ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?

|

ಪ್ರತಿ ತಿಂಗಳು ಸುಮಾರು 200 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಭಾರತದಲ್ಲಿ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಬಳಕೆದಾರರ ಖಾಸಗಿತನಕ್ಕಾಗಿ ಹಲವು ಅತ್ಯುತ್ತಮ ಸೆಕ್ಯುರಿಟಿ ಫೀಚರ್‌ ಅಳವಡಿಸಿದ್ದು, ಇನ್ನಷ್ಟು ಹೊಸ ಫೀಚರ್ಸ್‌ಗಳು ಪ್ರಾಯೋಗಿಕ ಹಂತದಲ್ಲಿವೆ. ಆದರೆ ಇನ್ನೂ ಎಷ್ಟೂ ಬಳಕೆದಾರರಿಗೆ ಲಭ್ಯವಿರುವ ಸೆಕ್ಯುರಿಟಿ ಫೀಚರ್‌ಗಳ ಬಗ್ಗೆ ತಿಳಿದಿಲ್ಲ.

ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಆಪ್‌ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ಹಾಗೆಯೇ ಬಳಕೆದಾರರಿಗೆ ಉಪಯುಕ್ತ ಭದ್ರತಾ ಆಯ್ಕೆಗಳನ್ನು ಸಹ ನೀಡಿದೆ. ಅವುಗಳಲ್ಲಿ ಟು ಸ್ಟೇಪ್‌ ವೇರಿಫಿಕೇಶನ್, ಪ್ರೊಫೈಲ್‌ ಸುರಕ್ಷತೆ, ರಿಪೋರ್ಟಿಂಗ್ ಮತ್ತು ಬ್ಲಾಕಿಂಗ್ ಹಾಗೂ ಸೆಕ್ಯುರಿಟಿ ನೋಟಿಫಿಕೇಶನ್ ಆಯ್ಕೆಗಳು ಉತ್ತಮ ಎನಿಸಿವೆ. ಹಾಗಾದರೇ ವಾಟ್ಸಪ್‌ನಲ್ಲಿರುವ ಭದ್ರತಾ ಆಯ್ಕೆಗಳನ್ನು ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಭಾರತೀಯ ಬಜಾರ್‌ಗೆ 'ಒಪ್ಪೊ ಕೆ3' ಬಿಡುಗಡೆ!.ಆರಂಭಿಕ ಬೆಲೆ 16,990ರೂ!ಓದಿರಿ : ಭಾರತೀಯ ಬಜಾರ್‌ಗೆ 'ಒಪ್ಪೊ ಕೆ3' ಬಿಡುಗಡೆ!.ಆರಂಭಿಕ ಬೆಲೆ 16,990ರೂ!

ಟು ಸ್ಟೇಪ್ ವೇರಿಫಿಕೇಶನ್

ಟು ಸ್ಟೇಪ್ ವೇರಿಫಿಕೇಶನ್

ವಾಟ್ಸಪ್‌ ಆಪ್‌ನಲ್ಲಿ ಟು ಸ್ಟೇಪ್‌ ವೇರಿಫಿಕೇಶನ್ ಆಯ್ಕೆ ನೀಡಿದ್ದು, ಇದು ವಾಟ್ಸಪ್‌ ಖಾತೆಗೆ ಡಬಲ್ ಸೆಕ್ಯುರಿಟಿ ನೀಡುತ್ತದೆ. ಬಳಕೆದಾರರು ಸಾಮಾನ್ಯವಾಗಿ ಪಾಸ್‌ವರ್ಡ್‌ ಇಟ್ಟಿರುತ್ತಾರೆ ಅದಲ್ಲದೇ 6 ಡಿಜಿಟ್‌ನ ಪಾಸ್‌ವರ್ಡ್‌ ಇಡುವ ಆಯ್ಕೆಯನ್ನು ಈ ಫೀಚರ್ ನೀಡುತ್ತದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ ಸೆಟ್ಟಿಂಗ್ > ಅಕೌಂಟ್ > ಟು ಸ್ಟೇಪ್‌ ವೇರಿಫಿಕೇಶನ್ > ಆನ್‌ ಮಾಡಿರಿ. ನಂತರ 6 ಡಿಜಿಟ್ ಪಾಸ್‌ವರ್ಡ್‌ ರಚಿಸಿರಿ.

ಪ್ರೊಟೆಕ್ಟ್‌ ವಾಟ್ಸಪ್ DP

ಪ್ರೊಟೆಕ್ಟ್‌ ವಾಟ್ಸಪ್ DP

ವಾಟ್ಸಪ್‌ನಲ್ಲಿ ನಿಮ್ಮ ಪ್ರೊಫೈಲ್‌ ಫೋಟೊವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಹಲವು ಸೆಟ್ಟಿಂಗ್ ಆಯ್ಕೆಗಳನ್ನು ನೀಡಲಾಗಿದೆ. ಈ ಫೀಚರ್ಸ್‌ನಿಂದ ಫೋಟೊವನ್ನು ಕಾಣದಂತೆ ಸೆಟ್‌ ಮಾಡಬಹುದಾಗಿದ್ದು, ಯಾರು ಸೇವ್‌ ಮಾಡುವುದು ಮತ್ತು ಸ್ಕ್ರೀನ್‌ಶಾಟ್‌ ತಗೆಯುವುದನ್ನು ಸ್ಟಾಪ್‌ ಮಾಡಬಹುದಾಗಿದೆ. ಸೆಟ್ಟಿಂಗ್ > ಅಕೌಂಟ್ > ಪ್ರೈವೆಸಿ > ಪ್ರೊಫೈಲ್ ಫೋಟೊ > ಎವರಿಒನ್, ಮೈಕಾಂಟ್ಯಾಂಕ್ಟ್ಸ್ ಮತ್ತು ನೋಬಡಿ ಆಯ್ಕೆಯಲ್ಲಿ ಅಗತ್ಯವಾದದನ್ನು ಸೆಟ್‌ ಮಾಡಿ.

ಓದಿರಿ : ಆಸೂಸ್‌ 'ಝೆನ್‌ಫೋನ್ ಮ್ಯಾಕ್ಸ್‌ ಎಂ1' ಫೋನ್ ಬೆಲೆ ಇಳಿಕೆ!ಓದಿರಿ : ಆಸೂಸ್‌ 'ಝೆನ್‌ಫೋನ್ ಮ್ಯಾಕ್ಸ್‌ ಎಂ1' ಫೋನ್ ಬೆಲೆ ಇಳಿಕೆ!

ರಿಪೋರ್ಟಿಂಗ್ ಮತ್ತು ಬ್ಲಾಕಿಂಗ್

ರಿಪೋರ್ಟಿಂಗ್ ಮತ್ತು ಬ್ಲಾಕಿಂಗ್

ವಾಟ್ಸಪ್‌ನಲ್ಲಿ ನಿಮಗೆ ಕಿರಿಕರಿ ಎನಿಸುವ ಕಾಂಟ್ಯಾಕ್ಟ್‌ಗಳನ್ನು ಬೇಕಿದ್ದರೇ ಬ್ಲಾಕ್‌ ಮಾಡಬಹುದಾಗಿದೆ. ಅದು ಗ್ರೂಪ್‌ನಲ್ಲಿಯಾಗಿರಬಹುದು ಅಥವಾ ವೈಯಕ್ತಿಕ ಕಾಂಟ್ಯಾಕ್ಟ್ ಆಗಿರಬಹುದು ಬ್ಲಾಕ್‌ ಮಾಡುವ ಆಯ್ಕೆ ಇದೆ. ಅದಕ್ಕಾಗಿ ಚಾಟ್‌ ಲಿಸ್ಟ್‌ನಲ್ಲಿ ಬ್ಲಾಕ್ ಮಾಡುವ ಕಾಂಟ್ಯಾಕ್ಟ್‌ನ ತೆರೆದು ಸ್ಕ್ರೋಲ್‌ ಡೌನ್‌ ಮಾಡಿ ರಿಪೋರ್ಟ್‌ ಕಾಂಟ್ಯಾಕ್ಟ್‌ ಅಥವಾ ಬ್ಲಾಕ್‌ ಆಯ್ಕೆ ಸೆಲೆಕ್ಟ್‌ ಮಾಡಿಕೊಳ್ಳಬಹುದುದಗಿದೆ.

ಸೆಕ್ಯುರಿಟಿ ನೋಟಿಫಿಕೇಶನ್

ಸೆಕ್ಯುರಿಟಿ ನೋಟಿಫಿಕೇಶನ್

ಬಳಕೆದಾರರು ವಾಟ್ಸಪ್‌ನಲ್ಲಿ ಸೆಕ್ಯುರಿಟಿ ನೋಟಿಫಿಕೇಶನ್ ಆಯ್ಕೆಯನ್ನು ಸೆಲೆಕ್ಟ್‌ ಮಾಡಬಹುದಾಗಿದ್ದು, ಸೆಕ್ಯುರಿಟಿ ಕೋಡ್‌ಗಳು ಬದಲಾವಣೆ ಆದಾಗ ಆ ಕುರಿತು ನೋಟಿಫಿಕೇಶನ್ ಬರುತ್ತವೆ. ವಾಟ್ಸಪ್‌ ರೀ ಇನ್‌ಸ್ಟಾಲ್‌ ಮಾಡಿದಾಗ ಅಥವಾ ಫೋನ್‌ ಚೇಂಜ್ ಮಾಡಿದಾಗ ಸೆಕ್ಯುರಿಟಿ ನೋಟಿಫೀಕೇಶನ್ ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಈ ಕ್ರಮಗಳನ್ನು ಅನುಸರಿಸಿ ಸೆಟ್ಟಿಂಗ್ > ಅಕೌಂಟ್ > ಸೆಕ್ಯುರಿಟಿ > ಶೋ ನೋಟಿಫಿಕೇಶನ್ ಸೆಕ್ಯುರಿಟಿ ಆನ್‌ ಮಾಡಿರಿ.

ಓದಿರಿ : ರೆಡ್ಮಿಯ ಹೊಸ ಪವರ್‌ಬ್ಯಾಂಕ್ ಲಾಂಚ್!ಓದಿರಿ : ರೆಡ್ಮಿಯ ಹೊಸ ಪವರ್‌ಬ್ಯಾಂಕ್ ಲಾಂಚ್!

ಅಧಿಕಾರಿಗಳ ಸಂಪರ್ಕ

ಅಧಿಕಾರಿಗಳ ಸಂಪರ್ಕ

ವಾಟ್ಸಪ್‌ ಕಂಪನಿಯು ಬಳಕೆದಾರರ ಭದ್ರತೆಗಾಗಿ ಭಾರತದಲ್ಲಿ ಇತ್ತೀಚಿಗೆ ಅಧಿಕಾರಿಗಳನ್ನು ನೇಮಿಸಿದ್ದು, ಬಳಕೆದಾರರು ಅಧಿಕಾರಿಗಳಿಗೆ ಇ ಮೇಲ್ ಮೂಖಾಂತರ ಕಂಪ್ಲೇಟ್‌ಗಳ ಕಳುಹಿಸಬಹುದಾಗಿದೆ. ಕಂಪ್ಲೇಟ್‌ ನೀಡುವಾಗ ಬಳಕೆದಾರರು ದೇಶದ ಟೆಲಿಫೋನ್ ಕೋಡ್‌(+91)ನೊಂದಿಗೆ ಮೊಬೈಲ್ ನಂಬರ್ ನಮೂದಿಸಬೇಕಿದೆ. ಹಾಗೆಯೇ ಪೋಸ್ಟ್‌ ಮೂಲಕವು ದೂರು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ವೆಬ್‌ಸೈಟ್‌ ನೋಡಿ.

ಓದಿರಿ : ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ? ಓದಿರಿ : ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ?

Best Mobiles in India

English summary
Here are the top five security and privacy feature that every WhatsApp user needs to know. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X