Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್'ನಲ್ಲಿ ಲಭ್ಯ!
ಜನಪ್ರಿಯ ಮೆಸೆಜ್ ಆಪ್ ವಾಟ್ಸಪ್ ಅತ್ಯುತ್ತಮ ಫೀಚರ್ಸ್‌ಗಳಿಂದ ಗಟ್ಟಿಯಾದ ಪ್ಲಾಟ್‌ಫಾರ್ಮ್ ಹೊಂದಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಮಾದರಿಯ ಓಎಸ್‌ಗಳೆರಡರಲ್ಲಿಯೂ ಲಭ್ಯವಿರುವ ವಾಟ್ಸಪ್ ಆಪ್ ಅನ್ನು ಭಾರತದಲ್ಲಿ ಸುಮಾರು 400ಮಿಲಿಯನ್ ಸಕ್ರಿಯವಾಗಿ ಬಳಕೆ ಮಾಡುತ್ತಿದ್ದರೆ. ಈಗ ಸಂಸ್ಥೆಯು ಮತ್ತೆ ನೂತನ ಫೀಚರ್ಸ್‌ಗಳನ್ನು ಪರಿಚಯಿಸಿ ಆಂಡ್ರಾಯ್ಡ್ ಬಳಕೆದಾರರಿಗೆ ಖುಷಿ ಸಮಾಚಾರ ಹೊರಹಾಕಿದೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಮೆಸೆಜ್ ಅಪ್ಲಿಕೇಶನ್ ಈಗಂತೂ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಸಾಗಿದ್ದು, ಇತ್ತೀಚಿಗೆ ಬಳಕೆದಾರರ ಪ್ರೈವೆಸಿ ಕುರಿತಾಗಿ ಹಲವು ಫೀಚರ್‌ಗಳನ್ನು ಬಿಡುಗಡೆ ಮಾಡಿತ್ತು. ಮತ್ತೆ ಅದೇ ಹಾದಿಯಲ್ಲಿರುವ ಸಂಸ್ಥೆಯು ಈಗ ಫಿಂಗರ್‌ಪ್ರಿಂಟ್ ಅನ್‌ಲಾಕ್, ಫ್ರಿಕ್ವೆಟ್ಲಿ ಫಾರ್ವರ್ಡೆಡ್, ಸತತ ವಾಯಿಸ್ ಮೆಸೆಜ್ ಮತ್ತು ಗ್ರೂಪ್ ಇನ್ವಿಟೇಶನ್ ಆಯ್ಕೆಗಳನ್ನು ನೂತನವಾಗಿ ಫೀಚರ್‌ಗಳನ್ನು ಸೇರಿಸಿದೆ.

ವಾಟ್ಸಪ್ ಸಂಸ್ಥೆಯು ಈ ಮೊದಲೆ ಈ ನಾಲ್ಕು ಫೀಚರ್ಸ್‌ಗಳನ್ನು ಘೋಷಿಸಿತ್ತು. ಆದ್ರೆ ಈಗ ಅವುಗಳನ್ನು ಆಂಡ್ರಾಯ್ಡ್ ಬಳಕೆದಾರರ ಬಳಕೆಗೆ ಮುಕ್ತವಾಗಿಸಿದೆ. ಅವುಗಳಲ್ಲಿ ಮುಖ್ಯವಾಗಿ ಫಿಂಗರ್‌ಪ್ರಿಂಟ್ ಅನ್‌ಲಾಕ್ ಫೀಚರ್‌ಗಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಕುತೂಹಲದಿಂದ ಕಾಯುತ್ತಿದ್ದರು. ಹಾಗಾದರೇ ವಾಟ್ಸಪ್ ಸಂಸ್ಥೆಯು ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆಗಳೆನು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಫಿಂಗರ್‌ಪ್ರಿಂಟ್ ಅನ್‌ಲಾಕ್
ವಾಟ್ಸಾಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗಾಗಿ ಅಂತಿಮವಾಗಿ ಬಹುನಿರೀಕ್ಷಿತ 'ಫಿಂಗರ್‌ಪ್ರಿಂಟ್' ಫೀಚರ್ ಆಯ್ಕೆ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಬಳಸಿ ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಬೆರಳಗುರುತಿನ ಮೂಲಕ ವಾಟ್ಸಪ್ ಆಪ್ ಅನ್ನು ಲಾಕ್ ಮಾಡಬಹುದಾಗಿದೆ. ಹೀಗಾಗಿ ವಾಟ್ಸಪ್ ಆಪ್ ಲಾಕ್ ಮಾಡಲು ಪ್ರತ್ಯೇಕ ಥರ್ಡ್‌ಪಾರ್ಟಿ ಆಪ್ಸ್ ಅಗತ್ಯ ಇರುವುದಿಲ್ಲ.

ಫ್ರೀಕ್ವೆಟ್ಲಿ ಫಾರ್ವರ್ಡೆಡ್ ಮೆಸೆಜ್
ಮೆಸೆಜ್‌ಗಳ ಮೂಲಕ ಸುಳ್ಳು ಸುದ್ದಿಗಳು ಹರಡದಂತೆ ತಡೆಯುವಲ್ಲಿ ಕಾರ್ಯಪ್ರವೃತ್ತವಾಗಿರುವ ವಾಟ್ಸಪ್, ಅದಕ್ಕಾಗಿಯೇ ಫ್ರೀಕ್ವೆಟ್ಲಿ ಫಾರ್ವರ್ಡೆಡ್ ಆಯ್ಕೆಯ ಲೆಬಲ್ ಪರಿಚಯಿಸಿದೆ. ಒಂದು ಮೆಸೆಜ್ ಐದು ಬಾರಿ ಫಾರ್ವರ್ಡ್ ಆದರೆ ಆ ಮೆಸೆಜ್ ಹೆಚ್ಚು ಫಾರ್ವರ್ಡ್ ಆಗುತ್ತಿರುವ ಮೆಸೆಜ್ ಎಂದು ಗುರುತಿಸಿತ್ತದೆ. ಕೆಲವೊಮ್ಮೆ ಒಂದು ಸುಳ್ಳು ಮೆಸೆಜ್ ಅನೇಕ ಬಾರಿ ಫಾರ್ವರ್ಡ್ ಆಗಿ ತಪ್ಪು ಮಾಹಿತಿಗೆ ದಾರಿ ಮಾಡುತ್ತದೆ. ಈ ಸಮಸ್ಯೆ ತಡೆಗೆ ಈ ಆಯ್ಕೆ ನೆರವಾಗಲಿದೆ.

ವಾಯಿಸ್ ಮೆಸೆಜ್ ಅಪ್‌ಡೇಟ್
ವಾಟ್ಸಪ್‌ನಲ್ಲಿ ವಾಯಿಸ್ ಮೆಸೆಜ್ ಆಯ್ಕೆಯು ಸಹ ಹೆಚ್ಚು ಜನಪ್ರಿಯವಾಗಿದ್ದು, ಈಗ ಮತ್ತಷ್ಟು ಗ್ರಾಹಕ ಸ್ನೇಹಿಯಾಗಲಿದೆ. ಕಂಪೆನಿಯು ತನ್ನ ವಾಯಿಸ್ ಮೆಸೆಜ್ ಟೂಲ್ ಅನ್ನು ಅಪ್‌ಡೇಟ್ ಮಾಡಿದ್ದು, ಮಲ್ಟಿಪ;್ ವಾಯಿಸ್ ಮೆಸೆಜ್‌ಗಳು ಒಂದಾದ ಮೇಲೆ ಒಂದರಂತೆ ಆಟೋಮ್ಯಾಟಿಕ್ ಆಗಿ ಪ್ಲೇ ಆಗುತ್ತವೆ. ಬಳಕೆದಾರರು ಪ್ರತಿ ವಾಯಿಸ್ ಮೆಸೆಜ್ ಕೇಳಲು ಬ್ಯಾಕ್ ಹೋಗುವ ಅಗತ್ಯ ಇರುವುದಿಲ್ಲ.

ಗ್ರೂಪ್ ಇನ್ವಿಟೇಶನ್
ವಾಟ್ಸಪ್‌ನಲ್ಲಿ ಅನೇಕ ಹೊಸ ಗ್ರೂಪ್‌ಗಳಗಳನ್ನು ಕ್ರಿಯೆಟ್ ಮಾಡುತ್ತಿರುತ್ತಾರೆ, ಕೆಲವೊಮ್ಮೆ ಒತ್ತಿಗೆ ಪಡಿಯದೆ ಹೊಸ ಗ್ರೂಪ್‌ಗಳಲ್ಲಿ ಸೇರಿಸುತ್ತಾರೆ ಆಗ ಕಿರಿಕಿರಿ ಎನಿಸುತ್ತದೆ. ಆದ್ರೆ ಈ ಹೊಸ ಫೀಚರ್‌ನಿಂದ ಅಂಥಹ ಕಿರಿಕಿರಿ ಇನ್ನು ದೂರವಾಗಲಿದೆ. ಬಳಕೆದಾರರು ಯಾರಿಗೂ ಇಲ್ಲ (nobody) ಆಯ್ಕೆ ಸೆಟ್ ಮಾಡಿಬಿಟ್ಟರೇ ಹೊಸ ಗ್ರೂಪ್‌ಗೆ ಸೇರಿಸಿದರು, ಗ್ರೂಪ್ ಸೇರಬೇಕೋ ಅಥವಾ ಬೇಡವೊ ಎಂದು ನಿಮಗೆ ನಿರ್ಧರಿಸುವ ಆಯ್ಕೆ ಸಿಗಲಿದೆ.

ನೋಕಿಯಾ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗ ಕಡಿಮೆ ಬೆಲೆಗೆ ಲಭ್ಯ!
ಹೆಡ್‌ಫೋನ್ ಮತ್ತು ಇಯರ್‌ಫೋನ್‌ಗಳು ಮ್ಯೂಸಿಕ್ ಕೇಳಲು ಅತ್ಯುತ್ತಮ ಡಿವೈಸ್‌ಗಳಾಗಿವೆ. ಸದ್ಯ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುವ ವಾಯರ್‌ಲೆಸ್ ಇಯರ್‌ಬಡ್ಸ್‌ಗಳು ಮತ್ತು ಇಯರ್‌ಫೋನ್‌ಗಳು ಚಾಲ್ತಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿವೆ. ಈ ನಿಟ್ಟಿನಲ್ಲಿ ನೋಕಿಯಾ ಸಂಸ್ಥೆಯ ಆಕ್ಟಿವ್ ವಾಯರ್‌ಲೆಸ್ ಇಯರ್‌ಬಡ್ಸ್ ಮತ್ತು ಇಯರ್‌ಫೋನ್ ಖರೀದಿಸುವವರಿಗೆ ಸಂತಸದ ಸುದ್ದಿ ಇದೆ.
ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯ ನೋಕಿಯಾ BH-501, ನೋಕಿಯಾ BH-701 ಪ್ರೊ ಮತ್ತು ನೋಕಿಯಾ BH-705 ಆಕ್ಟಿವ್ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಈ ಡಿವೈಸ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. ಇ ಕಾಮರ್ಸ್ ದೈತ್ಯ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಗ್ರಾಹಕರಿಗೆ ಡಿಸ್ಕೌಂಟ್ ಬೆಲೆಯಲ್ಲಿ ದೊರೆಯಲಿವೆ. ಹಾಗಾದರೇ ನೋಕಿಯಾ ಸಂಸ್ಥೆಯ ಈ ವಾಯರ್‌ಲೆಸ್ ಇಯರ್‌ಫೋನ್‌ಗಳ ಫೀಚರ್ಸ್ ಕುರಿತು ಮುಂದೆ ನೋಡೋಣ ಬನ್ನಿರಿ.

ನೋಕಿಯಾ ಇಯರ್‌ಫೋನ್ ವೇರಿಯಂಟ್ಸ್
ಅಮೆಜಾನ್‌ನಲ್ಲಿಗ ನೋಕಿಯಾ ಸಂಸ್ಥೆಯು ತನ್ನ ಜನಪ್ರಿಯ ಇಯರ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆ ಆಗಿದೆ. BH-501 ಆಕ್ಟಿವ್ ವಾಯರ್‌ಲೆಸ್ ಇಯರ್‌ಫೋನ್ 2,499ರೂ.ಗಳಿಗೆ ಲಭ್ಯವಾಗುತ್ತಿದ್ದು, ನೋಕಿಯಾ BH-701 ಪ್ರೊ ಇಯರ್‌ಫೋನ್ 5,499ರೂ.ಗಳಿಗೆ ದೊರೆಯುತ್ತಿದೆ. ಮತ್ತು ನೋಕಿಯಾ BH-705 ಇಯರ್‌ಫೋನ್ 7,359ರೂ.ಗಳಿಗೆ ಗ್ರಾಹಕರ ಕೈಸೇರಲಿದೆ.

ನೋಕಿಯಾ BH-501
ನೋಕಿಯಾದ ಈ ಇಯರ್‌ಫೋನ್ ನೆಕ್‌ಬ್ಯಾಂಡ್ ಮಾದರಿಯಲ್ಲಿದ್ದು, ಅತ್ಯುತ್ತಮ ಸೌಂಡ್ ಕ್ವಾಲಿಟಿಯನ್ನು ಹೊಂದಿದೆ. ಬ್ಲೂಟೂತ್ 4.1 ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿದ್ದು, 10m ವ್ಯಾಪ್ತಿಯ ಕವರೇಜ್ ಹೊಂದಿದೆ. 9mm ಸೌಂಡ್ ಡ್ರೈವರ್ಸ್‌ಗಳೊಂದಿಗೆ ಬೆಸ್ಟ್ ಬ್ಯಾಟರಿ ಲೈಫ್ ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಡಿವೈಸ್‌ಗೆ ಸುಮಾರು 8ಗಂಟೆಗಳ ಕಾಲ ಬಾಳಿಕೆ ಒದಗಿಸಲಿದೆ. ಅಮೆಜಾನ್‌ನಲ್ಲಿ 2,499ರೂ.ಗಳಿಗೆ ಲಭ್ಯ.

ನೋಕಿಯಾ BH-705
ನೋಕಿಯಾ BH-705 ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್ ಮಾದರಿಯಲ್ಲಿದ್ದು, ಬ್ಲೂಟೂತ್ v5.0 ಸಾಮರ್ಥ್ಯದ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದೆ. ಇಯರ್‌ಬಡ್ಸ್‌ಗಳು IPx4 ಸಾಮರ್ಥ್ಯ ಪಡೆದಿದ್ದು, ಜೊತೆಗೆ ಸ್ವೆಟ್ ಮತ್ತು ಸ್ಲಾಶ್ ಪ್ರೂಫ್ ರಚನೆಯನ್ನು ಹೊಂದಿವೆ. ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಜಾರ್ಜಿಂಗ್ ಕೇಸ್ ನೀಡಲಾಗಿದ್ದು, ಎಲ್‌ಇಡಿ ಚಾರ್ಜ್ ಇಂಡಿಕೇಟರ್ ಪಡೆದಿದೆ. ಅಮೆಜಾನ್‌ನಲ್ಲಿ 7,359ರೂ.ಗಳಿಗೆ ದೊರೆಯಲಿದೆ.

ನೋಕಿಯಾ BH-701
ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುವ ನೋಕಿಯಾ BH-701 ವಾಯರ್‌ಲೆಸ್ ಇಯರ್‌ಫೋನ್ ಅತ್ಯುತ್ತಮ ಬ್ಯಾಟರಿ ಪವರ್ ಪಡೆದಿದ್ದು, ಸಿಂಗಲ್ ಚಾರ್ಜ್‌ಗೆ ಸುಮಾರು 10ಗಂಟೆಗಳ ಬ್ಯಾಕ್‌ಅಪ್ ಒದಗಿಸಲಿದೆ. ಮ್ಯಾಕ್ನೆಟಿಕ್ ಕ್ಲಿಪ್ಪಿಂಗ್ ರಚನೆಯಿದ್ದು, ಬ್ಲೂಟೂತ್ 4.2 ಸಾಮರ್ಥ್ಯದ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದಿದೆ. ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ಫೀಚರ್ ಜೊತೆಗೆ ಸ್ವೆಟ್ ಮತ್ತು ಸ್ಲಾಶ್ ಪ್ರೂಫ್ ರಚನೆಯನ್ನು ಹೊಂದಿದೆ. ಅಮೆಜಾನ್‌ನಲ್ಲಿ 5,499ರೂ.ಗಳಿಗೆ ದೊರೆಯಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470