ಬಳಕೆದಾರರ ಚಾಟ್‌ ಬ್ಯಾಕಪ್‌ಗಾಗಿ ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ಸಿದ್ಧತೆ!

|

ಮೆಟಾ ಒಡೆತನದ ವಾಟ್ಸಾಪ್‌ ಪ್ರತಿಭಾರಿಯೂ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸುವಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರಸ್ತುತ ವಾಟ್ಸಾಪ್‌ ಮತ್ತೊಂದು ವಿನೂತನ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಸಾಕಷ್ಟು ಅನುಕೂಲಕರವಾಗಿದೆ ಎನ್ನಲಾಗಿದೆ. ಸದ್ಯ ವಾಟ್ಸಾಪ್‌ ಅಭಿವೃದ್ದಿಪಡಿಸುತ್ತಿರುವ ಹೊಸ ಫೀಚರ್ಸ್‌ ನಿಮ್ಮ ವಾಟ್ಸಾಪ್‌ ಚಾಟ್‌ ಬ್ಯಾಕಪ್‌ ಅನ್ನು ಗೂಗಲ್‌ ಡ್ರೈವ್‌ ಅಲ್ಲದೆ ಇತರೆ ಕ್ಲೌಡ್‌ ಸ್ಟೋರೇಜ್‌ನಲ್ಲಿ ಬ್ಯಾಕಪ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರ ಚಾಟ್‌ ಬ್ಯಾಕಪ್‌ ಅನ್ನು ಇತರೆ ಕ್ಲೌಡ್‌ ಸ್ಟೋರೇಜ್‌ನಲ್ಲಿ ಸ್ಟೋರ್‌ ಮಾಡುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಇದರಿಂದ ಆಂಡ್ರಾಯ್ಡ್ ಬಳಕೆದಾರರು ತಮ್ಮ ವಾಟ್ಸಾಪ್‌ ಚಾಟ್ ಬ್ಯಾಕ್-ಅಪ್‌ಗಳನ್ನು ಗೂಗಲ್‌ ಡ್ರೈವ್‌ ಮಾತ್ರವಲ್ಲದೆ ಇತರೆ ಕ್ಲೌಡ್‌ ಸ್ಟೋರೇಜ್‌ನಲ್ಲಿ ಸ್ಟೋರ್‌ ಮಾಡಬಹುದು. ಇದರಿಂದ ಬಳಕೆದಾರರಿಗೆ ಕ್ಲೌಡ್‌ ಸ್ಟೋರೇಜ್‌ಗಳಲ್ಲಿ ಚಾಟ್ ಬ್ಯಾಕಪ್ ಸುರಕ್ಷಿತವಾಗಿಡಲು ಸಾಧ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಹೇಗೆ ಉಪಯುಕ್ತವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಫೀಚರ್ಸ್‌ ನಿಮ್ಮ ಚಾಟ್‌ ಬ್ಯಾಕಪ್‌ ಅನ್ನು ಅಪ್ಲಿಕೇಶನ್‌ ಹೊರಗಡೆ ಕೂಡ ಸ್ಟೋರ್‌ ಮಾಡಲು ಅವಕಾಶ ನೀಡಲಿದೆ. ಈ ಫೀಚರ್ಸ್‌ ಇನ್ನು ಕೂಡ ಬೀಟಾ ಪರೀಕ್ಷಕರಿಗೆ ಲಭ್ಯವಿಲ್ಲ. ಆದರೆ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಲಾಗಿದೆ. ಪ್ರಸ್ತುತ, ವಾಟ್ಸಾಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಡ್ರೈವ್‌ನಲ್ಲಿ ತಮ್ಮ ಚಾಟ್‌ಗಳನ್ನು ಬ್ಯಾಕಪ್ ಮಾಡಲು ಅನುಮತಿಸುತ್ತದೆ. ಅಲ್ಲದೆ ನಿಮ್ಮ ಖಾತೆಗೆ ನೀವು ಪ್ರತಿ ಬಾರಿ ಲಾಗ್ ಇನ್ ಮಾಡಿದಾಗ, ನಿಮ್ಮ ಗೂಗಲ್‌ ಡ್ರೈವ್‌ನಲ್ಲಿ ಸಂಗ್ರಹವಾಗಿರುವ ಇತ್ತೀಚಿನ ಬ್ಯಾಕಪ್ ಅನ್ನು ನೀವು ಡೌನ್‌ಲೋಡ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಆದರೆ ಈ ಬ್ಯಾಕಪ್‌ನಲ್ಲಿ ಬಳಕೆದಾರರಿಗೆ ಯಾವುದೇ ನಿಯಂತ್ರಣವಿರುವುದಿಲ್ಲ.

ವಾಟ್ಸಾಪ್‌

ಆದರೆ ವಾಟ್ಸಾಪ್‌ ಉದ್ದೇಶಿಸಿರುವ ಹೊಸ ಫೀಚರ್ಸ್‌ ಬಳಕೆದಾರರಿಗೆ ತಮ್ಮ ಸ್ವಂತ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ಮತ್ತು ಅದನ್ನು ಅವರು ಬಯಸುವ ಸ್ಥಳದಲ್ಲಿ ಸಂಗ್ರಹಿಸುವ ಆಯ್ಕೆಯನ್ನು ನೀಡುತ್ತದೆ. ಈ ಬ್ಯಾಕಪ್‌ನಲ್ಲಿ ಸಂದೇಶಗಳು, ಇಮೇಜ್‌ಗಳು, ವೀಡಿಯೊಗಳು ಮತ್ತು ಇತರ ಫೈಲ್‌ಗಳನ್ನು ಒಳಗೊಂಡ ನಿಮ್ಮ ಎಲ್ಲಾ ಚಾಟ್ ಡೇಟಾವನ್ನು ಕಾಣಬಹುದಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಚಾಟ್ ಅನ್ನು ಡೌನ್‌ಲೋಡ್ ಮಾಡಲು ಕೂಡ ಸಾಧ್ಯವಾಗಲಿದೆ. ಜೊತೆಗೆ ತಮ್ಮ ಚಾಟ್‌ ಬ್ಯಾಕಪ್‌ ಡೌನ್‌ಲೋಡ್‌ ಅನ್ನು ಮತ್ತೆ ಗೂಗಲ್‌ ಡ್ರೈವ್‌ನಲ್ಲಿ ಇರಿಸುವುದಕ್ಕೆ ಕೂಡ ಅವಕಾಶ ದೊರೆಯಲಿದೆ.

ಚಾಟ್ ಬ್ಯಾಕ್-ಅಪ್

ಬಳಕೆದಾರರು ತಮ್ಮ ಚಾಟ್ ಬ್ಯಾಕ್-ಅಪ್ ಅನ್ನು ಲೋಕಲ್‌ ಸ್ಟೋರೇಜ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಅಲ್ಲದೆ ಆ ಡಿವೈಸ್‌ನಲ್ಲಿ ಅಗತ್ಯವಿರುವ ಎಲ್ಲಾ ಡೇಟಾವನ್ನು ಒಳಗೊಂಡ ಫೈಲ್ ಅನ್ನು iOS ಡಿವೈಸ್‌ಗೆ ವರ್ಗಾಯಿಸುವುದಕ್ಕೆ ಅವಕಾಶ ಸಿಗಬಹುದು.ಸದ್ಯ ಈ ಹೊಸ ಫೀಚರ್ಸ್‌ನ ಕಾರ್ಯವೈಖರಿಯ ಬಗ್ಗೆ ಇನ್ನು ಯಾವುದೇ ದೃಢೀಕರಣವನ್ನು ನೀಡಿಲ್ಲ. ಆದರೆ ಇದು ಶೀಘ್ರದಲ್ಲೇ ಬೀಟಾ ಪರೀಕ್ಷಕರಿಗೆ ಲಭ್ಯವಾಗುವ ಸಾಧ್ಯತೆಯಿದೆ.

ವಾಟ್ಸಾಪ್‌

ಇದಲ್ಲದೆ, ವಾಟ್ಸಾಪ್‌ ಅಪ್ಲಿಕೇಶನ್ ಈಗ ಹೊಸದಾಗಿ 'ಡಿಲೀಟ್ ಮಾಡಿದ ಮೆಸೆಜ್‌ ರದ್ದುಗೊಳಿಸು' (Undo Deleted Messages) ಪರಿಚಯಿಸುವ ತಯಾರಿಯಲ್ಲಿದೆ. ಕೆಲವು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಈ ಆಯ್ಕೆ ಆರಂಭಿಕ ಪರೀಕ್ಷೆಯಲ್ಲಿ ಕಂಡುಬಂದಿದೆ. ವಾಟ್ಸಾಪ್‌ನ ಈ ಫೀಚರ್‌ ಡಿಲೀಟ್‌ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಬಳಕೆದಾರರಿಗೆ ಅನುವು ಮಾಡಲಿದೆ. ಈ ಹೊಸ ಫೀಚರ್‌ ಬಳಕೆದಾರರಿಗೆ ತಪ್ಪಾಗಿ ಡಿಲೀಟ್ ಮಾಡಿದ ಮೆಸೆಜ್‌ಗಳನ್ನು ಮತ್ತೆ ಹಿಂಪಡೆಯಲು ಅನುಮತಿಸುತ್ತದೆ ಎಂದು ವರದಿಯಾಗಿದೆ. 'Undo' ಬಟನ್ ಸಂಕ್ಷಿಪ್ತವಾಗಿ ಪರದೆಯ ಕೆಳಗಿನ ತುದಿಯಲ್ಲಿ ಪಾಪ್ ಅಪ್ ಆಗುತ್ತದೆ. ಈ ಆಯ್ಕೆಯು ಡಿಲೀಟ್ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಬಳಕೆದಾರರನ್ನು ಅನುಮತಿಸುತ್ತದೆ.

Best Mobiles in India

English summary
Whatsapp may soon will allow users to back up their chat outside Google Drive:report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X