ವಾಟ್ಸಾಪ್‌ ಗಿಫ್ಟ್‌ ಪ್ರೈಸ್‌ ಮೆಸೇಜ್‌ ಕ್ಲಿಕ್‌ ಮಾಡುವ ಮುನ್ನ ಈ ಸ್ಟೋರಿ ಓದಿರಿ!

|

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಗಿಫ್ಟ್‌ ಹೆಸರಿನಲ್ಲಿ ಸಾಕಷ್ಟು ವಂಚನೆ ನಡೆಯುತ್ತಿವೆ. ವಾಟ್ಸಾಪ್‌ನಲ್ಲಿ ಬರುವ ನಕಲಿ ಗಿಫ್ಟ್‌ ಸಂದೇಶಗಳನ್ನು ನಂಬಿ ಮೋಸ ಹೋಗಿರುವ ಪ್ರಕರಣಗಳು ದಾಖಲಾಗುತ್ತಲೇ ಇದೆ. ಈಗಾಗಲೇ ವಾಟ್ಸಾಪ್‌ನಲ್ಲಿ ಸಾಕಷ್ಟು ಸೌಂಡ್‌ ಮಾಡಿದ್ದ ನಕಲಿ ಗಿಫ್ಟ್‌ ವಾಟ್ಸಾಪ್‌ ಮೆಸೇಜ್‌ ಮತ್ತೊಮ್ಮೆ ಸದ್ದು ಮಾಡ್ತಿದೆ. ದೆಹಲಿ ಪೋಲಿಸರು ಈ ನಕಲಿ ಗಿಫ್ಟ್‌ ಪ್ರೈಜ್‌ ಮೆಸೇಜ್‌ ಬಗ್ಗೆ ಎಚ್ಚರದಿಂದಿರುವಂತೆ ದೇಶದ ನಾಗರಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ವಾಟ್ಸಾಪ್‌ನಲ್ಲಿ

ಹೌದು, ವಾಟ್ಸಾಪ್‌ನಲ್ಲಿ ನಕಲಿ ಗಿಫ್ಟ್‌ ಪ್ರೈಜ್‌ ಮೆಸೇಜ್‌ಗಳ ಹಾವಳಿ ಮುಂದುವರೆದಿದೆ. ಸುಲಭವಾಗಿ ಹಣ ಸಿಗಲಿದೆ, ಬಹುಮಾನ ಬರಲಿದೆ ಎಂದರೆ ಎಲ್ಲರೂ ಕೂಡ ಮರುಳಾಗಿಬಿಡುತ್ತಾರೆ. ಜಸ್ಟ್‌ ಮೆಸೇಜ್‌ ಕ್ಲಿಕ್‌ ಮಾಡೋಣ ಗಿಫ್ಟ್‌ ಬರೋದಾದರೆ ಬರಲಿ, ಇಲ್ಲದಿದ್ದರೆ ನಷ್ಟವೇನೂ ಅನ್ನುವ ಮನೋಭಾವ ಎಲ್ಲರಲ್ಲಿದೆ. ಆದರೆ ವಾಟ್ಸಾಪ್‌ನಲ್ಲಿ ಬರುವ ಗಿಫ್ಟ್‌ ಪ್ರೈಜ್‌ ಸಂದೇಶಗಳ ಲಿಂಕ್‌ ಅನ್ನು ಕ್ಲಿಕ್‌ ಮಾಡಿದರೆ ನಿಮ್ಮ ಡೇಟಾ ಹ್ಯಾಕರ್‌ಗಳ ಪಾಲಾಗಲಿದೆ. ಹಾಗಾದ್ರೆ ಮತ್ತೊಮ್ಮೆ ಸೌಂಡ್‌ ಮಾಡುತ್ತಿರುವ ವಾಟ್ಸಾಪ್‌ ನಕಲಿ ಗಿಫ್ಟ್‌ ಸಂದೇಶದಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ

ವಾಟ್ಸಾಪ್‌ನಲ್ಲಿ ಈಗಾಗಲೇ ಹರಿದಾಡಿದ್ದ ನಕಲಿ ಗಿಫ್ಟ್‌ ಪ್ರೈಜ್‌ ಮೆಸೇಜ್‌ ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಮುಖ್ಯವಾಗಿ ಭಾರತದ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ ಈ ನಕಲಿ ಸಂದೇಶದಲ್ಲಿ ಕೌನ್‌ ಬನೇಗಾ ಕರೋಡಪತಿ ಹೆಸರಿನಲ್ಲಿ ವಂಚನೆ ಮಾಡುತ್ತಿದೆ. 'ಕೆಬಿಸಿ ಜಿಯೋ' ಲಕ್ಕಿ ಡ್ರಾದ ಭಾಗವಾಗಿ ನಿಮಗೆ 25,0000 ನಗದು ಬಹುಮಾನವನ್ನು ದೊರೆಯಲಿದೆ ಎನ್ನುವ ಭರವಸೆಯನ್ನು ಸ್ಕ್ಯಾಮರ್‌ಗಳು ನೀಡುತ್ತಿದ್ದಾರೆ. ವಿಶೇ‍ವಾಗಿ ಈ ಸಂದೇಶ ವೀಡಿಯೋ ಸಂದೇಶವಾಗಿದ್ದು, ನೀವು ಲಕ್ಕಿ ಗಿಫ್ಟ್‌ ಪ್ರೈಜ್‌ ಪಡೆಯಲು ಏನು ಮಾಡಬೇಕು ಅನ್ನೊದರ ವಿವರವನ್ನು ಹೇಳಲಾಗಿದೆ.

ನಕಲಿ

ಇನ್ನು ಈ ನಕಲಿ ಸಂದೇಶದಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲು ಬಳಕೆದಾರರನ್ನು ಕೇಳಲಾಗುತ್ತದೆ. ನಿಮ್ಮ ವಿವರಗಳನ್ನು ನಮೂದಿಸಿದ ನಂತರ, ಗಿಫ್ಟ್‌ ಪ್ರೈಜ್‌ ಅನ್ನು ನಿಮ್ಮ ಖಾತೆಗೆ ಜಮಾ ಮಾಡುವ ಭರವಸೆ ನೀಡಲಾಗಿದೆ. ಆದರೆ ಹಣದ ಆಸೆಗೆ ಬಿದ್ದು ನೀವೇನಾದರೂ ನಿಮ್ಮ ಮಾಹಿತಿಯನ್ನು ನಮೂದಿಸಿದರೆ ನಿಮ್ಮ ಬ್ಯಾಂಕ್‌ ಖಾತೆಗಳಿಗೆ ವಂಚಕರು ಕನ್ನ ಹಾಕಲಿದ್ದಾರೆ. ಓದುಗರು ಈ ಸ್ಕ್ಯಾಮ್‌ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು, ಯಾವ ಲಕ್ಕಿ ಗಿಫ್ಟ್‌ ಪ್ರೈಜ್‌ ಕೂಡ ನಿಮಗೆ ವಾಟ್ಸಾಪ್‌ ಮೂಲಕ ದೊರೆಯುವುದಿಲ್ಲ ಎನ್ನುವ ಸತ್ಯ ಅರಿತುಕೊಂಡರೆ ಸಾಕು.

ವಾಟ್ಸಾಪ್‌ ಗಿಫ್ಟ್‌ ಸ್ಕ್ಯಾಮ್‌ ಮೆಸೇಜ್‌ನಲ್ಲಿ ಏನಿದೆ?

ವಾಟ್ಸಾಪ್‌ ಗಿಫ್ಟ್‌ ಸ್ಕ್ಯಾಮ್‌ ಮೆಸೇಜ್‌ನಲ್ಲಿ ಏನಿದೆ?

ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ ವತಿಯಿಂದ ಹಣ ಬರುವಂತೆ ಚಿತ್ರಿಕರಿಸಿರುವ ಈ ಸಂದೇಶದಲ್ಲಿ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಮತ್ತು ಸೋನಿಲೈವ್‌ನ ಲೋಗೋವನ್ನು ಒಳಗೊಂಡಿದೆ. ಇದಲ್ಲದೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸ್ಕ್ರಿಪ್ಟ್‌ಗಳು ಲಭ್ಯವಿದ್ದು, ಲಕ್ಕಿ ಡ್ರಾದ ಭಾಗವಾಗಿ ಬಳಕೆದಾರರು 25 ಲಕ್ಷ ರೂ ಗೆದ್ದಿದ್ದಾರೆ ಎಂದು ಹೇಳುವ ಸಂದೇಶ ಕಾಣಲಿದೆ. ಜೊತೆಗೆ ನೀವು ಗೆದ್ದಿರುವ ಲಾಟರಿ ಸಂಖ್ಯೆಯನ್ನು ಕೂಡ ತೋರಿಸಲಾಗುತ್ತದೆ. ಆದರೆ ಇದೆಲ್ಲವೂ ನಕಲಿಯಾಗಿದೆ. ಇನ್ನು ಈ ರೀತಿಯ ಸ್ಕ್ಯಾಮ್‌ ಸಂದೇಶ +92 345 6808747' ಸಂಖ್ಯೆಯಿಂದ ಬಂದಿದ್ದು, '92' ISD ಕೋಡ್ ಪಾಕಿಸ್ತಾನಕ್ಕೆ ಸಂಬಂಧಿಸಿದೆ.

ವಾಟ್ಸಾಪ್‌ನಲ್ಲಿ

ಹಾಗಂತ ವಾಟ್ಸಾಪ್‌ನಲ್ಲಿ ಈ ಮಾದರಿಯ ಸಂದೇಶಗಳು ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಪ್ರಧಾನಿ ಮೋದಿ ಅವರಿಂದ ಬಹುಮಾನ ಪಡೆಯಲು ಈ ಲಿಂಕ್‌ ಅನ್ನು ಟ್ಯಾಪ್‌ ಮಾಡಿ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನಿಮ್ಮ ಹೆಸರನ್ನು ಸೇರಿಸಲು ಈ ಸಂದೇಶ ಪಾರ್ವಡ್‌ ಮಾಡಿ ಎನ್ನುವ ಲಿಂಕ್‌ಗಳು ಈ ಹಿಂದಿ ಸಂಚಲನ ಸೃಷ್ಟಿಸಿವೆ. ಜೊತೆಗೆ ಇ-ಕಾಮರ್ಸ್‌ ಸಯಟ್‌ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಆಫರ್‌ ಹೆಸರಿನಲ್ಲಿಯೂ ನಕಲಿ ಸಂದೇಶಗಳು ಹರಿದಾಡಿ ಸಾಕಷ್ಟು ಮಂದಿಗೆ ಮೋಸ ಮಾಡಿರುವುದು ಕೂಡ ನಡೆದಿದೆ. ಆದರಿಂದ ಯಾವುದೇ ಬಹುಮಾನದ ಸಂದೇಶ ಬಂದರೂ ಅದರ ಪೂರ್ವಪರ ತಿಳಿಯಬೇಕಾದ ಅಗತ್ಯ ಇದೆ.

Best Mobiles in India

English summary
Current iteration of the WhatsApp scam message includes the image of PM Modi and the logo of Sony Liv.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X