ಸದ್ಯದಲ್ಲೇ ವಾಟ್ಸಾಪ್‌ ಸೇರಲಿದೆ ಡೋ ನಾಟ್‌ ಡಿಸ್ಟರ್ಬ್‌ ಆಯ್ಕೆ! ಏನಿದರ ಉಪಯೋಗ?

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಫೀಚರ್ಸ್‌ಗಳನ್ನು ಅಭಿವೃದ್ದಿ ಪಡಿಸುತ್ತಾ ಬಂದಿದೆ. ಸದ್ಯ ಇದೀಗ ಮಿಸ್ಡ್‌ ಕಾಲ್‌ಗಳಿಗಾಗಿ ಹೊಸ ಡೋ ನಾಟ್ ಡಿಸ್ಟರ್ಬ್ ಆಯ್ಕೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ವಾಟ್ಸಾಪ್ ಹೊಸ iOS 15ನಲ್ಲಿ ಈ API ಅನ್ನು ಬೆಂಬಲಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಡೋ ನಾಟ್ ಡಿಸ್ಟರ್ಬ್ ಫೀಚರ್ಸ್‌ ಪರಿಚಯಿಸಲು ವೇದಿಕೆ ಸಿದ್ಧಪಡಿಸಿದೆ. ಡೋ ನಾಟ್ ಡಿಸ್ಟರ್ಬ್ ಫೀಚರ್ಸ್‌ ಮೂಲಕ ನೀವು ಮಿಸ್‌ ಮಾಡಿಕೊಂಡ ವಾಟ್ಸಾಪ್‌ ಕಾಲ್‌ಗಳ ಬಗ್ಗೆ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ನೀವು ಕರೆ ತಪ್ಪಿಸಿಕೊಳ್ಳುವುದಕ್ಕೆ ನಿಖರವಾದ ಕಾರಣ ಏನು ಅನ್ನೊದನ್ನ ತಿಳಿಸಲಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಡೋ ನಾಟ್ ಡಿಸ್ಟರ್ಬ್ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಡೋ ನಾಟ್ ಡಿಸ್ಟರ್ಬ್ ಫೀಚರ್ಸ್‌ ಅನ್ನು ಪ್ರಸ್ತುತ ಟೆಸ್ಟ್‌ಫ್ಲೈಟ್‌ನಲ್ಲಿ iOS 15 ನಲ್ಲಿ ಪರಿಚಯಿಸಿದೆ. ಐಒಎಸ್ 15 ನಲ್ಲಿ ವಾಟ್ಸಾಪ್‌ನ ಬೀಟಾ ಆವೃತ್ತಿಯನ್ನು ಬಳಸುತ್ತಿರುವವರು ಮಿಸ್ಡ್ ಕಾಲ್ಸ್ ವಿಭಾಗದ ಅಡಿಯಲ್ಲಿ ‘ಸೈಲೆನ್ಸ್ಡ್ ಬೈ ನೋ ಡಿಸ್ಟರ್ಬ್' ಎಂಬ ಹೊಸ ಲೇಬಲ್‌ ಅನ್ನು ಕಾಣಬಹುದಾಗಿದೆ. ಇದರಿಂದ ಬಳಕೆದಾರರು ವಾಟ್ಸಾಪ್‌ನಲ್ಲಿ ಇನ್‌ ಕಮಿಂಗ್‌ ವಾಟ್ಸಾಪ್ ಕಾಲ್‌ ಮಿಸ್‌ ಮಾಡಿಕೊಂಡಿದ್ದರೆ, ಅದಕ್ಕೆ ನಿಖರವಾದ ಕಾರಣವನ್ನು ತಿಳಿಸುತ್ತದೆ. ಆದರೆ ಈ ಮಾಹಿತಿಯು ಕರೆ ಸ್ವೀಕರಿಸುವವರ ಡಿವೈಸ್‌ಗೆ ಮಾತ್ರ ಸೀಮಿತವಾಗಿರುವುದರಿಂದ ಕರೆ ಮಾಡುವವರಿಗೆ ಯಾವುದೇ ಸೂಚನೆ ನೀಡಲಾಗುವುದಿಲ್ಲ ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ.

ಡಿಸ್ಟರ್ಬ್

ಡೋ ನಾಟ್ ಡಿಸ್ಟರ್ಬ್ ಫೀಚರ್ಸ್‌ ಕರೆ ಸ್ವಿಕರಿಸಿದವರಿಗೆ ಮಾತ್ರ ನಿಖರವಾದ ಮಾಹಿತಿ ನೀಡಲಿದೆ. ಕರೆ ಮಾಡುವವರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಆದರಿಂದ ನಿಮಗೆ ಯಾವುದಾದರೂ ವಾಟ್ಸಾಪ್‌ ಕಾಲ್‌ ಬಂದಿದ್ದು, ನೀವು ಯಾವುದೇ ನೋಟಿಫಿಕೇಶನ್‌ ಸ್ವಿಕರಿಸದಿದ್ದರೆ, ಅದಕ್ಕೆ ನಿಖರವಾದ ಕಾರಣ ಏನು ಅನ್ನೊದನ್ನು ಕೂಡ ವಿವರವಾಗಿ ತಿಳಿಸಲಿದೆ. ಇದರಿಂದ ನಿಮಗೆ ಬಂದಿರುವ ವಾಟ್ಸಾಪ್‌ ಇನ್‌ ಕಮಿಂಗ್‌ ಕರೆಗಳ ಬಗ್ಗೆ ಮಾಹಿತಿ ಸಿಗಲಿದೆ. ಸದ್ಯಕ್ಕೆ, ಈ ಫೀಚರ್ಸ್‌ iOS 15 ನಲ್ಲಿ ಚಾಲನೆಯಲ್ಲಿರುವ ವಾಟ್ಸಾಪ್‌ ಬೀಟಾದಲ್ಲಿ ಮಾತ್ರ ಲಭ್ಯವಿದೆ. ಇನ್ನು ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಲಭ್ಯವಾಗುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ತನ್ನ ಬಳಕೆದಾರರಿಗೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಏರಿಕೆ ಮಾಡಿದೆ. ಈ ಮೂಲಕ ಒಂದೇ ಗುಂಪಿನಲ್ಲಿ 512 ಮಂದಿಯನ್ನು ಸೇರಿಸುವುದಕ್ಕೆ ಅವಕಾಶ ನೀಡಿದೆ. ಇದೀಗ ಈ ಆಯ್ಕೆ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಸದ್ಯ ಆಂಡ್ರಾಯ್ಡ್‌, iOS ಮತ್ತು ಡೆಸ್ಕ್‌ಟಾಪ್ ಆಧಾರಿತ ಅಪ್ಲಿಕೇಶನ್‌ಗಳ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ನಿಮ್ಮ ವಾಟ್ಸಾಪ್‌ ಅನ್ನು ಅಪ್ಡೇಟ್‌ ಮಾಡುವ ಮೂಲಕ ನೀವು ಕೂಡ ಈ ಹೊಸ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ವಾಟ್ಸಾಪ್‌ನಲ್ಲಿ ಈ ಹೊಸ ಆಯ್ಕೆಯನ್ನು ಪಡೆದಿದ್ದಾರಾ ಅನ್ನೊದನ್ನ ಪರಿಶೀಲಿಸಲು, ನ್ಯೂ ಗ್ರೂಪ್‌ ಕ್ರಿಯೆಟ್‌ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ತಿಳಿಯಬಹುದು. ಹೊಸ ಗುಂಪನ್ನು ಕ್ರಿಯೆಟ್‌ ಮಾಡುವುದಕ್ಕೆ ಹೋದಾಗ ಆ ಗುಂಪಿಗೆ ಸೇರಿಸಬಹುದಾದ ಒಟ್ಟು ಭಾಗವಹಿಸುವವರ ಸಂಖ್ಯೆಯನ್ನು ಕಾಣಬಹುದಾಗಿದೆ. ನೀವು 512 ಸದಸ್ಯರನ್ನು ಸೇರಿಸಬಹುದು ಎಂದು ನೀವು ನೋಡಿದರೆ, ನೀವು ಹೊಸ ಅಪ್ಡೇಟ್‌ ಅನ್ನು ಸ್ವೀಕರಿಸಿದ್ದೀರಿ ಎಂದರ್ಥ.

Best Mobiles in India

Read more about:
English summary
WhatsApp has now started rolling out a new do not disturb API for missed calls.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X