ಎಮೋಜಿ ರಿಯಾಕ್ಷನ್‌ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಮಾಡಿದ ವಾಟ್ಸಾಪ್‌!

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ಗೆ ಪರ್ಯಾಯವಾಗಿ ಅನೇಕ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು ಬಂದರೂ ಕೂಡ ವಾಟ್ಸಾಪ್‌ ಹತ್ತಿರವೂ ಕೂಡ ಸುಳಿಯುವುದಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಅಲ್ಲದೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ಫೀಚರ್ಸ್‌ಗಳನ್ನು ಕಾಲಕ್ಕೆ ಅನುಗುಣವಾಗಿ ಅಪ್ಡೇಟ್‌ ಮಾಡುತ್ತಾ ಬಂದಿದೆ. ಅದರಂತೆ ಇದೀಗ ತನ್ನ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ನಲ್ಲಿ ಮಹತ್ತರವಾದ ಬದಲಾವಣೆ ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಪರಿಚಯಿಸಿರುವ ಜನಪ್ರಿಯ ಫೀಚರ್ಸ್‌ಗಳಲ್ಲಿ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ ಕೂಡ ಒಂದಾಗಿದೆ. ಇತ್ತೀಚಿಗಷ್ಟೆ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ ಸೇರಿದ್ದ ಈ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಯನ್ನು ಮಾಡಲಾಗಿದೆ. ಎಮೋಜಿ ರಿಯಾಕ್ಷನ್‌ ಫೀಚರ್ಸ್‌ ಅನ್ನು ಪರಿಚಯಿಸಿದ ಪ್ರಾರಂಭದಲ್ಲಿ ಬಳಕೆದಾರರು ಕೇವಲ ಆರು ಎಮೋಜಿ ರಿಯಾಕ್ಷನ್‌ಗಳಿಗೆ ಸೀಮಿತವಾಗಿತ್ತು. ಇದರಲ್ಲಿ ಲೈಕ್ಸ್‌, ಪ್ರೀತಿ, ನಗು, ಆಶ್ಚರ್ಯ, ದುಃಖ ಮತ್ತು ಧನ್ಯವಾದ ಸೂಚಿಸುವ ಎಮೋಜಿಗಳನ್ನು ಬಳಸಬಹುದಾಗಿತ್ತು.

ವಾಟ್ಸಾಪ್‌

ವಾಟ್ಸಾಪ್‌ ಇದೀಗ ಎಮೋಜಿ ರಿಯಾಕ್ಷನ್‌ನಲ್ಲಿ ಎಲ್ಲಾ ಮಾದರಿಯ ಎಮೋಜಿಗಳನ್ನು ಬಳಸುವುದಕ್ಕೆ ಅವಕಾಶ ನೀಡಿದೆ. ಇದರಿಂದ ನಿಮಗೆ ಬರುವ ಸಂದೇಶಗಳಿಗೆ ನೀವು ಯಾವುದೇ ಮಾದರಿಯ ಎಮೋಜಿ ಮೂಲಕ ರಿಯಾಕ್ಷನ್‌ ನೀಡಬಹುದಾಗಿದೆ. ಇದರ ಬಗ್ಗೆ ಮೆಟಾ ಕಂಪೆನಿಯ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ವಾಟ್ಸಾಪ್‌ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ನ ಹೊಸ ಬದಲಾವಣೆಯ ಬಗ್ಗೆ ತಿಳಿಸಿದ್ದಾರೆ. ಎಲ್ಲಾ ಎಮೋಜಿಗಳನ್ನು ಬಳಸುವುದಕ್ಕೆ ಅವಕಾಶ ಎಲ್ಲರಿಗೂ ಲಭ್ಯವಿರುವುದರ ಬಗ್ಗೆ ತಿಳಿಸಿದ್ದಾರೆ. ಹಾಗಾದ್ರೆ ವಾಟ್ಸಾಫ್‌ನಲ್ಲಿ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ ವೈಖರಿ ಏನು? ಇದರಲ್ಲಿ ಆಗಿರುವ ಹೊಸ ಬದಲಾವಣೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಎಮೋಜಿ ರಿಯಾಕ್ಷನ್‌

ವಾಟ್ಸಾಪ್‌ ಎಮೋಜಿ ರಿಯಾಕ್ಷನ್‌

ವಾಟ್ಸಾಪ್‌ ಇತ್ತೀಚಿನ ಅಪ್ಡೇಟ್‌ ಆವೃತ್ತಿ ಬಳಸುತ್ತಿರುವರಿಗೆ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ ಬಗ್ಗೆ ತಿಳಿದಿರುತ್ತದೆ. ವಾಟ್ಸಾಪ್‌ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ನ ವಿಶೇಷತೆ ಏನೆಂದರೆ ನಿಮ್ಮ ಚಾಟ್‌ಗಳಲ್ಲಿ ಬರುವ ಸಂದೇಶಗಳಿಗೆ ನೀವು ತತ್‌ ಕ್ಷಣದಲ್ಲಿ ಎಮೋಜಿಗಳ ಮೂಲಕ ರಿಯಾಕ್ಷನ್‌ ನೀಡುವುದಕ್ಕೆ ಅವಕಾಶ ಸಿಗಲಿದೆ. ಅಂದರೆ ನಿಮಗೆ ಯಾವುದೋ ಒಂದು ಆಶ್ಚರ್ಯಕರವಾದ ಸಂದೇಶ ಬಂದರೆ ಅದಕ್ಕೆ ಪ್ರತಿಯಾಗಿ ನೀವು ಆಶ್ಚರ್ಯ ಸೂಚಕವಾದ ಎಮೋಜಿ ಮೂಲಕ ರಿಯಾಕ್ಷನ್‌ ನೀಡಬಹುದಾಗಿದೆ. ಮೇ ತಿಂಗಳ ಪ್ರಾರಂಭದಲ್ಲಿ ಪರಿಚಯಿಸಲಾದ ಈ ಫೀಚರ್ಸ್‌ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಇದೀಗ ಹೊಸ ಅಪ್ಡೇಟ್‌ ಅನ್ನು ಮಾಡಲಾಗಿದೆ.

ಎಮೋಜಿ

ಎಮೋಜಿ ರಿಯಾಕ್ಷನ್‌ ಫೀಚರ್ಸ್‌ ಅನ್ನು ಪ್ರಾರಂಭಿಸಿದ ಆರಂಭದ ದಿನಗಳಲ್ಲಿ ಕೇವಲ 6 ರೀತಿಯ ರಿಯಾಕ್ಷನ್‌ಗಳಿಗೆ ಮಾತ್ರ ಅವಕಾಶ ಸೀಮಿತವಾಗಿತ್ತು. ಇದರಲ್ಲಿ ನೀವು ಲೈಕ್ಸ್‌, ಪ್ರೀತಿ, ನಗು, ಆಶ್ಚರ್ಯ, ದುಃಖ ಮತ್ತು ಧನ್ಯವಾದಗಳು ಎಮೋಜಿಗಳು ಸೇರಿದ್ದವು. ಆದರೆ ಇದೀಗ ಬಳಕೆದಾರರು ಸಂದೇಶಗಳಿಗೆ ರಿಯಾಕ್ಷನ್‌ ನೀಡುವಾಗ ಯಾವುದೇ ಮಾದರಿಯ ಎಮೋಜಿ ಬಳಸುವುದಕ್ಕೆ ಅವಕಾಶವಿದೆ. ಈ ಹೊಸ ಅವಕಾಶವನ್ನು ಎಲ್ಲರಿಗೂ ರೋಲ್‌ಔಟ್‌ ಮಾಡಿರುವುದಾಗಿ ಮೆಟಾ ಕಂಪೆನಿ ಸಿಇಒ ಮಾರ್ಕ್ ಜುಕರ್‌ಬರ್ಗ್ ಸೋಮವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ರಿಯಾಕ್ಷನ್‌

ಎಮೋಜಿ ರಿಯಾಕ್ಷನ್‌ ಅಪ್ಡೇಟ್‌ ರೋಲ್‌ಔಟ್‌ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಮಾರ್ಕ್ ಜುಕರ್‌ಬರ್ಗ್ ಅವರು ರೋಬೋಟ್ ಫೇಸ್, ಫ್ರೆಂಚ್ ಫ್ರೈಸ್, ಮ್ಯಾನ್ ಸರ್ಫಿಂಗ್, ಸನ್‌ಗ್ಲಾಸ್ ಸ್ಮೈಲಿ, 100% ಚಿಹ್ನೆ ಮತ್ತು ಮುಷ್ಟಿ ಬಂಪ್ ಸೇರಿದಂತೆ ಅನೇಕ ರಿಯಾಕ್ಷನ್‌ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಇನ್ನು ನೀವು ಸಂದೇಶಗಳಿಗೆ ಯಾವುದೇ ಎಮೋಜಿ ರಿಯಾಕ್ಷನ್‌ ಕಳುಹಿಸುವುದಕ್ಕೆ ಸಂದೇಶದ ಮೇಲೆ ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ, ನಂತರ ಬರುವ ಎಮೋಜಿ ಪಾಪ್‌ ಅಪ್‌ನಲ್ಲಿ '+' ಬಟನ್ ಅನ್ನು ಒತ್ತಿರಿ, ಇದರಲ್ಲಿ ಎಮೋಜಿ ಸೆಲೆಕ್ಟರ್ ಕಾಣಿಸಲಿದೆ. ಇಲ್ಲಿ ನಿಮಗೆ ಬೇಕಾದ ಎಮೋಜಿಯನ್ನು ಆಯ್ಕೆ ಮಾಡಬಹುದಾಗಿದೆ.

ಎಮೋಜಿ

ಇನ್ನು ವಾಟ್ಸಾಪ್‌ನ ಎಮೋಜಿ ರಿಯಾಕ್ಷನ್‌ ಮೂಲಕ ನೀವು ಸಂದೇಶಗಳಿಗೆ ನಿಮ್ಮ ಭಾವನೆಯನ್ನು ಎಮೋಜಿ ಮೂಲಕ ತಿಳಿಸಬಹುದು. ಇದರಿಂದ ನೀವು ನಿಮ್ಮ ವೈಯುಕ್ತಿಕ ಭಾವನೆಗಳನ್ನು ಎಮೋಜಿ ಮೂಲಕ ತಿಳಿಸಬಹುದಾಗಿದೆ. ಇದೇ ಕಾರಣಕ್ಕೆ ಎಮೋಜಿ ರಿಯಾಕ್ಷನ್‌ ಫೀಚರ್ಸ್‌ ಕಳೆದ ಎರಡು ತಿಂಗಳಿನಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿದೆ. ಇದೀಗ ಹೊಸ ಅಪ್ಡೇಟ್‌ ಲಭ್ಯವಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯತೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಹೊಸ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವುಗಳಲ್ಲಿ ಕೆಲವು ಫೀಚರ್ಸ್‌ಗಳು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಇನ್ನು ಹಲವು ಫೀಚರ್ಸ್‌ಗಳು ಅಭಿವೃದ್ಧಿ ಹಂತದಲ್ಲಿರುವುದಾಗಿ ವರದಿಯಾಗಿದೆ. ಇದರಲ್ಲಿ ಅನೇಕ ಫೀಚರ್ಸ್‌ಗಳ ಬಗ್ಗೆ ಈಗಾಗಲೇ ಮಾಹಿತಿ ಲೀಕ್‌ ಆಗಿದ್ದು, ಬಳಕೆದಾರರ ಗಮನ ಸೆಳೆದಿವೆ. ಬಳಕೆದಾರರ ಅನುಭವ ಸುದಾರಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಅಭಿವೃದ್ಧಿ ಪಡಿಸುತ್ತಿರುವ ಫೀಚರ್ಸ್‌ಗಳು ಸಾಕಷ್ಟು ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿವೆ. ಇದರಲ್ಲಿ ವೀಡಿಯೋ ಕಾಲ್‌ನಲ್ಲಿ ವರ್ಚುವಲ್‌ ಅವತಾರ್‌ ಹಾಗೂ ಲಾಸ್ಟ್‌ ಸೀನ್‌ ನೋಡದಂತೆ ನಿರ್ದಿಷ್ಟ ಜನರನ್ನು ಹೈಡ್‌ ಮಾಡುವ ಫೀಚರ್ಸ್‌ಗಳು ಸೇರಿವೆ.

ವರ್ಚುವಲ್‌ ಅವತಾರ್‌

ವರ್ಚುವಲ್‌ ಅವತಾರ್‌

ವಾಟ್ಸಾಪ್‌ ವೀಡಿಯೊ ಕಾಲ್‌ನಲ್ಲಿ ವರ್ಚುವಲ್‌ ಅವತಾರ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಅಲ್ಲದೆ ಈ ಅವತಾರ್‌ಗಳನ್ನು ದೀರ್ಘಕಾಲದವರೆಗೆ ವೀಡಿಯೊ ಕಾಲ್‌ನಲ್ಲಿ ಬಳಸುವುದಕ್ಕೆ ಸಾಧ್ಯವಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ವಾಟ್ಸಾಪ್‌ ತನ್ನದೇ ಆದ ಮೆಮೊಜಿ/ಬಿಟ್‌ಮೊಜಿ ಪರ್ಯಾಯ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಆದರಿಂದ ಈ ಆಯ್ಕೆಯನ್ನು ಯಾವುದೇ ಸಮಯದಲ್ಲಿ ವೀಡಿಯೊ ಕರೆಗಳಲ್ಲಿ ಬಳಸುವುದಕ್ಕೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನಿರ್ದಿಷ್ಟ ಜನರಿಗೆ ಆನ್‌ಲೈನ್‌ ಸ್ಟೇಟಸ್‌ ಕಾಣದಂತೆ ಮಾಡುವುದು

ನಿರ್ದಿಷ್ಟ ಜನರಿಗೆ ಆನ್‌ಲೈನ್‌ ಸ್ಟೇಟಸ್‌ ಕಾಣದಂತೆ ಮಾಡುವುದು

ವಾಟ್ಸಾಪ್‌ನ ಹೊಸ ಆಯ್ಕೆಯ ಮೂಲಕ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಸಧ್ಯವಾಗಲಿದೆ. ಪ್ರಸ್ತುತ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದೆ. ಆದ್ದರಿಂದ ಬೀಟಾ ಬಳಕೆದಾರರಿಗೂ ಕೂಡ ಈ ಫೀಚರ್ಸ್‌ ಇನ್ನೂ ಲಭ್ಯವಿಲ್ಲ.

Best Mobiles in India

English summary
WhatsApp Reactions Feature Is Getting An Update Rolling Out Globally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X