ಭಾರತದಲ್ಲಿ ನಿಷೇಧ ಕಾಣಬಹುದಾದ ವಾಟ್ಸ್‌ಆಪ್ ಬ್ಯಾನ್‌ ಕಥೆ ಒಂದಲ್ಲಾ.. ಎರಡಲ್ಲಾ..!

By Avinash
|
Why shouldn't upload WhatsApp Status - KANNADA

ಹಲವು ಭದ್ರತಾ ಕಾರಣಗಳಿಂದ ಭಾರತದಲ್ಲಿ ವಾಟ್ಸ್‌ಆಪ್‌ ಬ್ಯಾನ್‌ ಆಗುತ್ತೆ ಎಂಬ ಸುದ್ದಿ ದೇಶದಲ್ಲಿ ಕಳೆದ ತಿಂಗಳಿನಿಂದಲೂ ಹರಿದಾಡುತ್ತಿದೆ. ವಾಟ್ಸ್‌ಆಪ್‌ನ ಫಾರ್‌ವರ್ಡ್‌ ಮೇಸೆಜ್‌ಗಳಿಂದ ದೇಶದಲ್ಲಿ ಅಭದ್ರತೆ ಸೃಷ್ಟಿಯಾಗುತ್ತಿದೆ. ಗಲಭೆಗಳು ಉದ್ಭವಿಸುತ್ತಿವೆ ಎಂದು ಕಾರಣ ಕೊಟ್ಟಿರುವ ಕೇಂದ್ರ ಸರ್ಕಾರ ವಾಟ್ಸ್‌ಆಪ್‌ಗೆ ಭದ್ರತೆಗಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರ ಭದ್ರತಾ ಕಾರಣಗಳಿಗಾಗಿ ಭಾರತೀಯ ಬಳಕೆದಾರರ ಮಾಹಿತಿ ಒದಗಿಸುವಂತೆ ವಾಟ್ಸ್‌ಆಪ್‌ನ್ನು ಕೇಳಿಕೊಂಡಿತ್ತು. ಆದರೆ, ಈ ಮನವಿಯನ್ನು ತಿರಸ್ಕರಿಸಿರುವ ವಾಟ್ಸ್‌ಆಪ್‌ ಮಾಹಿತಿ ನೀಡಲಾಗುವುದಿಲ್ಲ. ಭದ್ರತೆಗಾಗಿ ಫಾರ್‌ವರ್ಡ್‌ ಮಿತಿ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ವಾಟ್ಸ್‌ಆಪ್‌ನ ಈ ನಿರ್ಣಯದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ.

ಭಾರತದಲ್ಲಿ ನಿಷೇಧ ಕಾಣಬಹುದಾದ ವಾಟ್ಸ್‌ಆಪ್ ಬ್ಯಾನ್‌ ಕಥೆ ಒಂದಲ್ಲಾ.. ಎರಡಲ್ಲಾ..!

ಒಂದು ವೇಳೆ ಭಾರತದಲ್ಲಿ ವಾಟ್ಸ್‌ಆಪ್‌ನ್ನು ನಿಷೇಧಿಸಿದರೆ ವಾಟ್ಸ್‌ಆಪ್‌ಗೆ ಇದು ಮೊದಲಲ್ಲ. ವಿವಿಧ ರಾಷ್ಟ್ರಗಳಲ್ಲಿ ವಾಟ್ಸ್‌ಆಪ್‌ ಬ್ಯಾನ್‌ ಆಗಿದೆ. ಕೆಲವೊಂದು ದೇಶಗಳಲ್ಲಿ ವಾಟ್ಸ್‌ಆಪ್‌ ಪುನಃ ಕಾರ್ಯಾರಂಭ ಮಾಡಿದರೆ, ಕೆಲವು ದೇಶಗಳಲ್ಲಿ ನಿಷೇಧ ಅನುಭವಿಸುತ್ತಿದೆ. ಹಾಗಾದ್ರೇ ವಾಟ್ಸ್‌ಆಪ್‌ ಯಾವ ಯಾವ ದೇಶದಲ್ಲಿ ಬ್ಯಾನ್‌ ಆಯ್ತು..? ಯಾಕೆ ಬ್ಯಾನ್‌ ಆಯ್ತು..? ಎಂಬುದನ್ನು ಮುಂದೆ ನೋಡಿ. ನಿಮಗೆ ಗೊತ್ತಾಗುತ್ತೆ.

ಭಾರತದಲ್ಲೇಕೆ ತೂಗುಗುತ್ತಿ..?

ಭಾರತದಲ್ಲೇಕೆ ತೂಗುಗುತ್ತಿ..?

ವಾಟ್ಸ್‌ಆಪ್ ಮೂಲಕ ಹರಡಿದ ವದಂತಿಗಳಿಂದ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿ 10 ರಾಜ್ಯಗಳಲ್ಲಿ ಕಳೆದ ಒಂದು ವರ್ಷದಲ್ಲಿ ಕನಿಷ್ಠ 31ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಕ್ಕಳ ಕಳ್ಳರ ವದಂತಿಯಿಂದ ಬೀದರ್‌ನಲ್ಲಿ 32 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮೊಹಮ್ಮದ್ ಅಜಮ್‌ನನ್ನು ಕೊಲ್ಲಲಾಯಿತು. ದೇಶದಲ್ಲಿ ವಾಟ್ಸ್‌ಆಪ್‌ನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ವಿಷಾದಿಸುತ್ತೇವೆ ಎಂದು ವಾಟ್ಸ್‌ಆಪ್ ಸ್ವತಃ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಚೀನಾದಲ್ಲಿ ಸಂಪೂರ್ಣ ಬ್ಯಾನ್..!

ಚೀನಾದಲ್ಲಿ ಸಂಪೂರ್ಣ ಬ್ಯಾನ್..!

ವಾಟ್ಸ್‌ಆಪ್‌ನ್ನು ಚೀನಾದಲ್ಲಿ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ನ್ಯೂಯಾರ್ಕ್‌ ಟೈಮ್ಸ್‌ ವರದಿ ಪ್ರಕಾರ 2017ರಿಂದ ಚೀನಾದಲ್ಲಿ ವಾಟ್ಸ್‌ಆಪ್‌ನ್ನು ಭದ್ರತಾ ಕಾರಣಗಳಿಂದ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ವಾಟ್ಸ್‌ಆಪ್‌ನ ಪೋಷಕ ಕಂಪನಿಯಾಗಿರುವ ಫೇಸ್‌ಬುಕ್‌ನ್ನು ಸಹ 2009ರಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಚೀನಾದಲ್ಲಿ ಪ್ರಮುಖ ಇನ್‌ಸ್ಟಾಂಟ್‌ ಮೇಸೆಂಜರ್‌ ಆಗಿ ವೀಚಾಟ್‌ ಬಳಕೆಯಾಗುತ್ತಿದೆ.

ಇರಾನ್‌ನಲ್ಲೂ ಬ್ಯಾನ್‌ ಆಗಿತ್ತು..!

ಇರಾನ್‌ನಲ್ಲೂ ಬ್ಯಾನ್‌ ಆಗಿತ್ತು..!

2014ರ ಮೇ 09ರಂದು ಇರಾನ್‌ನಲ್ಲೂ ವಾಟ್ಸ್‌ಆಪ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇರಾನ್‌ ನಾಗರಿಕರಿಗೆ ವಾಟ್ಸ್‌ಆಪ್ ಬ್ಯಾನ್ ಮಾಡಿ ಇರಾನ್‌ ಸರ್ಕಾರ ಆದೇಶ ಹೊರಡಿಸಿತ್ತು. ಈ ನಿಷೇಧಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್‌ ಜುಕರ್ ಬರ್ಗ್‌ ಅಮೇರಿಕಾದ ಜಿಯೋನಿಸ್ಟ್‌ ಆಗಿರುವುದು ಕಾರಣವಾಗಿತ್ತು ಎಂದು ಇರಾನ್‌ನ ಇಂಟರ್‌ನೆಟ್‌ ಕ್ರೈಮ್‌ ಕಮಿಟಿಯ ಮುಖ್ಯಸ್ಥ ಅಬ್ಡಾಲ್ಸಮಾಡ್ ಖೋರ್‌ಮಬಡಿ ಹೇಳಿದ್ದಾರೆ. ಕಾಲ ಕ್ರಮೇಣ ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ವಾಟ್ಸ್‌ಆಪ್‌ ಫಿಲ್ಟರ್‌ನ್ನು ನಿಲ್ಲಿಸುವಂತೆ ಐಸಿಟಿ ಸಚಿವಾಲಯಕ್ಕೆ ಆದೇಶ ಹೊರಡಿಸಲಾಯಿತು.

ಟರ್ಕಿಯಲ್ಲೂ ನಿಷೇಧ ಶಿಕ್ಷೆ

ಟರ್ಕಿಯಲ್ಲೂ ನಿಷೇಧ ಶಿಕ್ಷೆ

ವಾಟ್ಸ್‌ಆಪ್‌ನ್ನು 2016ರಲ್ಲಿ ಟರ್ಕಿಯಲ್ಲಿ ತಾತ್ಕಾಲಿಕವಾಗಿ ನಿಷೇಧ ಮಾಡಲಾಯಿತು. ಈ ನಿಷೇಧಕ್ಕೆ ಟರ್ಕಿಯಲ್ಲಿ ನಡೆದ ರಷ್ಯಾದ ರಾಯಭಾರಿಯ ಹತ್ಯೆ ಕಾರಣವಾಗಿತ್ತು.

ಬ್ರೆಜಿಲ್‌ನಲ್ಲಿ 72 ಗಂಟೆ ವಾಟ್ಸ್‌ಆಪ್‌ ಇದ್ದಿಲ್ಲ

ಬ್ರೆಜಿಲ್‌ನಲ್ಲಿ 72 ಗಂಟೆ ವಾಟ್ಸ್‌ಆಪ್‌ ಇದ್ದಿಲ್ಲ

2016ರ ಮಾರ್ಚ್‌ 1ರಂದು ಫೇಸ್‌ಬುಕ್‌ನ ಲ್ಯಾಟಿನ್‌ ಅಮೇರಿಕಾದ ಉಪಾಧ್ಯಕ್ಷ ಡಿಯಾಗೋ ಜೋಡನ್‌ರನ್ನು ತನಿಖೆಗೆ ಸಹಕರಿಸಿಲ್ಲವೆಂದು ಬಂಧಿಸಲಾಗಿತ್ತು. ತನಿಖೆಯಲ್ಲಿ ವಾಟ್ಸ್‌ಆಪ್‌ ಸಂಭಾಷಣೆಯನ್ನು ಬ್ರೆಜಿಲ್ ನೀಡುವಂತೆ ಮನವಿ ಮಾಡಿತ್ತು. ಆದರೆ, ವಾಟ್ಸ್‌ಆಪ್‌ ಸಂಭಾಷಣೆ ನೀಡಲು ನಿರಾಕರಿಸಿತ್ತು. ನಂತರ ಮಾರ್ಚ್‌ 2 ರಂದು ನ್ಯಾಯಾಲಯದ ಮೊರೆ ಹೋಗಿ ಡಿಯಾಗೋ ಜೋಡನ್‌ ಬಿಡುಗಡೆಯಾದರು. ಈ ಕಾರಣಕ್ಕಾಗಿ ಬ್ರೆಜಿಲ್ ಮೊಬೈಲ್ ಪ್ರಾವಿಡಾರ್‌ಗಳಿಗೆ 72 ಗಂಟೆಗಳ ಕಾಲ ವಾಟ್ಸ್‌ಆಪ್‌ ನಿಷೇಧಿಸುವಂತೆ ಮೇ 2, 2016ರಂದು ಆದೇಶ ನೀಡಿತು. ನಂತರ ವಾಟ್ಸ್‌ಆಪ್ ನ್ಯಾಯಾಲಯದ ಮೊರೆ ಹೋಗಿ 24 ಗಂಟೆಗಳ ನಂತರ ಬ್ರೆಜಿಲ್‌ನಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿತು.

ಸಿಂಹಳಿಯರ ನಾಡಲ್ಲೂ ಎಡವಿದ ವಾಟ್ಸ್‌ಆಪ್‌

ಸಿಂಹಳಿಯರ ನಾಡಲ್ಲೂ ಎಡವಿದ ವಾಟ್ಸ್‌ಆಪ್‌

ಶ್ರೀಲಂಕಾದಲ್ಲೂ ವಾಟ್ಸ್‌ಆಪ್‌ ಬ್ಯಾನ್ ಆಗಿತ್ತು. ವಾಟ್ಸ್‌ಆಪ್ ಜತೆಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. ಮಾರ್ಚ್‌ 7 ಮತ್ತು 8, 2018ರಲ್ಲಿ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಗಲಭೆ ಹೆಚ್ಚಾಗಿದ್ದ ಕಾರಣ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್‌ ಮಾಡಲಾಗಿತ್ತು. ನಂತರ ಮಾರ್ಚ್‌ 14, 2018ರಂದು ಸಾಮಾಜಿಕ ಜಾಲತಾಣಗಳ ನಿಷೇಧವನ್ನು ವಾಪಸ್‌ ಪಡೆಯಲಾಯಿತು.

ಉಗಾಂಡಾದಲ್ಲಿರುವ ನೀತಿಯೇ ಬೇರೆ

ಉಗಾಂಡಾದಲ್ಲಿರುವ ನೀತಿಯೇ ಬೇರೆ

ಉಗಾಂಡಾ ಸರ್ಕಾರ ವಾಟ್ಸ್‌ಆಪ್‌ ಮತ್ತು ಫೇಸ್‌ಬುಕ್‌ನ್ನು ನಿಷೇಧ ಮಾಡಿದ್ದು, ವಾಟ್ಸ್‌ಆಪ್‌ ಅಥವಾ ಫೇಸ್‌ಬುಕ್ ಬಳಕೆಗೆ ಉಗಾಂಡಾ ಸರ್ಕಾರ ಹೊಸ ನೀತಿಯನ್ನು ತಂದಿದ್ದು, ಗಾಸಿಫ್‌ಗಳ ನಿಯಂತ್ರಣಕ್ಕೆ ದೈನಂದಿನ ಸಾಮಾಜಿಕ ಜಾಲತಾಣಗಳ ತೆರಿಗೆ ನೀತಿಯನ್ನು ಜಾರಿಗೆ ತಂದಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಬೇಕೆಂದರೆ 200 ಶಿಲ್ಲಾಂಗ್‌ಗಳನ್ನು ಪಾವತಿಸಬೇಕಾಗಿದೆ.

Best Mobiles in India

English summary
whatsapp may ban in india: but other countries why banned whatsapp. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X