ವಾಟ್ಸಾಪ್‌ಪೇ ಬಳಸುವವರಿಗೆ ಸಿಗಲಿದೆ ಕ್ಯಾಶ್‌ಬ್ಯಾಕ್‌ ಆಫರ್‌!

|

ಪ್ರಸ್ತುತ ದಿನಗಳಲ್ಲಿ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದಕ್ಕಾಗಿ ವಾಟ್ಸಾಪ್‌ ಕೂಡ ತನ್ನ ಬಳಕೆದಾರರಿಗೆ ವಾಟ್ಸಾಪ್‌ ಪೇಯನ್ನು ಪರಿಚಯಿಸಿತ್ತು. ವಾಟ್ಸಾಪ್‌ ಪೇ ಯುಪಿಐ ಆಧಾರಿತ ವ್ಯವಸ್ಥೆಯಾಗಿದ್ದು ಹಣ ವರ್ಗಾವಣೆ ಮಾಡುವುದಕ್ಕೆ ಅವಕಾಶ ನೀಡಲಿದೆ. ವಾಟ್ಸಾಪ್‌ನಲ್ಲಿ ವಾಟ್ಸಾಪ್‌ ಪೇ ಮಾಡುವುದಕ್ಕೆ ಅವಕಾಶ ನೀಡಿದೆ. ಇದೇ ಕಾರಣಕ್ಕೆ ಭಾರತದಾದ್ಯಂತ 100 ಮಿಲಿಯನ್ ಬಳಕೆದಾರರಿಗೆ ಪಾವತಿ ಸೌಲಭ್ಯವನ್ನು ತಲುಪಿಸುವ ಪ್ರಯತ್ನಕ್ಕೆ ವಾಟ್ಸಾಪ್‌ ಮುಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ವಾಟ್ಸಾಪ್‌ ಪೇ ಬಳಸುವವರ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಪ್ರಯತ್ನದಲ್ಲಿ ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಹಳ್ಳಿಯನ್ನು ಕೂಡ ದತ್ತು ತೆಗೆದುಕೊಂಡು ಸಾಕಷ್ಟು ಪ್ರಚಾರವನ್ನು ಕೂಡ ಮಾಡಿದೆ. ಸದ್ಯ ಇದೀಗ ವಾಟ್ಸಾಪ್‌ ಪೇ ಬಳಸುವವರಿಗೆ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ನೀಡಲು ಮುಂದಾಗಿದೆ. ವಾಟ್ಸಾಪ್‌ ಪೇ ಯನ್ನು ನೀವು ಬಳಸಿದರೆ ನಿಮಗೆ ಕ್ಯಾಶ್‌ಬ್ಯಾಕ್ ಆಯ್ಕೆಯನ್ನು ನೀಡಲಿದೆ. ಹಾಗಾದ್ರೆ ವಾಟ್ಸಾಪ್‌ಪೇನಲ್ಲಿ ಕ್ಯಾಶ್‌ಬ್ಯಾಕ್‌ ಅನ್ನು ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಪೇ

ವಾಟ್ಸಾಪ್‌ ಪೇ ಮೂಲಕ ಹಣ ಪಾವತಿ ಮಾಡುವ ಬಳಕೆದಾರರಿಗೆ ಹಂತ ಹಂತವಾಗಿ ಕ್ಯಾಶ್‌ಬ್ಯಾಕ್‌ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಮಾದರಿಯ ಅಭಿಯಾನವನ್ನು ನಡೆಸಲು ವಾಟ್ಸಾಪ್‌ ಮುಂದಾಗಿದೆ. ಸುರಕ್ಷಿತ ಮತ್ತು ಬಳಸಲು ಸುಲಭವಾದ ಡಿಜಿಟಲ್ ಪಾವತಿಗಳನ್ನು ನೀಡುವುದು ನಮ್ಮ ಉದ್ದೇಶ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. 500 ಮಿಲಿಯನ್ ಭಾರತೀಯರನ್ನು ಡಿಜಿಟಲ್‌ಗೆ ತರಲು ನಮ್ಮ ವ್ಯಾಪಕ ಪ್ರಯತ್ನಗಳ ಭಾಗವಾಗಿ ನಾವು ಕ್ಯಾಶ್‌ಬ್ಯಾಕ್‌ ನೀಡಲು ಮುಂದಾಗಿದ್ದೇವೆ ಎಂದು ವಾಟ್ಸಾಪ್‌ ಹೇಳಿದೆ. ಇನ್ನು ಈ ಕ್ಯಾಶ್‌ಬ್ಯಾಕ್ ಆಫರ್‌ ವಹಿವಾಟಿನ ಮೊತ್ತದಿಂದ ಸೀಮಿತವಾಗಿಲ್ಲ. ಏಕೆಂದರೆ 1 ರೂಪಾಯಿಗಿಂತ ಕಡಿಮೆ ಹಣ ಪಾವತಿಸಿದರು ಕೂಡ ನಿಮಗೆ ಕ್ಯಾಶ್‌ಬ್ಯಾಕ್‌ ದೊರೆಯಲಿದೆ.

ವಾಟ್ಸಾಪ್‌ನಲ್ಲಿ ಕ್ಯಾಶ್‌ಬ್ಯಾಕ್‌ ಪಡೆಯುವುದು ಹೇಗೆ?

ವಾಟ್ಸಾಪ್‌ನಲ್ಲಿ ಕ್ಯಾಶ್‌ಬ್ಯಾಕ್‌ ಪಡೆಯುವುದು ಹೇಗೆ?

ವಾಟ್ಸಾಪ್‌ ಪೇನಲ್ಲಿ ನೀವು ಕ್ಯಾಶ್‌ಬ್ಯಾಕ್ ಸ್ವೀಕರಿಸ ಬೇಕಾದರೆ ಮೊದಲಿಗೆ ಭಾರತದಲ್ಲಿ ವಾಟ್ಸಾಪ್‌ ಪೇ ಬಳಸುವ ನಿಮ್ಮ ಕಂಟ್ಯಾಕ್ಟ್‌ನಲ್ಲಿರುವ ಸಂಖ್ಯೆಗೆ ಹಣವನ್ನು ಕಳುಹಿಸಬೇಕಾಗುತ್ತದೆ. ನಿಮ್ಮ ಕಂಟ್ಯಾಕ್ಟ್‌ನಲ್ಲಿರುವ ಸಂಖ್ಯೆ ವಾಟ್ಸಾಪ್‌ ಪೇನಲ್ಲಿ ನೋಂದಾಯಿಸಿದ್ದರೆ, ನೀವು ಅವರ ಹೆಸರಿನ ಮುಂದೆ ಗಿಫ್ಟ್‌ ಐಕಾನ್ ಅನ್ನು ಕಾಣಬಹುದು. ನಿಮ್ಮ ಸಂಪರ್ಕದ ಹೆಸರಿನ ಮುಂದೆ ಐಕಾನ್ ಕಾಣಿಸದಿದ್ದರೆ ನೀವು ಅವರನ್ನು ವಾಟ್ಸಾಪ್‌ಪೇನಲ್ಲಿ ಸೇರಲು ಅವರನ್ನು ಇನ್ವೈಟ್‌ ಮಾಡಬೇಕಾಗುತ್ತದೆ.

ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸುವುದು ಹೇಗೆ?

ಇತರ ಬಳಕೆದಾರರು ವಾಟ್ಸಾಪ್ ಅಥವಾ ವಾಟ್ಸಾಪ್ ಹೊರಗೆ ಕಳುಹಿಸಿದ ಹಣವನ್ನು ಸ್ವೀಕರಿಸುವುದು ಸುಲಭ. ವಾಟ್ಸಾಪ್ ಪೇ ಅನ್ನು ಬಳಸುವ ಯಾರಿಂದಲೂ ನೀವು ಹಣವನ್ನು ಪಡೆಯಬಹುದು, ಅವರು ಯುಪಿಐ ಅನ್ನು ಆಧರಿಸಿದ ಅಪ್ಲಿಕೇಶನ್ ಅನ್ನು ವಾಟ್ಸಾಪ್‌ನಂತೆಯೇ ಬಳಸುತ್ತಿರಬೇಕು. ಪಾವತಿಗಳಿಗಾಗಿ ಯುಪಿಐ ಬಳಸುವುದರ ಒಂದು ದೊಡ್ಡ ಅನುಕೂಲವೆಂದರೆ ಬಳಕೆದಾರರು ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸಿದರೂ ಪರಸ್ಪರ ಹಣವನ್ನು ಕಳುಹಿಸಬಹುದು. ಇದರರ್ಥ ಬಳಕೆದಾರರು Google Pay ನಲ್ಲಿದ್ದರೂ ಸಹ, ಅವರು ನಿಮಗೆ WhatsApp Pay ನಲ್ಲಿ ಹಣವನ್ನು ಕಳುಹಿಸಬಹುದು. ಇದೇ ರೀತಿಯಾಗಿ, ಫೋನ್‌ಪೇ ಅನ್ನು ಮಾತ್ರ ಬಳಸುವ ಬಳಕೆದಾರರಿಗೆ ನೀವು ವಾಟ್ಸಾಪ್ ಪೇ ನಿಂದ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ.

ವಾಟ್ಸಾಪ್ ಪಾವತಿ ಎಂದರೇನು?

ವಾಟ್ಸಾಪ್ ಪಾವತಿ ಎಂದರೇನು?

ಗೂಗಲ್ ಪೇ, ಫೋನ್‌ಪೇ, ಅಮೆಜಾನ್ ಪೇ ಮತ್ತು ಇತರ ಅಪ್ಲಿಕೇಶನ್‌ಗಳಂತಹ ಇತರ ಜನಪ್ರಿಯ ಪಾವತಿ ಅಪ್ಲಿಕೇಶನ್‌ಗಳಂತೆಯೇ, ವಾಟ್ಸಾಪ್ ಪೇ ಕೂಡ ಯುಪಿಐ ಅನ್ನು ಬಳಸುತ್ತದೆ. ವಾಟ್ಸಾಪ್‌ ಬಳಕೆದಾರರು ತಮ್ಮ ಹೊಂದಾಣಿಕೆಯ ಬ್ಯಾಂಕ್ ಖಾತೆಗಳನ್ನು ವಾಟ್ಸಾಪ್ ಪೇಗೆ ಸಂಪರ್ಕಿಸಬಹುದು. ಹಣವನ್ನು ತಮ್ಮ ಸಂಪರ್ಕಗಳಿಗೆ ಅಥವಾ ಚಿಲ್ಲರೆ ವ್ಯಾಪಾರಗಳಿಗೆ ವರ್ಗಾಯಿಸಲು ಪ್ರಾರಂಭಿಸಬಹುದು. ಈ ಸೇವೆಯು ಎಚ್‌ಡಿಎಫ್‌ಸಿ, ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಂತಹ ಎಲ್ಲಾ ಪ್ರಮುಖ ಬ್ಯಾಂಕುಗಳನ್ನು ಬೆಂಬಲಿಸುತ್ತದೆ.

Best Mobiles in India

Read more about:
English summary
Whatsapp introduces cashback on UPI payments

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X