WhatsApp: ವಾಟ್ಸಾಪ್‌ ಮ್ಯಾಕ್‌ಒಎಸ್‌ (MacOS) ಆ್ಯಪ್‌ ಬಿಡುಗಡೆ! ಇದನ್ನು ಬಳಸುವುದು ಹೇಗೆ?

|

ಪ್ರತಿನಿತ್ಯವೂ ಒಂದಲ್ಲ ಒಂದು ಸುದ್ದಿ ನೀಡುವ ವಾಟ್ಸಾಪ್‌ ಇದೀಗ ಮತ್ತೊಂದು ಶುಭಸುದ್ದಿ ನೀಡಿದೆ. ಮ್ಯಾಕ್‌ ಡಿವೈಸ್‌ಗಳಿಗಾಗಿಯೇ ಪ್ರತ್ಯೇಕವಾದ ಮ್ಯಾಕ್‌ಒಎಸ್‌ ಅಪ್ಲಿಕೇಶನ್‌ ಅನ್ನು ವಾಟ್ಸಾಪ್‌ ಪರಿಚಯಿಸಿದೆ. ಈ ಮೂಲಕ ಮ್ಯಾಕ್‌ ಡಿವೈಸ್‌ಗಳಲ್ಲಿ ವಾಟ್ಸಾಪ್‌ ಅನ್ನು ನೇರವಾಗಿ ಬಳಸಬಹುದಾಗಿದೆ. ಕಳೆದ ವರ್ಷವೇ ಮ್ಯಾಕ್‌ನಲ್ಲಿಯೂ ವಾಟ್ಸಾಪ್‌ ಬಳಸಲು ಅವಕಾಶ ನೀಡಲು ಮೆಟಾ ಮುಂದಾಗಿತ್ತು. ಅದರಂತೆ ಇದೀಗ ಅಂತಿಮವಾಗಿ ಮ್ಯಾಕ್‌ಒಎಸ್‌ ಅಪ್ಲಿಕೇಶನ್‌ ಪಬ್ಲಿಕ್‌ ಬೀಟಾದಲ್ಲಿ ಬಿಡುಗಡೆಯಾಗಿದೆ.

ವಾಟ್ಸಾಪ್‌

ಹೌದು, ಮ್ಯಾಕ್‌ನಲ್ಲಿ ವಾಟ್ಸಾಪ್‌ ಬಳಸುವುದಕ್ಕೆ ಅನುಕೂಲಕರವಾದ ಮ್ಯಾಕ್‌ಒಎಸ್‌ ಅಪ್ಲಿಕೇಶನ್‌ ಬಿಡುಗಡೆಯಾಗಿದೆ. ಆದರೆ ಇದಕ್ಕಾಗಿ ಮ್ಯಾಕ್‌ಒಎಸ್‌11 Big Sur ಆವೃತ್ತಿಯ ಮ್ಯಾಕ್‌ ಡಿವೈಸ್‌ ಹೊಂದಿರುವುದು ಅತ್ಯಗತ್ಯವಾಗಿದೆ. ಮ್ಯಾಕ್‌ನಲ್ಲಿ ವಾಟ್ಸಾಪ್‌ ಬಳಸುವುದಕ್ಕೆ ನೀವು ಏನು ಮಾಡಬೇಕು? ಇದಕ್ಕಾಗಿ ನೀವು ಅನುಸರಿಸಬೇಕಾದ ಕ್ರಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮ್ಯಾಕ್‌

ಮ್ಯಾಕ್‌ ಡಿವೈಸ್‌ಗಳನ್ನು ಬೆಂಬಲಿಸುವ ವಾಟ್ಸಾಪ್‌ ಮ್ಯಾಕ್‌ಒಎಸ್‌ (MacOS) ಅಪ್ಲಿಕೇಶನ್ ಅನ್ನು ವಾಟ್ಸಾಪ್‌ ನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬೇಕಿದೆ. ಇದರ ಮೂಲಕ ನೀವು ಮ್ಯಾಕ್‌ನಲ್ಲಿ ವಾಟ್ಸಾಪ್‌ ಬಳಸಲು ಸಾಧ್ಯವಾಗಲಿದೆ. ಇದು ಹೊಸ ಯೂಸರ್‌ ಇಂಟರ್‌ಫೇಸ್‌ ಅನ್ನು ಹೊಂದಿದ್ದು, ಹಲವು ಮಹತ್ತರವಾದ ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ರಿಸರ್ವಡ್‌ ಅಪ್ಲಿಕೇಶನ್ ಸೈಡ್‌ಬಾರ್ ಅನ್ನು ಕಾಣಬಹುದಾಗಿದೆ. ಜೊತೆಗೆ ಡಿವೈಸ್‌ನಿಂದ ಚಾಟ್‌ಗಳಿಗೆ ಫೈಲ್‌ಗಳನ್ನು ಡ್ರ್ಯಾಗ್‌ ಮಾಡುವ ಮತ್ತು ಡ್ರಾಪ್‌ ಮಾಡುವ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ.

ಆವೃತ್ತಿಯನ್ನು

ಇದಕ್ಕೂ ಮೊದಲು ಮ್ಯಾಕ್‌ನಲ್ಲಿ ಕೇವಲ ವಾಟ್ಸಾಪ್‌ ವೆಬ್‌ ಆವೃತ್ತಿಯನ್ನು ಬಳಸಬಹುದಾಗಿತ್ತು. ವೆಬ್‌ ಆವೃತ್ತಿಯನ್ನು ಬಳಸುವುದು ಎಲ್ಲಾ ಬಳಕೆದಾರರಿಗೂ ಉತ್ತಮ ಅನುಭವವನ್ನು ನೀಡಿಲ್ಲ ಅನ್ನೊದನ್ನ ಮನಗಂಡ ವಾಟ್ಸಾಪ್‌ ಅಂತಿಮವಾಗಿ ಮ್ಯಾಕ್‌ಒಎಸ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಏಕೆಂದರೆ ವೆಬ್‌ ಆವೃತ್ತಿಯ ಅಪ್ಲಿಕೇಶನ್‌ನಲ್ಲಿ ಸ್ಥಿರ ಆವೃತ್ತಿಯಲ್ಲಿರುವ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಳ್ಳಲು ಸಾದ್ಯವಿರಲಿಲ್ಲ. ಇದೀಗ ಮ್ಯಾಕ್‌ಒಎಸ್‌ ಅಪ್ಲಿಕೇಶನ್‌ ಮೂಲಕ ಎಲ್ಲಾ ಫೀಚರ್ಸ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ.

ಲಭ್ಯವಿದೆ

ಸದ್ಯ ಹೊಸ ಮ್ಯಾಕೋಸ್ ಅಪ್ಲಿಕೇಶನ್ ಆವೃತ್ತಿ ಪಬ್ಲಿಕ್‌ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಆದರಿಂದ ಇದು ಇನ್ನು ಕೂಡ ಪರಿಪೂರ್ಣವಾಗಿ ಎಲ್ಲಾ ಬಳಕೆದಾರರಿಗೂ ಲಭ್ಯವಾಗಿಲ್ಲ. ಅಲ್ಲದೆ ಇದನ್ನು ಬಳಕೆದಾರರು ತಮ್ಮ ಸ್ವಂತ ಎಚ್ಚರಿಕೆಯನ್ನು ಬಳಸುವುದಕ್ಕೆ ಸಲಹೆ ನೀಡಲಾಗಿದೆ. ಇದರಲ್ಲಿ ದೋಷಗಳು ಕಂಡು ಬಂದರೆ ಅದನ್ನು ಮುಂದಿನ ದಿನಗಳಲ್ಲಿ ಪರಿಹರಿಸುವುದಕ್ಕೆ ವಾಟ್ಸಾಪ್‌ ಪ್ಲಾನ್‌ ಮಾಡಿದೆ. ಆದರಿಂದ ಬಳಕೆದಾರರ ಅನುಭವ ಹೇಗಿರಲಿದೆ ಎಂದು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫೋಟೋಗಳನ್ನು ಅವುಗಳ ಮೂಲಗುಣಮಟ್ಟದಲ್ಲಿ ಸೆಂಡ್‌ ಮಾಡುವ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಇದರ ಮೂಲಕ ನೀವು ಸೆಂಡ್‌ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಅನ್ನೊದನ್ನ ನೀವೇ ನಿರ್ಧಾರ ಮಾಡಬಹುದಾಗಿದೆ. ಇದರಿಂದ ನಿಮ್ಮ ಫೋಟೋ ಮೂಲ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್‌ ಮಾಡಬಹುದಾಗಿದೆ. ವಾಟ್ಸಾಪ್‌ನಲ್ಲಿ ಫೋಟೋ ಕಳಿಸಿದರೆ ಗುಣಮಟ್ಟ ಕಡಿಮೆ ಆಗಲಿದೆ ಎನ್ನುವ ನೋವು ತಪ್ಪಲಿದೆ. ಸದ್ಯ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದ್ದು, ಇದು ಇತ್ತೀಚಿನ ಬೀಟಾ ಅಪ್‌ಡೇಟ್ - 2.23.2.11ನಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಆಯ್ಕೆಯಲ್ಲಿ

ವಾಟ್ಸಾಪ್‌ ಇತ್ತೀಚಿಗೆ ಕಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡುವ ಆಯ್ಕೆಯಲ್ಲಿ ಹೊಸ ವಿಧಾನವನ್ನು ಪರಿಚಯಿಸಿದೆ. ಇದರಿಂದ ನೀವು ಕಂಟ್ಯಾಕ್ಟ್‌ ಚಾಟ್‌ ಅನ್ನು ತೆರೆಯದೆ ನೇರವಾಗಿ ಬ್ಲಾಕ್‌ ಮಾಡುವ ಅವಕಾಶ ಲಭ್ಯವಾಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ಆ್ಯಪ್‌ ಎಂಟ್ರಿ ಪಾಯಿಂಟ್‌ ಚಾಟ್‌ ಲಿಸ್ಟ್‌ನಲ್ಲಿ ಲಭ್ಯವಾಗುವ ಕಂಟ್ಯಾಕ್ಟ್‌ ಅನ್ನು ನೇರವಾಗಿ ಬ್ಲಾಕ್‌ ಮಾಡಬಹುದಾಗಿದೆ. ಇದಲ್ಲದೆ ಅಪರಿಚಿತ ಸಂಪರ್ಕದಿಂದ ನಿಮಗೆ ಯಾವುದೇ ಸಂದೇಶ ಬಂದರೆ ಅದನ್ನು ಬ್ಲಾಕ್‌ ಮಾಡುವ ಆಯ್ಕೆಯನ್ನು ವಾಟ್ಸಾಪ್‌ ನೇರವಾಗಿ ನೀಡಲಿದೆ. ಇದರಿಂದ ನೀವು ವಾಟ್ಸಾಪ್‌ ತೆರೆಯದಿದ್ದರೂ ಸಂದೇಶದ ನೋಟಿಫಿಕೇಶನ್‌ನಲ್ಲಿಯೇ ಅದನ್ನು ಬ್ಲಾಕ್‌ ಮಾಡಬಹುದಾಗಿದೆ.

Best Mobiles in India

English summary
WhatsApp users need to have a Mac that is using Apple’s own chip with macOS 11 Big Sur or a newer version.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X