರ ಸಂಖ್ಯೆಗೆ ಇದ್ದ ಲಿಮಿಟ್‌ ಅನ್ನು ಇದೀಗ 512 ಮಂದಿಗೆ ಏರಿಕೆ ಮಾಡಿದೆ. 256 ಮಂದಿಯಿಂದ 512ಕ್ಕೆ ಏರಿಕೆ ಮಾಡಲಾಗಿದ್ದು, ನೀವು ನಿಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ 512 ಮಂದಿಯನ್ನು ಸೇರಿಸಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಏರಿಕೆ ಮಾಡಿದೆ. ಈ ಮೂಲಕ ಒಂದೇ ಗುಂಪಿನಲ್ಲಿ 512 ಮಂದಿಯನ್ನು ಸೇರಿಸುವುದಕ್ಕೆ ಅವಕಾಶ ನೀಡಿದೆ. ಇನ್ನು ಈ ಫೀಚರ್ಸ್‌ ಅನ್ನು ಕಳೆದ ತಿಂಗಳಿನಲ್ಲಿ ಘೋಷಣೆ ಮಾಡಲಾಗಿತ್ತು. ಇದೀಗ ಈ ಆಯ್ಕೆ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ನಿಮ್ಮ ವಾಟ್ಸಾಪ್‌ ಅನ್ನು ಅಪ್ಡೇಟ್‌ ಮಾಡುವ ಮೂಲಕ ಈ ಹೊಸ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ ಗ್ರೂಪ್‌ನಲ್ಲಿ 512 ಮಂದಿಯನ್ನು ಸೇರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಗ್ರೂಪ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ವಾಟ್ಸಾಪ್‌ ಗ್ರೂಪ್‌ ಅಡ್ಮೀನ್‌ ಒಂದು ಗುಂಪಿಗೆ 512 ರ ವರೆಗೆ ಭಾಗವಹಿಸುವವರನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಇದೀಗ ಆಂಡ್ರಾಯ್ಡ್‌, iOS ಮತ್ತು ಡೆಸ್ಕ್‌ಟಾಪ್ ಆಧಾರಿತ ಅಪ್ಲಿಕೇಶನ್‌ಗಳ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಒಂದು ತಿಂಗಳ ನಂತರ, ಕಂಪನಿಯು ಜಗತ್ತಿನಾದ್ಯಂತ ತನ್ನ ಎಲ್ಲಾ ಬಳಕೆದಾರರಿಗೆ ಹೊರತರಲು ಪ್ರಾರಂಭಿಸಿದೆ.

ವಾಟ್ಸಾಪ್‌

ಇನ್ನು ನೀವು ಕೂಡ ನಿಮ್ಮ ವಾಟ್ಸಾಪ್‌ನಲ್ಲಿ ಈ ಹೊಸ ಆಯ್ಕೆಯನ್ನು ಪಡೆದಿದ್ದಾರಾ ಅನ್ನೊದನ್ನ ಪರಿಶೀಲಿಸಲು, ನ್ಯೂ ಗ್ರೂಪ್‌ ಕ್ರಿಯೆಟ್‌ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ತಿಳಿಯಬಹುದಾಗಿದೆ. ಹೊಸ ಗುಂಪನ್ನು ಕ್ರಿಯೆಟ್‌ ಮಾಡುವುದಕ್ಕೆ ಹೋದಾಗ ಆ ಗುಂಪಿಗೆ ಸೇರಿಸಬಹುದಾದ ಒಟ್ಟು ಭಾಗವಹಿಸುವವರ ಸಂಖ್ಯೆಯನ್ನು ಕಾಣಬಹುದಾಗಿದೆ. ನೀವು 512 ಸದಸ್ಯರನ್ನು ಸೇರಿಸಬಹುದು ಎಂದು ನೀವು ನೋಡಿದರೆ, ನೀವು ಹೊಸ ಅಪ್ಡೇಟ್‌ ಅನ್ನು ಸ್ವೀಕರಿಸಿದ್ದೀರಿ ಎಂದರ್ಥ.

ವಾಟ್ಸಾಪ್‌

ಇದಲ್ಲದೆ, ವಾಟ್ಸಾಪ್‌ ಅಪ್ಲಿಕೇಶನ್ ಈಗ ಹೊಸದಾಗಿ 'ಡಿಲೀಟ್ ಮಾಡಿದ ಮೆಸೆಜ್‌ ರದ್ದುಗೊಳಿಸು' (Undo Deleted Messages) ಪರಿಚಯಿಸುವ ತಯಾರಿಯಲ್ಲಿದೆ. ಕೆಲವು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಈ ಆಯ್ಕೆ ಆರಂಭಿಕ ಪರೀಕ್ಷೆಯಲ್ಲಿ ಕಂಡುಬಂದಿದೆ. ವಾಟ್ಸಾಪ್‌ನ ಈ ಫೀಚರ್‌ ಡಿಲೀಟ್‌ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಬಳಕೆದಾರರಿಗೆ ಅನುವು ಮಾಡಲಿದೆ. ಈ ಹೊಸ ಫೀಚರ್‌ ಬಳಕೆದಾರರಿಗೆ ತಪ್ಪಾಗಿ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮತ್ತೆ ಹಿಂಪಡೆಯಲು ಅನುಮತಿಸುತ್ತದೆ ಎಂದು ವರದಿಯಾಗಿದೆ. 'Undo' ಬಟನ್ ಸಂಕ್ಷಿಪ್ತವಾಗಿ ಪರದೆಯ ಕೆಳಗಿನ ತುದಿಯಲ್ಲಿ ಪಾಪ್ ಅಪ್ ಆಗುತ್ತದೆ. ಈ ಆಯ್ಕೆಯು ಡಿಲೀಟ್ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಬಳಕೆದಾರರನ್ನು ಅನುಮತಿಸುತ್ತದೆ.

ಈ ಹೊಸ ಫೀಚರ್ ಕಾರ್ಯವೇನು?

ಈ ಹೊಸ ಫೀಚರ್ ಕಾರ್ಯವೇನು?

ವಾಟ್ಸಾಪ್‌ನ ಈ ಹೊಸ ಆಯ್ಕೆಯು ನೀವು 'ಸೆಂಡ್' ಆಯ್ಕೆ ಅನ್ನು ಕ್ಲಿಕ್ ಮಾಡಿದಾಗ, ಜಿ ಮೇಲ್‌ ನಲ್ಲಿನ 'Undo' ಫೀಚರ್‌ನಂತೆಯೇ ಕೆಲಸ ಮಾಡಲಿದೆ. ಪೂರ್ಣಗೊಂಡ ಮೇಲ್ ಅನ್ನು ಹಿಂತೆಗೆದುಕೊಳ್ಳಲು ನಿಮಗೆ ಕೆಲವು ಹೆಚ್ಚುವರಿ ಸೆಕೆಂಡುಗಳನ್ನು ಅನುಮತಿಸುತ್ತದೆ. ಇನ್ನು ಟೆಲಿಗ್ರಾಮ್‌ ಮೆಸೆಜಿಂಗ್ ಆಪ್‌ನಲ್ಲಿ ಈಗಾಗಲೇ ಈ ರೀತಿಯ ಫೀಚರ್‌ ಲಭ್ಯವಿದೆ. ಇದೀಗ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡ ವಾಟ್ಸಾಪ್‌ನಲ್ಲಿ ಕಾಣಿಸಿಕೊಳ್ಳಲಿದೆ.

Undo ಆಯ್ಕೆ ಸದ್ಯದಲ್ಲೇ ಸೇರ್ಪಡೆ

Undo ಆಯ್ಕೆ ಸದ್ಯದಲ್ಲೇ ಸೇರ್ಪಡೆ

Undo ಆಯ್ಕೆ ಬಟನ್ ಮತ್ತು ಹೊಸ ಚಾಟ್ ಫಿಲ್ಟರ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಈ ಅಚ್ಚರಿಯ ಫೀಚರ್‌ ಬಳಕೆದಾರರಿಗೆ ಯಾವಾಗ ಮುಕ್ತ ಆಗಲಿದೆ ಎಂಬುದು ಇನ್ನೂ ಅಸ್ಪಷ್ಟ ಆಗಿದೆ. ಈ ಕುರಿತಂತೆ ವಾಟ್ಸಾಪ್ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.

Best Mobiles in India

English summary
WhatsApp Features: Users Can Now Add up to 512 Members to a Group

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X