ಬಹುನಿರೀಕ್ಷಿತ ವಾಟ್ಸಪ್‌ 'ಫಿಂಗರ್‌ಪ್ರಿಂಟ್ ಲಾಕ್' ಈಗ ಲಭ್ಯ!

|

ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್‌' ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಮಹತ್ತರ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಹಾಗೆಯೇ ಇತ್ತೀಚಿಗೆ ವಾಟ್ಸಪ್‌ ಆಂಡ್ರಾಯ್ಡ್ ಬೇಟಾ ವರ್ಷನ್ ಬಳಕೆದಾರಿಗೆ 'ಫಿಂಗರ್‌ಪ್ರಿಂಟ್ ಲಾಕ್‌' ಫೀಚರ್‌ ಅನ್ನು ಪ್ರಾಯೋಗಿಕವಾಗಿ ನೀಡಿತ್ತು. ಆದರೆ ಇದೀಗ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ 'ಫಿಂಗರ್‌ಪ್ರಿಂಟ್ ಲಾಕ್‌' ಫೀಚರ್ ಲಭ್ಯ ಮಾಡಿದೆ. ಈ ಮೂಲಕ ಬಳಕೆದಾರರ ಪ್ರೈವೆಸಿ ಸುರಕ್ಷತೆಗೆ ಹೊಸ ರಕ್ಷಣಾ ಕವಚ ಒದಗಿಸಿದಂತಾಗಿದೆ.

ಫಿಂಗರ್‌ಪ್ರಿಂಟ್ ಲಾಕ್

ಹೌದು, ಫೇಸ್‌ಬುಕ್ ಮಾಲೀಕತ್ವದ 'ವಾಟ್ಸಪ್‌' ಅಪ್ಲಿಕೇಶನ್ ಈಗ ಆಂಡ್ರಾಯ್ಡ್‌ ಬಳಕೆದಾರರಿಗಾಗಿ 'ಫಿಂಗರ್‌ಪ್ರಿಂಟ್ ಲಾಕ್' ಫೀಚರ್‌ ಅನ್ನು ತನ್ನ ಹೊಸ ವರ್ಷನ್‌ನಲ್ಲಿ ಪರಿಚಯಿಸಿದೆ. ಆಪಲ್ ಐಫೋನ್‌ಗಳಲ್ಲಿ ವಾಟ್ಸಪ್‌ ಟಚ್ ID ಲಾಕ್‌ನಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಫಿಂಗರ್‌ಪ್ರಿಂಟ್ ಲಾಕ್‌ ಫೀಚರ್ ಹೆಚ್ಚಿನ ಪ್ರೈವೆಸಿ ನೀಡಲಿದೆ. ಹಾಗಾದರೇ ವಾಟ್ಸಪ್‌ನ ಹೊಸ ಫಿಂಗರ್‌ಪ್ರಿಂಟ್ ಫೀಚರ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಫಿಂಗರ್‌ಪ್ರಿಂಟ್ ಲಾಕ್

ಫಿಂಗರ್‌ಪ್ರಿಂಟ್ ಲಾಕ್

ವಾಟ್ಸಪ್‌ ಬಳಕೆದಾರರ ಮಾಹಿತಿ ಸುರಕ್ಷತೆಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಹೊಸದಾಗಿ ಫಿಂಗರ್‌ಪ್ರಿಂಟ್ ಲಾಕ್ ಫೀಚರ್ ಪರಿಚಯಿಸಿದೆ. ಈ ಫೀಚರ್ ವಾಟ್ಸಪ್‌ ಆಪ್‌ಗೆ ಲಾಕ್ ಒದಗಿಸಲು ನೆರವಾಗಲಿದ್ದು, ಬಳಕೆದಾರರು ಅವರ ಬೆರಳ ಗುರುತನ್ನು ಸ್ಕ್ಯಾನ್‌ ಮಾಡುವ ಮೂಲಕ ಆಪ್‌ ಲಾಕ್‌ ಮಾಡಬಹುದು ಮತ್ತು ಅನ್‌ಲಾಕ್ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಲಾಕ್‌ ತರಹವೇ ಇದು ಕೆಲಸ ಮಾಡಲಿದೆ.

ಥರ್ಡ್‌ಪಾರ್ಟ್ ಲಾಕ್ ಬೇಕಿಲ್ಲ

ಥರ್ಡ್‌ಪಾರ್ಟ್ ಲಾಕ್ ಬೇಕಿಲ್ಲ

ಪ್ರಸ್ತುತ ಬಹುತೇಕ ಆಂಡ್ರಾಯ್ಡ್ ಬಳಕೆದಾರರು ವಾಟ್ಸಪ್‌ ಆಪ್‌ ಅನ್ನು ಲಾಕ್ ಮಾಡಲು ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದ್ರೆ ವಾಟ್ಸಪ್‌ನ ಹೊಸ ಫಿಂಗರ್‌ಪ್ರಿಂಟ್ ಫೀಚರ್‌ನಿಂದಾಗಿ ಇನ್ನು ಆಂಡ್ರಾಯ್ಡ್ ಬಳಕೆದಾರರು ವಾಟ್ಸಪ್ ಅಪ್ಲಿಕೇಶನ್ ಲಾಕ್ ಮಾಡಲು ಥರ್ಡ್‌ಪಾರ್ಟಿ ಲಾಕ್‌ ಆಪ್‌ಗಳ ಮೋರೆ ಹೋಗುವ ಅಗತ್ಯ ಇರುವುದಿಲ್ಲ. ಕೈ ಬೆರಳ ಗುರುತಿನಿಂದ ಆಪ್ ಲಾಕ್ ಮಾಡಬಹುದು.

ಮೂರು ಆಯ್ಕೆಗಳಿವೆ

ಮೂರು ಆಯ್ಕೆಗಳಿವೆ

ವಾಟ್ಸಪ್‌ನ ಹೊಸ ಫಿಂಗರ್‌ಪ್ರಿಂಟ್ ಲಾಕ್ ಫೀಚರ್ ಬಳಕೆದಾರರ ಅನುಕೂಲಕ್ಕಾಗಿ ಮೂರು ಆಯ್ಕೆಗಳನ್ನು ನೀಡಿದೆ. ಅವುಗಳು ಕ್ರಮವಾಗಿ ತಕ್ಷಣ(immediately), 1 ನಿಮಿಷದ ನಂತರ(after 1 minute,) ಮತ್ತು 30 ನಿಮಿಷಗಳ ನಂತರ(after 30 minutes) ಆಗಿವೆ. ಬಳಕೆದಾರರು ಫಿಂಗರ್‌ಪ್ರಿಂಟ್ ಲಾಕ್‌ ಸೆಟ್‌ ಮಾಡುವಾಗ ಈ ಆಯ್ಕೆಗಳಲ್ಲಿ ಅಗತ್ಯವಾದುದನ್ನು ಸೆಟ್‌ ಮಾಡಿಕೊಳ್ಳಬಹುದಾಗಿದೆ.

ಫಿಂಗರ್‌ಪ್ರಿಂಟ್ ಲಾಕ್ ಹೇಗೆ ಸೆಟ್‌ ಮಾಡುವುದು

ಫಿಂಗರ್‌ಪ್ರಿಂಟ್ ಲಾಕ್ ಹೇಗೆ ಸೆಟ್‌ ಮಾಡುವುದು

ವಾಟ್ಸಪ್‌ನ ಅಪ್‌ಡೇಟ್‌ ವರ್ಷನಿನಲ್ಲಿ ಹೊಸದಾಗಿ ಲಭ್ಯವಾಗಿರುವ ಫಿಂಗರ್‌ಪ್ರಿಂಟ್ ಲಾಕ್ ಫೀಚರ್‌ ಸೆಟ್‌ ಮಾಡಲು ಈ ಮುಂದಿನ ಹಂತಗಳನ್ನು ಅನುಸರಿಸಿರಿ.
* ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್‌ ಸೆಟ್ಟಿಂಗ್ ತೆರೆಯಿರಿ
* ಆನಂತರ ಅಕೌಂಟ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
* ಆಬಳಿಕ ಪ್ರೈವೆಸಿ ಆಯ್ಕೆಯನ್ನು ಕ್ಲಿಕ್ ಮಾಡಿರಿ.
* ಕೊನೆಯಲ್ಲಿ 'ಫಿಂಗರ್‌ಪ್ರಿಂಟ್ ಲಾಕ್' ಫೀಚರ್ ಕಾಣಿಸುತ್ತದೆ.
* ನಂತರ ಟೈಮ್‌ ಲಿಮಿಟ್‌ನ ಮೂರು ಆಯ್ಕೆಗಳಲ್ಲಿ ನಿಮಗೆ ಅಗತ್ಯವಾದದನ್ನು ಸೆಟ್‌ ಮಾಡಿ.
* ಫಿಂಗರ್‌ಪ್ರಿಂಟ್ ಲಾಕ್ ಸೆಟ್‌ ಮಾಡುವಾಗ ಮೊದಲು ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಬೆರಳ ಸ್ಕ್ಯಾನ್‌ ಮಾಡಲು ಕೇಳುತ್ತದೆ.

Best Mobiles in India

English summary
Facebook-owned WhatsApp is finally bringing biometric authentication to the Android app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X