ವಾಟ್ಸಾಪ್ ನಿಂದ ಹೊಸ ಅಪ್‌ಡೇಟ್‌; ಐಫೋನ್‌ನಲ್ಲಿ ಪ್ರೊಫೈಲ್‌ ಮೂಲಕವೇ ಸ್ಟೇಟಸ್‌ ವೀಕ್ಷಿಸಬಹುದು!

|

ವಾಟ್ಸಾಪ್‌ನಲ್ಲಿ ನಿರಂತರ ನವೀಕರಣ ಪ್ರಕ್ರಿಯೆಗಳು ನಡೆಯುತ್ತಿವೆ. ಅದರಲ್ಲೂ ಆಂಡ್ರಾಯ್ಡ್‌ ಬಳಕೆದಾರರಿಗೆ ಆಕರ್ಷಕ ಫೀಚರ್ಸ್‌ ನೀಡುತ್ತಿದ್ದು, ಇದರ ಜೊತೆಗೆ ಈಗ ಐಫೋನ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ ಒಂದನ್ನು ನೀಡಿದೆ. ಈ ಫೀಚರ್ಸ್‌ ಮೂಲಕ ಐಫೋನ್‌ ಬಳಸುವವರು ಪ್ರೋಫೈಲ್‌ ಮೂಲಕವೇ ಸ್ಟೇಟಸ್ ವೀಕ್ಷಣೆ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಫೀಚರ್ಸ್‌ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.

ವಾಟ್ಸಾಪ್‌

ಬಳಕೆದಾರರ ಅನುಭವವನ್ನು ಮತ್ತಷ್ಟು ಸುಧಾರಿಸಲು ವಾಟ್ಸಾಪ್‌ ಏನಾದರೂ ಒಂದು ಹೊಸ ಫೀಚರ್ಸ್‌ ನೀಡುತ್ತಲೇ ಇದೆ. ಈ ಮೂಲಕ ಎಂದಿಗೂ ನವೀಕರಣ ವಿಷಯದಲ್ಲಿ ವಾಟ್ಸಾಪ್ ವಿಶ್ರಾಂತಿ ಪಡೆದಿಲ್ಲ. ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಮೂಲಕ ಆಪಲ್‌ ಫೋನ್‌ ಬಳಕೆದಾರರು ಸ್ಟೇಟಸ್‌ ಅನ್ನು ನೇರವಾಗಿ ಪ್ರೊಫೈಲ್‌ನಿಂದ ವೀಕ್ಷಿಸಲು ಅನುಮತಿಸಲಾಗಿದೆ. ಇನ್ನು ಮೆಟಾ ಈಗಾಗಲೇ ಫೇಸ್‌ಬುಕ್‌ನಲ್ಲಿಯೂ ಈ ಫೀಚರ್ಸ್‌ ಅನ್ನು ಈಗಾಗಲೇ ಪರಿಚಯಿಸಿದೆ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ರೀತಿ ಪರಿಶೀಲಿಸಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ರೀತಿ ಪರಿಶೀಲಿಸಿ

ಈ ಫೀಚರ್ಸ್‌ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೊದಲು ವಾಟ್ಸಾಪ್‌ ಇತ್ತೀಚಿನ ಆವೃತ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದೆಯೇ ಎಂಬುದನ್ನು ಕಂಡುಕೊಳ್ಳಬೇಕಿದೆ. ನಿಮ್ಮ ವಾಟ್ಸಾಪ್‌ 22.21.77 ಆವೃತ್ತಿಯನ್ನು ಹೊಂದಿದ್ದರೆ ಈ ಫೀಚರ್ಸ್‌ ಅನ್ನು ನೀವು ಬಳಕೆ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಯಾವುದೇ ಪ್ರೋಫೈಲ್‌ ಮೇಲೆ ಟ್ಯಾಪ್‌ ಮಾಡಿ, ಅವರ ಸ್ಟೇಟಸ್ ಅನ್ನು ವೀಕ್ಷಣೆ ಮಾಡಬಹುದಾಗಿದೆ. ಪ್ರಮುಖ ವಿಷಯ ಎಂದರೆ ಪ್ರೋಫೈಲ್‌‌ ಫೋಟೋ ಟ್ಯಾಪ್ ಮಾಡಿದಾಗ ನೀವು ಅವರ ಸ್ಟೇಟಸ್ ಅನ್ನು ನೋಡಲು ಇಚ್ಚಿಸುವಿರೇ ಎಂದು ಕೇಳುತ್ತದೆ. ಅದಕ್ಕೆ ಒಪ್ಪಿದರೆ ಸ್ಟೇಟಸ್‌ ವಿಭಾಗ ತೆರೆದುಕೊಳ್ಳುತ್ತದೆ.

ಸ್ಟೇಟಸ್‌

ಇನ್ನು ಸ್ಟೇಟಸ್‌ ಇರುವ ಪ್ರೋಫೈಲ್‌‌ ಗಳ ಫೋಟೋ ಮೇಲೆ ನೀಲಿ ಬಣ್ಣ ವೃತ್ತಾಕಾರದ ಗುರುತು ಕಾಣಿಸಿಕೊಳ್ಳುತ್ತದೆ. ಇದರಿಂದ ನೀವು ಸುಲಭವಾಗಿ ಯಾರು ತಮ್ಮ ವಾಟ್ಸಾಪ್‌ ನಲ್ಲಿ ಸ್ಟೇಟಸ್‌ ಹಾಕಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ಇನ್‌ಸ್ಟಾಗ್ರಾಮ್‌ನಲ್ಲಿಯೂ ಇದೇ ರೀತಿಯ ನೀಲಿ ವೃತ್ತಾಕಾರದ ಗುರುತು ಇರುವುದನ್ನು ನೀವು ಗಮನಿಸಬಹುದು. ಇದೇ ಮಾದರಿಯನ್ನು ವಾಟ್ಸಾಪ್‌ನಲ್ಲಿ ಪರಿಚಯಿಲಾಗಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಇನ್ನು ಐಫೋನ್‌ನಲ್ಲಿನ ಐಓಎಸ್‌ 22.23.0.71 ಆವೃತ್ತಿಯಲ್ಲಿ ಅವತಾರ್ ಫೀಚರ್ಸ್‌ ನೀಡಲಾಗಿದೆ. ಇದನ್ನು ಇತ್ತೀಚೆಗಷ್ಟೇ ನೀಡಲಾಗಿದ್ದು, ಈ ಫೀಚರ್ಸ್‌ಅನ್ನು ಬಳಕೆದಾರರು ತಮ್ಮ ವಾಟ್ಸಾಪ್‌ ಸೆಟ್ಟಿಂಗ್ ಅನ್ನು ಓಪನ್‌ ಮಾಡಿ ಸಕ್ರಿಯಗೊಳಿಸಬೇಕಿದೆ. ನಂತರ ವರ್ಚುವಲ್ ಅವತಾರ್ ಅನ್ನು ಹೊಂದಿಸುವ ಹಾಗೆ ವಾಟ್ಸಾಪ್‌ ಅನುಕೂಲ ಮಾಡಿಕೊಟ್ಟಿದೆ. ಈ ಫೀಚರ್ಸ್‌ ಸ್ನ್ಯಾಪ್‌ಚಾಟ್‌ನಲ್ಲಿ ಬಿಟ್‌ಮೋಜಿಯ ಹಾಗೆಯೇ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ನಿಮ್ಮ ಅವತಾರ್‌ಗಳನ್ನು ಸ್ಟಿಕ್ಕರ್‌ ಆಗಿ ಬಳಕೆ ಮಾಡಿಕೊಂಡು ಅಗತ್ಯ ಇದ್ದವರಿಗೆ ಚಾಟಿಂಗ್‌ ಮಾಡುವಾಗ ಕಳುಹಿಸಬಹುದಾಗಿದೆ. ಪ್ರಸ್ತುತ, ಈ ಸ್ಟೇಟಸ್‌ ಫೀಚರ್ಸ್ ಅನ್ನು ಐಒಎಸ್ ಬೀಟಾ ಬಳಕೆದಾರರಿಗಾಗಿ ಹೊರತರಲಾಗಿದ್ದು, ಶೀಘ್ರದಲ್ಲಿಯೇ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ವಾಟ್ಸಾಪ್‌ ನವೀಕರಣ

ವಾಟ್ಸಾಪ್‌ ನವೀಕರಣ ಮಾಡುವುದರ ಜೊತೆಗೆ ಕೆಲವು ಫೀಚರ್ಸ್ ಅನ್ನು ಸಹ ಸ್ಥಗಿತಗೊಳಿಸಿದೆ. ಇನ್ಮುಂದೆ ಡೆಸ್ಕ್‌ಟಾಪ್‌ ಬಳಕೆದಾರರು ವ್ಯೂ ಒನ್ಸ್‌ ಮೆಸೆಜ್‌ ಅನ್ನು ಪಡೆಯುವುದನ್ನು ನಿಲ್ಲಿಸಲಾಗಿದೆ. ಇದಕ್ಕೆ ಕಾರಣ ನೀಡಿರುವ ವಾಟ್ಸಾಪ್‌, ಭದ್ರತಾ ಉದ್ದೇಶಗಳಿಂದಾಗಿ ಈ ನಿಯಮ ಜಾರಿ ಮಾಡಿದ್ದೇವೆ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್ಸ್‌ ಇರಲಿದೆ ಎಂದು ಸ್ಪಷ್ಟನೆ ನೀಡಿದೆ.

 WABetaInfo

ವಾಟ್ಸಾಪ್‌ನ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ WABetaInfo ಈ ಬಗ್ಗೆ ವರದಿ ನಿಡಿದ್ದು, ವ್ಯೂ ಒನ್ಸ್‌ ಸಂದೇಶವನ್ನು ಡೆಸ್ಕ್‌ಟಾಪ್‌ನಲ್ಲಿ ವೀಕ್ಷಿಸಲು ಸಾಧ್ಯವಿಲ್ಲ. ಇದು ವಾಟ್ಸಾಪ್‌ ವೆಬ್/ಡೆಸ್ಕ್‌ಟಾಪ್ ನಲ್ಲಿ ಸ್ಥಗಿತವಾಗಲಿದೆ. ಬಳಕೆದಾರರು ಉದ್ದೇಶಪೂರ್ವಕವಾಗಿ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವ ಉದ್ದೇಶದಿಂದ ವೆಬ್‌ನಲ್ಲಿ ವಾಟ್ಸಾಪ್‌ ತೆರೆದು ಈ ಪ್ರಕ್ರಿಯೆ ನಡೆಸುತ್ತಿದ್ದರು. ಇದು ಭದ್ರತೆಗೆ ಧಕ್ಕೆ ತರುತ್ತದೆ ಎಂದು ತಿಳಿದು ಸ್ಥಗಿತಗೊಳಿಸಲಾಗಿದೆ ಎಂದು ಉಲ್ಲೇಖಿಸಿದೆ.

Best Mobiles in India

English summary
Continuous update processes are going on in WhatsApp. Meanwhile, an option has been given to view the status from WhatsApp frofile on iPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X