ಹೊಸ ಗ್ರ್ಯಾನ್ಯುಲರ್ ಪ್ರೈವೆಸಿ ಕಂಟ್ರೋಲ್‌ ಪರಿಚಯಿಸಲು ವಾಟ್ಸಾಪ್‌ ಪ್ಲಾನ್‌!

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಿದೆ. ಸದ್ಯ ಇದೀಗ ತನ್ನ ಐಒಎಸ್‌ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ಹೊಸ ಗ್ರ್ಯಾನ್ಯುಲರ್‌ ಪ್ರೈವೆಸಿ ಕಂಟ್ರೋಲ್‌ ಅನ್ನು ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ ಬೀಟಾ ಆವೃತ್ತಿಯಲ್ಲಿ ಕೆಲವು ಪರೀಕ್ಷಕರಿಗೆ ಲಭ್ಯವಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಐಒಎಸ್‌ ಆವೃತ್ತಿಯಲ್ಲಿ ಹೊಸ ಗ್ರ್ಯಾನ್ಯುಲರ್ ಪ್ರೈವೆಸಿ ಕಂಟ್ರೋಲ್‌ ಪರಿಚಯಿಸಲು ಮುಂದಾಗಿದೆ. ಇದು ಅಪ್ಲಿಕೇಶನ್‌ನಲ್ಲಿ ಪ್ರೈವೆಸಿ ಸೆಟ್ಟಿಂಗ್ಸ್‌ ಅಪ್ಡೇಟ್‌ ಕಂಟ್ರೋಲ್‌ ಅನ್ನು ಅನುಮತಿಸುತ್ತದೆ. ಈ ಫೀಚರ್ಸ್‌ ಬಳಕೆದಾರರಿಗೆ ಸಂದೇಶ ಸೇವೆಯಲ್ಲಿ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋವನ್ನು ಯಾರು ನೋಡಬಹುದು ಎಂಬುದರ ಮೇಲೆ ಗ್ರ್ಯಾನ್ಯುಲರ್‌ ಕಂಟ್ರೋಲ್‌ ಅನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇನ್ನುಳಿದಂತೆ ಈ ಹೊಸ ಫಿಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಪ್ರೊಫೈಲ್ ಫೋಟೋ, 'ಆಬೌಟ್‌' ವಿವರಣೆ ಮತ್ತು 'ಲಾಸ್ಟ್‌ಸೀನ್‌' ಗ್ರ್ಯಾನ್ಯುಲರ್ ಪ್ರೈವೆಸಿ ಕಂಟ್ರೋಲ್‌ ಅನ್ನು ಹೊರತರಲು ಪ್ರಾರಂಭಿಸಿದೆ. ಟೆಸ್ಟ್‌ಫ್ಲೈಟ್ ಮೂಲಕ ಬೀಟಾ ಬಿಲ್ಡ್‌ಗಳನ್ನು ಸ್ವೀಕರಿಸಲು ಸೈನ್ ಅಪ್ ಮಾಡಿದ ಬಳಕೆದಾರರು iOS 22.9.0.70 ಗಾಗಿ ವಾಟ್ಸಾಪ್‌ ಬೀಟಾಗೆ ಅಪ್‌ಡೇಟ್ ಮಾಡಬಹುದು. ಇನ್ನು ಬೀಟಾ ವರ್ಷನ್‌ ಅಪ್ಡೇಟ್‌ ಮಾಡಿದ ಬಳಕೆದಾರರು ಹೊಸ ಸೆಟ್ಟಿಂಗ್‌ಗಳನ್ನು ನೋಡಲು 24 ಗಂಟೆಗಳ ಕಾಲ ಕಾಯಬೇಕಾಗಿರುತ್ತದೆ. ಈ ಹೊಸ ಸೆಟ್ಟಿಂಗ್‌ಗಳು ಸರ್ವರ್-ಸೈಡ್ ಸ್ವಿಚ್ ಮೂಲಕ ಸಕ್ರಿಯಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ

ಇನ್ನು ಇತ್ತೀಚಿನ ಬೀಟಾ ಆವೃತ್ತಿಯನ್ನು ಅಪ್ಡೇಟ್‌ ಮಾಡಿದ ವಾಟ್ಸಾಪ್‌ ಬಳಕೆದಾರರು ಸೆಟ್ಟಿಂಗ್‌ಗಳಿಗೆ ಭೇಟಿ ನೀಡಬೇಕು. ಇದರಲ್ಲಿ ಅಕೌಂಟ್‌ ಅನ್ನು ಆಯ್ಕೆ ಮಾಡುವ ಮೂಲಕ, ಪ್ರೈವೆಸಿ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. ನಂತರ ನೀವು ಲಾಸ್ಟ್‌ ಸೀನ್‌ ಮತ್ತು ಪ್ರೊಫೈಲ್ ಫೋಟೋ ಟೈಟಲ್‌ ಮೂರು ವಿಭಾಗಗಳ ಅಡಿಯಲ್ಲಿ, ಬಳಕೆದಾರರು ನನ್ನ ಸಂಪರ್ಕಗಳನ್ನು ಹೊರತುಪಡಿಸಿ, ಟೈಟಲ್‌ ಎಂಬ ಹೊಸ ಆಯ್ಕೆಯನ್ನು ನೋಡಲು ಸಾಧ್ಯವಾಗುತ್ತದೆ. ಇದು ಯಾವುದೇ ಆಯ್ಕೆಮಾಡಿದ ಸಂಪರ್ಕಗಳನ್ನು ಅವರ ಪ್ರೊಫೈಲ್ ಫೋಟೋ, ಲಾಸ್ಟ್‌ ಸೀನ್‌ ಅಥವಾ ಪ್ರೊಫೈಲ್ ವಿಭಾಗಗಳನ್ನು ವೀಕ್ಷಿಸುವುದನ್ನು ತಡೆಯುತ್ತದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಕಮ್ಯೂನಿಟಿ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಈ ಪೀಚರ್ಸ್‌ ವಾಟ್ಸಾಪ್‌ ಗ್ರೂಪ್‌ಗಳ ಗ್ರೂಪ್‌ ಮಾದರಿಯಲ್ಲಿದ್ದು, ತುಂಬಾ ವಿಸ್ತರವಾದ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಕಮ್ಯೂನಿಟಿ ಫೀಚರ್ಸ್‌ ಮೂಲಕ ಪರಸ್ಪರ ತಿಳಿದಿರುವ ಮತ್ತು ತಮ್ಮ ಆಸಕ್ತಿಗೆ ಅನುಗುಣವಾಗಿ ಸುತ್ತಲೂ ಸಂಘಟಿತವಾಗಿರುವ ಸಂಪರ್ಕಗಳನ್ನು ಹೊಂದಿರುವ ಗುಂಪುಗಳ ಪ್ರಕಾರವಾಗಿದೆ.

ವಾಟ್ಸಾಪ್‌ ಕಮ್ಯೂನಿಟಿ ವಾಟ್ಸಾಪ್‌ ಗ್ರೂಪ್‌ಗಳಿಗಿಂತ ಹೇಗೆ ಭಿನ್ನವಾಗಿದೆ?

ವಾಟ್ಸಾಪ್‌ ಕಮ್ಯೂನಿಟಿ ವಾಟ್ಸಾಪ್‌ ಗ್ರೂಪ್‌ಗಳಿಗಿಂತ ಹೇಗೆ ಭಿನ್ನವಾಗಿದೆ?

ವಾಟ್ಸಾಪ್ ಕಮ್ಯೂನಿಟಿಗಳು ಜನರಿಗೆ ಕೆಲಸ ಮಾಡುವ ರಚನೆಯೊಂದಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಛತ್ರಿಯಡಿಯಲ್ಲಿ ತರಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದೆ. ಇದೇ ರೀತಿಯಲ್ಲಿ ಕಮ್ಯೂನಿಟಿ ಕಳುಹಿಸುವ ಕಂಪ್ಲೀಟ್‌ ಅಪ್ಡೇಟ್‌ಗಳನ್ನು ಜನರು ಸ್ವೀಕರಿಸಬಹುದು. ಜೊತೆಗೆ ಕಮ್ಯೂನಿಟಿ ಗ್ರೂಪ್‌ನಲ್ಲಿ ಮುಖ್ಯವಾದವುಗಳ ಕುರಿತು ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಸಂಘಟಿಸಬಹುದು.

ವಾಟ್ಸಾಪ್‌ ಕಮ್ಯೂನಿಟಿ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸಾಪ್‌ ಕಮ್ಯೂನಿಟಿ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸಾಪ್‌ ನಲ್ಲಿನ ಪ್ರತಿಯೊಂದು ಕಮ್ಯೂನಿಟಿ ಗುಂಪುಗಳ ವಿವರಣೆ ಮತ್ತು ಮೆನುವನ್ನು ಹೊಂದಿರುತ್ತದೆ. ಅಲ್ಲದೆ ನೀವು ಯಾವ ಜನರು ಕಮ್ಯೂನಿಟಿ ಸೇರಬಹುದು ಅನ್ನೊದನ್ನ ಆಯ್ಕೆ ಮಾಡಬಹುದು. ವಾಟ್ಸಾಪ್ ಹೇಳುವಂತೆ ದೊಡ್ಡ ಮತ್ತು ಹೆಚ್ಚು ಸಂಕೀರ್ಣವಾದ ಗ್ರೂಪ್ಸ್‌ ನಡುವಿನ ಸಂಭಾಷಣೆಗಳಿಗೆ ರಚನೆ ಮತ್ತು ಸಂಘಟನೆಯನ್ನು ಒದಗಿಸುತ್ತದೆ. ಇದರಿಂದ ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಜನರಿಗೆ ಮುಖ್ಯವಾದುದನ್ನು ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ಕಮ್ಯೂನಿಟಿಯಲ್ಲಿ ಶಾಲೆಯ ಪ್ರಾಂಶುಪಾಲರಿಗೆ ಶಾಲೆಯ ಎಲ್ಲಾ ಪೋಷಕರನ್ನು ಒಟ್ಟಿಗೆ ಸೇರಿಸಲು, ಓದಲೇಬೇಕಾದ ಅಪ್ಡೇಟ್ಸ್‌ಗಳನ್ನು ಶೇರ್‌ಮಾಡಲು ಮತ್ತು ನಿರ್ದಿಷ್ಟ ತರಗತಿಗಳ ಬಗ್ಗೆ ಗ್ರೂಪ್ಸ್‌ಗಳನ್ನು ಸೆಟ್‌ ಮಾಡಲು ಸುಲಭಗೊಳಿಸುತ್ತದೆ.

Best Mobiles in India

English summary
WhatsApp is reportedly rolling out new granular privacy controls on Latest iOS Beta Update

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X