ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಹೊಸ ಡ್ರಾಯಿಂಗ್ ಟೂಲ್!

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಡ್ರಾಯಿಂಗ್‌ ಟೂಲ್ಸ್‌ ಒಳಗೊಂಡಿರುವ ಡ್ರಾಯಿಂಗ್ ಎಡಿಟರ್‌ಗಾಗಿ ಹೊಸ ಇಂಟರ್ಫೇಸ್ ಅನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಡ್ರಾಯಿಂಗ್‌ ಟೂಲ್‌ ಪರಿಚಯಿಸಲು ಮುಂದಾಗಿದೆ. ಇನ್ನು ಈ ಡ್ರಾಯಿಂಗ್‌ ಟೂಲ್‌ ಫೀಚರ್ಸ್‌ ಹೇಗಿದೆ ಅನ್ನೊದು ಇದೀಗ ಬಹಿರಂಗವಾಗಿದೆ. ಸದ್ಯ ವಾಟ್ಸಾಪ್‌ ಫೀಚರ್ಸ್‌ಗಳ ಟ್ರ್ಯಾಕರ್ ವಾಬೇಟಾಇನ್ಫೋ ಪ್ರಕಾರ, ಡ್ರಾಯಿಂಗ್‌ ಟೂಲ್‌ ಅನ್ನು iOS ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಇದು iOS ಆವೃತ್ತಿ 22.8.0.73ಯಲ್ಲಿ ಲಭ್ಯವಿದೆ ಎನ್ನಲಾಗಿದೆ. ಹಾಗಾದ್ರೆ ಹೊಸ ಡ್ರಾಯಿಂಗ್‌ ಟೂಲ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸ ಡ್ರಾಯಿಂಗ್‌ ಟೂಲ್‌ ಫೀಚರ್ಸ್‌ ಅನ್ನು ಕೆಲವೇ ಕೆಲ ಬೀಟಾ ಪರೀಕ್ಷಕರಿಗೆ ಹೊರತರುತ್ತಿದೆ. ಫ್ಯೂಚರ್‌ ಅಪ್ಡೇಟ್‌ ಇನ್‌ಸ್ಟಾಲ್‌ ಮಾಡಿದ ನಂತರ ಹೆಚ್ಚಿನ ಆಕ್ಟಿವಿಟಿಯನ್ನು ಜಾರಿಗೊಳಿಸುವ ಪ್ಲಾನ್‌ ಮಾಡಿದೆ. ಇನ್ನು ವಾಟ್ಸಾಪ್‌ ಹೊಸ ಡ್ರಾಯಿಂಗ್‌ ಟೂಲ್‌ನಲ್ಲಿ ಮೂರು ಹೊಸ ಟೂಲ್ಸ್‌ಗಳನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ. ಇದರಲ್ಲಿ ಎರಡು ಹೊಸ ಪೆನ್ಸಿಲ್‌ಗಳು ಮತ್ತು ಬ್ಲರ್ ಟೂಲ್ ಸೇರಿದೆ. ನೀವು ಪ್ಲೇ ಸ್ಟೋರ್‌ನಿಂದ ಇತ್ತೀಚಿನ ಬೀಟಾ ವರ್ಷನ್‌ ಅನ್ನು ಇನ್‌ಸ್ಟಾಲ್‌ ಮಾಡಿದರೆ ನೀವು ಈ ಹೊಸ ಡ್ರಾಯಿಂಗ್ ಟೂಲ್‌ಗಳನ್ನು ಬಳಸಬಹುದಾಗಿದೆ. ಒಂದು ವೇಳೆ ನೀವು ಹೊಸ ಡ್ರಾಯಿಂಗ್ ಎಡಿಟರ್ ಟೂಲ್‌ ನೋಡದಿದ್ದರೆ ಅದು ನಿಮ್ಮ ವಾಟ್ಸಾಪ್‌ ಅಕೌಂಟ್‌ಗೆ ಸಿದ್ಧವಾಗಿಲ್ಲ ಎಂದರ್ಥ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೇವ್‌ ಮಾಡುವ ರೀತಿಯಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಇದಕ್ಕಾಗಿ ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಡಿಸ್‌ಅಪಿಯರಿಂಗ್‌ ಚಾಟ್‌ಗಳಲ್ಲಿ "ಮೀಡಿಯಾ ವಿಸಿಬಿಲಿಟಿ" ಆಯ್ಕೆಯನ್ನು ಸ್ವಯಂಚಾಲಿತವಾಗಿ ಆಫ್ ಮಾಡುತ್ತಿದೆ. ಅಲ್ಲದೆ ಡಿಸ್‌ಅಪಿಯರಿಂಗ್‌ ಫೀಚರ್ಸ್‌ ಬಳಸಿಕೊಂಡು ಶೇರ್‌ಮಾಡಲಾದ ಮೀಡಿಯಾ ಫೈಲ್‌ಗಳು ಖಾಸಗಿಯಾಗಿ ಸೇವ್‌ ಮಾಡೋದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಈ ಹೊಸ ಬದಲಾವಣೆಗೆ ಮುಂದಾಗಿದೆ.

ಡಿಸ್‌ಅಪಿಯರಿಂಗ್‌

ಇನ್ನು ಈ ಹೊಸ ಅಪ್ಡೇಟ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಮೋಡ್ ಆನ್ ಆಗಿರುವಾಗ ಶೇರ್‌ಮಾಡಲಾದ ಫೋಟೋಸ್‌, ವೀಡಿಯೊಸ್‌ ಮತ್ತು GIFಗಳನ್ನು ಬಳಕೆದಾರರ ಸ್ಮಾರ್ಟ್‌ಫೋನ್‌ಗಳಲ್ಲಿ ಸೇವ್‌ ಮಾಡಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ವಾಟ್ಸಾಪ್‌ ಬಳಕೆದಾರರು ಡಿಸ್‌ಅಪಿಯರಿಂಗ್‌ ಚಾಟ್‌ಗಳಲ್ಲಿ ಮೀಡಯಾವನ್ನು ಹಸ್ತಚಾಲಿತವಾಗಿ ಸೇವ್‌ ಮಾಡಲು ಸಾಧ್ಯವಾಗುತ್ತದೆ. ಇನ್ನು ಈ ಬದಲಾವಣೆಯನ್ನು ಬೀಟಾ ಮತ್ತು ಪಬ್ಲಿಕ್‌ ಬಿಡ್ಸ್‌ಗಳಲ್ಲಿ ಎಲ್ಲಾ ಬಳಕೆದಾರರಿಗೆ ಹೊರತರಲಾಗುತ್ತಿದೆ.

ವಾಟ್ಸಾಪ್‌

ಇನ್ನು ಇತ್ತೀಚಿಗೆ ವಾಟ್ಸಾಪ್‌ ತನ್ನ ಬಳಕೆದಾರರ ಅನುಭವವನ್ನು ಸುಧಾರಿಸುವುದಕ್ಕಾಗಿ ಹೊಸ ಫೀಚರ್ಸ್‌ ಪರಿಚಯಿಸಿದೆ. ವಾಯ್ಸ್‌ಮೆಸೇಜ್‌ ಎಕೋಸಿಸ್ಟಂನಲ್ಲಿ ಒಟ್ಟಾರೆ ಅನುಭವವನ್ನು ಸುಧಾರಿಸುತ್ತಿದೆ. ವಾಯ್ಸ್‌ ಮೆಸೇಜ್‌ಗಳನ್ನು ಹೆಚ್ಚು ಉಪಯುಕ್ತವಾಗಿಸುವ ಸಲುವಾಗಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಈ ಹೊಸ ಫೀಚರ್ಸ್‌ಗಳನ್ನು ಎಲ್ಲಾ ಆಂಡ್ರಾಯ್ಡ್, ಐಒಎಸ್ ಬಳಕೆದಾರರಿಗೆ ಪರಿಚಯಿಸಲಾಗುವುದು ಎಂದು ವಾಟ್ಸಾಪ್‌ ದೃಢಪಡಿಸಿದೆ.

ವಾಟ್ಸಾಪ್‌

ವಾಟ್ಸಾಪ್‌ ಹೊಸದಾಗಿ ವಾಯ್ಸ್‌ ಮೆಸೇಜ್‌ನಲ್ಲಿ ಪರಿಚಯಿಸಿರುವ ಹೊಸ ಫಿಚರ್ಸ್‌ಗಳಲ್ಲಿ ಔಟ್‌ ಆಪ್‌ ಚಾಟ್‌ ಪ್ಲೇ ಬ್ಯಾಕ್‌ ಕೂಡ ಒಂದು. ವಾಯ್ಸ್‌ ಮೆಸೇಜ್‌ ಅನ್ನು ಚಾಟ್‌ ಹೊಗಡೆ ಆಲಿಸುವುದಕ್ಕೆ ಇದು ಅವಕಾಶ ನೀಡಲಿದೆ. ಇದರಿಂದ ನೀವು ಮಲ್ಟಿ ಟಾಸ್ಕ್‌ ಮಾಡಬಹುದು. ಅಂದರೆ ನೀವು ಔಟ್‌ ಮೆಸೇಜ್‌ ವಾಯ್ಸ್‌ ಪ್ಲೇ ಮಾಡುವುದರಿಂದ ಇತರ ಸಂದೇಶಗಳನ್ನು ಓದಬಹುದು ಮತ್ತು ರಿಪ್ಲೇ ಮಾಡಬಹುದು.

Best Mobiles in India

English summary
WhatsApp, the meta-owned instant messaging app is reportedly planning to roll out a new interface for the drawing editor that includes new drawing tools.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X