ವಾಟ್ಸಾಪ್‌ನಲ್ಲಿ ಬಳಕೆದಾರರ ಮುಜುಗರವನ್ನು ತಪ್ಪಿಸಲಿದೆ ಈ ಹೊಸ ಫೀಚರ್ಸ್‌!

|

ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಸಾಕಷ್ಟು ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಬಳಕೆದಾರರು ಪ್ರತಿನಿತ್ಯ ಬಯಸುವ ಮತ್ತೊಂದು ಅಚ್ಚರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇಂತಹದೊಂದು ಫೀಚರ್ಸ್‌ ಇರಬೇಕಿತ್ತು ಎಂದು ಬಯಸುವ ಬಳಕೆದಾರರಿಗೆ ಇದು ಖಂಡಿತ ಉಪಯುಕ್ತವಾಗಲಿದೆ. ಸದ್ಯ ವಾಟ್ಸಾಪ್‌ 'ಆಕ್ಸಿಡೆಂಟಲ್‌ ಡಿಲೀಟ್‌' ಫೀಚರ್ಸ್‌ ಅನ್ನು ಪರಿಚಯಿಸಿದೆ. ಡಿಲೀಟ್‌ ಫಾರ್‌ ಎವರಿಒನ್‌ ಮಾಡುವ ಬದಲು ನೀವು ಆಕಸ್ಮಿಕವಾಗಿ ಡಿಲೀಟ್‌ ಫಾರ್‌ ಮಿ ಆಯ್ಕೆ ಬಳಸಿದಲ್ಲಿ ಈ ಫೀಚರ್ಸ್‌ ಉಪಯೋಗಕ್ಕೆ ಬರಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರಿಗೆ ಆಕ್ಸಿಡೆಂಟಲ್‌ ಫೀಚರ್ಸ್‌ ಪರಿಚಯಿಸಿದೆ. ಇದು ಹೆಸರೇ ಸೂಚಿಸುವಂತೆ ಆಕಸ್ಮಿಕವಾಗಿ ಆಗುವ ಅಚಾತುರ್ಯಗಳನ್ನು ತಪ್ಪಿಸುವ ಹೊಸ ಅಯ್ಕೆ ಇದಾಗಿದೆ. ಇದರಿಂದ ನಿಮಗೆ ಎದುರಾಗುವ ಮುಜುಗರವನ್ನು ತಪ್ಪಿಸಲಿದೆ. ಹಾಗಾದ್ರೆ ಈ ಹೊಸ ಆಯ್ಕೆಯಿಂದ ನಿಮಗೆ ಆಗುವ ಅನುಕೂಲಗಳೇನು? ಈ ಫೀಚರ್ಸ್‌ ಎಲ್ಲರಿಗೂ ಅವಶ್ಯಕ ಎನಿಸಲಿದೆ ಯಾಕೆ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ಮೆಡಾ ಒಡೆತನದ ವಾಟ್ಸಾಪ್‌ ಪ್ರತಿಭಾರಿಯೂ ಬಳಕೆದಾರರ ಅನುಕೂಲಕ್ಕಾಗಿ ವಿಶೇಷ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅದರಂತೆ ಇದೀಗ ಪರಿಚಯಿಸಿರುವ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ಸಾಕಷ್ಟು ಅನುಕೂಲಕರವಾಗಲಿದೆ. ನೀವು ತಪ್ಪಾಗಿ ಕಳುಹಿಸಿದ ಸಂದೇಶವನ್ನು ಡಿಲೀಟ್‌ ಮಾಡುವಾಗ ಡಿಲೀಟ್‌ ಫಾರ್‌ ಎವರಿವನ್‌ ಬಳಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಆಕಸ್ಮಿಕವಾಗಿ ಡಿಲೀಟ್‌ ಫಾರ್‌ ಮಿ ಬಳಸಿಬಿಡುತ್ತೆವೆ. ಅಂತಹ ಸನ್ನಿವೇಶದಲ್ಲಿ ಸಾಕಷ್ಟು ಮುಜುಗರ ಎದುರಿಸುವುದು ಸಾಮಾನ್ಯ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 'ಆಕ್ಸಿಡೆಂಟಲ್ ಡಿಲೀಟ್' ಫೀಚರ್ಸ್‌ ಸಹಾಯ ಮಾಡಲಿದೆ.

ಡಿಲೀಟ್

ನೀವು ಡಿಲೀಟ್‌ ಫಾರ್‌ ಮಿ ಮೂಲಕ ಸಂದೇಶ ಡಿಲೀಟ್‌ ಮಾಡಿದರೆ ಆಕ್ಸಿಡೆಂಟಲ್‌ ಡಿಲೀಟ್‌ ಫೀಚರ್ಸ್‌ ನಿಮ್ಮ ರಕ್ಷಣೆಗೆ ಬರಲಿದೆ. ಈ ಫೀಚರ್ಸ್‌ ನಿಮಗೆ ಒಂದು ಸ್ಮಾಲ್‌ ವಿಂಡೋದಲ್ಲಿ ನಿಮ್ಮ ಡಿಲೀಟ್‌ ಫಾರ್‌ ಮಿ ಸಂದೇಶಕ್ಕೆ ಹಿಂತಿರುಗಲು ಅವಕಾಶ ನೀಡಲಿದೆ. ಆಗ ಆ ಸಂದೇಶವನ್ನು ಡಿಲೀಟ್‌ ಫಾರ್‌ ಎವರಿವನ್‌ ಮೂಲಕ ಡಿಲೀಟ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಆಕ್ಸಿಡೆಂಟಲ್‌ ಫೀಚರ್ಸ್‌ ಬಳಕೆದಾರರಿಗೆ ಐದು ಸೆಕೆಂಡುಗಳ ವಿಂಡೋವನ್ನು ಒದಗಿಸಲಿದೆ. ಇನ್ನು ಆ್ಯಕ್ಸಿಡೆಂಟಲ್ ಡಿಲೀಟ್ ಫೀಚರ್ಸ್‌ ಎಲ್ಲಾ ಬಳಕೆದಾರರಿಗೆ ಆಂಡ್ರಾಯ್ಡ್‌ ಮತ್ತು ಐಫೋನ್‌ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಇನ್ನು ಅನೇಕ ಉಪಯುಕ್ತ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ವಾಟ್ಸಾಪ್‌ ತನ್ನ iOS 22.24.0.79 ಅಪ್‌ಡೇಟ್‌ನಲ್ಲಿ ಹೊಸ ಪಿಕ್ಚರ್‌ ಇನ್‌ ಪಿಕ್ಚರ್‌ ಮೋಡ್‌ ಪರಿಚಯಿಸಿದೆ. ಇದು ಐಒಎಸ್‌ ಬೀಟಾ ಪರೀಕ್ಷಕರು ಮಾತ್ರ ಪ್ರವೇಶಿಸಲು ಅವಕಾಶ ನೀಡಿದೆ. ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಈಗಾಗಲೇ ವೀಡಿಯೊ ಕಾಲ್‌ನಲ್ಲಿ ಅನೇಕ ಫೀಚರ್ಸ್‌ ಪರಿಚಯಿಸಿರುವ ವಾಟ್ಸಾಪ್‌ ಪಿಕ್ಚರ್‌ ಇನ್‌ ಪಿಕ್ಚರ್‌ ಮೋಡ್‌ ಮೂಲಕ ಇನ್ನಷ್ಟು ಉತ್ತಮ ಅನುಭವ ನೀಡಲಯ ಮುಂದಾಗಿದೆ. ಬಳಕೆದಾರರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ವೀಡಿಯೊ ಕರೆ ವೀಕ್ಷಣೆಯನ್ನು ಆಫ್ ಮಾಡಲು ಅನುಕೂಲಮಾಡಿಕೊಡಲಿದೆ.

ವಾಟ್ಸಾಪ್‌

ಇದರೊಂದಿಗೆ ವಾಟ್ಸಾಪ್‌ ಡಿಸ್‌ಅಪಿಯರಿಂಗ್‌ ಮೆಸೇಜ್‌ಗಳ ಶಾರ್ಟ್‌ಕಟ್‌ ಬಟನ್‌ ಅಡಿಯಲ್ಲಿ ಹೆಚ್ಚಿನ ಆಯ್ಕೆ ನೀಡಲು ಮುಂದಾಗಿದೆ. ಇದರೊಂದಿಗೆ ವಾಟ್ಸಾಪ್‌ ಮೀಡಿಯಾ ಫಾರ್ವರ್ಡ್‌ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಮಾಡಿದೆ. ಇದು ಐಒಎಸ್‌ ಬಳಕೆದಾರರಿಗೆ ಅನ್ವಯವಾಗಲಿದ್ದು, ಇದರಿಂದ ಐಒಎಸ್‌ ಬಳಕೆದಾರರು ಯಾವುದೇ ಚಿತ್ರ ಮತ್ತು ವೀಡಿಯವನ್ನು ಕ್ಯಾಪ್ಶನ್‌ನೊಂದಿಗೆ ಫಾರ್ವರ್ಡ್‌ ಮಾಡಲು ಅನುಮತಿಸಲಿದೆ. ಇದರಿಂದ ನೀವು ಯಾವುದೇ ಮೀಡಿಯಾ ಫೈಲ್‌ ಫಾರ್ವರ್ಡ್‌ ಮಾಡಲು ಪ್ರಯತ್ನಿಸಿದಾಗ ಅಪ್ಲಿಕೇಶನ್‌ ಕೆಳಭಾಗದಲ್ಲಿ ಹೊಸ ಕ್ಯಾಪ್ಶನ್‌ ಬಾಕ್ಸ್ ಅನ್ನು ತೋರಿಸಲಿದೆ.

Best Mobiles in India

English summary
WhatsApp introduced the new ‘Accidental Delete’ feature! Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X