ವಾಟ್ಸಾಪ್‌ನಲ್ಲಿ ನೂತನ ಫೀಚರ್ಸ್‌; ಅನಿಮೇಟೆಡ್ ಅವತಾರ್ ಬಗ್ಗೆ ಇಲ್ಲಿದೆ ವಿವರ

|

ಪ್ರಸ್ತುತ ಬಹುಪಾಲು ಮಂದಿ ಪ್ರಮುಖ ಮೆಸೆಜಿಂಗ್‌ ಆಪ್‌ ಆದ ವಾಟ್ಸಾಪ್‌ ಬಳಕೆ ಮಾಡುತ್ತಿದ್ದಾರೆ. ಅದರಂತೆ ವಾಟ್ಸಾಪ್‌ ಸಹ ಕಾಲಕಾಲಕ್ಕೆ ನವೀಕರಣ ಮಾಡಿಕೊಂಡು ಬರುತ್ತಿದ್ದು, ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಇದರ ನಡುವೆ ಈಗ ವಾಟ್ಸಾಪ್‌ ಮತ್ತೊಂದು ಹೊಸ ನವೀಕರಣವೊಂದನ್ನು ಮಾಡಿದ್ದು, ಬಳಕೆದಾರರಿಗೆ ಅಚ್ಚರಿ ಮೂಡಿಸಿದೆ. ಅದುವೇ ಅನಿಮೇಟೆಡ್‌ ಅವತಾರ್‌ ಫೀಚರ್ಸ್. ಇದರಲ್ಲಿ ನಿಮ್ಮನ್ನು ನೀವು ಅವತಾರ್‌ ರೂಪದಲ್ಲಿ ನೋಡಬಹುದು.

ಫೇಸ್‌ಬುಕ್‌

ಹೌದು, ಮೆಟಾ ಸಂಸ್ಥೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅವತಾರ್‌ ಫೀಚರ್ಸ್‌ ಪರಿಚಯಿಸಿದ ನಂತರ ಇದೀಗ ವಾಟ್ಸಾಪ್‌ ಗೆ ಇದನ್ನು ಸೇರಿಸಲಿದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದ್ದು, ಆಪ್ ಸೆಟ್ಟಿಂಗ್‌ ಮೂಲಕ ತಮ್ಮ ವರ್ಚುವಲ್ ಗುರುತನ್ನು ವೈಯಕ್ತೀಕರಿಸಿಕೊಳ್ಳಲು ಸುಲಭ ಮಾರ್ಗವನ್ನು ಬಳಕೆದಾರರಿಗೆ ನೀಡಲಾಗುತ್ತಿದೆ ಎಂದು ಮೆಸೆಜಿಂಗ್‌ ಅಪ್‌ ತಿಳಿಸಿದೆ.

ಅವತಾರ್‌ ಸ್ಟಿಕ್ಕರ್

ಅವತಾರ್‌ ಸ್ಟಿಕ್ಕರ್

ಈ ಸಂಬಂಧ WABetaInfo ವರದಿ ಮಾಡಿದ್ದು, ವಾಟ್ಸಾಪ್‌ ಬಳಕೆದಾರರು ಒಮ್ಮೆ ತಮ್ಮದೇ ಆದ ಅವತಾರ್ ಅನ್ನು ರಚಿಸಿದ ನಂತರ ಅವರು ಚಾಟ್‌ ಸಂದರ್ಭದಲ್ಲಿಯೂ ಅವತಾರ್‌ ಪುಟ ತೆರೆದು ಅವುಗಳನ್ನು ಸ್ಟಿಕ್ಕರ್‌ಗಳ ರೀತಿಯಲ್ಲಿ ಇತರರಿಗೆ ಸೆಂಡ್ ಮಾಡಬಹುದು ಎಂದು ಹೇಳಿದೆ. ಹಾಗೆಯೇ ಕೆಲವು iOS ಬೀಟಾ ಪರೀಕ್ಷಕರು ಟೆಸ್ಟ್‌ಫ್ಲೈಟ್ ಆಪ್‌ನಿಂದ iOS 22.23.0.71 ಅಪ್‌ಡೇಟ್‌ಗಾಗಿ ವಾಟ್ಸಾಪ್‌ ಬೀಟಾವನ್ನು ಸ್ಥಾಪಿಸಿದ ನಂತರ ಅವತಾರ್ ಅನ್ನು ಹೊಂದಿಸುವ ಕೆಲಸ ನಡೆಯುತ್ತದೆ ಸಹ ತಿಳಿಸಿದೆ.

ಈ ಹಿಂದೆ 'ಅವತಾರ್‌' ಅನ್ನು ವಾಪಸ್‌ ಪಡೆಯಲಾಗಿತ್ತು

ಈ ಹಿಂದೆ 'ಅವತಾರ್‌' ಅನ್ನು ವಾಪಸ್‌ ಪಡೆಯಲಾಗಿತ್ತು

ಈ ಹಿಂದೆ ಅವತಾರವನ್ನು ಹೊಂದಿಸುವಾಗ ಈ ಫೀಚರ್ಸ್‌ನಲ್ಲಿ ಕೆಲವು ದೋಷಗಳು ಕಂಡುಬಂದಿದ್ದವು. ಪರಿಣಾಮ ರೋಲ್ ಔಟ್ ಆದ ಕೂಡಲೇ ಕಂಪೆನಿಯು ಅದನ್ನು ಹಿಂತೆಗೆದುಕೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಎಲ್ಲಾ ಪ್ರಕ್ರಿಯೆ ಮುಗಿಸಿಕೊಂಡು ವಾಟ್ಸಾಪ್‌ಗೆ ಮತ್ತೊಮ್ಮೆ ಫೀಚರ್ ಅನ್ನು ಹೊರತರಲಾಗಿದೆ.

ಸ್ಟಿಕ್ಕರ್ ಪ್ಯಾಕ್ ರಚನೆ

ಸ್ಟಿಕ್ಕರ್ ಪ್ಯಾಕ್ ರಚನೆ

ಇನ್ನು ವಾಟ್ಸಾಪ್ ನಲ್ಲಿ ಅವತಾರ್‌ ಅನ್ನು ಕಾನ್ಫಿಗರ್ ಮಾಡಿದ ನಂತರ ಆಟೋಮ್ಯಾಟಿಕ್‌ ಆಗಿ ಸ್ಟಿಕ್ಕರ್ ಪ್ಯಾಕ್ ರಚನೆಯಾಗುತ್ತದೆ . ನಂತರ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆ ಎಲ್ಲಾ ಸ್ಟಿಕ್ಕರ್‌ಗಳನ್ನು ಹಂಚಿಕೊಳ್ಳಬಹುದು. ಇದಿಷ್ಟೇ ಅಲ್ಲದೆ, ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋವಾಗಿಯೂ ಬಳಕೆ ಮಾಡಿಕೊಳ್ಳಬಹುದು ಎಂದು WABetaInfo ತನ್ನ ಬ್ಲಾಗ್‌ನಲ್ಲಿ ಉಲ್ಲೇಖಿಸಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಬಳಕೆದಾರರು ಈ ಫೀಚರ್ಸ್ ಬಳಕೆ ಮಾಡಬೇಕು ಎಂದರೆ ವಾಟ್ಸಾಪ್‌ ಸೆಟ್ಟಿಂಗ್‌ನಲ್ಲಿ ಪರಿಶೀಲನೆ ಮಾಡಬೇಕಿದೆ. ಅದರಲ್ಲಿ ಅವತಾರ್‌ ಎಂಬ ಆಯ್ಕೆ ಕಾಣಿಸಲಿಲ್ಲ ಎಂದರೆ ನಿಮ್ಮ ವಾಟ್ಸಾಪ್‌ ಅನ್ನು ಅಪ್‌ಡೇಟ್‌ ಮಾಡಿ. ಇನ್ನು ಈ ಅವತಾರ್‌ ಚಿತ್ರಕ್ಕೆ ಬೇಕಾದ ಹಿನ್ನೆಲೆ ಚಿತ್ರವನ್ನು ಸೇರಿಸಿಕೊಳ್ಳುವ ಆಯ್ಕೆಯನ್ನೂ ಸಹ ವಾಟ್ಸಾಪ್ ನೀಡಿದೆ.

ವಾಟ್ಸಾಪ್‌ನ ಇತ್ತೀಚಿನ ನವೀಕರಣಗಳೇನು?

ವಾಟ್ಸಾಪ್‌ನ ಇತ್ತೀಚಿನ ನವೀಕರಣಗಳೇನು?

ವಾಟ್ಸಾಪ್‌ನಲ್ಲಿ ನಿರ್ವಾಹಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಾಗದ ಹಾಗೆ ನೀವು ಗ್ರೂಪ್‌ನಿಂದ ಹೊರಬರಬಹುದು. ಹಾಗೆಯೇ ಮೆಸೆಜ್‌ಗಳನ್ನು ಒಮ್ಮೆ ಮಾತ್ರ ವೀಕ್ಷಿಸಲು ಹಾಗೂ ಸ್ಕ್ರೀನ್‌ಶಾಟ್ ಅನ್ನು ನಿರ್ಬಂಧಿಸಲು ಸಹ ಬಳಕೆದಾರರಿಗೆ ಅನುಮತಿ ನೀಡಿದೆ. ಈ ವೈಶಿಷ್ಟ್ಯದ ಹೊರತಾಗಿ, ಆಯ್ದ ಬೀಟಾ ಪರೀಕ್ಷಕರಿಗೆ ಮೆಸೇಜ್ ಯುವರ್ಸೆಲ್ಫ್ ಎಂಬ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

ಗ್ರೂಪ್‌ ಚಾಟ್‌ನಲ್ಲಿ ಪ್ರೋಪೈಲ್ ಫೋಟೋ

ಗ್ರೂಪ್‌ ಚಾಟ್‌ನಲ್ಲಿ ಪ್ರೋಪೈಲ್ ಫೋಟೋ

ಇದರ ಜೊತೆಗೆ ಗ್ರೂಪ್ ಚಾಟ್ ಅನುಭವವನ್ನು ಮತ್ತಷ್ಟು ಸುಧಾರಿಸುವಲ್ಲಿ ವಾಟ್ಸಾಪ್‌ ಕೆಲಸ ಮಾಡುತ್ತಿದ್ದು, ಕಂಪೆನಿಯು ಗ್ರೂಪ್ ಚಾಟ್‌ನಲ್ಲಿ ಪ್ರೊಫೈಲ್ ಫೋಟೋಗಳನ್ನು ಸೇರಿಸುತ್ತದೆ ಎಂದು ವರದಿಯಾಗಿದೆ. ಈ ಮೂಲಕ ಹೆಸರಿನ ಬದಲು ಫೋಟೋಗಳನ್ನೇ ನೋಡಿಕೊಂಡು ಗ್ರೂಪ್‌ ನಲ್ಲಿ ಸಂವಹನ ನಡೆಸಬಹುದಾಗಿದ್ದು, ಈ ಫೀಚರ್ಸ್‌ ಅನ್ನು ಕೆಲವು ಬಳಕೆದಾರರಿಗೆ ಈಗಾಗಲೇ ಪರೀಕ್ಷಾರ್ಥವಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Best Mobiles in India

English summary
At present most people are using WhatsApp. Meanwhile, WhatsApp has introduced animated avatar features to attract users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X