ಗ್ರೂಪ್ ವಿಡಿಯೊ ಕರೆ ಮಿತಿ ಹೆಚ್ಚಳ ಮಾಡಲು ಮುಂದಾದ ವಾಟ್ಸಪ್!

|

ಲಾಕ್‌ಡೌನ್ ಜಾರಿಯಲ್ಲಿದ್ದು, ವಿಡಿಯೊ ಕಾಲಿಂಗ್ ಆಪ್‌ಗಳು ಸಿಕ್ಕಾಪಟ್ಟೆ ಡಿಮ್ಯಾಂಡ್ ಪಡೆದುಕೊಳ್ಳುತ್ತಿವೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌, ಜೂಮ್ ಆಪ್ ಹಾಗೂ ಸ್ಕೈಪ್‌ ಆಪ್ ಸೇರಿದಂತೆ ಹಲವು ವಿಡಿಯೊ ಕಾಲಿಂಗ್ ಆಪ್‌ಗಳ ಬಳಕೆಯು ಹೆಚ್ಚಾಗಿವೆ. ಗ್ರೂಪ್ ಕರೆಗೆ ಹೆಚ್ಚಿನ ಸದಸ್ಯರನ್ನು ಕನೆಕ್ಟ್ ಮಾಡುವ ಸೌಲಭ್ಯ ಪಡೆದಿರುವ ಆಪ್‌ಗಳು ಅಧಿಕ ಬಳಕೆದಾರರನ್ನು ಸೆಳೆಯುತ್ತಿವೆ. ಈ ನಿಟ್ಟಿನಲ್ಲಿ ವಾಟ್ಸಪ್‌ ಗ್ರೂಪ್ ವಿಡಿಯೊ ಕರೆಯ ಮಿತಿಯನ್ನು ಹೆಚ್ಚಿಸಲು ಮುಂದಾಗಿದ್ದು, ಜೂಮ್‌ ಆಪ್‌ಗೆ ಫೈಟ್‌ ನೀಡಲು ಸಜ್ಜಾಗುತ್ತಿದೆ.

ಲಾಕ್‌ಡೌನ್ ಅವಧಿ

ಹೌದು, ಲಾಕ್‌ಡೌನ್ ಅವಧಿಯಲ್ಲಿ ವಿಡಿಯೊ ಕಾಲಿಂಗ್ ಆಪ್‌ಗಳಿಗೆ ಬೇಡಿಕೆ ಹೆಚ್ಚಾಗಿರುವ ನಿಟ್ಟಿನಲ್ಲಿ ಜನಪ್ರಿಯ ವಾಟ್ಸಪ್ ಸಹ ತನ್ನ ಗ್ರೂಪ್ ವಿಡಿಯೊ ಕರೆಯ ಮಿತಿಯನ್ನು ಹೆಚ್ಚಿಸಲಿದೆ. ಸದ್ಯ ವಾಟ್ಸಪ್‌ನಲ್ಲಿ ಒಂದು ಗ್ರೂಪ್ ಕರೆಯಲ್ಲಿ ಗರಿಷ್ಠ ನಾಲ್ಕು ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಹೊಂದಿದೆ. ಆದರೆ ಇದೀಗ ವಾಟ್ಸಪ್ ಈ ಮಿತಿಯನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಈ ಸೌಲಭ್ಯವನ್ನು ಐಒಎಸ್ 2.20.50.23 ಅಪ್‌ಡೇಟ್ ಬೀಟಾ ಆವೃತ್ತಿಯಲ್ಲಿ WAbetainfon ತಾಣವು ಗುರುತಿಸಿದೆ.

ಹೊಸ ಅಪ್‌ಡೇಟ್‌

ವಾಟ್ಸಪ್‌ನ ಹೊಸ ಅಪ್‌ಡೇಟ್‌ ಆವೃತ್ತಿಯಲ್ಲಿ ಗ್ರೂಪ್ ಕರೆಯಲ್ಲಿ ಸುಮಾರು 6 ಅಥವಾ 8 ಜನರಿಗೆ ಭಾಗವಹಿಸುವ ಸೌಲಭ್ಯ ಸೇರುವ ಸಾಧ್ಯತೆಗಳಿವೆ. ಬಳಕೆದಾರರು ಅವರ ಕುಟುಂಬ ಸದಸ್ಯರು ಅಥವಾ ಸ್ನೇಹಿತರ ದೊಡ್ಡ ಗುಂಪಿನೊಂದಿಗೆ ಮಾತನಾಡಲು ಈ ಸೌಲಭ್ಯ ನೆರವಾಗಲಿದೆ. ಈ ಹೊಸ ಸೌಲಭ್ಯವು ಆರಂಭದಲ್ಲಿ ಕಂಪನಿಯ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಆವೃತ್ತಿಗಳಲ್ಲಿ ಬಳಕೆಗೆ ಲಭ್ಯವಾಗಲಿದೆ.

ವಿಡಿಯೊ ಕಾಲಿಂಗ್‌

ಪ್ರಸ್ತುತ ಗ್ರೂಪ್ ವಿಡಿಯೊ ಕಾಲಿಂಗ್‌ನಲ್ಲಿ ಲೀಡ್‌ನಲ್ಲಿ ಕಾಣಿಸಿಕೊಂಡಿರುವ ಜೂಮ್‌ ಆಪ್ ಗೌಪ್ಯತೆಯ ದೃಷ್ಟಿಯಿಂದ ಬಳಕೆಗೆ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ಸಹ ತಿಳಿಸಿದೆ. ಈ ಸಂದರ್ಭದಲ್ಲಿ ವಾಟ್ಸಪ್ ಗ್ರೂಪ್ ಕರಯಲ್ಲಿ ಭಾಗವಹಿಸುವ ಸದಸ್ಯರ ಮಿತಿ ಹೆಚ್ಚಳ ಸೌಲಭ್ಯ ಪರಿಚಯಿಸುತ್ತಿರುವುದು ವಾಟ್ಸಪ್ ಜನಪ್ರಿಯತೆ ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಏಕೆಂದರೇ ಮಾಹಿತಿ ಸುರಕ್ಷತೆ ಒತ್ತು ನೀಡುತ್ತಾ ಸಾಗಿ ಬಂದಿದೆ ಹಾಗೂ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ವ್ಯವಸ್ಥೆಯನ್ನು ಪಡೆದಿದೆ.

ಕಾಲಿಂಗ್ ಫೀಚರ್‌

ಇತ್ತೀಚಿಗೆ ವಾಟ್ಸಪ್ ಗ್ರೂಪ್‌ ಕಾಲಿಂಗ್ ಫೀಚರ್‌ನಲ್ಲಿ ಹೊಸ ಅಪ್‌ಡೇಟ್ ಮಾಡಿದ್ದು, ಕೇವಲ ಒಂದು ಟ್ಯಾಪ್ ಮಾಡುವ ಮೂಲಕ ಗುಂಪು ವಿಡಿಯೊ ಅಥವಾ ವಾಯಿಸ್‌ ಕರೆ ಮಾಡುವ ಹೊಸ ಸೌಲಭ್ಯವು ವಾಟ್ಸಪ್‌ನ ಅಪ್‌ಡೇಟ್‌ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಗುಂಪು ವಿಡಿಯೊ ಕರೆ ಸೇವೆಯಲ್ಲಿ ಬಳಕೆದಾರರು ಗರಿಷ್ಠ ನಾಲ್ಕು ಬಳಕೆದಾರರನ್ನು ಸೇರಿಸಬಹುದಾಗಿದೆ. ಈ ಸೌಲಭ್ಯ ಅಪ್‌ಡೇಟ್ ಆವೃತ್ತಿಯಲ್ಲಿ ಲಭ್ಯವಾಗಲಿದ್ದು, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ ಹಾಗೂ ಆಪಲ್ ಆಪ್‌ ಸ್ಟೋರ್‌ನಲ್ಲಿ ವಾಟ್ಸಪ್‌ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ವಾಟ್ಸಪ್ ಗ್ರೂಪ್ ಕರೆ ಮಾಡುವುದು ಹೇಗೆ?

ವಾಟ್ಸಪ್ ಗ್ರೂಪ್ ಕರೆ ಮಾಡುವುದು ಹೇಗೆ?

- ವಾಟ್ಸಾಪ್ ಆಪ್‌ನಲ್ಲಿ ಗ್ರೂಪ್ ಕರೆ ಆಯ್ಕೆ ತೆರೆಯಿರಿ.

- ಪರದೆಯ ಮೇಲಿರುವ ವೀಡಿಯೊ ಅಥವಾ ವಾಯಿಸ್‌ ಕರೆಯನ್ನು ಟ್ಯಾಪ್ ಮಾಡಿ.

- ಒಂದೇ ಬಾರಿಗೆ ನೀವು ಗರಿಷ್ಠ ನಾಲ್ಕು ಸದಸ್ಯರೊಂದಿಗೆ ಗುಂಪು ಕರೆಯನ್ನು ಆರಂಭಿಸಬಹುದಾಗಿದೆ.

Best Mobiles in India

English summary
WhatsApp may increase the limit to 6 or even 8 participants. This will ensure that users can talk with a larger group of family members or friends.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X