ವಾಟ್ಸಾಪ್‌ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!

|

ವಾಟ್ಸಾಪ್‌ ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ಬಳಕೆದಾರರಿಗೆ ಅಚ್ಚರಿ ಎನಿಸಿಬಿಡುತ್ತದೆ. ಇದೇ ಕಾರಣಕ್ಕೆ ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಿಗಿಂತ ವಾಟ್ಸಾಪ್‌ ಭಿನ್ನವಾಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ವಾಟ್ಸಾಪ್‌ ಅಂತಹದ್ದೇ ಹಾದಿಯಲ್ಲಿ ಹೊಸ ಶಾರ್ಟ್‌ಕಟ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದು ವಾಟ್ಸಾಪ್‌ ಕಾಲ್‌ ಮಾಡುವುದನ್ನು ಇನ್ನಷ್ಟು ಸುಲಭಮಾಡಲಿದೆ ಎಂದು ವರದಿಯಾಗಿದೆ. ಇದರಿಂದ ಬಳಕೆದಾರರು ವಾಟ್ಸಾಪ್‌ ಕಾಲ್‌ನಲ್ಲಿ ಉತ್ತಮ ಅನುಭವ ಪಡೆಯಲಿದ್ದಾರೆ ಎನ್ನಲಾಗಿದೆ.

ವಾಟ್ಸಾಪ್‌ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್‌ ಮಾಡುವವರಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಕಾಲಿಂಗ್‌ ಶಾರ್ಟ್‌ಕಟ್‌ ಫೀಚರ್ಸ್‌ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯದೆಯೇ ಕಾಲ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಹಾಗಾದ್ರೆ ವಾಟ್ಸಾಪ್‌ ಸೇರಲಿರುವ ಹೊಸ ಕಾಲಿಂಗ್‌ ಶಾರ್ಟ್‌ಕಟ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಕಾಲ್‌ ಶಾರ್ಟ್‌ಕಟ್‌ ಆಯ್ಕೆಯು ಬಳಕೆದಾರರಿಗೆ ಸುಲಭ ಆಯ್ಕೆಯನ್ನು ನೀಡಲಿದೆ. ಇದರಿಂದ ವಾಟ್ಸಾಪ್‌ ಕಂಟ್ಯಾಕ್ಟ್‌ ಲಿಸ್ಟ್‌ ಅನ್ನು ತ್ವರಿತವಾಗಿ ಪ್ರವೇಶಿಸುವುದಕ್ಕೆ ಅವಕಾಶವನ್ನು ನೀಡಲಿದೆ. ಜೊತೆಗೆ ವಾಟ್ಸಾಪ್‌ ಅಪ್ಲಿಕೇಶನ್‌ ಅನ್ನು ತೆರೆಯದೆಯೇ ವಾಟ್ಸಾಪ್‌ ಕಾಲ್‌ ಮಾಡುವುದಕ್ಕೆ ಅವಕಾಶ ಕಲ್ಪಿಸಲಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ತಾವು ಸಾಮಾನ್ಯವಾಗಿ ಹೆಚ್ಚು ಭಾರಿ ಕರೆ ಮಾಡುವ ಕಂಟ್ಯಾಕ್ಟ್‌ಗಳಿಗೆ ಕಸ್ಟಮ್‌ ಶಾರ್ಟ್‌ಕಟ್‌ಗಳನ್ನು ಸೆಟ್‌ ಮಾಡಲು ಅನುಮತಿಸಲಿದೆ.

ಅಂದರೆ ವಾಟ್ಸಾಪ್‌ನಲ್ಲಿ ನೀವು ಕಾಲ್‌ ಮಾಡಬೇಕಾದರೆ ಕಂಟ್ಯಾಕ್ಟ್‌ ಲಿಸ್ಟ್‌ ತೆಗೆದು ಹೆಸರನ್ನು ಸರ್ಚ್‌ ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ. ಬದಲಿಗೆ ನೀವು ಶಾರ್ಟ್‌ಕಟ್‌ ಆಯ್ಕೆಯಲ್ಲಿರಿಸಿರುವ ಕಂಟ್ಯಾಕ್ಟ್‌ ಮೇಲೆ ಕ್ಲಿಕ್‌ ಮಾಡಿದರೆ ಅವರಿಗೆ ನೇರವಾಗಿ ಕರೆ ಹೋಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ಅಪ್ಲಿಕೇಶನ್‌ ಅನ್ನು ತೆರೆಯಬೇಕಾದ ಅವಶ್ಯಕತೆಯಿರುವುದಿಲ್ಲ ಅನ್ನೊದು ವಾಟ್ಸಾಪ್‌ನ ಐಡಿಯಾ ಆಗಿದೆ. ಈ ಹೊಸ ಫೀಚರ್ಸ್‌ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವಷ್ಟು ಸುಲಭವಾಗಿ ಕರೆ ಮಾಡುವುದಕ್ಕೆ ಅವಕಾಶ ಸಿಗಲಿದೆ ಎನ್ನಲಾಗಿದೆ.

ವಾಟ್ಸಾಪ್‌ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ

ವಾಟ್ಸಾಪ್‌ನ ಫೀಚರ್ಸ್‌ಗಳನ್ನು ಸದಾ ಟ್ರ್ಯಾಕ್‌ ಮಾಡುವ ವಾಟಬೇಟಾಇನ್ಫೋ ಪ್ರಕಾರ ಈ ಶಾರ್ಟ್‌ಕಟ್‌ ಆಯ್ಕೆಯು ಕಂಟ್ಯಾಕ್ಟ್‌ಗಳ ಲಿಸ್ಟ್‌ನಲ್ಲಿರುವ ಕಂಟ್ಯಾಕ್ಟ್‌ ಸೆಲ್ ಅನ್ನು ಟ್ಯಾಪ್ ಮಾಡುವ ಮೂಲಕ ಲಭ್ಯವಾಗಲಿದೆ. ಒಂದು ಭಾರಿ ನೀವು ಕಾಲ್‌ ಶಾರ್ಟ್‌ಕಟ್‌ ಆಯ್ಕೆಯನ್ನು ನೀವು ಕ್ರಿಯೆಟ್‌ ಮಾಡಿದರೆ ಅದನ್ನು ನಿಮ್ಮ ಫೋನ್‌ನ ಮೇನ್‌ಪೇಜ್‌ನಲ್ಲಿ ಡಿಸ್‌ಪ್ಲೇ ಆಗಲಿದೆ. ಇದರಿಂದ ಡಿಸ್‌ಪ್ಲೇ ಅಲ್ಲಿ ಕಾಣುವ ಶಾರ್ಟ್‌ಕಟ್‌ ಆಯ್ಕೆಗಳ ಮೂಲಕವೇ ವಾಟ್ಸಾಪ್‌ ಕಾಲ್‌ ಮಾಡಲು ಸಾಧ್ಯವಾಗಲಿದೆ.

ವಾಟ್ಸಾಪ್‌ ಕಾಲ್‌ ಶಾರ್ಟ್‌ಕಟ್‌ ಆಯ್ಕೆ ಹೇಗೆ ಉಪಯುಕ್ತ?
ವಾಟ್ಸಾಪ್‌ ಮೂಲಕ ನೀವು ಒಂದೇ ವ್ಯಕ್ತಿಗೆ ಪದೇ ಪದೇ ಕರೆ ಮಾಡುತ್ತಿದ್ದರೆ ಈ ಆಯ್ಕೆಯು ತುಂಬಾ ಉಪಯುಕ್ತ ಎನಿಸಲಿದೆ. ನೀವು ಕರೆ ಮಾಡುವಾಗ ವಾಟ್ಸಾಪ್‌ ಅನ್ನು ಪ್ರತಿಭಾರಿಯು ತೆರೆಯಬೇಕಾದ ಅನಿವಾರ್ಯತೆಯನ್ನು ತಪ್ಪಿಸಲಿದೆ. ಪ್ರತಿಭಾರಿಯು ಅಪ್ಲಿಕೇಶನ್ ಅನ್ನು ತೆರೆಯುವುದು ಮತ್ತು ಪ್ರತಿ ಬಾರಿ ಸಂಪರ್ಕವನ್ನು ಹುಡುಕುವುದು ತಪ್ಪಲಿದೆ.

ಇದಲ್ಲದೆ ವಾಟ್ಸಾಪ್‌ ಸದ್ಯದಲ್ಲೇ ಗುಣಮಟ್ಟದ ಫೋಟೋವನ್ನು ಸೆಂಡ್‌ ಮಾಡುವ ಆಯ್ಕೆ ನೀಡಲು ಮುಂದಾಗಿದೆ. ಈ ಫೀಚರ್ಸ್‌ನಿಂದಾಗಿ ಬಳಕೆದಾರರು ವಾಟ್ಸಾಪ್‌ ಮೂಲಕ ಸೆಂಡ್‌ ಮಾಡುವ ಫೋಟೋದ ರೆಸಲ್ಯೂಶನ್‌ನಲ್ಲಿ ಯಾವುದೇ ರೀತಿಯ ಗುಣಮಟ್ಟ ಕಡಿಮೆಯಾಗುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ತನ್ನ ಡ್ರಾಯಿಂಗ್ ಟೂಲ್ ಹೆಡರ್‌ಗೆ ಹೊಸ ಸೆಟ್ಟಿಂಗ್ ಐಕಾನ್ ಅನ್ನು ಸೇರ್ಪಡೆ ಮಾಡಲಿದೆ. ಪ್ರಸ್ತುತ ಈ ಫೀಚರ್ಸ್‌ ಅಭಿವೃದ್ಧಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ

ಇದರೊಂದಿಗೆ ವಾಟ್ಸಾಪ್‌ ತನ್ನ ಡ್ರಾಯಿಂಗ್‌ ಟೂಲ್‌ನಲ್ಲಿ ಹೊಸ ಟೆಕ್ಸ್ಟ್ ಎಡಿಟರ್‌ ಅನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಟೆಕ್ಸ್ಟ್‌ ಎಡಿಟರ್‌ ಟೂಲ್ಸ್‌ ಜೊತೆಗೆ ಡ್ರಾಯಿಂಗ್‌ ಟೂಲ್‌ನಲ್ಲಿ ಹೊಸದಾಗಿ ಮೂರು ಆಯ್ಕೆಗಳು ಕೂಡ ಲಭ್ಯವಾಗಲಿವೆ. ಇವುಗಳ ಮೂಲಕ ನೀವು ಕೀಬೋರ್ಡ್‌ ಮೇಲಿನ ಫಾಂಟ್‌ ಆಯ್ಕೆಗಳಲ್ಲಿ ವಿವಿಧ ಫಾಂಟ್‌ ಆಯ್ಕೆಗಳನ್ನು ಬದಲಾಯಿಸಬಹುದಾಗಿದೆ. ಇದಲ್ಲದೆ ಟೆಕ್ಸ್ಟ್‌ ಲೈನ್‌ ಅನ್ನು ಕೂಡ ಎಡ ಬಲ ಮಧ್ಯದಲ್ಲಿ ಬದಲಾಯಿಸಬಹುದಾಗಿದೆ. ಜೊತೆಗೆ ಟೆಕ್ಸ್ಟ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಕಲರ್‌ ಅನ್ನು ಬದಲಾಯಿಸುವುದಕ್ಕೆ ಕೂಡ ಅವಕಾಶ ಲಭ್ಯವಾಗಲಿದೆ.

Best Mobiles in India

English summary
The new calling shortcuts feature will allow users to quickly and easily make a call using the app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X