ವಾಟ್ಸಾಪ್‌ ವೆಬ್‌ ಆವೃತ್ತಿ ಬಳಸೋರಿಗೆ ಗುಡ್‌ ನ್ಯೂಸ್‌ ನೀಡಿದ ವಾಟ್ಸಾಪ್‌!

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಅನೇಕ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಕೋಡ್‌ ವೆರಿಫೈ ಎಂಬ ವೆಬ್‌ ಬ್ರೌಸರ್‌ ವಿಸ್ತರಣೆಯನ್ನು ಪರಿಚಯಿಸಿದೆ. ಇದು ಬಳಕೆದಾರರು ತಮ್ಮ ಸಿಸ್ಟಮ್‌ನಲ್ಲಿ ಬಳಸುತ್ತಿರುವ ವಾಟ್ಸಾಪ್‌ ವೆಬ್ ಆವೃತ್ತಿಯನ್ನು ದೃಢೀಕರಿಸಲಾಗಿದೆಯೇ ಎಂದು ಪರಿಶೀಲಿಸಲು ಅನುಮತಿಸುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಕೋಡ್‌ ವೆರಿಫೈ ಎಂಬ ವಿಸ್ತರಣೆಯನ್ನು ಪರಿಚಯಿಸಿದೆ. ಈ ಕೋಡ್‌ ವೆರಿಫೈ ವಿಸ್ತರಣೆಯು ಬಳಕೆದಾರರಿಗೆ ಸೇವೆ ಸಲ್ಲಿಸುತ್ತಿರುವ ವಾಟ್ಸಾಪ್‌ ವೆಬ್ ಕೋಡ್‌ನ ದೃಢೀಕರಣವನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ಅಲ್ಲದೆ ಬಳಕೆದಾರರ ಸಂದೇಶ ಕಳುಹಿಸುವಿಕೆಯ ಅನುಭವವು ಸುರಕ್ಷಿತವಾಗಿದೆಯೆ ಎಂದು ಪರಿಶೀಲನೆ ಮಾಡಲಿದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಿರುವ ಹೊಸ ಕೋಡ್‌ ವೆರಿಫೈ ವಿಸ್ತರಣೆಯ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ಕೋಡ್ ವೆರಿಫೈ ವಿಸ್ತರಣೆ ಫೀಚರ್ಸ್‌ ಮೂಲಕ ನೀವು ಬಳಸುತ್ತಿರುವ ವಾಟ್ಸಾಪ್‌ ವೆಬ್‌ ಆವೃತ್ತಿ ದೃಡೀಕರಿಸಲಾದ ಆವೃತ್ತಿ ಹೌದ ಅಲ್ಲವಾ ಅನ್ನೊದನ್ನ ತಿಳಿಯಲು ಸಹಾಯ ಮಾಡಲಿದೆ. ಈ ಫೀಚರ್ಸ್‌ ಅನ್ನು ಕ್ಲೌಡ್‌ಫ್ಲೇರ್, ವೆಬ್ ಮೂಲಸೌಕರ್ಯ ಮತ್ತು ಭದ್ರತಾ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಈ ಫೀಚರ್ಸ್‌ ಅನ್ನು ಕ್ರೋಮ್, ಫೈರ್‌ಫಾಕ್ಸ್ ಮತ್ತು ಎಡ್ಜ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ನಿಮ್ಮ ಮೊಬೈಲ್ ಅಥವಾ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ ನೀವು ವಾಟ್ಸಾಪ್‌ ವೆಬ್ ಅನ್ನು ತೆರೆದಾಗ ಕೋಡ್‌ನ ದೃಢೀಕರಣವನ್ನು ಪರಿಶೀಲಿಸಲು ಕೋಡ್ ವೆರಿಫೈ ವಿಸ್ತರಣೆಯು ಕಂಪ್ಲೀಟ್‌ ವೆಬ್‌ಪೇಜ್‌ನಲ್ಲಿನ ಸಂಪನ್ಮೂಲಗಳನ್ನು ಪರಿಶೀಲಿಸುತ್ತದೆ.

ವಾಟ್ಸಾಪ್‌ನ

ವಾಟ್ಸಾಪ್‌ನ ಮೂಲ ಆವೃತ್ತಿ ಬಿಟ್ಟು ದುರುದ್ದೇಶಪೂರಿತ ಆವೃತ್ತಿಗಳನ್ನು ತಿಳಿಯದೆ ಬಳಸುವ ಬಳಕೆದಾರರ ರಕ್ಷಿಸುವುದಕ್ಕೆ ಈ ಹೊಸ ಫೀಚರ್ಸ್‌ ಸಹಾಯ ಮಾಡಲಿದೆ. ಬಳಕೆದಾರರು ತಮ್ಮ ಬ್ರೌಸರ್‌ನಲ್ಲಿ ಪ್ರಮಾಣೀಕರಿಸಿದ ವಾಟ್ಸಾಪ್‌ ವೆಬ್ ಅನ್ನು ಬಳಸುತ್ತಿದ್ದಾರೆಯೇ ಎಂದು ತಿಳಿದುಕೊಳ್ಳಲು ಇದು ರಿಯಲ್‌-ಟೈಂ ಆಲರ್ಟ್‌ ಸಿಸ್ಟಂ ಆಗಿ ಕಾರ್ಯನಿರ್ವಹಿಸುತ್ತದೆ. ನಾವು ಕ್ಲೌಡ್‌ಫ್ಲೇರ್‌ಗೆ ವಾಟ್ಸಾಪ್‌ ವೆಬ್‌ನ ಜಾವಾಸ್ಕ್ರಿಪ್ಟ್ ಕೋಡ್‌ಗಾಗಿ ಫ್ಯಾಕ್ಟ್‌ ಕ್ರಿಪ್ಟೋಗ್ರಾಫಿಕ್ ಹ್ಯಾಶ್ ಮೂಲವನ್ನು ನೀಡಿದ್ದೇವೆ. ಯಾರಾದರೂ ಕೋಡ್ ವೆರಿಫೈ ಅನ್ನು ಬಳಸಿದಾಗ, ವಿಸ್ತರಣೆಯು ಸ್ವಯಂಚಾಲಿತವಾಗಿ ವಾಟ್ಸಾಪ್‌ ವೆಬ್‌ನಲ್ಲಿ ರನ್ ಆಗುವ ಕೋಡ್ ಅನ್ನು ವಾಟ್ಸಾಪ್‌ ಪರಿಶೀಲಿಸಿದ ಮತ್ತು ಕ್ಲೌಡ್‌ಫ್ಲೇರ್‌ನಲ್ಲಿ ಪ್ರಕಟಿಸಿದ ಕೋಡ್‌ನ ಆವೃತ್ತಿಯೊಂದಿಗೆ ಹೋಲಿಸುತ್ತದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ವಿಸ್ತರಣೆಯ ಮೂಲಕ ಕೋಡ್ ಅನ್ನು ಪರಿಶೀಲಿಸಿದ ನಂತರ, ಅವರು ಬಳಸುತ್ತಿರುವ ವೆಬ್ ಕ್ಲೈಂಟ್ ಅನ್ನು ದೃಢೀಕರಿಸಲಾಗಿದೆಯೇ ಎಂದು ಅದು ಬಳಕೆದಾರರಿಗೆ ತಿಳಿಸುತ್ತದೆ.

ವಾಟ್ಸಾಪ್‌

ನಿಮ್ಮ ಬ್ರೌಸರ್‌ನಲ್ಲಿ ನೀವು ವಾಟ್ಸಾಪ್‌ ವೆಬ್ ಅನ್ನು ಬಳಸಿದಾಗ ಕೋಡ್ ವೆರಿಫೈ ವಿಸ್ತರಣೆಯು ಸ್ವಯಂಚಾಲಿತವಾಗಿ ರನ್ ಆಗುತ್ತದೆ. ನಿಮ್ಮ ವಾಟ್ಸಾಪ್‌ ವೆಬ್‌ನ ಕೋಡ್ ಅನ್ನು ಸಂಪೂರ್ಣವಾಗಿ ಮೌಲ್ಯೀಕರಿಸಲಾಗಿದೆ ಎಂದು ಪ್ರತಿಬಿಂಬಿಸಲು ನಿಮ್ಮ ಬ್ರೌಸರ್‌ನ ಟೂಲ್‌ಬಾರ್‌ಗೆ ಪಿನ್ ಮಾಡಿದಾಗ ಅದು ಗ್ರೀನ್‌‌ಜೋನ್‌ನಲ್ಲಿ ಚೆಕ್‌ಮಾರ್ಕ್ ಅನ್ನು ತೋರಿಸುತ್ತದೆ. ಒಂದು ವೇಳೆ ನಿಮ್ಮ ವಾಟ್ಸಾಪ್‌ ಅಪ್ಲಿಕೇಶನ್‌ನ ವೆಬ್ ಕ್ಲೈಂಟ್‌ನಲ್ಲಿ ನಿಮಗೆ ಒದಗಿಸಲಾದ ಕೋಡ್ ಅನ್ನು ಮೌಲ್ಯೀಕರಿಸಲು ವಿಸ್ತರಣೆಯು ಸಾಧ್ಯವಾಗದಿದ್ದಲ್ಲಿ, ನೀವು ಮೂರು ವಿಭಿನ್ನ ಸಂದೇಶಗಳನ್ನು ಪಡೆಯುತ್ತೀರಿ ಎಂದು ಹೇಳಲಾಗಿದೆ. ಆ ಮೂರು ಸಂದೇಶಗಳ ವಿವರ ಇಲ್ಲಿದೆ.

ನೆಟ್‌ವರ್ಕ್

* ನೆಟ್‌ವರ್ಕ್ ಸಮಯ ಮೀರಿದೆ: ನಿಮ್ಮ ನೆಟ್‌ವರ್ಕ್ ಸಮಯ ಮೀರಿರುವುದರಿಂದ ನಿಮ್ಮ ಪುಟವನ್ನು ಮೌಲ್ಯೀಕರಿಸಲಾಗದಿದ್ದರೆ, ನಿಮ್ಮ ಕೋಡ್ ವೆರಿಫೈ ವಿಸ್ತರಣೆಯು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಆರೇಂಜ್‌ ಸರ್ಕಲ್‌ ಅನ್ನು ಪ್ರದರ್ಶಿಸುತ್ತದೆ.
* ಸಂಭವನೀಯ ಅಪಾಯವನ್ನು ಪತ್ತೆಹಚ್ಚಲಾಗಿದೆ: ನಿಮ್ಮ ಒಂದು ಅಥವಾ ಹೆಚ್ಚಿನ ವಿಸ್ತರಣೆಗಳು ಪೇಜ್‌ ಪರಿಶೀಲಿಸುವ ಸಾಮರ್ಥ್ಯದೊಂದಿಗೆ ಮಧ್ಯಪ್ರವೇಶಿಸುತ್ತಿದ್ದರೆ, ನಿಮ್ಮ ಕೋಡ್ ಪರಿಶೀಲನೆ ವಿಸ್ತರಣೆಯು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಆರೇಂಜ್‌ ಸರ್ಕಲ್‌ ಅನ್ನು ಪ್ರದರ್ಶಿಸುತ್ತದೆ.
* ಮೌಲ್ಯೀಕರಣ ವೈಫಲ್ಯ: ವಾಟ್ಸಾಪ್‌ ವೆಬ್‌ ಅನ್ನು ರನ್ ಮಾಡಲು ನೀವು ಬಳಸುತ್ತಿರುವ ಕೋಡ್ ಎಲ್ಲರೂ ಬಳಸುತ್ತಿರುವ ಕೋಡ್‌ನಂತೆಯೇ ಇಲ್ಲ ಎಂದು ವಿಸ್ತರಣೆಯು ಪತ್ತೆಮಾಡಿದರೆ. ಕೋಡ್ ಪರಿಶೀಲನೆ ಐಕಾನ್ ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಆಶ್ಚರ್ಯಸೂಚಕ ಚಿಹ್ನೆಯನ್ನು ತೋರಿಸುತ್ತದೆ.

ಟೂಲ್‌ಬಾರ್‌ನಲ್ಲಿರುವ

ನಿಮ್ಮ ಟೂಲ್‌ಬಾರ್‌ನಲ್ಲಿರುವ ಕೋಡ್ ವೆರಿಫೈ ಎಕ್ಸ್‌ಟೆನ್ಶನ್ ಐಕಾನ್ ಹಸಿರು, ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿರುವಾಗ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮೌಲ್ಯೀಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಒಂದು ವೇಳೆ ಈ ವೆಬ್‌ಕೋಡ್‌ನಲ್ಲಿ ಸಮಸ್ಯೆಯಿದ್ದರೆ, ನೀವು ದೃಢೀಕರಣ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮೋರ್‌ ಬಟನ್‌ ಟ್ಯಾಪ್‌ ಮಾಡಬೇಕಾಗುತ್ತದೆ. ಅಲ್ಲದೆ ನೀವು ಸಮಸ್ಯೆಯನ್ನು ಮತ್ತಷ್ಟು ಅಳವಾಗಿ ತಿಳಿದುಕೊಳ್ಳಲು ಬಯಸಿದರೆ ಮೂಲ ಕೋಡ್ ಅನ್ನು ಡೌನ್‌ಲೋಡ್ ಮಾಡಬಹುದು.

ಬಳಕೆದಾರರ

ಇನ್ನು ಈ ಹೊಸ ಎಕ್ಸ್‌ಟೆನ್ಶನ್ ಬಳಕೆದಾರರ ಯಾವುದೇ ಡೇಟಾ, ಮೆಟಾಡೇಟಾವನ್ನು ಲಾಗ್ ಮಾಡುವುದಿಲ್ಲ. ಅಲ್ಲದೆ ವಾಟ್ಸಾಪ್‌ನೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು FAQ ಪೇಜ್‌ನಲ್ಲಿ ವಾಟ್ಸಾಪ್‌‌ ಹೇಳಿಕೊಂಡಿದೆ. ಅಲ್ಲದೆ ಯಾರಾದರೂ ವಿಸ್ತರಣೆಯನ್ನು ಡೌನ್‌ಲೋಡ್ ಮಾಡಿದ್ದಾರೆಯೇ ಎಂದು ವಾಟ್ಸಾಫ್‌ ಕೂಡ ತಿಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ ಎಂದು ವಾಟ್ಸಾಪ್‌ ಭರವಸೆ ನೀಡಿದೆ. ಪ್ರಸ್ತುತ ದಿನಗಳಲ್ಲಿ ನಿಮ್ಮ ಬ್ರೌಸರ್‌ನಿಂದ ಅನುಮಾನಾಸ್ಪದ ವೆಬ್‌ಪೇಜ್‌ ಅನ್ನು ಭೇಟಿ ಮಾಡಿದರೆ ಕೋಡ್ ಅನ್ನು ಮೌಲ್ಯೀಕರಿಸಲು ಮತ್ತು ಯಾವುದೇ ಟ್ಯಾಂಪರಿಂಗ್ ಸಮಸ್ಯೆಗಳ ಸಂದರ್ಭದಲ್ಲಿ ಬಳಕೆದಾರರಿಗೆ ತಿಳಿಸಲು ವಾಟ್ಸಾಪ್‌ ಸ್ಥಳೀಯ ವೆಬ್ ವಿಸ್ತರಣೆಯನ್ನು ಪರಿಚಯಿಸಿರುವುದು ನಿಮಗೆ ಅನುಕೂಲಕರವಾಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ ಪ್ರತಿಭಾರಿಯೂ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಅಭಿವೃದ್ದಿಪಡಿಸುತ್ತಾ ಬಂದಿದೆ. ಆದ್ದರಿಂದ, ಬಳಕೆದಾರರು ಯಾವಾಗಲೂ ಯಾವುದೇ ತೊಂದರೆದಾಯಕ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಲು ಮತ್ತು ಆನ್‌ಲೈನ್‌ನಲ್ಲಿ ಅನುಮಾನಾಸ್ಪದ ಜನರೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸಲು ಈ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದಲ್ಲದೆ ಅನುಮಾನಾಸ್ಪದ ಮತ್ತು ಸ್ಪ್ಯಾಮ್ ಖಾತೆಗಳನ್ನು ವರದಿ ಮಾಡಲು ಸಹಾಯ ಮಾಡುವ ಕಾರ್ಯವಿಧಾನವನ್ನು ವಾಟ್ಸಾಪ್‌ ನೀಡಿದೆ ಎಂದು ಹೇಳಲಾಗಿದೆ.

Best Mobiles in India

Read more about:
English summary
WhatsApp on Friday introduced a Web browser extension called Code Verify that lets users check whether the WhatsApp Web version they are using on their system is authenticated.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X