ಬಳಕೆದಾರರಿಗೆ ಹೊಸ ಸರ್ಚ್‌ ಬಟನ್‌ ಪರಿಚಯಿಸಿದ ವಾಟ್ಸಾಪ್‌!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಆಕರ್ಷಕ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಹೊಸ ಸರ್ಚ್‌ ಬಟನ್‌ ಪರಿಚಯಿಸಲು ಮುಂದಾಗಿದೆ. ಈ ಸರ್ಚ್‌ ಬಟನ್‌ ಮೂಲಕ ನೀವು ಚಾಟ್‌ನಲ್ಲಿ ನಿರ್ದಿಷ್ಟ ಸಂದೇಶಗಳನ್ನು ಸರ್ಚ್‌ ಮಾಡಲು ಸಾಧ್ಯವಾಗಲಿದೆ. ಈ ಫೀಚರ್ಸ್‌ ಈಗಾಗಲೇ ಲಭ್ಯವಿದೆ. ಆದರೆ ಈ ಬಟನ್‌ ಅನ್ನು ಹುಡುಕುವುದು ಸುಲಭಗೊಳಿಸಲು ಮತ್ತೊಂದು ಸ್ಥಳದಲ್ಲಿ ಹೊಸ ಸರ್ಚ್‌ ಬಟನ್‌ ಪರಿಚಯಿಸಲಾಗುತ್ತಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಹೊಸ ಸರ್ಚ್‌ ಬಟನ್‌ ಪರಿಚಯಿಸಿದೆ. ಈ ಹೊಸ ಸರ್ಚ್‌ ಬಟನ್‌ ಮೆಸೇಜ್‌ ಶಾರ್ಟ್‌ಕಟ್ ಅನ್ನು ವಾಟ್ಸಾಪ್‌ ಬೀಟಾ ಆವೃತ್ತಿ 2.22.6.3 ರಲ್ಲಿ ಗುರುತಿಸಲಾಗಿದೆ. ಇದರಿಂದ ಆಂಡ್ರಾಯ್ಡ್ ಬಳಕೆದಾರರು ಈಗ ತಮ್ಮ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಹುಡುಕಲು ಹೆಚ್ಚುವರಿ ಸರ್ಚ್‌ ಬಟನ್‌ ಆಯ್ಕೆಯನ್ನು ಪಡೆಯಲಿದ್ದಾರೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಬಟನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಹೊಸ ಸರ್ಚ್‌ ಬಟನ್‌ ಆಯ್ಕೆ ಪಡೆಯಲಿದ್ದಾರೆ. ಇದರಿಂದ ತಮ್ಮ ವೈಯಕ್ತಿಕ ಸಂಪರ್ಕಗಳು ಮತ್ತು ಗುಂಪು ಚಾಟ್‌ಗಳ ಮಾಹಿತಿ ಪುಟದಲ್ಲಿ ಈ ಸರ್ಚ್‌ ಆಯ್ಕೆಯನ್ನು ಕಾಣಬಹುದಾಗಿದೆ. ಪ್ರಸ್ತುತ, ಈ ಫೀಚರ್ಸ್‌ ಅನ್ನು ಬೀಟಾ ಪರೀಕ್ಷಕರ ಗ್ರೂಪ್‌ನಲ್ಲಿ ಪರಿಚಯಿಸಲಾಗುತ್ತಿದೆ. ಇನ್ನು ಈ ಸರ್ಚ್‌ ಬಟನ್‌ ಮೂಲಕ ನೀವು ನಿರ್ಧಿಷ್ಟ ಮೆಸೇಜ್‌ಗಳನ್ನು ಸರ್ಚ್‌ ಮಾಡುವುದು ಸುಲಭವಾಗಲಿದೆ. ಇದು ಒಂದು ರೀತಿಯಲ್ಲಿ ಶಾರ್ಟ್‌ಕಟ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಆಂಡ್ರಾಯ್ಡ್‌

ಪ್ರಸ್ತುತ ವಾಟ್ಸಾಪ್‌ನಲ್ಲಿ ಆಂಡ್ರಾಯ್ಡ್‌ ಬಳಕೆದಾರರು ವೈಯಕ್ತಿಕ ಚಾಟ್‌ಗಳಿಗೆ ಹೋಗಿ ಮತ್ತು "ಸರ್ಚ್‌" ಮಾಡಲು ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ಸಂದೇಶಗಳನ್ನು ಮಾತ್ರ ಹುಡುಕಬಹುದು. ಆದರೆ ಈ ಹೊಸ ಬಟನ್‌ ಸೇರ್ಪಡೆಯಾದರೆ ಸರ್ಚ್‌ ಮಾಡುವುದು ಸಾಕಷ್ಟು ಸುಲಭವಾಗಲಿದೆ. ಇನ್ನು ವಾಟ್ಸಾಪ್‌ ಇತ್ತೀಚೆಗೆ ಹೊಸ ವಾಯ್ಸ್‌ ಕಾಲ್‌ ಇಂಟರ್ಫೇಸ್ ಅನ್ನು ಪ್ರಾರಂಭಿಸಿದೆ. ವಾಯ್ಸ್‌ ಮೆಸೇಜ್‌ ಗಳನ್ನು ವಿರಾಮಗೊಳಿಸುವ ಮತ್ತು ರೆಕಾರ್ಡಿಂಗ್ ಮುಂದುವರಿಸುವ ಆಯ್ಕೆಯನ್ನು ಕೂಡ ಈಗಾಗಲೇ ಪರಿಚಯಿಸಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಹೊಸ ಬೀಟಾ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಪರಿಚಯಿಸಿದೆ. ಇದು ಹೆಸರೇ ಸೂಚಿಸುವಂತೆ ವಾಟ್ಸಾಪ್‌ ಮೆಸೇಜ್‌ಗಳಿಗೆ ಎಮೋಜಿಗಳ ಮೂಲಕ ರಿಯಾಕ್ಷನ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಬಳಕೆದಾರರು ಸ್ವೀಕರಿಸುವ ಸಂದೇಶಕ್ಕೆ ಎಮೋಜಿ ಮೂಲಕ ತ್ವರಿತವಾಗಿ ರಿಯಾಕ್ಷನ್‌ ಮಾಡಲು ಅನುಮತಿಸುತ್ತದೆ. ಈಗಾಗಲೇ ಮೆಟಾ ಒಡೆತನದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ಗಳು ಈ ಫೀಚರ್ಸ್‌ ಅನ್ನು ಬೆಂಬಲಿಸುತ್ತವೆ. ಈ ಹೊಸ ಫೀಚರ್ಸ್‌ ಇದೀಗ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡರಲ್ಲೂ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಇನ್ನು ಈ ಫೀಚರ್ಸ್‌ ಹೇಗಿರಲಿದೆ ಅನ್ನೊದ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಂತೆ ಸಂದೇಶದ ಮೇಲೆ ಕರ್ಸರ್ ಅನ್ನು ಚಲಿಸುವಾಗ ಮಾತ್ರ ಈ ಬಟನ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಪ್ರತಿಕ್ರಿಯೆ ಬಟನ್ ಅನ್ನು ಕ್ಲಿಕ್ ಮಾಡುವುದರಿಂದ ಸಂದೇಶಕ್ಕೆ ಪ್ರತಿಕ್ರಿಯಿಸಲು ಆಯ್ಕೆ ಮಾಡಬಹುದಾದ ಆರು ಎಮೋಜಿಗಳನ್ನು ಸತತವಾಗಿ ಪ್ರದರ್ಶಿಸಲಾಗುತ್ತದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಪ್ರೈವೆಸಿ ಶಾರ್ಟ್‌ಕಟ್ ಅನ್ನು ಸಹ ಸೇರ್ಪಡೆ ಮಾಡಿದೆ. ಇದರ ಮೂಲಕ ನೀವು ಚಾಟ್‌ನಲ್ಲಿನ ಫೋಟೋ ಅಥವಾ ವೀಡಿಯೊಗಾಗಿ ವಿಭಿನ್ನ ಸ್ವೀಕೃತದಾರರನ್ನು ಆಯ್ಕೆ ಮಾಡಲು ಅಥವಾ ಅದನ್ನು ಸ್ಟೇಟಸ್ ಅಪ್‌ಡೇಟ್‌ನಂತೆ ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಹೊಸ ಪ್ರೈವೆಸಿ ಶಾರ್ಟ್‌ಕಟ್‌ನೊಂದಿಗೆ ಚಿತ್ರವನ್ನು ಸ್ಟೇಟಸ್ ಆಗಿ ಹಂಚಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಅದು ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳುತ್ತದೆ. ಬಳಕೆದಾರರು ಚಿತ್ರದ ಮೇಲೆ ಕ್ಲಿಕ್ ಮಾಡಬಹುದು ಮತ್ತು ಚಾಟ್‌ನೊಳಗಿನ ಸ್ಟೇಟಸ್‌ ಬಟನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಅದನ್ನು ಪೋಸ್ಟ್ ಮಾಡುವ ಮೊದಲು ನಿರ್ದಿಷ್ಟ ಸ್ಟೇಟಸ್‌ಗಾಗಿ ಪ್ರೇಕ್ಷಕರನ್ನು ಆಯ್ಕೆ ಮಾಡಬಹುದು. ಇನ್ನು ಈ ಹೊಸ ಫೀಚರ್ಸ್‌ಗಳು ಶೀಘ್ರದಲ್ಲೇ ವಾಟ್ಸಾಪ್‌ ಡೆಸ್ಕ್‌ಟಾಪ್ ಬೀಟಾ ಆವೃತ್ತಿಗೆ ಬರಲಿದೆ.

Best Mobiles in India

English summary
WhatsApp is adding a new search button on the Android app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X