ಭಾರತದಲ್ಲಿ ಮಾರ್ಚ್‌ ತಿಂಗಳಿನಲ್ಲಿ 18 ಲಕ್ಷ ಖಾತೆ ಬ್ಯಾನ್‌ ಮಾಡಿದ ವಾಟ್ಸಾಪ್‌!

|

ವಾಟ್ಸಾಪ್‌ ಅಪ್ಲಿಕೇಶನ್‌ ಮಾರ್ಚ್‌ ತಿಂಗಳಿನಲ್ಲಿ ಭಾರತದ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ಹೇಳಿದೆ. ಭಾರತ ಸರ್ಕಾರದ ಹೊಸ ಐಟಿ ನಿಯಮ 2021ರ ಅನುಸರಣೆಯ ಪ್ರಕಾರ ಈ ಕ್ರಮವನ್ನು ತೆಗೆದುಕೊಂಡಿರುವುದಾಗಿ ಹೇಳಿದೆ. ಹೊಸ ಐಟಿ ನಿಯಮ 2021 ಜಾರಿಗೆ ಬಂದ ನಂತರ ಪ್ರತಿ ತಿಂಗಳ ಅನುಸರಣಾ ವರದಿಯನ್ನು ಕೊಡುವುದು ಕಡ್ಡಾಯವಾಗಿದೆ ಅದರಂತೆ ವಾಟ್ಸಾಪ್‌ ಮಾರ್ಚ್‌ ತಿಂಗಳಿನಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ಮಾಡಿದೆ.

ವಾಟ್ಸಾಪ್‌

ವಾಟ್ಸಾಪ್‌ ಅಪ್ಲಿಕೇಶನ್‌ ಮಾರ್ಚ್ 1 ರಿಂದ ಮಾರ್ಚ್‌ 31 2022 ರ ನಡುವಿನ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ಮಾಸಿಕ ವರದಿಯಲ್ಲಿ ಭಾರತದ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್‌ ಮಾಡಿದೆ. ಇನ್ನು ಈ ಮಾಸಿಕ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರಿಂದ ಸ್ವೀಕರಿಸಿದ ದೂರುಗಳು ಮತ್ತು ವಾಟ್ಸಾಪ್‌ ತೆಗೆದುಕೊಂಡ ಕ್ರಮಗಳ ವಿವರಗಳನ್ನು ವರದಿ ಮಾಡಿದೆ. ಇನ್ನು ಮಾರ್ಚ್‌ ತಿಂಗಳ ವರದಿಯಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಮಾರ್ಚ್‌ ತಿಂಗಳಿನಲ್ಲಿ ಬಳಕೆದಾರರು ಮಾಡಿದ ರಿಪೋರ್ಟ್‌ ಆಧಾರದ ಮೇಲೆ 18 ಲಕ್ಷಕ್ಕೂ ಹೆಚ್ಚು ಖಾತೆಯನ್ನು ಬ್ಯಾನ್‌ ಮಾಡಿದೆ. ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ.ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸಾಪ್‌ ಈಗಾಗಲೇ ವಾಟ್ಸಾಪ್‌ ಸಂದೇಶಗಳನ್ನು ಫಾರ್ವರ್ಡ್ ಮಾಡುವುದನ್ನು ಸೀಮಿತಗೊಳಿಸಿದೆ. ಅದರಂತೆ ನಕಲಿ ಸುದ್ದಿಗಳ ಹರಡಿರುವ ಖಾತೆಗಳನ್ನು ಬ್ಯಾನ್‌ ಮಾಡಿದೆ.

18 ಲಕ್ಷ ಖಾತೆಗಳನ್ನು ಏಕೆ ನಿಷೇಧಿಸಲಾಗಿದೆ?

18 ಲಕ್ಷ ಖಾತೆಗಳನ್ನು ಏಕೆ ನಿಷೇಧಿಸಲಾಗಿದೆ?

ವಾಟ್ಸಾಪ್‌ ಹೊಸ ಐಟಿ ನಿಯಮಗಳ ಅನ್ವಯ ಈ ಖಾತೆಗಳನ್ನು ನಿಷೇದಿಸಿದೆ. ಅಲ್ಲದೆ ವಾಟ್ಸಾಪ್‌ ಅಪ್ಲಿಕೇಶನ್ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಬದ್ಧವಾಗಿರದ ಖಾತೆಗಳನ್ನು ಕೂಡ ಬ್ಯಾನ್‌ ಮಾಡಿದೆ. ಹಾಗೆಯೇ ತಪ್ಪು ಮಾಹಿತಿಯನ್ನು ಹರಡುವ, ಬಳಕೆದಾರರೊಂದಿಗೆ ಅನುಮಾನಾಸ್ಪದ ಲಿಂಕ್‌ಗಳನ್ನು ಹಂಚಿಕೊಳ್ಳುವ ಅಥವಾ ಅವರ ಸಂಪರ್ಕಗಳೊಂದಿಗೆ ಪರಿಶೀಲಿಸದ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಹಂಚಿಕೊಳ್ಳುವ ಖಾತೆಗಳನ್ನು ಕೂಡ ಸಾಮಾನ್ಯವಾಗಿ ಬ್ಯಾನ್‌ ಮಾಡಲಿದೆ. ಇನ್ನು ಈ ನಿಷೇಧಿತ ವಾಟ್ಸಾಪ್ ಅಕೌಂಟ್‌ಗಳು ಬೇರೆಯವರಿಗೆ ವಂಚನೆ ಮಾಡಿರುವ ಮಾಹಿತಿ ಕೂಡ ಬಹಿರಂಗವಾಗಿದೆ.

ವಾಟ್ಸಾಪ್‌

ಇನ್ನು ಈಗಾಗಲೇ ವಾಟ್ಸಾಪ್‌ ಐಟಿ ನಿಯಮಗಳು 2021 ರ ಅನುಸಾರವಾಗಿ ಫೆಬ್ರವರಿ 1 ಮತ್ತು 28 ರ ನಡುವೆ 10 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಖಾತೆ ಬ್ಯಾನ್‌ ಮಾಡಿದೆ. ಈ ಅವಧಿಯಲ್ಲಿ ಕೂಡ ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್‌ ತೆಗೆದುಕೊಂಡ ಅನುಗುಣವಾದ ಕ್ರಮಗಳನ್ನು ತೆಗೆದುಕೊಂಡಿತ್ತು. ಅಲ್ಲದೆ ವಾಟ್ಸಾಪ್‌ನಲ್ಲಿ ನಿಂದನೆಯನ್ನು ಎದುರಿಸಲು ಸ್ವಂತ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿರುವುದಾಗಿ ಹೇಳಿಕೊಂಡಿತ್ತು. ಇದರೊಂದಿಗೆ ವಾಟ್ಸಾಪ್‌ನ ಎಲ್ಲಾ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ ಅನ್ನೊದನ್ನ ಮತ್ತೊಮ್ಮೆ ವರದಿಯಲ್ಲಿ ಉಲ್ಲೇಖ ಮಾಡಿತ್ತು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ವಿಕ್‌ ರಿಯಾಕ್ಷನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಸ್ಟೇಟಸ್‌ ಅಪ್ಡೇಟ್‌ ನೋಡುವಾಗಲೂ ಕೂಡ ಎಮೋಜಿ ರಿಯಾಕ್ಷನ್‌ ನೀಡಲು ಸಾಧ್ಯವಾಗಲಿದೆ. ಇನ್ನು ಈ ರಿಯಾಕ್ಷನ್‌ ಆಯ್ಕೆಯು ಎಂಟು ಎಮೋಟಿಕಾನ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇದು ಬಳಕೆದಾರರಿಗೆ ವೈಯಕ್ತಿಕ ಎಮೋಜಿಯನ್ನು ಸಂದೇಶವಾಗಿ ಕಳುಹಿಸದೆಯೇ ಸ್ಟೇಟಸ್‌ ಅಪ್ಡೇಟ್‌ ಕಡೆಗೆ ಭಾವನೆಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಹೃದಯದ ಕಣ್ಣುಗಳಿಂದ ನಗುತ್ತಿರುವ ಮುಖ, ಸಂತೋಷದ ಕಣ್ಣೀರಿನ ಮುಖ, ತೆರೆದ ಬಾಯಿಯ ಮುಖ, ಅಳುವ ಮುಖ, ಮಡಚಿ ಕೈಗಳನ್ನು ಹೊಂದಿರುವ ವ್ಯಕ್ತಿ, ಚಪ್ಪಾಳೆ, ಪಾರ್ಟಿ ಪಾಪ್ಪರ್ ಮತ್ತು ನೂರು ಅಂಕಗಳ ಎಮೋಜಿಯನ್ನು ಕಾಣಬಹುದಾಗಿದೆ.

Best Mobiles in India

Read more about:
English summary
WhatsApp has banned over 18 lakh accounts in India in March

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X