ವಾಟ್ಸಾಪ್‌ ಸೇರಿತು ಅಚ್ಚರಿಯ ಫೀಚರ್ಸ್‌! ಇದರಿಂದ ನಿಮಗೇನು ಲಾಭ!

|

ಬಳಕೆದಾರರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದೆ. ಜೊತೆಗೆ ಹೊಸ ರೀತಿಯ ಫೀಚರ್ಸ್‌ಗಳನ್ನು ಪರಿಚಯಿಸುವುದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ತನ್ನ ಬಳಕೆದಾರರಿಗೆ ಹೊಸದಾಗಿ ಎರಡು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಕ್ಯಾಪ್ಶನ್‌ ಜೊತೆಗೆ ಮೀಡಿಯಾ ಪಾರ್ವರ್ಡ್‌ ಮಾಡುವ ಹಾಗೂ ನಿಮಗೆ ನೀವೆ ವಾಟ್ಸಾಪ್‌ ಸಂದೇಶ ಕಳುಹಿಸುವ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರಿಗೆ ವಾಟ್ಸಾಪ್‌ ಮೀಡಿಯಾ ಫಾರ್ವರ್ಡ್‌ ಫೀಚರ್ಸ್‌ ಹಾಗೂ ಮೆಸೇಜ್‌ ಯುವರ್‌ಸೆಲ್ಫ್‌ ಫೀಚರ್ಸ್‌ ಸೇರ್ಪಡೆ ಮಾಡಿದೆ. ಇದರಿಂದ iOS ಬಳಕೆದಾರರು ಮೀಡಿಯಾ ಫಾರ್ವರ್ಡ್‌ ಮಾಡುವಾಗ ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಯುವರ್‌ಸೆಲ್ಫ್‌ ಫೀಚರ್ಸ್‌ ಮೂಲಕ ವಾಟ್ಸಾಪ್‌ ಅನ್ನು ನೋಟ್‌ ಮಾದರಿಯಲ್ಲಿ ಬಳಸಬಹುದಾಘಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಮೀಡಿಯಾ ಫಾರ್ವರ್ಡ್‌

ವಾಟ್ಸಾಪ್‌ ಮೀಡಿಯಾ ಫಾರ್ವರ್ಡ್‌

ವಾಟ್ಸಾಪ್‌ ಮೀಡಿಯಾ ಫಾರ್ವರ್ಡ್‌ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಮಾಡಿದೆ. ಇದು ಐಒಎಸ್‌ ಬಳಕೆದಾರರಿಗೆ ಅನ್ವಯವಾಗಲಿದ್ದು, ಇದರಿಂದ ಐಒಎಸ್‌ ಬಳಕೆದಾರರು ಯಾವುದೇ ಚಿತ್ರ ಮತ್ತು ವೀಡಿಯವನ್ನು ಕ್ಯಾಪ್ಶನ್‌ನೊಂದಿಗೆ ಫಾರ್ವರ್ಡ್‌ ಮಾಡಲು ಅನುಮತಿಸಲಿದೆ. ಇದರಿಂದ ನೀವು ಯಾವುದೇ ಮೀಡಿಯಾ ಫೈಲ್‌ ಫಾರ್ವರ್ಡ್‌ ಮಾಡಲು ಪ್ರಯತ್ನಿಸಿದಾಗ ಅಪ್ಲಿಕೇಶನ್‌ ಕೆಳಭಾಗದಲ್ಲಿ ಹೊಸ ಕ್ಯಾಪ್ಶನ್‌ ಬಾಕ್ಸ್ ಅನ್ನು ತೋರಿಸಲಿದೆ. ನೀವು ಕ್ಯಾಪ್ಶನ್‌ ಬರೆಯಲೇಬೇಕೆಂಬ ನಿಯಮವೇನೂ ಇಲ್ಲ. ಕ್ಯಾಪ್ಶನ್‌ ಬರೆಯದಿದ್ದರೆ ಅದನ್ನು ವಜಾಗೊಳಿಸುವುದಕ್ಕೆ ಸಾಧ್ಯವಾಗಲಿದೆ.

ಯುವರ್‌ಸೆಲ್ಫ್‌ ಫೀಚರ್ಸ್‌

ಯುವರ್‌ಸೆಲ್ಫ್‌ ಫೀಚರ್ಸ್‌

ವಾಟ್ಸಾಪ್‌ ಬಳಕೆದಾರರು ತಮಗೆ ತಾವು ಮೆಸೇಜ್‌ ಮಾಡಬಹುದು. ನೋಟ್‌ಗಳು ಮತ್ತು ಮೆಸೇಜ್‌ಗಳನ್ನು ಟ್ರ್ಯಾಕ್ ಮಾಡಲು ಇದರಿಂದ ಸಹಾಯವಾಗಲಿದೆ. ಅಂದರೆ ವಾಟ್ಸಾಪ್‌ ಅನ್ನು ನೀವು ನೋಟ್‌ಪ್ಯಾಡ್ ಆಗಿ ಬಳಸಲು ನಿಮಗೆ ಅನುಮತಿಸುತ್ತದೆ. ಇದಲ್ಲದೆ ನೀವು ಕೆಲವು ಪ್ರಮುಖ ಸಂದೇಶಗಳನ್ನು ಸುಲಭವಾಗಿ ಪ್ರವೇಶಿಸಲು ಪಿನ್ ಮಾಡಬಹುದು. ಈ ಫೀಚರ್ಸ್‌ನಲ್ಲಿ ನಿಮಗಾಗಿಯೇ ಸಂದೇಶಗಳು ಕಾರ್ಯನಿರ್ವಹಿಸುತ್ತವೆ ಮತ್ತು ಸಾಮಾನ್ಯ ಚಾಟ್‌ಗಳಂತೆ ಕಾಣುತ್ತವೆ.

ಫೀಚರ್ಸ್‌

ಆದರೆ ಈ ಫೀಚರ್ಸ್‌ ಮೂಲಕ ನಿಮಗೆ ನೀವು ಆಡಿಯೋ ಕರೆಗಳನ್ನು ಮಾಡಲು, ವೀಡಿಯೊ ಕರೆಗಳನ್ನು ಮಾಡಲು ಸಾಧ್ಯವಿಲ್ಲ. ಅಲ್ಲದೆ ಅಧಿಸೂಚನೆಗಳನ್ನು ಮ್ಯೂಟ್ ಮಾಡಲು, ನಿಮ್ಮನ್ನು ನಿರ್ಬಂಧಿಸಲು ಅಥವಾ ವರದಿ ಮಾಡಲು ಅವಕಾಶ ಸಿಗುವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ. ಈ ಫೀಚರ್ಸ್‌ ಬಳಸಲು ಬಯಸುವವರು ಹೊಸ ಚಾಟ್ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ, ನಿಮ್ಮ ಚಾಟ್ ರಚಿಸಲು ನಿಮ್ಮ ಹೆಸರು ಅಥವಾ ಫೋನ್ ಸಂಖ್ಯೆಯನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ.

ವಾಟ್ಸಾಪ್‌

ಇದಲ್ಲದೆ, ವಾಟ್ಸಾಪ್‌ ಇತ್ತೀಚಿಗೆ ಬಳಕೆದಾರರ ಅನುಕೂಲಕ್ಕಾಗಿ ಬ್ಯುಸಿನೆಸ್‌ ಸರ್ಚ್‌ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಬಳಕೆದಾರರು ವಾಟ್ಸಾಪ್‌ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ವ್ಯಾಪರಿಗಳನ್ನು ಸಂಪರ್ಕಿಸಬಹುದು. ಅವರೊಂದಿಗೆ ಚಾಟ್‌ ಮಾಡುವುದಲ್ಲದೆ ಮತ್ತು ಅವರಿಂದ ಉತ್ಪನ್ನಗಳನ್ನು ಖರೀದಿಸಲು ಸಹ ಸಕ್ರಿಯಗೊಳಿಸುತ್ತದೆ. ಇದರಲ್ಲಿ ಬ್ಯಾಂಕಿಂಗ್‌ನಂತಹ ವರ್ಗಗಳ ಮೂಲಕ ವ್ಯಾಪಾರಗಳನ್ನು ಬ್ರೌಸ್ ಮಾಡಲು ಅನುಮತಿಸಲಿದೆ. ಇದು ವೆಬ್‌ಸೈಟ್‌ಗಳಿಂದ ಫೋನ್ ಸಂಖ್ಯೆಗಳನ್ನು ಹುಡುಕಲಿದೆ. ಇದಕ್ಕಾಗಿ ಕಂಪನಿಯು ವಿವಿಧ ಪಾವತಿ ಪಾಲುದಾರರೊಂದಿಗೆ ಸಹಭಾಗಿತ್ವದಲ್ಲಿದೆ ಎಂದು ಹೇಳಲಾಗಿದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ಕಂಪನಿಯ ಇಂಟರ್ಫೇಸ್ ಅನ್ನು ಬಿಡದೆ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗಲಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಈ ವರ್ಷದ ಆರಂಭದಲ್ಲಿ ವಾಟ್ಸಾಪ್‌ ಜಿಯೋಮಾರ್ಟ್‌ ಶಾಪಿಂಗ್‌ ಎಕ್ಸ್‌ಪಿರಿಯನ್ಸ್‌ ಅನ್ನು ಪ್ರಾರಂಭಿಸಿತ್ತು. ಇದೇ ಮಾದರಿಯ ಅನುಭವವನ್ನು ಈ ಹೊಸ ಫೀಚರ್ಸ್‌ ಕೂಡ ನೀಡಲಿದ್ದು, ಕೆಲವು ಆಯ್ದ ದೇಶಗಳಲ್ಲಿ ಮಾತ್ರ ಬಿಡುಗಡೆಯಾಗಿದೆ.

Best Mobiles in India

English summary
WhatsApp is rolling out A two new features: Details here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X