ವಾಟ್ಸಾಪ್‌ನಿಂದ ಮತ್ತೊಂದು ಉಪಯುಕ್ತ ಫೀಚರ್ಸ್‌!. ಥ್ಯಾಂಕ್ಸ್‌ ಹೇಳಿದರೂ ಸಾಲದು!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ತನ್ನ ಪ್ಲಾಟ್‌ಫಾರ್ಮ್‌ ಹಲವು ಅಚ್ಚರಿಯ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್‌ ಇದೀಗ ಮತ್ತೊಂದು ಅನುಕೂಲಕರ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಅದರಂತೆ ವಾಟ್ಸಾಪ್‌ ಬಳಕೆದಾರರು ಪ್ರಮುಖ ಐದು ಚಾಟ್‌ಗಳನ್ನು ಪಿನ್‌ ಮಾಡಲು ಅವಕಾಶ ನೀಡುವ ಫೀಚರ್ಸ್‌ನಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರು ತಮಗೆ ಪ್ರಮುಖ ಎನಿಸುವ ಐದು ಚಾಟ್‌ಗಳನ್ನು ಪಿನ್‌ ಮಾಡುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ನೀವು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಚಾಟ್‌ ಮಾಡುವ ಪ್ರಮುಖ ಐದು ಚಾಟ್‌ಗಳನ್ನು ಪಿನ್‌ ಮಾಡಬಹುದಾಗಿದೆ. ಈ ಚಾಟ್‌ಗಳು ನಿಮ್ಮ ವಾಟ್ಸಾಪ್‌ ಚಾಟ್‌ನಲ್ಲಿ ಮೇಲ್ಭಾಗದಲ್ಲಿ ಕಾಣಲಿವೆ. ಇದು ಬಳಕೆದಾರರ ಅನುಭವವನ್ನು ಸುಧಾರಿಸಲಿದೆ ಎನ್ನಲಾಗಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ಇಂದಿನ ದಿನಗಳಲ್ಲಿ ಯಾವುದೇ ಪ್ರಮುಖ ಮಾಹಿತಿಯನ್ನು ಶೇರ್‌ ಮಾಡಬೇಕಾದರೂ, ಶುಭಾಶಯಗಳನ್ನು ವಿನಿಮಯ ಮಾಡಬೇಕಾದರೂ ವಾಟ್ಸಾಪ್‌ ಬಳಸೋದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲ ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ಪ್ರಮುಖ ವ್ಯಕ್ತಿಗಳ ಜೊತೆಗೆ ವಾಟ್ಸಾಪ್‌ನಲ್ಲಿ ಚಾಟ್‌ ಮಾಡೋದು ಸಾಮಾನ್ಯ. ಆದರೆ ಇತರೆ ಚಾಟ್‌ಗಳಿಂದ ಸಂದೇಶಗಳು ಬಂದಾಗ ನಿಮ್ಮ ಪ್ರಮುಖ ಚಾಟ್‌ಗಳು ಕೆಳಭಾಗಕ್ಕೆ ಸರಿಯಲಿವೆ. ಇದನ್ನು ತಪ್ಪಿಸುವುದಕ್ಕೆ ಐದು ಪ್ರಮುಖ ಚಾಟ್‌ಗಳನ್ನು ಮೇಲ್ಭಾಗದಲ್ಲಿ ಪಿನ್‌ ಮಾಡಲು ಅವಕಾಶ ನೀಡಲು ವಾಟ್ಸಾಪ್‌ ಮುಂದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಚಾಟ್‌ಗಳನ್ನು ಪಿನ್‌ ಮಾಡುವುದರಿಂದ ನಿಮಗೆ ಅತಿ ಅವಶ್ಯಕ ಎನಿಸುವ ಚಾಟ್‌ಗಳನ್ನು ಮೇಲ್ಭಾಗದಲ್ಲಿ ಕಾಣುವುದಕ್ಕೆ ಸಾದ್ಯವಾಗಲಿದೆ. ಇದರಿಂದ ನೀವು ಪ್ರಮುಖ ಚಾಟ್‌ಗಳಿಗೆ ಸಂದೇಶ ಕಳುಹಿಸುವುದು ಇನ್ನಷ್ಟು ಸುಲಭವಾಗಿದೆ. ಸದ್ಯ ಈ ಹೊಸ ಫೀಚರ್ಸ್‌ ಬಗ್ಗೆ ವಾಬೇಟಾಇನ್ಫೋ ವೆಬ್‌ಸೈಟ್‌ ವರದಿ ಮಾಡಿದೆ. ಪ್ರಸ್ತುತ, ವಾಟ್ಸಾಪ್‌ ಬಳಕೆದಾರರು ತಮ್ಮ ಚಾಟ್‌ ವಿಂಡೋದ ಮೇಲೆ ಕೇವಲ ಮೂರು ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಹೊಸ ಆಯ್ಕೆಯಲ್ಲಿ ನೀವು ಐದು ಚಾಟ್‌ಗಳನ್ನು ಪಿನ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ.

ವಾಟ್ಸಾಪ್‌

ಸದ್ಯ ವಾಟ್ಸಾಪ್‌ ದಿನನಿತ್ಯ ಹೆಚ್ಚುತ್ತಿರುವ ಚಾಟ್‌ಗಳ ಸಂಖ್ಯೆಯ ಕಾರಣಕ್ಕೆ, ಹೆಚ್ಚಿನ ಚಾಟ್‌ಗಳನ್ನು ಪಿನ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ಬಳಕೆದಾರರ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು ಪಿನ್ ಮಾಡಿದ ಚಾಟ್‌ಗಳ ಹೆಚ್ಚಿನ ಮಿತಿಯನ್ನು ಬೆಂಬಲಿಸುವುದು ಉಪಯುಕ್ತವಾಗಲಿದೆ. ಇನ್ನು ಈ ಫೀಚರ್ಸ್‌ ಇದೀಗ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ. ಅಲ್ಲದೆ ಶೀಘ್ರದಲ್ಲೇ ಆಂಡ್ರಾಯ್ಡ್, ಡೆಸ್ಕ್‌ಟಾಪ್ ಮತ್ತು ಐಒಎಸ್‌ಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಇನ್ನು ಇತ್ತೀಚಿಗೆ ವಾಟ್ಸಾಪ್‌ ಮತ್ತೊಂದು ಶಾಕಿಂಗ್‌ ಸುದ್ದಿಯನ್ನು ಕೂಡ ನೀಡಿದೆ. ಅದರಂತೆ ವಾಟ್ಸಾಪ್‌ 2011, 2012 ಮತ್ತು 2013 ರಲ್ಲಿ ಬಿಡುಗಡೆಯಾದ ಏಳು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುದಿಲ್ಲ ಎನ್ನಲಾಗಿದೆ. ಇದರಲ್ಲಿ ಗ್ಯಾಲಕ್ಸಿ ಏಸ್‌ 2, ಗ್ಯಾಲಕ್ಸಿ ಕೋರ್‌, ಗ್ಯಾಲಕ್ಸಿ S2, ಗ್ಯಾಲಕ್ಸಿ S3 ಮಿನಿ, ಗ್ಯಾಲಕ್ಸಿ ಟ್ರೆಂಡ್‌ II, ಗ್ಯಾಲಕ್ಸಿ ಟ್ರೆಂಡ್‌ ಲೈಟ್‌ ಮತ್ತು ಗ್ಯಾಲಕ್ಸಿ ಎಕ್ಸ್‌ಕವರ್‌ 2 ಫೋನ್‌ಗಳು ಸೇರಿವೆ. ಈ ಎಲ್ಲಾ ಡಿವೈಸ್‌ಗಳನ್ನು ಆಂಡ್ರಾಯ್ಡ್‌ 4.x ಗೆ ಅಪ್‌ಗ್ರೇಡ್ ಮಾಡಲಾಗಿದೆ. ನಂತರದ ದಿನಗಳಲ್ಲಿ ಈ ಫೋನ್‌ಗಳು ಯಾವುದೇ ಆಪರೇಟಿಂಗ್‌ ಸಿಸ್ಟಂ ಪಡೆದಿಲ್ಲ.

ವಾಟ್ಸಾಪ್‌

ಡಿಸೆಂಬರ್ 31, 2022 ನಂತರ ವಾಟ್ಸಾಪ್‌ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಬಳಸುವ ಬಳಕೆದಾರರು ಇನ್ಮುಂದೆ ಬೇರೆ ಸ್ಮಾರ್ಟ್‌ಫೋನ್‌ ಬಳಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇನ್ಮುಂದೆ ವಾಟ್ಸಾಪ್‌ ಬೆಂಬಲಿಸದ ಆಪಲ್‌, HTC, ಹುವಾವೇ, ಲೆನೊವೊ, ಎಲ್‌ಜಿ ಮತ್ತು ಸೋನಿ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಈ ಫೋನ್‌ಗಳು ಕೂಡ ಸೇರಿವೆ.

Best Mobiles in India

English summary
WhatsApp is working on a new feature that will allow users to pin 5 chats

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X