2016'ರಲ್ಲಿ ವಾಟ್ಸಾಪ್‌ನಲ್ಲಿ ಅಪ್‌ಡೇಟ್‌ ಆದ ಟಾಪ್‌ ಫೀಚರ್‌ಗಳು

Written By:

ಪ್ರಾಥಮಿಕ ಮೆಸೇಜಿಂಗ್‌ ಅಪ್ಲಿಕೇಶನ್‌ 'ವಾಟ್ಸಾಪ್' ಈ ವರ್ಷ ಹಲವು ಅಪ್‌ಡೇಟ್‌ಗಳನ್ನು ಪಡೆದಿದೆ. 'ವೆಬ್ ಕ್ಲೈಂಟ್‌ ನೋಟಿಫಿಕೇಶನ್' ಫೀಚರ್ ಅಭಿವೃದ್ದಿ ಜೊತೆಗೆ ವಾರ್ಷಿಕವಾಗಿ ಮಾತ್ರ ಅಪ್ಲಿಕೇಶನ್‌ ಚಂದಾದಾರಿಕೆ ಶುಲ್ಕವನ್ನು ವಿಧಿಸಲಿದೆ. ಅಂದಹಾಗೆ ವಾಟ್ಸಾಪ್‌ ಇತ್ತೀಚೆಗೆತಾನೆ ವಾಟ್ಸಾಪ್‌ ಅಪ್ಲಿಕೇಶನ್‌ ಅನ್ನು ಕಂಪ್ಯೂಟರ್‌'ಗೆ ಅಭಿವೃದ್ದಿಪಡಿಸಿ ಬಿಡುಗಡೆ ಮಾಡಿರುವುದು ಬಹುಸಂಖ್ಯಾತರಿಗೆ ತಿಳಿದಿದೆ. ಆದರೆ 'ವಾಟ್ಸಾಪ್' ಈ ವರ್ಷದಲ್ಲಿ (2016) ಪಡೆದ ಪ್ರಮುಖ ಅಪ್‌ಡೇಟ್‌ಗಳನ್ನು ಮಾತ್ರ ಯಾರು ತಿಳಿದಿಲ್ಲ. ವಾಟ್ಸಾಪ್ ಪಡೆದ ಪ್ರಮುಖ ಅಪ್‌ಡೇಟ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಾಟ್ಸಾಪ್‌ ವೆಬ್‌ ಕ್ಲೈಂಟ್‌ ಆಕ್ಟೀವ್‌ ನೋಟಿಫಿಕೇಶನ್‌

ವಾಟ್ಸಾಪ್‌ ವೆಬ್‌ ಕ್ಲೈಂಟ್‌ ಆಕ್ಟೀವ್‌ ನೋಟಿಫಿಕೇಶನ್‌

1

'ವಾಟ್ಸಾಪ್‌ 2..16.90 ಬೆಟಾ' ಹೊಸ ಫೀಚರ್‌ ಆಗಿದ್ದು, ವೆಬ್‌ ಕ್ಲೈಂಟ್‌ ಕನೆಕ್ಟ್‌ ಆದಾಗ ಹೊಸ ಮೆಸೇಜ್‌ನಂತೆ ನೋಟಿಫಿಕೇಶನ್‌ ಅನ್ನು ಸುರಕ್ಷತೆ ದೃಷ್ಟಿಯಿಂದ ತೋರಿಸುತ್ತದೆ.

 ನೋಟಿಫಿಕೇಶನ್‌ ಮೂಲಕ ರೀಪ್ಲೇ

ನೋಟಿಫಿಕೇಶನ್‌ ಮೂಲಕ ರೀಪ್ಲೇ

2

ವಾಟ್ಸಾಪ್‌ನಲ್ಲಿ ಹೊಸ ಮೆಸೇಜ್‌ ಪಡೆದ ತಕ್ಷಣ ನೋಟಿಫಿಕೇಶನ್‌'ನಲ್ಲಿಯೇ ರೀಪ್ಲೇ ನೀಡಬಹುದಾಗಿದೆ. ಅಲ್ಲದೇ ಚಾಟ್‌ ಟ್ಯಾಬ್‌ ದೀರ್ಘವಾಗಿ ಪ್ರೆಸ್‌ ಮಾಡುವುದರ ಮೂಲಕ ಎಲ್ಲಾ ಚಾಟಿಂಗ್ ಡಿಲೀಟ್‌ ಮಾಡಬಹುದಾಗಿದೆ.

ಟೆಕ್ಸ್ಟ್ ಫಾರ್ಮ್ಯಾಟಿಂಗ್‌

ಟೆಕ್ಸ್ಟ್ ಫಾರ್ಮ್ಯಾಟಿಂಗ್‌

3

ವಾಟ್ಸಾಪ್‌ನಲ್ಲಿ ಅಭಿವೃದ್ದಿಗೊಂಡ ಹೊಸ ಫೀಚರ್‌ ಎಂದರೆ ಚಾಟ್‌ ಮಾಡುವ ಎಲ್ಲಾ ಅಕ್ಷರಗಳನ್ನು ಬೋಲ್ಡ್‌, ಇಟಾಲಿಕ್‌, ಸ್ಟ್ರೈಕ್‌ಥ್ರೂ ಶೈಲಿ ನೀಡಬಹುದಾಗಿದೆ.

 ವಾಟ್ಸಾಪ್‌ ಗೂಢಲಿಪೀಕರಣ

ವಾಟ್ಸಾಪ್‌ ಗೂಢಲಿಪೀಕರಣ

4

ವಾಟ್ಸಾಪ್‌ ಇತ್ತೀಚೆಗೆ ಸರ್ಕಾರಿ ಸಂಸ್ಥೆಗಳು ಸಹ ಯಾವುದೇ ಮೆಸೇಜ್‌ಗಳನ್ನು ಹ್ಯಾಕ್‌ ಮಾಡದಂತೆ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಸುರಕ್ಷತೆ ಫೀಚರ್‌ ಅಭಿವೃದ್ದಿಪಡಿಸಿದೆ.

 ಡಾಕುಮೆಂಟ್ಸ್‌ ಶೇರಿಂಗ್

ಡಾಕುಮೆಂಟ್ಸ್‌ ಶೇರಿಂಗ್

5

ವಾಟ್ಸಾಪ್‌ ಇತ್ತೀಚೆಗೆ ತಾನೆ ಡಾಕುಂಮೆಂಟ್‌ ಶೇರಿಂಗ್ ಫೀಚರ್ ಪರಿಚಯಿಸಿದ್ದು, ಇತರೆ ಫೈಲ್‌ಗಳನ್ನು ಶೇರ್‌ ಮಾಡಬಹುದಾಗಿದೆ. ಅಲ್ಲದೇ ಟೆಕ್ಸ್ಟ್‌ ಅನ್ನು ದೀರ್ಘ ಪ್ರೆಸ್‌ ಮಾಡಿದಾಗ ಬಂದ ಪೇಪರ್‌ ಕ್ಲಿಪ್‌ ಮೇಲೆ ಕ್ಲಿಕ್ ಮಾಡಿ ಡಾಕುಮೆಂಟ್‌ ಅನ್ನು ಆಯ್ಕೆ ಮಾಡಿ ಇತರರಿಗೆ ಸೆಂಡ್‌ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WhatsApp Update: Features Added To Messenger So Far This Year. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot