ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಆಪ್‌ಗಳಲ್ಲಿ 'ವಾಟ್ಸಪ್' ಫಸ್ಟ್‌!..ನೆಕ್ಸ್ಟ್‌?

|

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮತ್ತು ಐಓಎಸ್‌ ಐಫೋನ್‌ ಎರಡು ಮಾದರಿಯ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಆಪ್‌ಗಳ ಲಿಸ್ಟ್‌ನಲ್ಲಿ 'ವಾಟ್ಸಪ್' ಮೊದಲ ಸ್ಥಾನದಲ್ಲಿದೆ. ಇತ್ತೀಚಿಗೆ ಬ್ಯಾನ್ ಆಗಿದ್ದ 'ಟಿಕ್‌ಟಾಕ್' ಆಪ್‌ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದು, ಫೇಸ್‌ಬುಕ್ ಒಡೆತನದ ಮೆಸೆಂಜರ್ ಆಪ್‌ ಎರಡನೇ ಸ್ಥಾನವನ್ನು ಹೊಂದಿದೆ ಎಂಬುದು ಇದೀಗ ಬಿಡುಗಡೆ ಆಗಿರುವ 'ಸೆನ್ಸಾರ್‌ ಟವರ್‌' ಅಂಕಿ ಅಂಶಗಳ ವರದಿಯಿಂದ ತಿಳಿದುಬಂದಿದೆ.

ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಆಪ್‌ಗಳಲ್ಲಿ 'ವಾಟ್ಸಪ್' ಫಸ್ಟ್‌!..ನೆಕ್ಸ್ಟ್‌?

ಹೌದು, ಆಪ್‌ಗಳ ಕುರಿತಾಗಿ ಡೇಟಾವನ್ನು ತಿಳಿಸುವ 'ಸೆನ್ಸಾರ್‌ ಟವರ್' Q1 2019ರ ಆಪ್‌ಗಳ ಸ್ಥಾನಗಳ ಅಂಕಿ ಅಂಶಗಳನ್ನು ರಿಲೀಸ್ ಮಾಡಿದ್ದು, ವಾಟ್ಸಪ್‌, ಮೆಸೆಂಜರ್ ಮತ್ತು ಟಿಕ್‌ಟಾಕ್‌ ಆಪ್‌ಗಳು ಡೌನ್‌ಲೋಡ್‌ನಲ್ಲಿ ಮುಂಚೂಣಿಯಲ್ಲಿದೆ. 223 ಮಿಲಿಯನ್ ಹೊಸ ಬಳಕೆದಾರರು ವಾಟ್ಸಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಐಓಎಸ್‌ ಮಾದರಿಯಲ್ಲಿ 33 ಮಿಲಿಯನ್ ಬಳಕೆದಾರರು ಟಿಕ್‌ಟಾಕ್‌ ಆಪ್‌ ಅನ್ನು ತಮ್ಮ ಐಫೋನ್‌ಗಳಿಗೆ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಆಪ್‌ಗಳಲ್ಲಿ 'ವಾಟ್ಸಪ್' ಫಸ್ಟ್‌!..ನೆಕ್ಸ್ಟ್‌?

ಈ ಹಿಂದಿನ Q4 2018ರ ಸೆನ್ಸಾರ್‌ ಟವರ್ ವರದಿಯಲ್ಲಿಯೂ ವಾಟ್ಸಪ್, ಮೆಸೆಂಜರ್, ಟಿಕ್‌ಟಾಕ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಆಪ್‌ಗಳೆ ಅತೀ ಹೆಚ್ಚಾಗಿ ಡೌನ್‌ಲೋಡ್‌ ಆಗಿರುವ ಲಿಸ್ಟ್‌ನಲ್ಲಿದ್ದವು. ಹಾಗೆಯೇ ಸಂಸ್ಥೆಯ Q1 ವರದಿಯಲ್ಲಿ ವಿಡಿಯೊ ಎಡಿಟಿಂಗ್ ಆಪ್‌ಗಳು ಸೇರಿಕೊಂಡಿವೆ. ಹಾಗಾದರೇ ಸೆನ್ಸಾರ್‌ ಟವರ್ ವರದಿಯಲ್ಲಿನ ಟಾಪ್‌ ಡೌನ್‌ಲೋಡ್‌ ಆಪ್‌ ಸ್ಥಾನಗಳ ಕುರಿತು ಮತ್ತುಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!ಓದಿರಿ : ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!

ವಾಟ್ಸಪ್‌ ನಂಬರ್‌ ಒನ್‌

ವಾಟ್ಸಪ್‌ ನಂಬರ್‌ ಒನ್‌

ವಿಶ್ವದ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಇದೀಗ ಮತ್ತೆ ಹೊಸದಾಗಿ ಒಟ್ಟು, 223 ಮಿಲಯನ್ ಬಳಕೆದಾರರನ್ನು ಸೇರಿಸಿಕೊಂಡಿದ್ದು, ಇದರಲ್ಲಿ ಹೊಸದಾಗಿ 199 ಮಿಲಿಯನ್ ಆಂಡ್ರಾಯ್ಡ್‌ ಓಎಸ್‌ ಬಳೆದಾರರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ತಾನೇ ನಂಬರ್‌ ಒನ್‌ ಎಂಬುದನ್ನು ಸಾಬೀತುಪಡಿಸಿದೆ.

ಟಿಕ್‌ಟಾಕ್‌ ಜನಪ್ರಿಯತೆ

ಟಿಕ್‌ಟಾಕ್‌ ಜನಪ್ರಿಯತೆ

ಇತ್ತೀಚಿಗೆ ಬ್ಯಾನ್‌ ಆಗಿದ್ದ ಚೀನಾ ಮೂಲಕದ ವಿಡಿಯೊ ಮೇಕಿಂಗ್ ಆಪ್ ಟಿಕ್‌ಟಾಕ್ ಇನ್ನು ತನ್ನ ಜನಪ್ರಿಯತೆಯನ್ನು ಮುಂದುವರೆಸಿದ್ದು, ಸೆನ್ಸಾರ್‌ ಟವರ್ ವರದಿಯಂತೆ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಆಪ್‌ಗಳ ಲಿಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಮಾದರಿಗಳಲ್ಲಿಯೂ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಮೆಸೆಂಜರ್ ಸಹ ಮುಂದಿದೆ

ಮೆಸೆಂಜರ್ ಸಹ ಮುಂದಿದೆ

ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಜ್‌ ಆಪ್‌ ಮೆಸೆಂಜರ್ ವಾಟ್ಸಪ್‌ ಬಿಟ್ಟರೇ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಎರಡನೇ ಆಪ್‌ ಆಗಿ ಗುರುತಿಸಿಕೊಂಡಿದೆ. 209 ಮಿಲಿಯನ್ ಹೊಸ ಬಳಕೆದಾರರು ಮೆಸೆಂಜರ್‌ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಹೆಚ್ಚಿನ ಸಕ್ರಿಯ ಬಳೆಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿ ಮುಂದುವರೆದಿದೆ.

ಫೇಸ್‌ಬುಕ್‌

ಫೇಸ್‌ಬುಕ್‌

ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಹೊಂದಿರುವ ಪ್ರತಿಯೊಬ್ಬರು ಫೇಸ್‌ಬುಕ್‌ ಖಾತೆಯನ್ನು ಹೊಂದಿಯೇ ಇರುತ್ತಾರೆ. ಆದರೂ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಫೇಸ್‌ಬುಕ್ ಸೆನ್ಸಾರ್‌ ಟವರ್‌ ವರದಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ.

ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ ಸಹ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದ್ದು, ಇದು ಸಹ ಫೇಸ್‌ಬುಕ್‌ ಮಾಲೀಕತ್ವದಲ್ಲಿದೆ. ಸೆನ್ಸಾರ್‌ ಟವರ್ ವರದಿಯ ಲಿಸ್ಟ್‌ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದು, ಹೆಚ್ಚಿನ ಡೌನ್‌ಲೋಡ್‌ ಆಗಿರುವ ಆಪ್‌ ಆಗಿದೆ.

ಇತರೆ ಜನಪ್ರಿಯ ಆಪ್‌ಗಳು

ಇತರೆ ಜನಪ್ರಿಯ ಆಪ್‌ಗಳು

ಸೆನ್ಸಾರ್‌ ಟವರ್‌ ಆಪ್‌ಗಳ ವರದಿಯಲ್ಲಿ ಟಾಪ್‌ ಇಪ್ಪತ್ತು ಆಪ್‌ಗಳ ಲಿಸ್ಟ್‌ನಲ್ಲಿ ಯೂಟ್ಯೂಬ್, ನೆಟ್‌ಫ್ಲೆಕ್ಸ್, ಉಬರ್, ಲೈಕ್‌ ವಿಡಿಯೊ, ಸ್ನಾಪ್‌ಚಾಟ್‌, ಸ್ಪಾಟಿಫೈ, ಹಾಟ್‌ಸ್ಟಾರ್‌, ಟಮೆಜಾನ್ ಮತ್ತು ಟ್ವಿಟ್ಟರ್ ಸೇರಿದಂತೆ ಕೆಲವು ವಿಡಿಯೊ ಎಡಿಟಿಂಗ್‌ ಆಪ್‌ಗಳು ಸೇರಿಕೊಂಡಿವೆ.

ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

Best Mobiles in India

English summary
WhatsApp Most Downloaded App Globally, TikTok Leads App Store Downloads in Q1 2019: Sensor Tower.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X