ಸದ್ಯದಲ್ಲೇ ವಾಟ್ಸಾಪ್‌ ವೀಡಿಯೊ ಕಾಲ್‌ನಲ್ಲಿ ಬರಲಿದೆ ಹೊಸ ಫೀಚರ್ಸ್‌! ಉಪಯೋಗ ಏನು?

|

ಮೆಟಾ ಒಡೆತನದ ವಾಟ್ಸಾಪ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ಮೂಲಕ ವೀಡಿಯೊ ಕರೆ, ವಾಯ್ಸ್‌ ಕಾಲ್‌ ಹಾಗೂ ಮೆಸೇಜ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ವಾಟ್ಸಾಪ್‌ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ಕೂಡ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈಗಾಗಲೇ ಅನೇಕ ಫೀಚರ್ಸ್‌ ಪರಿಚಯಿಸಿರುವ ವಾಟ್ಸಾಪ್‌ ಇದೀಗ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಅದರಂತೆ ಇದಿಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಕರೆಗಳಲ್ಲಿ ವರ್ಚುವಲ್‌ ಅವತಾರ್‌ಗಳನ್ನು ಸೇರ್ಪಡೆ ಮಾಡುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಅಂದರೆ ಬಳಕೆದಾರರು ತಮ್ಮ ವರ್ಚುವಲ್ ಅವತಾರಗಳನ್ನು ವೀಡಿಯೊ ಕರೆಗಳಲ್ಲಿ ಸೇರಿಸುವುದಕ್ಕೆ ಅನುಮತಿಸುವ ಸಾಮರ್ಥ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ವೀಡಿಯೊ ಕರೆ ಬಂದಾಗ ನಿಮ್ಮ ಬದಲಿಗೆ ನಿಮ್ಮ ವರ್ಚುವಲ್‌ ಅವತಾರ್‌ ಮೂಲಕ ವೀಡಿಯೊ ಕರೆಯಲ್ಲಿ ಮಾತನಾಡಬಹುದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಪರಿಚಯಿಸುವ ಹೊಸ ಫೀಚರ್ಸ್‌ಗಳನ್ನು ಟ್ರಾಕ್‌ ಮಾಡುವ ವಾಬೇಟಾಇನ್ಫೊ ಈ ಹೊಸ ಫೀಚರ್ಸ್‌ ಬಗ್ಗೆ ವರದಿ ಮಾಡಿದೆ. ಈ ಫೀಚರ್ಸ್‌ ನಿಮ್ಮ ವೀಡಿಯೊ ಕರೆಯಲ್ಲಿ ವರ್ಚುವಲ್‌ ಅವತಾರ್‌ ಬಳಸಲು ಅನುಮತಿಸುವ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಫಿಚರ್ಸ್‌ ಆಯ್ಕೆ ವೀಡಿಯೊ ಕಾಲ್‌ ಸ್ಕ್ರೀನ್‌ನೊಳಗೆ ಲಭ್ಯವಾಗಲಿದ್ದು, ಬಳಕೆದಾರರು ತಕ್ಷಣ ಅವತಾರಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ವಾಟ್ಸಾಪ್‌ ಸದ್ಯದಲ್ಲೇ ಪರಿಚಯಿಸಲಿರುವ ಹೊಸ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ವೀಡಿಯೊ ಕಾಲ್‌ನಲ್ಲಿ ವರ್ಚುವಲ್‌ ಅವತಾರ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಅಲ್ಲದೆ ಈ ಅವತಾರ್‌ಗಳನ್ನು ದೀರ್ಘಕಾಲದವರೆಗೆ ವೀಡಿಯೊ ಕಾಲ್‌ನಲ್ಲಿ ಬಳಸುವುದಕ್ಕೆ ಸಾಧ್ಯವಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ವಾಟ್ಸಾಪ್‌ ತನ್ನದೇ ಆದ ಮೆಮೊಜಿ/ಬಿಟ್‌ಮೊಜಿ ಪರ್ಯಾಯ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಆದರಿಂದ ಈ ಆಯ್ಕೆಯನ್ನು ಯಾವುದೇ ಸಮಯದಲ್ಲಿ ವೀಡಿಯೊ ಕರೆಗಳಲ್ಲಿ ಬಳಸುವುದಕ್ಕೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬಳಕೆದಾರರು

ಇದಲ್ಲದೆ ಬಳಕೆದಾರರು ತಮ್ಮ ಚಾಟ್‌ಗಳು ಮತ್ತು ಗ್ರೂಪ್‌ಗಳಲ್ಲಿ ತಮ್ಮ ಅವತಾರಗಳನ್ನು ಸ್ಟಿಕ್ಕರ್‌ಗಳಾಗಿ ಕಳುಹಿಸುವುದಕ್ಕೆ ಅನುಮತಿಸುವ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ತಯಾರಿ ನಡೆಸಿದೆ. ಇದಕ್ಕಾಗಿ "ಅವತಾರ್ ಎಡಿಟರ್" ಅನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಇದರ ಮೂಲಕ ಬಳಕೆದಾರರು ತಮ್ಮ ಸ್ವಂತ ಅವತಾರ್‌ ಅನ್ನು ಸೆಟ್‌ ಮಾಡುವುದಕ್ಕೆ ಸಾದ್ಯವಾಗಲಿದೆ. ಜೊತೆಗೆ ನಿಮ್ಮ ಅವತಾರ್‌ ಅನ್ನು ಕಸ್ಟಮೈಸ್ ಕೂಡ ಮಾಡಬಹುದಾಗಿದೆ. ಸದ್ಯ ಈ ಅವತಾರ್‌ ಎಡಿಟರ್‌ ಆಯ್ಕೆಯು ಇನ್ನು ಕೂಡ ಅಭಿವೃದ್ದಿಯ ಹಂತದಲ್ಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ಮೀಡಿಯಾ ಎಡಿಟರ್‌ ಆಯ್ಕೆಯಲ್ಲಿ ಬ್ಲರ್ ಟೂಲ್ ಅನ್ನು ಸೇರಿಸುವ ನಿರೀಕ್ಷೆ ಕೂಡ ಇದೆ. ಈ ಫೀಚರ್ಸ್‌ ಮೂಲಕ ನೀವು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಟೂಲ್‌ ಬಳಸದೆ ಯಾವುದೇ ಚಿತ್ರದ ಭಾಗವನ್ನು ಬ್ಲರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಡ್ರಾಯಿಂಗ್ ಟೂಲ್ ಅನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ ಎನ್ನಲಾಗಿದೆ. ಇದರಿಂದ ನೀವು ಇಮೇಜ್‌ ಅನ್ನು ಶೇರ್‌ ಮಾಡುವ ಮುನ್ನ ಬ್ಲರ್‌ ಮಾಡುವ ಜಾಗವನ್ನು ವಾಟ್ಸಾಪ್‌ನಲ್ಲಿ ಬ್ಲರ್‌ ಮಾಡಬಹುದಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಅನುಕೂಲವಾಗುವ ಮತ್ತೊಂದು ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್ಸ್‌ ನಿಮಗೆ ನಿಮ್ಮ ವಾಟ್ಸಾಪ್‌ ಅಕೌಂಟ್‌ ಬ್ಯಾನ್‌ ಆಗಿದ್ದರೆ, ಅದಕ್ಕೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ನಿಮ್ಮ ಅಕೌಂಟ್‌ ಅನ್ನು ಯಾವ ಕಾರಣದಿಂದ ಬ್ಯಾನ್‌ ಮಾಡಲಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿದೆ. ಸಂಪೂರ್ಣ ವಿವರಕ್ಕಾಗಿ ನೀವು ರಿಪೋರ್ಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಬ್ಯಾನ್‌ ಮಾಡಿರುವ ಆದೇಶವನ್ನು ಹಿಂತೆಗೆದುಕೊಳ್ಳುವುದಕ್ಕೆ ರಿಕ್ವೆಸ್ಟ್‌ ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ವಾಟ್ಸಾಪ್‌ ಬಳಕೆದಾರರು ಕೆಲವು ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ವಾಟ್ಸಾಪ್‌

ಸಾಮಾನ್ಯವಾಗಿ ವಾಟ್ಸಾಪ್‌ ತನ್ನ ನಿಯಮಗಳನ್ನು ಪಾಲಿಸದ ಜನರ ಅಕೌಂಟ್‌ ಅನ್ನು ತೆಗೆದುಹಾಕಲಿದೆ. ವಾಟ್ಸಾಪ್‌ನ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಂಡರೆ ಈ ರೀತಿಯ ಕ್ರಮಗಳು ಜರುಗಿಸಲಾಗುತ್ತದೆ. ಒಂದು ವೇಲೆ ನಿಮ್ಮ ಖಾತೆಯನ್ನು ಬ್ಯಾನ್‌ ಮಾಡಿರುವುದಕ್ಕೆ ನಿರ್ದಿಷ್ಟ ಕಾರಣ ಪತ್ತೆಯಾದರೆ, ನಿಮ್ಮ ಅಕೌಂಟ್‌ನ ನಿಷೇಧವನ್ನು ತೆಗೆದುಹಾಕಲಾಗುವುದಿಲ್ಲ. ಆದರೆ ನಿಮ್ಮ ವಾಟ್ಸಾಪ್‌ ಖಾತೆಯನ್ನು ಆಕಸ್ಮಿಕವಾಗಿ ಬ್ಯಾನ್‌ ಮಾಡಿದ್ದರೆ ಮಾತ್ರ ಬ್ಯಾನ್‌ ಆದೇಶವನ್ನು ತೆಗೆದುಹಾಕುತ್ತದೆ. ವಾಟ್ಸಾಪ್‌ ತನ್ನ ಮೆಸೇಜಿಂಗ್ ಪ್ರೋಗ್ರಾಂ ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಮತ್ತು ಬಳಕೆದಾರರ ವರದಿಗಳೆರಡನ್ನೂ ಬಳಸಿಕೊಂಡು ಅನಧಿಕೃತ ಹಾಗೂ ಅಪಯಕಾರಿ ಎನಿಸುವ ಖಾತೆಗಳನ್ನು ಬ್ಯಾನ್‌ ಮಾಡಲಿದೆ ಅನ್ನೊದನ್ನ ಗಮನಿಸಬೇಕಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚಿಗೆ ವಾಟ್ಸಾಪ್‌ ನಿರ್ದಿಷ್ಟ ಜನರನ್ನು ಹೈಡ್‌ ಮಾಡುವ ಅವಕಾಶ ನೀಡಿದೆ. ನಿಮ್ಮ ಗೌಪ್ಯತೆಯನ್ನು ಆನ್‌ಲೈನ್‌ನಲ್ಲಿ ಇನ್ನಷ್ಟು ಸೆಕ್ಯುರ್‌ ಮಾಡುವುದಕ್ಕೆ ವಾಟ್ಸಾಪ್‌ ಮುಂದಾಗಿದೆ. ಇದಕ್ಕಾಗಿ ಹೊಸ ಪ್ರೈವೆಸಿ ಕಂಟ್ರೋಲ್‌ ಸೆಟ್ಟಿಂಗ್‌ಗಳಿಗೆ ಹೊಸ ಆಯ್ಕೆಗಳನ್ನು ಹೊರತರುತ್ತಿದ್ದೇವೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇದರಿಂದ ನೀವು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಿಂದ ನಿಮ್ಮ ಪ್ರೊಫೈಲ್ ಫೋಟೋ ಮತ್ತು ಲಾಸ್ಟ್‌ ಸೀನ್‌ ಸ್ಟೇಟಸ್‌ ಅನ್ನು ಯಾರು ನೋಡಬಹುದು ಅನ್ನೊದನ್ನ ನೀವು ಆಯ್ಕೆ ಮಾಡಬಹುದು.

ವಾಟ್ಸಾಪ್‌ನಲ್ಲಿ

ಪ್ರಸ್ತುತ ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಲಾಸ್ಟ್‌ ಸೀನ್‌ ಮತ್ತು ಸ್ಟೇಟಸ್‌ ಅನ್ನು ನಿರ್ದಿಷ್ಟ ಜನರಿಂದ ಮರೆಮಾಡುವ ಆಯ್ಕೆಯನ್ನು ಹೊಂದಿರಲಿಲ್ಲ. ಬಳಕೆದಾರರು "ಎಲ್ಲರೂ", "ನನ್ನ ಸಂಪರ್ಕಗಳು" ಮತ್ತು "ಯಾರೂ ಇಲ್ಲ" ಎನ್ನುವ ಮೂರು ಆಯ್ಕೆಗಳನ್ನು ಮಾತ್ರ ಹೊಂದಿದ್ದರು. ಈಗ ಬಳಕೆದಾರರು "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯನ್ನು ಕೂಡ ಹೊಂದಿದ್ದಾರೆ. ಇದರಿಂದ ನೀವು ಬಯಸದ ನಿರ್ಧಿಚ್ಟ ಕಂಟ್ಯಾಕ್ಟ್‌ಗಳನ್ನು ನಿಮ್ಮ ಸ್ಟೇಟಸ್‌ ನೋಡದಂತೆ ತಡೆಯಬಹುದಾಗಿದೆ.

Best Mobiles in India

English summary
Meta-owned WhatsApp is reportedly working on an ability that would allow users to place their virtual avatars on video calls.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X