ಐಫೋನ್ ಬಳಕೆದಾರರಿಗೂ ವಾಟ್ಸಪ್‌ ಡಾರ್ಕ್ ಮೋಡ್ ಫೀಚರ್!

|

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್‌ ಬಳಕೆದಾರರಿಗೆ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಹುದಿನಗಳಿಂದ ಆಂಡ್ರಾಯ್ಡ್ ಮತ್ತ ಐಫೋನ್ ಬಳಕೆದಾರರು ಡಾರ್ಕ್‌ ಮೋಡ್ ಫೀಚರ್ ಆಯ್ಕೆಯನ್ನು ವಾಟ್ಸಪ್‌ನಲ್ಲಿ ನಿರೀಕ್ಷಿಸುತ್ತಿದ್ದರು. ಇತ್ತೀಚಿಗೆ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಡಾರ್ಕ್‌ ಮೋಡ್ ಆಯ್ಕೆ ಲಭ್ಯವಾಗಿದ್ದು, ಇದೀಗ ಐಫೋನ್‌ಗೂ ಡಾರ್ಕ್‌ ಮೋಡ್ ಸಿದ್ಧವಾಗಿದೆ.

IOS ಐಫೋನ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಇದೀಗ IOS ಐಫೋನ್ ಆವೃತ್ತಿಯ ವಾಟ್ಸಪ್‌ನಲ್ಲಿಯೂ ಡಾರ್ಕ್‌ ಮೋಡ್ ಫೀಚರ್ ಪರಿಚಯಿಸಲು ಸಜ್ಜಾಗಿದೆ. ಐಓಎಸ್‌ ಬೀಟಾ ವಾಟ್ಸಪ್ ವರ್ಷನ್‌ನಲ್ಲಿ ಡಾರ್ಕ್‌ ಮೋಡ್ ಆಯ್ಕೆ ಕಾಣಿಸಿಕೊಂಡಿದೆ ಎಂದು MacRumors (ಆಪಲ್ ಲೀಕ್ ಸುದ್ದಿ ತಾಣ) ತಿಳಿಸಿದೆ. ಆದರೆ IOS ಮಾದರಿಯಲ್ಲಿ ಡಾರ್ಕ್ ಮೋಡ್ ಇನ್ನು ಪ್ರಾಯೋಗಿಕ ಹಂತದಲ್ಲಿದ್ದು, ಸದ್ಯದಲ್ಲಿಯೇ ಸೇರಲಿದೆ ಎನ್ನಲಾಗಿದೆ.

ಬೀಟಾ ಆವೃತ್ತಿ

ಐಫೋನಿನ 2.20.20 (2.20.30.13) ಬೀಟಾ ಆವೃತ್ತಿಯಲ್ಲಿ ಪರೀಕ್ಷಾರ್ಥ ಹಂತದಲ್ಲಿದ್ದು, ಶೀರ್ಘದಲ್ಲಿಯೆ ಐಫೋನ್ ಬಳಕೆದಾರರಿಗೆ ಮುಕ್ತವಾಗಲಿದೆ. ಅಂದಹಾಗೆ ಡಾರ್ಕ್ ಮೋಡ್ ಫೀಚರ್ ಆಯ್ಕೆಯು IOS 9 ಮತ್ತು ಅದಕ್ಕಿಂತಲೂ ಮುಂದಿನ ಓಎಸ್‌ ಆವೃತ್ತಿಗಳಿಗೆ ಮಾತ್ರ ಬೆಂಬಲ ನೀಡಲಿದೆ.

ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

ಆಂಡ್ರಾಯ್ಡ್ ಬೀಟಾ ಆವೃತ್ತಿ ಬಳಕೆದಾರರು ಡಾರ್ಕ್‌ಮೋಡ್ ಆನ್ ಮಾಡಲು ಹೀಗೆ ಮಾಡಿರಿ.

* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್ ಆಪ್ ತೆರೆಯಿರಿ.

* ಮೆನು(ಮೂರು ಡಾಟ್) ಸೆಟ್ಟಿಂಗ್ ಕ್ಲಿಕ್ ಮಾಡಿರಿ.

* ನಂತರ ಚಾಟ್ಸ್‌(chats) ಆಯ್ಕೆ ಸೆಲೆಕ್ಟ್ ಮಾಡಿರಿ.

* ಚಾಟ್ಸ್ ಆಯ್ಕೆ ತೆರೆದಾಗ (Theme) 'ಥೀಮ್' ಆಯ್ಕೆ ಕಾಣಿಸುತ್ತದೆ.

* ಥೀಮ್ ಆಯ್ಕೆಯಲ್ಲಿ- ಸೆಟ್‌ ಬೈ ಬ್ಯಾಟರಿ ಸೇವರ್,, ಲೈಟ್ ಮತ್ತು ಡಾರ್ಕ್ ಆಯ್ಕೆಗಳು ಕಾಣಿಸುತ್ತವೆ.

* ಅವುಗಳಲ್ಲಿ ಡಾರ್ಕ್ ಆಯ್ಕೆ ಸೆಲೆಕ್ಟ್ ಮಾಡಿರಿ.

ಡಾರ್ಕ್‌ಮೋಡ್ ಪ್ರಯೋಜನ

ಡಾರ್ಕ್‌ಮೋಡ್ ಪ್ರಯೋಜನ

ವಾಟ್ಸಪ್ ಬಳಕೆದಾರರು ಡಾರ್ಕ್‌ಮೋಡ್ ಆಯ್ಕೆ ಆನ್ ಮಾಡಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ವಾಟ್ಸಪ್‌ ಚಾಟ್, ಸ್ಟೇಟಸ್‌, ಫೀಡ್ ಮತ್ತು ಸೆಟ್ಟಿಂಗ್ ಆಯ್ಕೆಗಳು ಸಹ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಡಾರ್ಕ್‌ಮೋಡ್‌ ಆಯ್ಕೆ ಸಕ್ರಿಯದಿಂದ ಫೋನಿನ ಡಿಸ್‌ಪ್ಲೇಯ ಪ್ರಖರತೆ ಕಡಿಮೆ ಆಗುತ್ತದೆ ಇದರಿಂದ ಕಣ್ಣಿಗೂ ಉತ್ತಮ ಹಾಗೂ ಬ್ಯಾಟರಿ ಉಳಿಕೆಗೂ ನೆರವಾಗಲಿದೆ.

Best Mobiles in India

English summary
WhatsApp has been testing the feature for a while now and the recent updates hint a stable release for all users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X