ಈ ಬಳಕೆದಾರರು ಸಹ ಇನ್ಮುಂದೆ ವಾಟ್ಸಾಪ್‌ನ ಹೊಸ ಫೀಚರ್ಸ್‌ ಬಳಸಬಹುದು!

|

ವಾಟ್ಸಾಪ್‌ ತನ್ನ ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವ ಹಿನ್ನೆಲೆ ಹಾಗೂ ವಾಟ್ಸಾಪ್‌ನಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡುವ ಉದ್ದೇಶದಿಂದ ಹೊಸ ಫೀಚರ್ಸ್‌ಗಳನ್ನು ನಿರಂತರವಾಗಿ ಪರಿಚಯಿಸಿಕೊಂಡು ಬರುತ್ತಿದೆ. ಅದರಲ್ಲೂ ಐದು ಚಾಟ್‌ಗಳನ್ನು ಪಿನ್‌ ಮಾಡುವ ಫೀಚರ್ಸ್‌ ಅನ್ನು ಕೆಲವು ದಿನಗಳ ಹಿಂದಷ್ಟೇ ಪರಿಚಯಿಸಿತ್ತು. ಇದರೊಂದಿಗೆ ಸೆಲೆಕ್ಟ್‌ ಮಲ್ಟಿಪಲ್‌ ಚಾಟ್‌ ಫೀಚರ್ಸ್‌ ಅನ್ನು ಸಹ ಬಳಕೆದಾರರಿಗೆ ಪರಿಚಯಿಸಿತ್ತು. ಇದೀಗ ಈ ಹಿಂದೆ ಘೋಷಣೆ ಮಾಡಿದ್ದ ಮಹತ್ವದ ಫೀಚರ್ಸ್‌ ಈ ಬಳಕೆದಾರರಿಗೆ ನೀಡಲಾಗಿದೆ.

 ಈ ಬಳಕೆದಾರರು ಸಹ ಇನ್ಮುಂದೆ ವಾಟ್ಸಾಪ್‌ನ ಹೊಸ ಫೀಚರ್ಸ್‌ ಬಳಸಬಹುದು!

ಹೌದು, ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಮೀಡಿಯಾ ಫೈಲ್‌ಗಳಿಗೆ ಶೀರ್ಷಿಕೆಗಳನ್ನು ಆಡ್‌ ಮಾಡಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಬಗ್ಗೆ ವಾಟ್ಸಾಪ್‌ ಈ ಹಿಂದೆಯೇ ಘೋಷಣೆ ಮಾಡಿದ್ದು, ಇದರಿಂದಾಗಿ ಕೀವರ್ಡ್‌ಗಳನ್ನು ಹುಡುಕುವ ಮೂಲಕ ಹಳೆಯ ಫೈಲ್‌ಗಳನ್ನು ಬೇಗನೆ ಸರ್ಚ್‌ ಮಾಡಲು ಸಹಾಯ ಆಗಲಿದೆ. ಹಾಗಿದ್ರೆ ಇದು ಸದ್ಯಕ್ಕೆ ಯಾರ್ಯಾರಿಗೆ ಲಭ್ಯ?, ಇದರಿಂದ ಇತರೆ ಪ್ರಯೋಜನ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

WABetaInfo ನ ವರದಿಯ ಪ್ರಕಾರ, ಫಾರ್ವರ್ಡ್ ಮಾಡುವ ಮೊದಲು ಮೀಡಿಯಾದಿಂದ ಶೀರ್ಷಿಕೆಯನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಇದು ಪಡೆದಿದೆ ಎಂಬುದು ಬಳಕೆದಾರರಿಗೆ ತಿಳಿದಿರಬೇಕು. ಈ ಫೀಚರ್ಸ್‌ ಮೊದಲು ಐಓಎಸ್‌ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಹಾಗೆಯೇ ಬಳಕೆದಾರರಿಗೆ GIF ಗಳು, ವಿಡಿಯೋಗಳು ಮತ್ತು ಇತರ ಮೀಡಿಯಾ ಫೈಲ್‌ಗಳನ್ನು ಶೀರ್ಷಿಕೆಯೊಂದಿಗೆ ಸೆಂಡ್‌ ಅನುಮತಿಸುತ್ತದೆ ಎಂದು ತಿಳಿಸಿದೆ.

ಆಂಡ್ರಾಯ್ಡ್‌ಬಳಕೆದಾರರಿಗೂ ಲಭ್ಯ!
'ಶೀರ್ಷಿಕೆ ಫೀಚರ್ಸ್‌ನೊಂದಿಗೆ ಫಾರ್ವರ್ಡ್ ಮೀಡಿಯಾ' ಎಂದು ಮೆಟಾ ಒಡೆತನದ ಇನ್‌ಸ್ಟೆಂಟ್ ಮೆಸೇಜಿಂಗ್ ಆಪ್‌ ವಾಟ್ಸಾಪ್‌ ಹಿಂದೆ ಘೋಷಣೆ ಮಾಡಿತ್ತು. ಈ ಮೂಲಕ ಈ ಫೀಚರ್ಸ್‌ ಇನ್ಮುಂದೆ ಆಂಡ್ರಾಯ್ಡ್‌ಬಳಕೆದಾರರಿಗೂ ಲಭ್ಯವಿದೆ ಎಂದು ತಿಳಿದುಬಂದಿದೆ.

 ಈ ಬಳಕೆದಾರರು ಸಹ ಇನ್ಮುಂದೆ ವಾಟ್ಸಾಪ್‌ನ ಹೊಸ ಫೀಚರ್ಸ್‌ ಬಳಸಬಹುದು!

ಇದರಿಂದ ಆಗುವ ಪ್ರಮುಖ ಉಪಯೋಗ ಇದು!
ಈ ಫೀಚರ್ಸ್‌ ಮೂಲಕ ಬಳಕೆದಾರರು ಮೊದಲೇ ತಿಳಿಸಿದಂತೆ ಮಾಧ್ಯಮ ಫೈಲ್‌ಗಳಿಗೆ ಶೀರ್ಷಿಕೆಗಳನ್ನು ಆಡ್‌ ಮಾಡಲು ಅನುಕೂಲ ನೀಡಲಿದೆ. ಹಾಗೆಯೇ ಶೀರ್ಷಿಕೆಯಿಂದ ಕೀವರ್ಡ್‌ಗಳನ್ನು ಹುಡುಕುವ ಮೂಲಕ ಹಳೆಯ ಫೈಲ್‌ಗಳನ್ನು ತ್ವರಿತವಾಗಿ ಸರ್ಚ್‌ ಮಾಡಲು ಇದು ಸಹಾಯಕ. ಜೊತೆಗೆ ಶೀರ್ಷಿಕೆಯೊಂದಿಗೆ ಮಾಧ್ಯಮವನ್ನು ಫಾರ್ವರ್ಡ್ ಮಾಡಿದ ನಂತರ ಡಿಸ್‌ಪ್ಲೇ ಕೆಳಭಾಗದಲ್ಲಿ ಹೊಸ ವೀಕ್ಷಣೆ ಲಭ್ಯವಾಗಲಿದೆ.

ಇಷ್ಟೆಲ್ಲಾ ಫೀಚರ್ಸ್‌ ಜೊತೆಗೆ ಬಳಕೆದಾರರ ಆಪ್‌ನಲ್ಲಿ ಈ ಫೀಚರ್ಸ್‌ ಸಕ್ರಿಯಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಹ ಸುಲಭವಾದ ಮಾರ್ಗ ನೀಡಲಾಗಿದೆ. ಇದರೊಂದಿಗೆ ಬಳಕೆದಾರರು ಮೆಸೆಜ್‌ ಅನ್ನು ಫಾರ್ವರ್ಡ್ ಮಾಡದಿರಲು ನಿರ್ಧರಿಸಿದರೆ ಅದನ್ನು ಫಾರ್ವರ್ಡ್ ಮಾಡುವ ಮೊದಲು ಚಿತ್ರದಿಂದ ಶೀರ್ಷಿಕೆಯನ್ನು ಅಳಿಸಲು ಡಿಸ್‌ಮಿಸ್‌ ಬಟನ್‌ ಆಯ್ಕೆ ಬಳಸಬಹುದಾಗಿದೆ.

 ಈ ಬಳಕೆದಾರರು ಸಹ ಇನ್ಮುಂದೆ ವಾಟ್ಸಾಪ್‌ನ ಹೊಸ ಫೀಚರ್ಸ್‌ ಬಳಸಬಹುದು!
ಈ ಎಲ್ಲಾ ಫೀಚರ್ಸ್‌ ಜೊತೆಗೆ ವಾಟ್ಸಾಪ್‌ ಕೆಪ್ಟ್‌ ಮೆಸೆಜ್‌ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಕಣ್ಮರೆಯಾಗುತ್ತಿರುವ ಸಂದೇಶವನ್ನು ತಾತ್ಕಾಲಿಕವಾಗಿ ಉಳಿಸಲು ಅನುಮತಿಸುತ್ತದೆ. ಹಾಗೆಯೇ ಈ ಕಣ್ಮರೆಯಾಗುವ ಮೆಸೆಜ್‌ಗಳನ್ನು ವಾಟ್ಸಾಪ್‌ 2021 ರಲ್ಲಿ ಪರಿಚಯಿಸಿತ್ತು. ಈ ಫೀಚರ್ಸ್‌ ನಲ್ಲಿ ಮೆಸೆಜ್‌ ಕಳುಹಿಸುವವರು ಆಯ್ಕೆಮಾಡಿದ ನಿರ್ದಿಷ್ಟ ಸಮಯದ ನಂತರ ಆಟೋಮ್ಯಾಟಿಕ್‌ ಆಗಿ ಸಂದೇಶ ಅಳಿಸಲಾಗುತ್ತದೆ.

ಕಣ್ಮರೆಯಾಗುತ್ತಿರುವ ಮೆಸೆಜ್‌ಗಳ ಮೇಲೆ ಬಳಕೆದಾರರಿಗೆ ಹೆಚ್ಚಿನ ಕಂಟ್ರೋಲ್‌ ನೀಡಲು ವಾಟ್ಸಾಪ್‌ ಮುಂದಾಗಿದ್ದು, ಇದರ ಭಾಗವಾಗಿಯೇ ಮೆಸೆಜ್‌ಗಳನ್ನು ಇನ್ಮುಂದೆ ಆಟೋಮ್ಯಾಟಿಕ್‌ ಆಗಿ ಚಾಟ್‌ನಿಂದ ಅಳಿಸಲಾಗುವುದಿಲ್ಲ ಮತ್ತು ಸಂಭಾಷಣೆಯಲ್ಲಿರುವ ಪ್ರತಿಯೊಬ್ಬರೂ ಅದನ್ನು ವೀಕ್ಷಣೆ ಮಾಡಬಹುದಾಗಿದೆ. ಬದಲಾಗಿ, ಬಳಕೆದಾರರು ಸಂಭಾಷಣೆಯ ಮೇಲೆ ಕಂಟ್ರೋಲ್‌ ಹೊಂದಿದ್ದು, ಯಾವುದೇ ಸಮಯದಲ್ಲಿ ಮೆಸೆಜ್‌ ಅನ್ನು ಅನ್-ಕೀಪ್ ಮಾಡಲು ಅವಕಾಶ ನೀಡಲಾಗಿದೆ. ಈ ಮೂಲಕ ಆ ಮೆಸೆಜ್‌ ಶಾಸ್ವತವಾಗಿ ಚಾಟಿಂಗ್ ವಿಭಾಗದಿಂದ ಕಣ್ಮೆಯಾಗುತ್ತದೆ.

ಇದಕ್ಕಾಗಿ ಮೆಸೆಜ್‌ನ ಬಬಲ್‌ನಲ್ಲಿ ಬುಕ್‌ಮಾರ್ಕ್ ಐಕಾನ್ ಅನ್ನು ಆಡ್‌ ಮಾಡಲಾಗುತ್ತದೆ ಎನ್ನಲಾಗಿದೆ. ಕಣ್ಮರೆಯಾಗುವ ಮೆಸೆಜ್‌ಅನ್ನು 'ಕೆಪ್ಟ್‌ ' ಮಾಡಲಾಗಿದೆ ಎಂಬ ಐಕಾನ್ ಕಾಣಿಸಿಕೊಳ್ಳಲಿದೆ. ಈ ಮೂಲಕ ಕಣ್ಮರೆಯಾಗುವ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದರೂ ಸಹ ಆ ಮೆಸೆಜ್‌ ಉಳಿದುಕೊಳ್ಳುತ್ತದೆ.

Best Mobiles in India

English summary
WhatsApp forward media with caption feature is now available.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X