ವಾಟ್ಸಾಪ್‌ ಗ್ರೂಪ್‌ ಸೇರಲಿರುವ ಈ ಫೀಚರ್ಸ್‌ ನಿಮಗೆ ಸಾಕಷ್ಟು ಉಪಯುಕ್ತ ಎನಿಸಲಿದೆ!

|

ವಾಟ್ಸಾಪ್‌ ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಮೆಟಾ ಒಡೆತನದ ವಾಟ್ಸಾಪ್‌ ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಹಲವು ಅನಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್‌ ಗ್ರೂಪ್‌ ಬಳಕೆದಾರರಿಗಾಗಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಗ್ರೂಪ್‌ ಬಳಕೆದಾರರು ಶೀಘ್ರದಲ್ಲೇ ಹೊಸ ಅನುಕೂಲಕರ ಫೀಚರ್ಸ್‌ ಅನ್ನು ಪಡೆಯಲಿದ್ದಾರೆ. ಸದ್ಯ ಅಭಿವೃದ್ದಿಯ ಹಂತದಲ್ಲಿರುವ ಈ ಫೀಚರ್ಸ್‌ ಬೀಟಾ ವರ್ಷನ್‌ನಲ್ಲಿದೆ ಎನ್ನಲಾಗಿದೆ. ಇನ್ನು ಈ ಫೀಚರ್ಸ್‌ ವಾಟ್ಸಾಪ್‌ ಗ್ರೂಪ್‌ನಲ್ಲಿ ಈ ಹಿಂದೆ ಯಾರೆಲ್ಲಾ ಇದ್ದರು, ಯಾವ ರೀತಿಯ ಜನರು ಗುಂಪಿನ ಭಾಗವಾಗಿದ್ದರು ಎಂಬೆಲ್ಲಾ ಮಾಹಿತಿಯನ್ನು ತಿಳಿಯಲು ಸಹಾಯ ಮಾಡಲಿದೆ. ಇದರಿಂದ ನೀವು ಆ ವಾಟ್ಸಾಪ್‌ ಗ್ರೂಪ್‌ನಲ್ಲಿ ಇರುವುದೊ ಬೇಡವೋ ಎಂದು ನಿರ್ಧರಿಸುವುದಕ್ಕೆ ನಿಮಗೆ ಅನುಕೂಲವಾಗಲಿದೆ.

ಫೀಚರ್ಸ್‌

ವಾಟ್ಸಾಪ್‌ನಲ್ಲಿ ಈ ಹೊಸ ಫೀಚರ್ಸ್‌ ಮೂಲಕ ಗ್ರೂಪ್‌ ಚಾಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಲು ಸಹಾಯಕವಾಗಲಿದೆ. ಇದರಿಂದ ನೀವು ಕಳೆದ 60 ದಿನಗಳಲ್ಲಿ ಚಾಟ್ ಅನ್ನು ತೊರೆದ ಗುಂಪಿನ ಸದಸ್ಯರ ಬಗ್ಗೆ ತಿಳಿಯುವುದಕ್ಕೆ ಸಾಧ್ಯವಾಗಲಿದೆ. ಅಂದರೆ ನೀವು ಸೇರಿರುವ ಗ್ರೂಪ್‌ನ ಮೂಲ ಉದ್ದೇಶವನ್ನು ಅರಿಯುವುದಕ್ಕೆ ಅವಕಾಶ ಸಿಗಲಿದೆ. ಇದರಲ್ಲಿ ಭ ಆಘವಹಿಸುವವರ ಬಗ್ಗೆ ಇದು ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ. ಆದರೆ ಗ್ರೂಪ್‌ ತ್ಯಜಿಸಿದವರ ಮಾಹಿತಿ ಇರಲಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಗ್ರೂಪ್‌ ಚಾಟ್‌ ಮಾಡುವವರಿಗೆ ಸಾಕಷ್ಟು ಫೀಚರ್ಸ್‌ಗಳು ಲಭ್ಯವಿದೆ. ಇವುಗಳ ಮೂಲಕ ಬಳಕೆದಾರರು ಸಾಕಷ್ಟು ಅನುಕೂಲವನ್ನು ಪಡೆದುಕೊಂಡಿದ್ದಾರೆ. ಅದರಂತೆ ಈ ಹೊಸ ಫೀಚರ್ಸ್‌ ಕೂಡ ಗ್ರೂಪ್‌ನಲ್ಲಿ ಭಾಗವಹಿಸುವ ಅವಶ್ಯಕತೆ ಇದೆಯಾ? ಇಲ್ಲವೆ ಅಂತಾ ನಿರ್ಧರಿಸುವುದಕ್ಕೆ ನಿಮಗ ಅವಕಾಶ ನೀಡಲಿದೆ. ಸರಳವಾಗಿ ಹೇಳುವುದಾದರೆ, ನೀವು ಗುಂಪಿನ ಭಾಗವಾಗಿದ್ದರೆ ಅಥವಾ ಅಸ್ತಿತ್ವದಲ್ಲಿರುವ ಗುಂಪಿಗೆ ಇತ್ತೀಚೆಗೆ ಸೇರಿದ್ದರೆ, ಗುಂಪಿನಲ್ಲಿ ಈ ಹಿಂದೆ ಭಾಗವಹಿಸಿದ್ದವರನ್ನು ತಿಳಿಸಿ ಕೊಡಲಿದೆ. ಯಾವ ರೀತಿಯ ಜನರು ಗ್ರೂಪಿನ ಭಾಗವಾಗಿದ್ದರು ಎಂಬುದನ್ನು ಅಳೆಯಲು ಬಯಸುವ ಜನರಿಗೆ ಇದು ಸಹಾಯಕವಾಗಿರುತ್ತದೆ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಗ್ರೂಪ್‌ ಫೀಚರ್ಸ್‌ ಅನ್ನು iOS 22.16.0.70 ಗಾಗಿ ವಾಟ್ಸಾಪ್‌ ಬೀಟಾದಲ್ಲಿ ಗುರುತಿಸಲಾಗಿದೆ. ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ WABetaInfo ಈ ಹೊಸ ಫೀಚರ್ಸ್‌ ಅನ್ನು ಗುರುತಿಸಿದೆ. ಅದರಂತೆ ಈ ಫೀಚರ್ಸ್‌ ಗ್ರೂಪ್‌ ಅಡ್ಮಿನ್‌ಗೆ ಮತ್ತು ಗುಂಪು ಚಾಟ್‌ನಲ್ಲಿ ಭಾಗವಹಿಸುವ ಉಳಿದವರಿಗೆ ಗುಂಪಿನ ಬಗ್ಗೆ ನಿಖರವಾಗಿ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದು ಖಾಸಗಿತನದ ಉಲ್ಲಂಘನೆಯೂ ಆಗುವ ಸಾಧ್ಯತೆಯಿದೆ.

ಸೇರ್ಪಡೆ

ಏಕೆಂದರೆ ಈ ಹಿಂದೆ ಪರಿಚಯವೇ ಇಲ್ಲದ ಗ್ರೂಪ್‌ನ ಸದಸ್ಯರ ಬಗ್ಗೆ ಹೊಸದಾಗಿ ಗ್ರೂಪ್‌ಗೆ ಸೇರ್ಪಡೆ ಆಗುವವರು ತಿಳಿಯಬಹುದು ಎಂದರೆ ಅದು ಖಾಸಗತಿನದ ಉಲ್ಲಂಘನೆ ಎನ್ನಬಹುದು. ಅಲ್ಲದೆ ಈಗಾಗಲೇ ಗ್ರೂಪ್‌ನಿಂದ ಎಕ್ಸಿಟ್‌ ಆಗಿರುವ ಸದಸ್ಯರ ಮೊಬೈಲ್ ಸಂಖ್ಯೆಗೆ ಪ್ರವೇಶವನ್ನು ಹೊಂದಿರಬಹುದು ಎನ್ನಲಾಗಿದೆ. ಆದರೆ ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ವಾಟ್ಸಾಪ್‌ ಇನ್ನು ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಈಫೀಚರ್ಸ್‌ ಇನ್ನೂ ಬೀಟಾದಲ್ಲಿದೆ, ಅಂದರೆ ಪ್ರೋಗ್ರಾಂನಲ್ಲಿ ನೋಂದಾಯಿಸಿದ ಜನರನ್ನು ಆಯ್ಕೆ ಮಾಡಲು ಲಭ್ಯವಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಾಟ್ಸಾಪ್‌ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದೆ. ಇನ್ಮುಂದೆ ಗ್ರಾಹಕರು ವಾಟ್ಸಾಪ್‌ ಅನ್ನು ಬಳಸುವ ಮೂಲಕ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು, ಗ್ರಾಹಕರು/ ಬಳಕೆದಾರರು +919022690226 ಸಂಖ್ಯೆಗೆ 'ಹಾಯ್' ಅನ್ನು ಕಳುಹಿಸಬೇಕಾಗುತ್ತದೆ. ಹಾಗೆಯೇ ವಾಟ್ಸಾಪ್‌ ನಲ್ಲಿ ಗ್ರಾಹಕರು ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಸಹ ತಿಳಿಯಬಹುದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆ ಪಡೆಯಬೇಕಾದರೆ ನೀವು ಮೊದಲಿಗೆ SBI WhatsApp ಬ್ಯಾಂಕಿಂಗ್ ಸೇವೆಗಳಿಗಾಗಿ ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಲು, ನೀವು ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ನಿಮ್ಮ 10 ಅಂಕಿಗಳ ಮೊಬೈಲ್ ಸಂಖ್ಯೆಯಿಂದ 917208933148 ಗೆ 'SMS WAREG A/c No' ಅನ್ನು ಕಳುಹಿಸಬೇಕಾಗುತ್ತದೆ. ನಂತರ, +919022690226 ಸಂಖ್ಯೆಗೆ 'ಹಾಯ್' ಎಂದು ಕಳುಹಿಸಿ. ಇದೀಗ 'ಆತ್ಮೀಯ ಗ್ರಾಹಕರೇ, ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್ ಸೇವೆಗಳಿಗೆ ಸುಸ್ವಾಗತ ಎಂಬ ಸಂದೇಶ ಬರಲಿದೆ. ಇದರಲ್ಲಿ 1. ಖಾತೆ ಬ್ಯಾಲೆನ್ಸ್ 2. ಮಿನಿ ಸ್ಟೇಟಮೆಂಟ್ 3. ವಾಟ್ಸಾಪ್‌ ಬ್ಯಾಂಕಿಂಗ್‌ನಿಂದ ಡಿ-ರಿಜಿಸ್ಟರ್ ಮಾಡಿ, ಈ ಮೂರು ಆಯ್ಕೆಯಲ್ಲಿ ನಿಮಗೆ ಬೇಕಾದ ಸೇವೆ ಆಯ್ಕೆ ಮಾಡಬಹುದು.

ಜನಪ್ರಿಯ

ಇನ್ನು ವಾಟ್ಸಾಪ್‌ ತನ್ನ ಜನಪ್ರಿಯ ಫೀಚರ್ಸ್‌ ಎನಿಸಿಕೊಂಡಿರುವ ಎಮೋಜಿ ರಿಯಾಕ್ಷನ್‌ನಲ್ಲಿ ಹೊಸ ಬದಲಾವಣೆಯನ್ನು ಮಾಡಿದೆ. ಈ ಹಿಂದೆ ಕೇವಲ ಆರು ಎಮೋಜಿ ರಿಯಾಕ್ಷನ್‌ ಬಳಸಲು ಅವಕಾಶ ನೀಡಿತ್ತು. ಇದರಲ್ಲಿ ನೀವು ಲೈಕ್ಸ್‌, ಪ್ರೀತಿ, ನಗು, ಆಶ್ಚರ್ಯ, ದುಃಖ ಮತ್ತು ಧನ್ಯವಾದಗಳು ಎಮೋಜಿಗಳು ಸೇರಿದ್ದವು. ಆದರೆ ಇದೀಗ ಎಲ್ಲಾ ಮಾದರಿಯ ಎಮೋಜಿಗಳನ್ನು ಬಳಸುವುದಕ್ಕೆ ಅವಕಾಶ ನೀಡಿದೆ. ಇದರಿಂದ ನಿಮಗೆ ಬರುವ ಸಂದೇಶಗಳಿಗೆ ನೀವು ಯಾವುದೇ ಮಾದರಿಯ ಎಮೋಜಿ ಮೂಲಕ ರಿಯಾಕ್ಷನ್‌ ನೀಡಬಹುದಾಗಿದೆ.

ರಿಯಾಕ್ಷನ್‌

ಇನ್ನು ವಾಟ್ಸಾಪ್‌ನ ಎಮೋಜಿ ರಿಯಾಕ್ಷನ್‌ ಮೂಲಕ ನೀವು ಸಂದೇಶಗಳಿಗೆ ನಿಮ್ಮ ಭಾವನೆಯನ್ನು ಎಮೋಜಿ ಮೂಲಕ ತಿಳಿಸಬಹುದು. ಇದರಿಂದ ನೀವು ನಿಮ್ಮ ವೈಯುಕ್ತಿಕ ಭಾವನೆಗಳನ್ನು ಎಮೋಜಿ ಮೂಲಕ ತಿಳಿಸಬಹುದಾಗಿದೆ. ಇದೇ ಕಾರಣಕ್ಕೆ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ ಕಳೆದ ಎರಡು ತಿಂಗಳಿನಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿದೆ. ನೀವು ಸಂದೇಶಗಳಿಗೆ ಯಾವುದೇ ಎಮೋಜಿ ರಿಯಾಕ್ಷನ್‌ ಕಳುಹಿಸುವುದಕ್ಕೆ ಸಂದೇಶದ ಮೇಲೆ ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ, ನಂತರ ಬರುವ ಎಮೋಜಿ ಪಾಪ್‌ ಅಪ್‌ನಲ್ಲಿ '+' ಬಟನ್ ಅನ್ನು ಒತ್ತಿರಿ, ಇದರಲ್ಲಿ ಎಮೋಜಿ ಸೆಲೆಕ್ಟರ್ ಕಾಣಿಸಲಿದೆ. ಇಲ್ಲಿ ನಿಮಗೆ ಬೇಕಾದ ಎಮೋಜಿಯನ್ನು ಆಯ್ಕೆ ಮಾಡಬಹುದಾಗಿದೆ.

Most Read Articles
Best Mobiles in India

Read more about:
English summary
WhatsApp is reportedly testing a feature called Past Participants that will tell participants of a group who all left the chat within the past 60 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X