ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!

|

ಫೇಸ್‌ಬುಕ್‌ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್‌ ತನ್ನ ವಿಶಿಷ್ಟ ಫೀಚರ್ಸ್‌ಗಳಿಂದ ಬಳಕೆದಾರರನ್ನು ಸೆಳೆದಿದೆ. ಸದಾ ಹೊಸತನದ ಫೀಚರ್ಸ್‌ಗಳನ್ನು ಅಳವಡಿಸುತ್ತಾ ಸಾಗಿರುವ ವಾಟ್ಸಪ್‌ ಈಗ ಮತ್ತಷ್ಟು ಬಳಕೆದಾರರ ಸ್ನೇಹಿ ಆಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಮತ್ತೆ ಮುಂದುವರೆದಿರುವ ಕಂಪನಿಯು ತನ್ನ ಹೊಸ ಅಪ್‌ಡೇಟ್‌ ವರ್ಷನ್‌ನಲ್ಲಿ ಮಹತ್ತರ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.

ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!

ಹೌದು, ಮೆಸೆಜ್‌ ಆಪ್‌ ವಾಟ್ಸಪ್‌ ಇದೀಗ ಬಳಕೆದಾರರಿಗೆ ಲಭ್ಯವಿರುವ 'ಸ್ಟೇಟಸ್' ಫೀಚರ್‌ನಲ್ಲಿ ಬದಲಾವಣೆ ತರಲು ಸಿದ್ಧವಾಗಿದ್ದು, ವಾಟ್ಸಪ್‌ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್‌ ಒಡೆತನದ ಯಾವುದೇ ಸಾಮಾಜಿಕ ಆಪ್‌ ಖಾತೆಗೆ ಶೇರ್‌ ಮಾಡಬಹುದಾಗಿದೆ ಆಯ್ಕೆಯನ್ನು ಅಳವಡಿಸಲಿದೆ. ಈ ಸೌಲಭ್ಯವು ವಾಟ್ಸಪ್‌ನ ಹೊಸ ಅಪ್‌ಡೇಟ್‌ ಅವತರಣಿಕೆಯಲ್ಲಿ ಬಳಕೆದಾರರಿಗೆ ಲಭ್ಯವಾಗಲಿದ್ದು, ಈ ಆಯ್ಕೆ ವಾಟ್ಸಪ್‌ ಮತ್ತು ಸೋಶಿಯಲ್‌ ಆಪ್‌ಗಳ ನಡುವೆ ಕೊಂಡಿ ಆಗಲಿದೆ.

ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!
Landline ನಂಬರ್ ಗೆ Whatsapp ಸೆಟ್ ಅಪ್ ಮಾಡುವುದು ಹೇಗೆ ಗೊತ್ತಾ?

ಈಗಾಗಲೇ ವಾಟ್ಸಪ್‌ನಲ್ಲಿ ಸ್ಟೇಟ್‌ಸ್‌ ಫೀಚರ್‌ ಬಳಕೆದಾರರನ್ನು ಆಕರ್ಷಿಸಿದೆ ಹಾಗೂ ಫೇಸ್‌ಬುಕ್‌ನಲ್ಲಿಯೂ ಇತ್ತೀಚಿಗೆ ಸ್ಟೋರಿ ಶೇರ್‌ ಮಾಡುವ ಫೀಚರ್‌ ಅನ್ನು ಕಂಪನಿಯು ಪರಿಚಯಿಸಿತ್ತು. ಈಗ ಹೊಸ ಫೀಚರ್‌ ನೆರವಿನಿಂದ ವಾಟ್ಸಪ್‌ ಸ್ಟೇಟಸ್‌ ಅನ್ನು ಒಂದೇ ಭಾರಿಗೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಗೂಗಲ್‌ ಫೋಟೊಸ್‌ ಸೇರಿದಂತೆ ಫೇಸ್‌ಬುಕ್‌ಗೆ ಸೇರಿದ ಯಾವುದೇ ಆಪ್‌ನಲ್ಲಿಯೂ ಶೇರ್ ಮಾಡಬಹುದಾಗಿದೆ.

ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!

ಬಳಕೆದಾರರು ವಿಡಿಯೊ, ಟೆಕ್ಸ್ಟ್‌, ಫೋಟೊ ಮಾದರಿಯಲ್ಲಿ ಸ್ಟೇಟಸ್‌ ಇಡಬಹುದಾಗಿದ್ದು, 24ಗಂಟೆಗಳ ನಂತರ ಸ್ಟೇಟಸ್‌ ಆಟೋಮ್ಯಾಟಿಕ್ ಆಗಿ ಅಳಸಿಹೋಗುತ್ತದೆ. ಇನ್ನು ನೂತನ ಸ್ಟೇಟಸ್‌ ಶೇರ್‌ ಆಯ್ಕೆಯು ಬಳಕೆದಾರರ ಸ್ಟೇಟಸ್‌ ಆಯ್ಕೆ ಕೆಳಗಡೆ ಕಾಣಿಸಿಕೊಳ್ಳಲಿದೆ. ಈ ಆಯ್ಕೆ ಮೂಲಕ ಬಳಕೆದಾರರು ಮ್ಯಾನ್ಯುವಲಿ ಪ್ರತ್ಯೇಕ ಅಗತ್ಯ ಆಪ್‌ಗಳಿಗೆ (ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂ) ಶೇರ್‌ ಮಾಡಬೇಕು. ಆಟೋಮ್ಯಾಟಿಕ್ ಆಯ್ಕೆ ಇಲ್ಲ.

ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌! ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌!

ಪ್ರತಿ ದಿನ ಸುಮಾರು 500 ಮಿಲಿಯನ್‌ ಬಳಕೆದಾರರು ವಾಟ್ಸಪ್‌ನಲ್ಲಿ ಸಕ್ರಿಯವಾಗಿರುತ್ತಿದ್ದು, ಇದರಲ್ಲಿ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರು ಸೇರಿದ್ದಾರೆ. ಹೀಗಾಗಿ ವಾಟ್ಸಪ್‌ ಸೇರಿಕೊಳ್ಳಲಿರುವ ಸ್ಟೇಟಸ್‌ ಶೇರ್‌ ಫೀಚರ್‌ ಆಂಡ್ರಾಯ್ಡ್‌ ಮತ್ತು ಐಓಎಸ್ ಬಳಕೆದಾರರಿಬ್ಬರಿಗೂ ಲಭ್ಯವಾಗಲಿದೆ. ಹೊಸ ಆಯ್ಕೆಯ ಕುರಿತು ಸದ್ಯ ಪ್ರಾಯೋಗಿಕವಾಗಿ ವಾಟ್ಸಪ್‌ ಪರೀಕ್ಷಿಸುತ್ತಿದ್ದು, ಶೀಘ್ರದಲ್ಲೇ ಅಪ್‌ಡೇಟ್‌ ವರ್ಷನ್‌ನಲ್ಲಿ ಸೇರಿಕೊಳ್ಳಲಿದೆ ಎನ್ನಲಾಗಿದೆ.

ಓದಿರಿ ; ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!ಓದಿರಿ ; ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

ಆಂಡ್ರಾಯ್ಡ್‌ನಲ್ಲಿರುವ ಈ ಕೂಲ್‌ ಫೀಚರ್ಸ್‌ ಐಫೋನ್‌ನಲ್ಲಿ ಅಲಭ್ಯ!

ಆಂಡ್ರಾಯ್ಡ್‌ನಲ್ಲಿರುವ ಈ ಕೂಲ್‌ ಫೀಚರ್ಸ್‌ ಐಫೋನ್‌ನಲ್ಲಿ ಅಲಭ್ಯ!

ಬೆಸ್ಟ್‌ ಫೋನ್‌ ಎಂದಾಗ ಥಟ್ಟನೇ ಐಫೋನ್‌ನೇ ಹೆಸರೆ ಹೆಚ್ಚಾಗಿ ಕೇಳಿ ಬರುತ್ತದೆ. ಯಸ್‌, ಐಫೋನ್‌ ದುಬಾರಿ ಬೆಲೆಯನ್ನು ಹೊಂದಿದ್ದು, ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡು ಭಿನ್ನವಾಗಿ ಗುರುತಿಸಿಕೊಂಡಿದೆ. ಆದರೆ ನಿಮಗೆ ಗೊತ್ತಾ ಆಂಡ್ರಾಯ್ಡ್‌ನಲ್ಲಿ ಇರುವ ಕೇಲವು ಕೂಲ್‌ ಫೀಚರ್ಸ್‌ಗಳನ್ನು iOS ಓಎಸ್‌ನ ಐಫೋನ್‌ನಲ್ಲಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಕೇಲವೊಂದು ಸಮಯ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಉತ್ತಮ ಎನಿಸುತ್ತವೆ.

ಹೌದು, ಆಂಡ್ರಾಯ್ಡ್‌ ಓಎಸ್‌ ಇರುವ ಸ್ಮಾರ್ಟ್‌ಪೋನ್‌ಗಳು ಡಿಸ್‌ಪ್ಲೇ, ವಾಲ್‌ಪೇಪರ್, ವೇಡ್ಜ್, ಬ್ಲೂಟೂತ್, ಇನ್‌ಸ್ಟಂಟ್ ಅಪ್ಲಿಕೇಶನ್, ಕ್ಲೋಸ್‌ ಆಲ್‌ ಆಪ್ಸ್ ಸೇರಿದಂತೆ ಹಲವು ಐಫೋನ್‌ನಲ್ಲಿ ಕಾಣದ ಫೀಚರ್ಸ್‌ಗಳಲ್ಲಿ ಹೊಂದಿವೆ. ಇವು ಬಳಕೆದಾರರಿಗೆ ಅಗತ್ಯ ಅನುಕೂಲ ಒದಗಿಸಲಿವೆ. ಹಾಗಾದರೇ ಆಂಡ್ರಾಯ್ಡ್‌ನಲ್ಲಿರುವ ಕೂಲ್‌ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆನ್‌ ಡಿಸ್‌ಪ್ಲೇ ಆಯ್ಕೆ

ಆನ್‌ ಡಿಸ್‌ಪ್ಲೇ ಆಯ್ಕೆ

ಪ್ರಸ್ತುತ ನೂತನ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು OLED ಡಿಸ್‌ಪ್ಲೇಯನ್ನು ಹೊಂದಿದ್ದು, ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್‌ ಬಳಕೆದಾರರಿಗೆ ಉಪಯುಕ್ತ ಎನಿಸಿದೆ. ಟೈಮ್‌ ನೋಡಬೇಕಾದಾಗ ಅಥವಾ ರಿಮೈನಿಂಗ್ ಬ್ಯಾಟರಿ ಬ್ಯಾಕ್‌ಅಪ್‌ ನೋಡಬೇಕಾದಾಗ ಪೂರ್ಣ ಸ್ಕ್ರೀನ್‌ ಆನ್‌ ಮಾಡುವ ಅಗತ್ಯ ಇರುವುದಿಲ್ಲ. ಹಾಗೆಯೇ ಕಾಣಿಸುತ್ತದೆ. ಆದರೆ ಐಫೋನ್‌ಗಳಲ್ಲಿ ಈ ಸೌಲಭ್ಯದ ಬೆಂಬಲವಿಲ್ಲ.

ಓದಿರಿ : ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ!ಓದಿರಿ : ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ!

ಇನ್‌ಸ್ಟಂಟ್ ಆಪ್

ಇನ್‌ಸ್ಟಂಟ್ ಆಪ್

ಗೂಗಲ್‌ ಇತ್ತೀಚಿಗೆ ಈ ಆಯ್ಕೆಯನ್ನು ನೀಡಿದ್ದು, ಇದು ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳದೇ ಉಪಯೋಗಿಸಿ ನೋಡಬಹುದಾಗ ಅವಕಾಶವಿದ್ದು, ಅಗತ್ಯ ಎನಿಸಿದರೇ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದರಿಂದ ಬಳಕೆದಾರರ ಅನಗತ್ಯ ಇನ್‌ಸ್ಟಾಲ್‌ ಮತ್ತು ಅನ್‌ಇನ್‌ಸ್ಟಾಲ್‌ ಮಾಡುವ ಪ್ರಕ್ರಿಯೆಯನ್ನು ತಪ್ಪಿಸಲಿದೆ. ಆದರೆ ಎಲ್ಲಾ ಆಪ್‌ಗಳಿಗೆ ಈ ಫೀಚರ್‌ ಲಭ್ಯವಿಲ್ಲ.

ಆಪ್ಸ್‌ ಕ್ಲೋಸ್‌ ಆಯ್ಕೆ

ಆಪ್ಸ್‌ ಕ್ಲೋಸ್‌ ಆಯ್ಕೆ

ಫೋನಿನಲ್ಲಿ ಪ್ರತಿದಿನ ಹಲವಾರು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಅವುಗಳು ಬ್ಯಾಕ್‌ಗ್ರೌಂಡ್‌ ರನ್ನ ಆಗುತ್ತಿರುತ್ತವೆ ಅವುಗಳಲ್ಲಿ ಅಗತ್ಯ ಇಲ್ಲದ ಆಪ್‌ಅನ್ನು ಕ್ಲಿಯರ್ ಮಾಡುವುದು ಉತ್ತಮ. ಅದಕ್ಕಾಗಿ ಆಂಡ್ರಾಯ್ಡ್ ಮಾದರಿಯ ಫೋನ್‌ಗಳಲ್ಲಿ ಒಂದೇ ಟ್ಯಾಪ್‌ ಮೂಲಕ ಆಪ್ಸ್‌ಗಳನ್ನು ಕ್ಲಿಯರ್‌ ಮಾಡಬಹುದಾದ ಆಯ್ಕೆ ಇದೆ. ಆದರೆ ಐಫೋನ್‌ನಲ್ಲಿ ಕ್ಲೋಸ್‌ ಮಾಡಲು ಸಮಯ ಹಿಡಿಯುತ್ತದೆ.

ಡೀಫಾಲ್ಟ್‌ ಆಪ್‌ ಸೆಟ್ಟಿಂಗ್

ಡೀಫಾಲ್ಟ್‌ ಆಪ್‌ ಸೆಟ್ಟಿಂಗ್

ಆಂಡ್ರಾಯ್ಡ್‌ನಲ್ಲಿ ಡೀಫಾಲ್ಟ್‌ ಆಪ್‌ ಸೆಟ್ಟಿಂಗ್ ಆಯ್ಕೆ ನೀಡಲಾಗಿದ್ದು, ಈ ಆಯ್ಕೆ ಮೂಲಕ ಹಲವು ಫೀಚರ್ಸ್‌ಗಳಿಗೆ ಒಂದೆ ಆಪ್‌ ಸೆಟ್‌ ಮಾಡಬಹುದಾಗಿದೆ. ಬ್ರೌಸರ್‌, ಫೋನ್‌, ಟೆಕ್ಸ್ಟ್‌ ಮೆಸೆಜ್‌, ಮತ್ತು ಓಪೆನ್‌ ಲಿಂಕ್ಸ್‌ನಂತಹ ಫಿಚರ್ಸ್‌ಗಳಿಗೆ ಒಂದೇ ಆಪ್‌ ಡೀಫಾಲ್ಟ್‌ ಆಗಿ ಸೆಟ್‌ ಮಾಡಬಹುದು. ಆದರೆ ಐಫೋನ್‌ಗಳಲ್ಲಿ ಡೀಫಾಲ್ಟ್‌ ಆಪ್‌ ಸೆಟ್ಟಿಂಗ್ ಆಯ್ಕೆ ಅಲಭ್ಯವಾಗಿದೆ.

ಕಸ್ಟಮೈಸ್ ಆಯ್ಕೆ

ಕಸ್ಟಮೈಸ್ ಆಯ್ಕೆ

ಬಳಕೆದಾರರಿಗೆ ಅಗತ್ಯವಾದಂತೆ ಫೀಚರ್ಸ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆಯಲ್ಲಿ ಆಂಡ್ರಾಯ್ಡ್ ಬೆಸ್ಟ್‌ ಎನಿಸಲಿದೆ. ಇನ್‌ಸ್ಟಾಲಿಂಗ್, ಐಕಾನ್ ಪಾಕ್ಸ್, widgets ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳನ್ನು ಬೇಕಾದ ಹಾಗೆ ಸೆಟ್ಟ್ ಮಾಡಬಹುದಾಗಿದೆ. ಐಫೋನ್‌ನಲ್ಲಿ ಭಿನ್ನ ಆಯ್ಕೆಗಳಿದ್ದರು ಕಸ್ಟಮೈಸ್‌ಗೊಳಿಸುವ ಫೀಚರ್‌ ಅನುಕೂಲಕರವಾಗಿಲ್ಲ.

ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌! ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌!

Best Mobiles in India

English summary
share your WhatsApp Status to other apps - Instagram, Gmail, Google Photos, and so on. And when you do share data to another Facebook-owned service. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X