ಹೊಸ ಪ್ರೈವೆಸಿ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!..ಪ್ರಯೋಜನಗಳೇನು?

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನು ಅನೇಕ ಫೀಚರ್ಸ್‌ಗಳಲ್ಲಿ ಪರಿಚಯಿಸುತ್ತಿದೆ. ಸದ್ಯ ಇದೀಗ ಬಳಕೆದಾರರಿಗೆ ಅನುಕೂಲವಾಗುವ ಪ್ರೈವೆಸಿ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ವಾಟ್ಸಾಪ್‌ ಚಾಟ್‌ಗಳಲ್ಲಿ ನಿಮ್ಮ ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡಲು ನಿಮಗೆ ಅನುಮತಿಸಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಬಹು ನಿರೀಕ್ಷಿತ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಫೀಚರ್ಸ್‌ ಇದೀಗ ರೂಲ್‌ಔಟ್‌ ಆಗಿದೆ. ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ಆನ್‌ಲೈನ್‌ ಸ್ಟೇಟಸ್‌ ಯಾರಿಗೂ ಕಾಣದಂತೆ ಹೈಡ್‌ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರಿಗೆ ನೀವು ಆನ್‌ಲೈನ್‌ ಸ್ಟೇಟಸ್‌ ಕಾಣದಂತೆ ಮರೆ ಮಾಡಬಹುದು. ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ನಿಮ್ಮ ಆನ್‌ಲೈನ್‌ ಸ್ಟೇಸ್‌ ಯಾರಿಗೂ ಕಾಣವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರ.

ವಾಟ್ಸಾಪ್‌ನಲ್ಲಿ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯಿರಿ
ಹಂತ:2 ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿರಿ.
ಹಂತ:3 ಇದೀಗ, ಸೆಟ್ಟಿಂಗ್ಸ್‌ >ಅಕೌಂಟ್‌> ಪ್ರೈವೆಸಿ ಆಯ್ಕೆಯನ್ನು ಟ್ಯಾಪ್ ಮಾಡಿರಿ.
ಹಂತ:4 ಇದರಲ್ಲಿ ನೀವು ಈಗ "ಲಾಸ್ಟ್‌ ಸೀನ್‌ ಆಂಡ್‌ ಆನ್‌ಲೈನ್" ಫೀಚರ್ಸ್‌ ಕಾಣಲಿದೆ.
ಇದರ ಮೇಲೆ ಟ್ಯಾಪ್ ಮಾಡಿ ನಂತರ Nobody ಮತ್ತು "Same as last seen" ಆಯ್ಕೆಯನ್ನು ಆರಿಸಿ. ಇದರಲ್ಲಿ ನೀವು "ಯಾರೂ ಇಲ್ಲ" ಅನ್ನು ಟ್ಯಾಪ್ ಮಾಡಿದಾಗ, ನೀವು ಪ್ರತಿಯೊಬ್ಬರಿಂದ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡಲು ಸಾಧ್ಯವಾಗಲಿದೆ. ನೀವು "My Contacts" ಆಯ್ಕೆಯನ್ನು ಸಹ ಆಯ್ಕೆ ಮಾಡಬಹುದು. ಇದರಿಂದ ನಂತರ ನಿಮ್ಮ ಆನ್‌ಲೈನ್ ಸ್ಟೇಟಸ್‌ ನಿಮ್ಮ ಕಂಟ್ಯಾಕ್ಟ್‌ಗಳಿಗೆ ಮಾತ್ರ ಲಭ್ಯವಾಗಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ 32 ಜನರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ವೀಡಿಯೋ ಕರೆಮಾಡಲು ಅನುಮತಿಸುವದರ ಬಗ್ಗೆ ಘೋಷಣೆ ಮಾಡಿದೆ. ಆದರೆ ಈ ಫೀಚರ್ಸ್‌ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಟೈಮ್‌ಲೈನ್‌ ಹಂಚಿಕೊಂಡಿಲ್ಲ. ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಕಾಲ್‌ 32 ಬಳಕೆದಾರರನ್ನು ಬೆಂಬಲಿಸುತ್ತದೆ ಎಂದು ವಾಟ್ಸಾಪ್‌ನ FAQ ಪೇಜ್‌ ನಲ್ಲಿ ಈಗಾಗಲೇ ವಿವರಿಸಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಗ್ರೂಪ್‌ನ ಒಂದು ಗುಂಪು 32 ಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿದ್ದರೆ, ಗ್ರೂಪ್‌ ಕಾಲ್‌ ಕ್ರಿಯೆಟ್‌ ಮಾಡುವವರು ಕಾಲ್‌ಗೆ ಯಾರೆಲ್ಲಾ ಸೇರಿಸಬಹುದು ಎಂಬುದ್ನು ಆರಿಸಬೇಕಾಗುತ್ತದೆ. ಇದರಿಂದ 32ಕ್ಕಿಂತ ಹೆಚ್ಚಿನ ಜನರು ಇದ್ದಾಗ ನಿಮಗೆ ಅಗತ್ಯ ಎನಿಸಿದವರನ್ನು ಮಾತ್ರ ವಾಟ್ಸಾಪ್‌ ವೀಡಿಯೊ ಕರೆಗೆ ಸೇರಿಸಬಹುದಾಗಿದೆ. ಕಾಲ್‌ ಲಿಂಕ್ಸ್‌ ಮತ್ತು ವೀಡಿಯೊ ಕಾಲ್‌ಗೆ 32 ಜನರನ್ನು ಸೇರ್ಪಡೆ ಮಾಡುವ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಫೀಚರ್‌ ಪರಿಚಯಿಸಿದೆ. ಇದು ಬಳಕೆದಾರರು ಚಾಟ್ ಮಾಡುವಾಗ ಹೆಚ್ಚಿನ ಭದ್ರತೆ ನೀಡುತ್ತದೆ. ಇನ್ನು ವಾಟ್ಸಾಪ್‌ ಸಂಸ್ಥೆಯು ಬಳಕೆದಾರರು ಚಾಟ್‌ ಮಾಡುವಾಗ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಬಗ್ಗೆ ಹೈಲೈಟ್‌ ಮಾಡುತ್ತಲೇ ಸಾಗಿದೆ. ವಾಟ್ಸಾಪ್‌ನಲ್ಲಿ ಬಳಕೆದಾರರು ಕಳುಹಿಸುವ ಎಲ್ಲ ಮೆಸೆಜ್‌ಗಳು ಎನ್‌ಕ್ರಿಪ್ಟ್ (encrypted) ಆಗಿರುತ್ತವೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಪರೀಕ್ಷಿಸುತ್ತಿರುವ ಪ್ರಮುಖ ಫೀಚರ್‌ಗಳಲ್ಲಿ ಕೆಪ್ಟ್‌ ಮೆಸೇಜಸ್‌ ಎನ್ನುವ ಫೀಚರ್‌ ಕೂಡ ಸೇರಿದೆ. ಇದರಿಂದ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಫೀಚರ್‌ ಬಳಸುವವರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ. ಈ ಫೀಚರ್‌ ಮೂಲಕ ನೀವು ಡಿಸ್‌ಅಪಿಯರಿಂಗ್‌ ಸಂದೇಶಗಳನ್ನು ಕೂಡ ಉಳಿಸಿಕೊಳ್ಳುವುದಕ್ಕೆ ಸಾದ್ಯವಾಗಲಿದೆ ಎಂದು ವರದಿಯಾಗಿದೆ.

Best Mobiles in India

English summary
Whatsapp releases new privacy feature for android devices

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X